
ವಯಾಗ್ರಾವನ್ನು ಸೃಷ್ಟಿಸಿದ ಔಷಧಿ ನಿರ್ಮಾಣ ಸಂಸ್ಥೆಯೇ ಫಿಮೇಲ್ ವಯಾಗ್ರಾದ ತಯಾರಿಕೆಯಲ್ಲಿ ತೊಡಗಿದೆ. ಹೆಂಗಸರು ಬಳಸಲಾಗುವ ವಯಾಗ್ರಾ ಕೂಡ ವಯಾಗ್ರಾ ಸೇವಿಸಿದ ಗಂಡಸರು ಅನುಭವಿಸುವ ಪರಿಣಾಮವನ್ನು ಬೀರುತ್ತದೆ. ಕಾಮೋತ್ತೇಜನಕ್ಕೆ ಅಗತ್ಯವಾದ ರಕ್ತದ ಹರಿವನ್ನು ಹೆಚ್ಚಿಸುವಲ್ಲಿ ಫಿಮೇಲ್ ವಯಾಗ್ರಾ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಒಂದು ಅಧ್ಯಯನದ ಪ್ರಕಾರ ಶೇ.40ರಷ್ಟು ಮಹಿಳೆಯರು ಕಾಮದ ಆನಂದವನ್ನು ಸವಿಯುವಲ್ಲಿ ವಿಫಲರಾಗುತ್ತಿದ್ದಾರೆ. ಸುರತಕ್ರೀಡೆ ಆಡುವಾಗ ಇನ್ನೇನು ಆನಂದದ ತುತ್ತತುದಿ ಏರಿದೆ ಅನ್ನುವಾಗಲೇ ಪಾತಾಳಕ್ಕೆ ಕೆಡವಿಬಿಟ್ಟಿರುತ್ತದೆ ಮತ್ತು ಕಾಮದಾಟವಾಡುವಲ್ಲಿ ಸೋತಿರುತ್ತಾರೆ. ಇದರಿಂದಾಗಿ ಮಹಿಳೆಯರು ಖಿನ್ನತೆಗೊಳಗಾಗುತ್ತಿದ್ದಾರೆ ಎಂದು ಹೇಳುತ್ತದೆ ಅಧ್ಯಯನ.
ಆವಿಷ್ಕರಿಸಲಾಗುತ್ತಿರುವ ಫಿಮೇಲ್ ವಯಾಗ್ರಾ ಈ ಕೊರೆಯನ್ನು ಸರಿತೂಗಿಸುವಲ್ಲಿ ಸಹಕಾರಿಯಾಗುತ್ತದೆ. ಗಂಡಸರಿಗೆ ಸರಿಸಮಾನವಾಗಿ ಸರಸದಲ್ಲಿ ತೊಡಗಲು ಈ ವಯಾಗ್ರಾ ಉತ್ತೇಜಿಸುತ್ತದೆ. ಲೈಂಗಿಕ ಕ್ರಿಯೆ ಸುದೀರ್ಘವಾಗುವಂತೆ ಮಾಡುವಲ್ಲಿ ಫಿಮೇಲ್ ವಯಾಗ್ರಾ ಸಹಕಾರಿಯಾಗಲಿದೆ. ಆದರೆ, ಇದಕ್ಕಾಗಿ ಇನ್ನೂ ಸ್ವಲ್ಪ ಕಾಯಬೇಕಷ್ಟೆ.
ಆದರೆ, ಗಂಡಸರು ವಯಾಗ್ರಾ ಸೇವಿಸುವ ಮೊದಲು ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯನ್ನು ಹೆಂಗಸರು ಕೂಡ ತೆಗೆದುಕೊಳ್ಳಬೇಕು. ಹೃದಯಬೇನೆ ಇರುವವರು, ಉಸಿರಾಟದ ತೊಂದರೆ ಇರುವವರು ಇದನ್ನು ಸೇವಿಸಬಾರದು. ವೈದ್ಯರ ಅನುಮತಿಯಿಲ್ಲದೆ ಫಿಮೇಲ್ ವಯಾಗ್ರಾವನ್ನು ಸೇವಿಸುವಂತೆಯೇ ಇಲ್ಲ.