ಲೈಂಗಿಕವಾಗಿ ಸುಖಿಸುವ ಸಂದರ್ಭದಲ್ಲಿ ಆ ನವಿರಾದ ಅನುಭವ ಕೇವಲ ಸ್ಪರ್ಶದಿಂದ ಮಾತ್ರ ಸಿಗುವುದಿಲ್ಲ. ಅನುಭವಕ್ಕೆ ಮಾತ್ರ ಸಿಗುವ ಆ ಸುಖ ಮಾದಕತೆ ತುಂಬಿದ ಒಂದು ಕಣ್ಣೋಟದಿಂದ, ಉಕ್ಕಿಬರುವ ಬಿಸಿಯುಸಿರಿನಿಂದ, ಆ ಮುಂಗುರುಳ ಲಾಸ್ಯದಿಂದ, ತೂರಿಬಿಡುವ ಮುತ್ತಿನಿಂದ ಕೂಡ ಸಿಗುತ್ತದೆ.
ಅಂಗಾಂಗಗಳ ಸ್ಪರ್ಶಕ್ರಿಯೆ ಲೈಂಗಿಕ ಚಟುವಟಿಕೆಯ ಒಂದು ಅವಿಭಾಜ್ಯ ಅಂಗವೆ. ಆದರೆ, ಅದಕ್ಕೂ ವಿಭಿನ್ನವಾದ ಮತ್ತು ಅಷ್ಟೇ ಆನಂದದಾಯಕವಾಗಿರುವ ಸುಖ ಕೂಡ ಸ್ಪರ್ಶಿಸದೆ ಸಿಗುತ್ತದೆ. ಇದಕ್ಕೆಲ್ಲ ಕಾರಣ ಮಿದುಳು ನಮಗೆ ನೀಡುವ ಸಂಜ್ಞೆಗಳು.
ಹಸಿರು ಅಂಚಿನ ಕೆಂಪು ಸೆರಗಿನ ಮೈಮೇಲೆಲ್ಲ ಹಳದಿ ಹೂಗಳನ್ನು ಮೆತ್ತಿಕೊಂಡ ಸೀರೆಯನ್ನು ಉಟ್ಟ ಹೆಂಡತಿ, ಗೆಜ್ಜೆ ಘಲಿರೆನ್ನುವಂತೆ ಸದ್ದು ಮಾಡುತ್ತ, ಮುಂದೆ ಸಂಭವಿಸಬಹುದಾಗ ಮಿಲನ ಮಹೋತ್ಸವವನ್ನು ನೆನೆದುಕೊಂಡು ನಾಚಿಕೊಳ್ಳುತ್ತ ಬರುತ್ತಿರುವಾಗ ನಿಮ್ಮ ಉಕ್ಕೇರುವ ಕಾಮಮೋಹವನ್ನು ಒಮ್ಮೆ ಕಲ್ಪಿಸಿಕೊಂಡು ನೋಡಿ.
ಕಚೇರಿಯ ಕೆಲಸ ಮುಗಿಸಿಕೊಂಡು ಕಚೇರಿಗೆ ಹೋಗುವ ಮುನ್ನವೇ ವಾಟ್ಸಾಪಿನಲ್ಲಿ ಕೆಲಸಭೋಗಸಿಯಲ್ಲಿ ಮುಳುಗಿರುವ ಹೆಂಡತಿಗೆ ಒಂದು ಸೂಚನೆ ಕೊಟ್ಟುಬಿಡಿ, ಹೋಗುವಾಗ ಕೈಯಲ್ಲಿ ಅರ್ಧಮೊಳ ಘಮಘಮಿಸುವ ಮಲ್ಲಿಗೆಯಿರಲಿ, ನೆಂಟರಿಷ್ಟರು ಸಂಜೆಯ ವೇಳೆಗೆ ಬರದಂತೆ ಎಚ್ಚರಿಕೆವಹಿಸಿ.
ಸಂಜೆ ತಂಪಾದ ಗಾಳಿ ಬೀಸುತ್ತಿದ್ದಾಗ, ಕಿವಿಗಳಿಗೆ ಕಚಗುಳಿಯಿಡುತ್ತ ಏನೋ ಕಥೆ ಹೇಳುತ್ತಿದ್ದಾಗ, ಪಾಂಡ್ಸ್ ಪೌಡರ್ ಹಚ್ಚಿಕೊಂಡ ಹೆಂಡತಿ ಮುದ್ದಾದ ಗಲ್ಲ ಮುತ್ತಿಗೆ ಆಹ್ವಾನ ನೀಡುವ ವೇಳೆಯಾದಾಗ, ಮೈಮನದಲ್ಲಿ ಇದ್ದಕ್ಕಿದ್ದಂತೆ ರಕ್ತಸಂಚಾರ ಹೆಚ್ಚಾಗುವ ಸಮಯದಲ್ಲಿ ಹಾಸಿಗೆಯ ಮೇಲೆ ನಿಮ್ಮಿಬ್ಬರ ದೇಹಗಳು ಮಾತುಕತೆಗೆ ಕುಳಿತುಕೊಳ್ಳಲಿ.

ಮಿದುಳಿನ ಕ್ರಿಯೆ ಕೂಡ ಬದಲಾಗುತ್ತದೆ
ಗಂಡು ಹೆಣ್ಣಿನ ನಡುವಿನ ಬಂಧ ಬಿಗಿಯಾಗುತ್ತಿದ್ದಂತೆ ನಮ್ಮ ಮಿದುಳಿನ ಕ್ರಿಯೆ ಕೂಡ ತಕ್ಕಂತೆ ಬದಲಾಗುತ್ತ ಸಾಗುತ್ತದೆ. ನಮ್ಮ ನಡೆಗಳಿಗೆ, ವಿಚಾರಗಳಿಗೆ ಪೂರಕವಾಗಿ ನಮ್ಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬಂಧ ಇನ್ನಷ್ಟು ಬಲವಾಗುವಂತೆ ಮಿದುಳು ನಮ್ಮನ್ನು ತಯಾರು ಮಾಡುತ್ತದೆ. ಖುಷಿಯ ಉತ್ತುಂಗದಲ್ಲಿದ್ದಾಗ ವಿಶಿಷ್ಟವಾದ ರಾಸಾಯನಿಕಗಳನ್ನು ಕೂಡ ಮಿದುಳು ಸ್ರವಿಸುವಂತೆ ಮಾಡುತ್ತದೆ.

ಮಿದುಳು ಲೈಂಗಿಕ ಕ್ರಿಯೆಯ ಮುಖ್ಯ ಅಂಗ
ಕಾಮಕೇಳಿಯಲ್ಲಿ ನಾವು ಪಡುವ ಸುಖಗಳಿಗೆ, ನಮ್ಮನ್ನು ಬೆಸೆಯುವ ಬಂಧಗಳಿಗೆ, ಹಾಸಿಗೆಯಲ್ಲಿ ಕಳೆಯುವ ಘಳಿಗೆಗಳಿಗಾಗಿ ಮಿದುಳಿಕೆ ಒಂದು ಥ್ಯಾಂಕ್ಸ್ ಹೇಳಲೇಬೇಕು. ವಿಜ್ಞಾನಿಗಳು ಮಿದುಳು ಕೂಡ ಲೈಂಗಿಕ ಕ್ರಿಯೆಯ ಅತೀ ಮುಖ್ಯ ಅಂಗ ಎಂದು ಹೇಳಿದ್ದಾರೆ. ಡೊಪಮೈನ್ ಮತ್ತು ಆಕ್ಸಿಟೋಸಿನ್ ಎಂಬ ಹಾರ್ಮೋನುಗಳು ಬಿಡುಗಡೆಯಾಗುತ್ತಿದ್ದಂತೆ ಸ್ಖಖನವಾದಾಗ ಸಿಗುವಷ್ಟು ಸಂತೋಷ ಸಿಗುತ್ತದೆ.

ಸ್ಖಲನ ಪ್ರಕ್ರಿಯೆಯಿದೆಯಲ್ಲ
ಒಬ್ಬಂಟಿಯಾಗಿ ಕೂಡ ಲೈಂಗಿಕ ಸುಖವನ್ನು ಪಡೆಯುವ ಹಲವಾರು ದಾರಿಗಳಿವೆ. ಆದರೆ, ಸಂಗಾತಿ ಜೊತೆಯಿದ್ದಾಗ, ಎರಡೂ ದೇಹಗಳು ಮನಸ್ಸುಗಳು ಬೆಸೆಯುವಾಗ ಸಂಭವಿಸುವ ಸ್ಖಲನ ಪ್ರಕ್ರಿಯೆಯಿದೆಯಲ್ಲ ಅದರ ಖುಷಿಯೇ ಬೇರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಲೈಂಗಿಕ ಕ್ರಿಯೆಯಿಂದಾಗಿ ಎರಡೂ ಮನಸ್ಸುಗಳು ಇನ್ನಷ್ಟು ಹತ್ತಿರವಾಗಬೇಕು ಮತ್ತು ದೇಹಗಳು ಕೂಡ ಸಂಭ್ರಮಿಸಬೇಕು. ಇಲ್ಲದಿದ್ದರೆ ಬರೀ ದೈಹಿಕ ಸುಖದಿಂದ ಮನಸ್ಸುಗಳು ಒಂದಾಗಲು ಸಾಧ್ಯವೇ ಇಲ್ಲ.

ಬೆತ್ತಲಾಗಿ ಸಮುದ್ರಕ್ಕೆ ಜಿಗಿದ ಮೀನು
ಇಂಥ ಹಾರ್ಮೋನುಗಳು ಹೆಚ್ಚು ಸ್ರವಿಸಬೇಕಿದ್ದರೆ ಇಬ್ಬರೂ ಕುಳಿತು ನಿಮ್ಮ ದೇಹಗಳ ಲೈಂಗಿಕ ಅಂಗಾಂಗಳ ಬಗ್ಗೆ, ಅವುಗಳ ಸ್ಪರ್ಶದಿಂದ ಸಿಗುವ ಸುಖಗಳ ಬಗ್ಗೆ ಮಾತುಗಳನ್ನಾಡಿಕೊಳ್ಳಿ. ಅದಕ್ಕಾಗಿಯೇ ಕಾಮಕೇಳಿ ಉತ್ತುಂಗಕ್ಕೆ ತಲುಪುವ ಮೊದಲು ಇಂಥ ಕ್ರಿಯೆಗಳಲ್ಲಿ ಹೆಚ್ಚು ಕಾಲಕಳೆಯಿರಿ ಎಂದು ಬಲ್ಲವರು ಹೇಳುವುದು. ಒಳ್ಳೆಯ ವಿಚಾರಗಳು, ತುಂಟ ಮಾತುಗಳಿಂದ ಎರಡು ಮನಸ್ಸುಗಳು ಅನುರಾಗದ ಅಲೆಗಳ ಮೇಲೆ ತೇಲುತ್ತ ಬೆತ್ತಲಾಗಿ ಸಮುದ್ರಕ್ಕೆ ಜಿಗಿದ ಮೀನುಗಳಂತಾಗುತ್ತವೆ.

ಲೈಂಗಿಕ ಪಾಠದ ಪುಟಗಳನ್ನು ತಿರುವುತ್ತ
ಇಬ್ಬರೂ ಒಬ್ಬರಿಗೊಬ್ಬರನ್ನು ಹೊಗಳುತ್ತ, ಕಿಚಾಯಿಸುತ್ತ, ಸ್ಪರ್ಶಿಸುತ್ತ, ಮುತ್ತಿನ ಸುರಿಮಳೆಗರೆಯುತ್ತ ಲೈಂಗಿಕ ಪಾಠದ ಪುಟಗಳನ್ನು ಒಂದೊಂದೇ ತಿರುಗಿಸುತ್ತ ಇದ್ದಾಗ ಸಹಜವಾಗಿ ಮಿದುಳು ಇಬ್ಬರನ್ನೂ ಕಾಮಕೇಳಿಗೆ ತಯಾರು ಮಾಡುತ್ತಿರುತ್ತದೆ. ನಮ್ಮ ಅರಿವಿಗೆ ಬಾರದಂತೆ ಮಾದಕ ಲೋಕದಲ್ಲಿ ಕಳೆದುಹೋಗುವಂತೆ ಮಾಡಿಬಿಡುತ್ತದೆ. ಮನಸು ಮನಸು ಒಂದಾದರೆ ಬಾಳೆ ಹೊನ್ನಿನ ತಾವರೆ.