ಅಮೆರಿಕಾದಲ್ಲಿ ಭಾರತೀಯ ಇಂಟರ್ನೆಟ್ ಕಾಮುಕ ಸೆರೆ

Nityanand Gopalika
 
ವಾಷಿಂಗ್ಟನ್, ಜು. 23 : ಇಂಟರ್ನೆಟ್ ಬಳಸಿ ಅಪ್ರಾಪ್ತವಯಸ್ಕ ಬಾಲೆಯನ್ನು ಲೈಂಗಿಕ ಕ್ರಿಯೆಗೆ ಪ್ರೇರೇಪಿಸಿದ ಆರೋಪದ ಮೇಲೆ ಭಾರತೀಯ ಮೂಲದ ಇಂಜಿನಿಯರ್ ನಿತ್ಯಾನಂದ ಗೋಪಾಲಿಕಾ(30) ಎಂಬಾತನನ್ನು ಪೆನ್ಸಿಲ್ವೇನಿಯಾ ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಗೋಪಾಲಿಕಾ ಜಿಇ ಕಂಪನಿಯಲ್ಲಿ ಲೀಡ್ ಇಂಜಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಇಂಟರ್ನೆಟ್ ಚಾಟ್ ಮುಖಾಂತರ ಪಿಟ್ಸ್ ಬರ್ಗ್ ಪ್ರದೇಶದ 13 ವರ್ಷ ವಯಸ್ಸಿನ ಹುಡುಗಿಯನ್ನು ಲೈಂಗಿಕ ಕ್ರಿಯೆಗಾಗಿ ಸಂಪರ್ಕಿಸಿದ್ದಾನೆ. ಚೈಲ್ಡ್ ಪ್ರಿಡೇಟರ್ ಯುನಿಟ್ ನ ಮಧ್ಯವರ್ತಿಯಾಗಿ ಹದಿಮೂರರ ಬಾಲೆ ಗೋಪಾಲಿಕಾನನ್ನು ಬಲೆಗೆ ಕೆಡವಲು ಸಹಕರಿಸಿದ್ದಾಳೆ. ಆತನನ್ನು ಜುಲೈ 1ರಂದು ಬಂಧಿಸಲಾಗಿದೆ. ಇಂತಹ ಅಪರಾಧದಲ್ಲಿ ಭಾಗಿಯಾದ ಪ್ರಥಮ ಭಾರತೀಯ ಗೋಪಾಲಿಕಾ ಆಗಿದ್ದಾನೆ.

ಕೆಲ ದಿನಗಳಿಂದ ಆ ಹುಡುಗಿಯೊಡನೆ ಇಂಟರ್ನೆಟ್ಟಿನಲ್ಲಿ ಪ್ರತಿದಿನ ಚಾಟ್ ಮಾಡುತ್ತಿದ್ದ. ಕಾಮಕೇಳಿಗೆ ಸಂಬಂಧಿಸಿದಂತೆ ಆಕೆಯ ಅನುಭವ ಕುರಿತು ವಿಚಾರಿಸುತ್ತಿದ್ದ ಮತ್ತು ಎಂಥ ರತಿಕ್ರೀಡೆಯಲ್ಲಿ ತಾನು ಭಾಗಿಯಾಗಬಯಸುತ್ತೇನೆ ಎಂದು ತಿಳಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆತ ಹುಡುಗಿಗೆ ಬೆತ್ತಲಾಗಿದ್ದ ಮತ್ತು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ಎರಡು ವಿಡಿಯೋ ಚಿತ್ರಗಳನ್ನೂ ಕಳಿಸಿದ್ದ.

ಆಕೆಯನ್ನು ಭೇಟಿಯಾಗಲು ಸ್ಥಳವನ್ನು ನಿಗದಿ ಮಾಡಿದ್ದ. ಈ ಹಂತದಲ್ಲಿ ಆತನನ್ನು ಬಂಧಿಸಲಾಯಿತು. ಆತನಿಂದ ಎರಡು ಲ್ಯಾಪ್ ಟಾಪ್, ಡಿಜಿಟಲ್ ಕ್ಯಾಮೆರಾ, ಸೆಲ್ ಫೋನ್ ಮತ್ತು ಕಾಂಡೋಮ್ ಬ್ಯಾಗನ್ನು ವಶಪಡಿಸಿಕೊಳ್ಳಲಾಗಿದೆ. ಬಟ್ಲರ್ ಕಂಟ್ರಿ ಜೈಲಿನಲ್ಲಿಡಲಾಗಿತ್ತು. ಆತನ ವಿಚಾರಣೆ ಜುಲೈ 24ರಂದು ನಡೆಯಲಿದೆ.

ಅಪ್ರಾಪ್ತ ವಯಸ್ಕ 'ಮಗು'ವಿನೊಡನೆ ಕಾನೂನು ವಿರೋಧಿ ಕ್ರಿಯೆ ನಡೆಸಿದ್ದಕ್ಕಾಗಿ ಪ್ರಥಮ ಡಿಗ್ರಿ ಅಪರಾಧ ಎಸಗಿದ ಆರೋಪ ಗೋಪಾಲಿಕಾ ಎದುರಿಸುತ್ತಿದ್ದಾನೆ. ಅಪರಾಧ ಸಾಬೀತಾದರೆ 20 ವರ್ಷ ಜೈಲುಕಂಬಿ ಆತ ಎಣಿಸಬೇಕಾಗುತ್ತದೆ ಮತ್ತು 25 ಸಾವಿರ ಡಾಲರ್ ದಂಡ ತೆತ್ತಬೇಕಾಗುತ್ತದೆ. ಇದರೊಂದಿಗೆ ಅಪ್ರಾಪ್ತ ಹುಡುಗಿಯೊಂದಿಗೆ ಅಶ್ಲೀಲವಾಗಿ ನಡೆದುಕೊಂಡ ಮತ್ತು ಕಂಪ್ಯೂಟರನ್ನು ಅಪರಾಧ ಕ್ರಿಯೆಗೆ ಬಳಸಿದ ಇನ್ನೆರಡು ಆರೋಪಗಳನ್ನು ಗೋಪಾಲಿಕಾ ಎದುರಿಸುತ್ತಿದ್ದಾನೆ. ಇವೆರಡೂ ಅಪರಾಧಗಳಿಗೆ ತಲಾ 7 ವರ್ಷ ಜೈಲು ಶಿಕ್ಷೆ ಮತ್ತು 15 ಸಾವಿರ ಡಾಲರ್ ದಂಡ ವಿಧಿಸಲಾಗುತ್ತದೆ.

(ಏಜೆನ್ಸೀಸ್)

Please Wait while comments are loading...