
ಹೆಣ್ಣಿಗೆ ಲೈಂಕಿಕತೆಯ ಪರಾಕಾಷ್ಠೆ ತಲುಪಲು ನಾನಾ ಮಾರ್ಗಗಳಿವೆ. ಈ ಮಾರ್ಗಗಳ ಕುರಿತು ಸಂಕ್ಷಿಪ್ತ ವಿವರಗಳು ಇಲ್ಲಿವೆ.
ಸ್ಖಲನದ ಆನಂದ ಪಡೆಯುವ ಬಗೆ
* ಸ್ತ್ರೀ ಮರ್ಗಾಂಗದ ಉದ್ದೀಪನ ಅಥವಾ ಉದ್ರೇಕಗೊಳಿಸುವುದರಿಂದ.
* ಸ್ತ್ರೀಪುರುಷರ ಸಂಭೋಗದಿಂದ, ಮೌಖಿಕ ಮೈಥುನ, ಹಸ್ತಮೈಥುನ ಅಥವಾ ಇನ್ನಿತರ ಸಂಭೋಗರಹಿತ ಕ್ರಿಯೆಗಳಿಂದ.
* ಸ್ತನತೊಟ್ಟು ಅಥವಾ ಹೆಣ್ಣಿಗೆ ಸುಖ ನೀಡುವ ಅವಯವವನ್ನು ತಡುವುದರಿಂದ.
* ರಾತ್ರಿ ಕಾಣುವ ಹಿತಕರವಾದ ಸ್ವಪ್ನದಿಂದ ಸ್ಖಲನ ಸಾಧ್ಯ.
* ಜಿ-ಸ್ಪಾಟ್ ಎಂದು ಕರೆಯಲಾಗುವ ಮರ್ಮಾಂಗದ ಭಾಗವನ್ನು ಉದ್ರೇಕಗೊಳಿಸುವುದರಿಂದ.
ಸ್ತ್ರೀ ಸ್ಖಲನದತ್ತ ಒಂದು ನೋಟ
* ಗಂಡಸರಿಂತ ಹೆಂಗಸರಲ್ಲಿ ಸಂಭೋದ್ರೇಕದ ಪರಾಕಾಷ್ಠೆ ಹೆಚ್ಚು.
* ಸಂಭೋದ್ರೇಕ ಮುಟ್ಟುವ ಮೊದಲು ಮರ್ಮಾಂಗ ಗಡುಸಾಗುತ್ತದೆ ಮತ್ತು ಸ್ರವಿಸುವಿಕೆ ಪ್ರಾರಂಭವಾಗುತ್ತದೆ.
* ಸಂಭೋದ್ರೇಕ ತಲುಪುವ ಕೆಲ ಕ್ಷಣ ಮುನ್ನ ಮರ್ಗಾಂಗ ಬಿಗಿಯಾಗುತ್ತದೆ ಮತ್ತು ಆಂತರಿಕ ದ್ವಾರ ಹಿಗ್ಗುತ್ತದೆ.
* ನಂತರ ಹೊಟ್ಟೆಯ ಭಾಗದ ಸ್ನಾಯುಗಳು ತಾನಾಗೇ ಬಿಗಿದುಕೊಳ್ಳುತ್ತವೆ.
* ಪೂರ್ಣ ಸುಖದ ತುತ್ತತುದಿ ತಲುಪಿದಾಗ ಪೃಷ್ಠ, ಮರ್ಮಾಂಗ, ಹೊಟ್ಟೆ, ಪೆಲ್ವಿಕ್ ಭಾಗದ ಸ್ನಾಯುಗಳು ತಾಳಬದ್ಧವಾಗಿ ಹಿರಿಕಿರಿದಾಗುತ್ತವೆ.
ಸಂಭೋಗ ಅಥವಾ ಕಾಮೋದ್ರೇಕದ ಗಿರಿ ತಲುಪಿದ ನಂತರವೂ ಸ್ತ್ರೀ ಎರಡನೇ ಬಾರಿ ಸ್ಖಲನದಿಂದ ಸುಖ ಅನುಭವಿಸಬಹುದು. ಕೆಲವರಿಗೆ ಎರಡನೆಯ ಸಂಭೋದ್ರೇಕವೇ ಅತ್ಯಂತ ಹಿತಕಾರಿಯಾಗಿರುತ್ತದೆ. ಆದರೆ, ಮರ್ಮಾಂಗ ಅಥವಾ ಸ್ತನ ಸೂಕ್ಷ್ಮವಾಗಿದ್ದರೆ ಎರಡನೆಯ ಪ್ರಯತ್ನ ಅಹಿತಕರವಾಗಿರಬಹುದು.
ಇದರ ಬಗ್ಗೆ ಅಥವಾ ಲೈಂಗಿಕತೆಯ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೆ ಹಿಂಜರಿಕೆಯಿಲ್ಲದೆ ದಟ್ಸ್ ಕನ್ನಡ ವೈದ್ಯರನ್ನು ಸಂಪರ್ಕಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.