ಸೆಕ್ಸ್ : ಮಹಿಳೆಯರನ್ನು ಕಾಡುವ 8 ತೊಂದರೆಗಳು

ನಮ್ಮ ಬದುಕೇ ಹಾಗೆ. ಯಾವಾಗಲೂ ಪರಸ್ಪರ ಸಂಬಂಧಗಳನ್ನು ಕಾಪಿಡುವ ಆತಂಕ, ಕೆಲಸ ಕಳೆದುಕೊಳ್ಳುವ ಭಯ, ಹಣಕಾಸಿನ ತೊಂದರೆಗಳು, ಟಾರ್ಗೆಟ್ಟುಗಳ ಒತ್ತಡಗಳು ಕಾಡುತ್ತಿರುತ್ತವೆ. ಮನೆಯಲ್ಲಿ ಕೆಲಸ ಮಾಡುವಾಗ, ಕಚೇರಿಗೆ ಹೋಗುವಾಗ ಮತ್ತು ರಾತ್ರಿ ಹೊತ್ತಿನಲ್ಲಿ ನಿರಾತಂಕವಾಗಿ ಹಾಸಿಗೆಯ ಮೇಲೆ ಕಾಲ ಕಳೆಯುವ ಸಂದರ್ಭದಲ್ಲಿಯೂ ಆತಂಕ ನಮ್ಮನ್ನು ಅಮರಿಕೊಂಡಿರುತ್ತದೆ.

ಇದು ಪುರುಷರಿಗೆ ಮಾತ್ರವಲ್ಲ ಮಹಿಳೆಯರಿಗೂ ಅನ್ವಯವಾಗುತ್ತದೆ. ಆದರೆ, ಸಂಗಾತಿಯೊಡನೆ ಮನಸೋಇಚ್ಛೆ ಲೈಂಗಿಕ ಕ್ರೀಡೆಯಲ್ಲಿ ತೊಡಗುವುದು ಈ ಎಲ್ಲ ಒತ್ತಡ, ಆತಂಕ, ಭಯಗಳನ್ನು ನಿವಾರಿಸುವ ರಾಮಬಾಣವಾಗಿದೆ. ಹಾಗೆಯೆ, ಹಾಸಿಗೆಯಲ್ಲಿ ಗಂಡನಿಗೆ ಸುಖ ನೀಡುತ್ತೇನೋ ಇಲ್ಲವೋ ಎಂಬ ಆತಂಕ ಕೂಡ ದೈನಂದಿನ ಜೀವನದ ಮೇಲೆ ದುಷ್ಪರಿಣಾಮ ಬೀರಬಲ್ಲದು.

ತನ್ನ ದೇಹ ಅಂದವಾಗಿದೆಯೇ ಇಲ್ಲವೆ ಎಂಬ ದುಗುಡ, ಸೂಕ್ತ ಸಮಯದಲ್ಲಿ ಸ್ಖಲನವಾಗುವುದೋ ಇಲ್ಲವೋ ಎಂಬ ಅವಿಶ್ವಾಸ ಮಹಿಳೆಯ ರಾತ್ರಿಯ ಸುಮಧುರ ಸಮಯವನ್ನು ಹಾಳುಗೆಡವಬಲ್ಲವು. ಹಾಸಿಗೆ ಸಂತೋಷವನ್ನು ಕಾಡುವ ಆತಂಕಗಳೇ ಹಾಳುಗೆಡವುತ್ತವೆ ಎಂಬುದು ಮನದಟ್ಟಾದರೆ ಲೈಂಗಿಕ ಅಭದ್ರತೆ ನಿವಾರಿಸಲು ಕೆಲ ಕ್ರಮಗಳನ್ನು ತೆಗೆದುಕೊಳ್ಳುವುದು ಮಹಿಳೆಯರಿಗೆ ಒಳಿತು.

ಮಹಿಳೆಯರು ಅನುಭವಿಸುವ 8 ಸಾಮಾನ್ಯ ಲೈಂಗಿಕ ಆತಂಕಗಳು ಮತ್ತು ಪರಿಹಾರಗಳನ್ನು ಇಲ್ಲಿ ನೀಡಲಾಗಿದೆ.

ಸಂಭೋಗಿಸಿದರೆ ಸ್ಖಲನವಾಗುವುದಿಲ್ಲ

ಸಂಭೋಗಿಸಿದರೆ ಸ್ಖಲನವಾಗುವುದಿಲ್ಲ

ಇದು ಜಾಗತಿಕವಾಗಿ ಮಹಿಳೆಯರು ಎದುರಿಸುತ್ತಿರುವ ಸರ್ವೇಸಾಮಾನ್ಯವಾಗಿರುವ ತೊಂದರೆ. ಒಂದು ಅಧ್ಯಯನದ ಪ್ರಕಾರ, ಶೇ.75ರಷ್ಟು ಮಹಿಳೆಯರು ಕಾಮಕೇಳಿಯ ಉತ್ತುಂಗದ ಸ್ಥಿತಿಯಲ್ಲಿಯೂ ಸ್ಖಲಿಸುವುದಿಲ್ಲ. ಇನ್ನು ಉಳಿದ ಶೇ.25ರಷ್ಟು ಕೂಡಿದಕೂಡಲೆ ಸ್ಖಲಿಸುವ ಮಹಿಳೆಯರು ನಿಜಕ್ಕೂ ಅದೃಷ್ಟವಂತರು. ಸ್ಖಲನದ ಕೊರತೆ ಅನುಭವಿಸುವುದು ಅಸಹಜವಾದುದೇನೂ ಅಲ್ಲ. ಸ್ಖಲಿಸದಿದ್ದರೂ ಸುಖಕ್ಕೇನೂ ತೊಂದರೆ ಇರುವುದಿಲ್ಲ ಎಂಬುದನ್ನು ತಿಳಿಯಬೇಕು. ಅಲ್ಲದೆ, ಕ್ಲೈಮ್ಯಾಕ್ಸ್ ಹಂತದಲ್ಲಿ ಸ್ಖಲನದ ಸುಖ ಪಡೆಯಲು ನಾನಾ ವಿಧಾನಗಳನ್ನು ರೂಢಿಸಿಕೊಳ್ಳಬೇಕು.

ಬೆತ್ತಲಾದಾಗ ಅಂದವಾಗಿ ಕಾಣುವುದಿಲ್ಲ

ಬೆತ್ತಲಾದಾಗ ಅಂದವಾಗಿ ಕಾಣುವುದಿಲ್ಲ

ಕೆಲ ಮಹಿಳೆಯರಲ್ಲಿ ವಿಚಿತ್ರವಾದ ಆತಂಕ ಮನೆಮಾಡಿರುತ್ತದೆ. ಸಂಪೂರ್ಣ ಬೆತ್ತಲಾದಾಗ ಅಂದವಾಗಿ ಕಾಣುತ್ತೇನೋ ಇಲ್ಲವೋ, ಗಂಡ ಇಷ್ಟಪಡುತ್ತಾನೋ ಇಲ್ಲವೋ ಎಂಬ ದುಗುಡ ಕಾಡುತ್ತಿರುತ್ತದೆ. ಶೇ. 61ರಷ್ಟು ಮಹಿಳೆಯರು ಹೇಗೆ ಕಾಣುತ್ತೇನೆ ಎಂಬ ಬಗ್ಗೆ ತಲೆಕೆಡಿಸಿಕೊಂಡಿರುತ್ತಾರಂತೆ. ಲೈಂಗಿಕಾನಂದದ ಕಾವನ್ನು ಕೊಲ್ಲುವುದೇ ಈ ಭಾವ. ಬೆತ್ತಲಾಗಿಯೇ ಯೋಗ ಮಾಡುವುದು ಮತ್ತು ಇನಿಯನ ಅಭಿಪ್ರಾಯವನ್ನು ಪಡೆಯುವುದು ಈ ದುಗುಡವನ್ನು ದೂರ ಮಾಡಬಲ್ಲದು. ದೇಹದ ಮೇಲೆ ವಿಶ್ವಾಸ ಮರಳಿದಾಗ ಮತ್ತು ಸುಖ ಪಡಬೇಕೆಂದು ಅನಿಸಿದಾಗ ಆತ್ಮವಿಶ್ವಾಸದಿಂದ ಮುನ್ನಗ್ಗಬೇಕು.

ಸಾಮಾನ್ಯ ಗಾತ್ರದ ಯೋನಿ ಇಲ್ಲದಿರುವುದು

ಸಾಮಾನ್ಯ ಗಾತ್ರದ ಯೋನಿ ಇಲ್ಲದಿರುವುದು

ಗಂಡಸಿನಂತೆ ಹೆಂಗಸರು ಕೂಡ ತಮ್ಮ ಈ ಅಂಗದ ಬಗ್ಗೆ ವಿನಾಕಾರಣ ಚಿಂತಿಸುತ್ತಿರುತ್ತಾರೆ. ಹಲವರು ಸರಿಗಾತ್ರ ಮಾಡಿಸಿಕೊಳ್ಳಲು ಶಸ್ತ್ರಕ್ರಿಯೆಗೆ ಕೂಡ ಒಳಗಾಗಿರುತ್ತಾರೆ. ಆದರೆ ವೈದ್ಯರು ಹೇಳುವುದೇನೆಂದರೆ, ಯೋನಿ ಚಿಕ್ಕದಿರಲಿ ಅಥವಾ ದೊಡ್ಡದಿರಲಿ, ಕೂದಲಿರಲಿ ಅಥವಾ ಶೇವ್ ಮಾಡಿಕೊಂಡಿರಲಿ ಸುಖಪಡಲು ಅದರ ಗಾತ್ರ ಯಾವತ್ತೂ ಅಡ್ಡಿಯಾಗುವುದಿಲ್ಲ. ಅಡ್ಡಿಪಡಿಸುವುದೇನಿದ್ದರೂ ಅದು ಮನಸ್ಸು ಮಾತ್ರ. ಮಹಿಳೆಯರಿಗೆ ತಮ್ಮ ಯೋನಿಯ ಬಗ್ಗೆ ಅಭಿಮಾನವಿರಬೇಕು ಮತ್ತು ಸುಖ ಪಟ್ಟೇಪಡುತ್ತೇನೆಂಬ ಆತ್ಮವಿಶ್ವಾಸವಿರಬೇಕು, ಅಷ್ಟೇ.

ಸೆಕ್ಸಲ್ಲಿ ಸಂಗಾತಿಗಿಂತ ತುಂಬ ಪೂರ್

ಸೆಕ್ಸಲ್ಲಿ ಸಂಗಾತಿಗಿಂತ ತುಂಬ ಪೂರ್

ಪ್ರೇಮಸಲ್ಲಾಪದಲ್ಲಿ ಯಶಸ್ಸು ಕಾಣುವುದು ಒಬ್ಬರ ಕೈಯಲ್ಲಿ ಇರುವುದಿಲ್ಲ. ಸರಿಯಾಗಿ ಸುಖಿಸದಿರಲು ಸಂಗಾತಿಯೂ ಕಾರಣವಾಗಿರಬಹುದು. ಅವರಿವರನ್ನು ದೂರದೆ ಇಬ್ಬರೂ ಪರಸ್ಪರ ದೈಹಿಕವಾಗಿ ಮತ್ತು ಮಾನಸಿಕವಾಗಿ ಒಂದುಗೂಡಿದಾಗ ಮಾತ್ರ ಸಂಪೂರ್ಣ ಸುಖ ಸಿಗಲು ಸಾಧ್ಯ. ಶಯನಗೃಹ ಲೈಂಗಿಕ ಕ್ರೀಡೆಯ ಪ್ರಯೋಗಾಲಯವಿದ್ದಂತೆ. ಸುಖ ಕಾಣಲು ವಿಭಿನ್ನ ಪ್ರಯತ್ನ ನಡೆಸುತ್ತಲೇ ಇರಬೇಕು. ನಮ್ಮ ಮೇಲೆ ನಮಗಿರುವ ವಿಶ್ವಾಸ ಮತ್ತು ಇನಿಯನ ಪಾಲ್ಗೊಳ್ಳುವಿಕೆ ಸುಖದ ಲೋಲುಪತೆಯಲ್ಲಿ ತೇಲಾಡಿಸಬಲ್ಲದು. ನಿರಂತರ ಪ್ರಯತ್ನ ಮಾತ್ರ ನಮ್ಮ ಸಾಮರ್ಥ್ಯವನ್ನು ಉತ್ತಮಪಡಿಸಬಲ್ಲದು.

ಅಯ್ಯೋ ಪ್ರೇಮಸಲ್ಲಾಪವೇ, ಥೂ ಬೋರಿಂಗ್

ಅಯ್ಯೋ ಪ್ರೇಮಸಲ್ಲಾಪವೇ, ಥೂ ಬೋರಿಂಗ್

ಮದುವೆಯಾದ ಸಂಗಾತಿಗಳು ಒಬ್ಬಂಟಿ ಪ್ರೇಮಿಗಳಿಗಿಂತ ಹೆಚ್ಚು ಕಾಮಕೇಳಿಯಲ್ಲಿ ತೊಡಗುತ್ತಾರೆ ಮತ್ತು ಸಂತುಷ್ಟತೆಯ ಭಾವವನ್ನು ಹೊಂದುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ. ಸಂಬಂಧಗಳು ಗಟ್ಟಿಯಾದಂತೆ ದೈಹಿಕ ಬಂಧವೂ ಉತ್ತಮವಾಗುತ್ತಾ ಸಾಗುತ್ತದೆ. ಆದರೆ, ಅದೇ ರೂಟೀನ್ ಆಗಿಬಿಟ್ಟರೆ ಪ್ರೇಮಸಲ್ಲಾಪ ಕೂಡ ಬೋರು ಹೊಡೆಯಲು ಆರಂಭವಾಗುತ್ತದೆ. ಕಾಮಕೇಳಿ ಮತ್ತಷ್ಟು ಆನಂದದಾಯಕ ಮಾಡಲು ನವನವೀನ ವಿಧಾನಗಳನ್ನು ನಾವೇ ಕಂಡುಕೊಳ್ಳಬೇಕು. ದೂರಕ್ಕೆ ಪಯಣಿಸಬೇಕು, ಸೆಕ್ಸ್ ಆಟಿಕೆಗಳನ್ನು ಬಳಸಬಹುದು, ಸಂಭೋಗಕ್ಕಿಂತ ಹೆಚ್ಚು ಸಲ್ಲಾಪದಲ್ಲಿ ತೊಡಗಬೇಕು. ಮತ್ತೆ ಮೂಡ್ ಬಂದಾಗ ಶುರುಹಚ್ಚಿಕೊಳ್ಳಬೇಕು.

ಕಾಮಕೇಳಿಯಲ್ಲಿ ಆಸಕ್ತಿಯೇ ಹೊರಟುಹೋಗಿದೆ

ಕಾಮಕೇಳಿಯಲ್ಲಿ ಆಸಕ್ತಿಯೇ ಹೊರಟುಹೋಗಿದೆ

ನಿಮ್ಮಲ್ಲಿ ಕಾಮಾಸಕ್ತಿ ಕುಂದಿದ್ದರೆ ಅದು ನಿಮ್ಮೊಬ್ಬರನ್ನು ಮಾತ್ರ ಕಾಡುತ್ತಿರುವ ತೊಂದರೆಯಲ್ಲ. ಸಹಸ್ರಾರು ಮಹಿಳೆಯರು ಕ್ರಮೇಣ ಕಾಮಾಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ. ಇದಕ್ಕೆ ಕಾರಣಗಳು ಕೂಡ ಹಲವಾರು. ಕೆಲಸದ ಒತ್ತಡ, ನಿದ್ರಾಹೀನತೆ, ಅನಗತ್ಯವಾಗಿ ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುವುದು ಸೆಕ್ಸ್ ಜೀವನಕ್ಕೆ ಮಾರಕವಾಗಬಲ್ಲದು. ಹಾಗಂತ, ಸುಮ್ಮನೆ ಕುಳಿತರೂ ಪ್ರಯೋಜನವಿಲ್ಲ. ಸಂಗಾತಿಯೊಡನೆ ಮಾತಾಡಿ ಪರಿಹಾರ ಕಂಡುಕೊಳ್ಳಿ ಅಥವಾ ಪ್ರಸೂತಿ ವೈದ್ಯರೊಡನೆ ಸಲಹೆ ಕೇಳಿರಿ. ಲೈಂಗಿಕ ಪುಸ್ತಕ ಓದಿರಿ, ಸಂಗಾತಿಯೊಡನೆ ದೂರದ ಊರಿಗೆ ಪಯಣ ಬೆಳೆಸಿರಿ.

ಸಂಭೋಗ ಮಾಡಿ ತುಂಬಾ ದಿನವಾಯಿತು

ಸಂಭೋಗ ಮಾಡಿ ತುಂಬಾ ದಿನವಾಯಿತು

ಸಂಗಾತಿ ದೂರದೂರಿನಲ್ಲಿ ಇದ್ದಿದ್ದರಿಂದ ಅಥವಾ ವಿಪರೀತ ಕೆಲಸದ ಒತ್ತಡದಿಂದ ತಿಂಗಳಿಡೀ ಸಂಭೋಗದಿಂದ ದೂರವಿರುವುದು ಅನೇಕ ಮಹಿಳೆಯರಲ್ಲಿ ಸಹಜ. ಅಂಥ ಸಮಯದಲ್ಲಿ ಸ್ವಯಂ ಸುಖದಲ್ಲಿ ಪಾಲ್ಗೊಳ್ಳುವುದು (ಹಸ್ತ ಅಥವಾ ಸ್ವಯಂ ಮೈಥುನ) ಅಥವಾ ಹಾಸಿಗೆ ಸುಖದ ಬಗ್ಗೆ ಅತಿಯಾಗಿ ಚಿಂತಿಸದಿರುವುದು ಉತ್ತಮ. ಒಟ್ಟಿನಲ್ಲಿ ಕಾಮಾಸಕ್ತಿ ಕುಂದದಂತೆ ನೋಡಿಕೊಂಡರೆ ಆಯಿತು. ಸಂಗಾತಿ ಮರಳಿ ಬಂದಾಗ ಇದ್ದೇ ಇದೆಯಲ್ಲ ಮಿಲನ ಮಹೋತ್ಸವ.

ದೇಹದ ಅಗತ್ಯವನ್ನು ಮನಸ್ಸು ಕೇಳದಿರುವಾಗ

ದೇಹದ ಅಗತ್ಯವನ್ನು ಮನಸ್ಸು ಕೇಳದಿರುವಾಗ

ಇದು ಹಾಗೆಯೆ. ಅನ್ಯ ಸುಂದರ ಪುರುಷರನ್ನು ನೋಡಿದಾಗ ಕಾಮಕೆರಳುವುದು ಮತ್ತು ಸಂಗಾತಿ ಸುಂದರವಾಗಿದ್ದಾಗಲೂ ಕಾಮಕೆರಳದಿರುವುದು ಮಹಿಳೆಯರಲ್ಲಿ ಸಹಜವಾದ ಕ್ರಿಯೆ. ಆದರೆ, ದೇಹದ ಸುಖದ ವಿಷಯ ಬಂದಾಗ ಮನಸ್ಸು ನೈತಿಕತೆಯಿಂದ ದೂರ ಸರಿಯದಂತೆ ನಿಗ್ರಹಿಸುವುದು ತೀರ ಅಗತ್ಯ. ಸಂಗಾತಿಯ ದೇಹದ ಅಗತ್ಯ ಪೂರೈಸುವುದು ಕೂಡ ಮಹಿಳೆಯ ಕರ್ತವ್ಯಗಳಲ್ಲೊಂದು. ಇದು ವೈಸ್ ವರ್ಸಾ ಕೂಡ. ಮನಸ್ಸುಗಳು ಹುರಿಗೊಂಡಾಗ ದೇಹಗಳು ತಾನಾಗಿಯೇ ಬೆಸೆಯುತ್ತವೆ.

 

Story first published: Thursday, May 16, 2013, 17:48 [IST]
English summary
8 things women worry about sex. It is not easy for working women with loads of worries to get involved in sexual activities with husband or partner. Financial problems, stress, relationship issues may not allow women to enjoy sexual life. But, here are few tips to overcome them.
Please Wait while comments are loading...