
ಅಂರ್ತಾಜಲದಲ್ಲಿ ಹುಡುಗರ ಹುಡುಕಾಟ ಶೇ. 80ರಷ್ಟು ಸೆಕ್ಸ್ ಮಾಹಿತಿ, ಚಿತ್ರ, ವೀಡಿಯೋಗಳಿಗೆ ಮೀಸಲಾಗಿದೆ. ಶಾಲೆ, ಕಾಲೇಜಿಗೆ ಹೋಗುವ ಹುಡುಗ-ಹುಡುಗಿಯರು ಸೈಬರ್ ಕೆಫೆಗಳ ಮೋಹಜಾಲದಲ್ಲಿ ಸಿಲುಕುತ್ತಿದ್ದಾರೆ. ಅಶ್ಲೀಲ ಚಿತ್ರ, ಬ್ಲೂ ಫಿಲಂಗಳನ್ನು ಮೊಬೈಲ್ ಫೋನ್, ಡಾಟಾ ಕಾರ್ಡ್ ಗಳಿಗೆ ಡೌನ್ ಲೋಡ್ ಮಾಡಿಕೊಳ್ಳುವುದು ಇವರ ಹವ್ಯಾಸವಾಗಿದೆ.
ಸೈಬರ್ ಕೆಫೆ ಮಾಲೀಕರು ಇದಕ್ಕೆ ನೀರೆರೆಯುತ್ತಿದ್ದಾರೆ. ರೋಗಿ ಬಯಸಿದ್ದೂ ಅದನ್ನೇ ವೈದ್ಯ ಹೇಳಿದ್ದೂ ಅದನ್ನೇ ಎನ್ನುವಂತೆ ಯಾವುದೇ ಅಡೆ ತಡೆಯಿಲ್ಲದಂತೆ ಸರಾಗವಾಗಿ ವೆಬ್ ವೀಕ್ಷಣೆಗೆ ಅವಕಾಶ ಕಲ್ಪಿಸುತ್ತಿದ್ದಾರೆ. ಅತ್ಯುತ್ತಮ ಕಂಪ್ಯೂಟರ್ ಗಳನ್ನು ಸಜ್ಜುಗೊಳಿಸುತ್ತಾರೆ. ಅಷ್ಟೇ ಅಲ್ಲ, ಅನೇಕ ಕಡೆ ಇದು ವೇಶ್ಯಾವಾಟಿಕೆಗೂ ರಾಜ ಮಾರ್ಗವಾಗಿದೆ. ಹಾಸಿಗೆ, ಕಾಂಡೋಮ್, ಚೆಂದದ ಬೆಡಗಿಯನ್ನು ಬೇಡಿಕೆ ನೋಡಿಕೊಂಡು ಸರಬರಾಜು ಮಾಡುತ್ತಿದ್ದಾರೆ. ಇತ್ತೀಚೆಗೆ ಪೊಲೀಸರು ಕೆಲವು ಸೈಬರ್ ಕೇಂದ್ರಗಳ ಮೇಲೆ ರೈಡ್ ಮಾಡಿದಾಗ ಇದೆಲ್ಲ ಬೆತ್ತಲೆಯಾಗಿದೆ. ಶ್ರೀಮಂತ ಕುಟುಂಬ ವರ್ಗಕ್ಕೆ ಸೇರಿದ ಹದಿಹರಯದ ಹುಡುಗ-ಹುಡುಗಿಯರೂ ಪೊಲೀಸರಿಗೆ ಅತಿಥಿಯಾಗಿದ್ದಾರೆ.
ಈ ವಿದ್ಯಮಾನಕ್ಕೆ ತುಪ್ಪ ಸುರಿಯುವಂತೆ X-rated CDs and DVD ಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಹುಡುಗರು ನೇರವಾಗಿ ಸಿ.ಡಿ. ಅಂಗಡಿಗಳಿಗೆ ಬಂದು ಇವುಗಳ ಖರೀದಿ ಮಾಡುತ್ತಾರೆ. ಹೊಚ್ಚ ಹೊಸ ಸಿ.ಡಿ ಬೇಕೆನ್ನುತ್ತಾರೆ. ಪೊಲೀಸರ ಭಯವೂ ಮಾಯವಾಘಿದೆ. ಏಕೆಂದರೆ ಲಂಚದ ರೂಪದಲ್ಲಿ ಸಿಡಿಗಳು ಪೊಲೀಸರ ಕೈಸೇರುತ್ತಿವೆ ಎನ್ನುತ್ತಾರೆ ಮ್ಯೂಸಿಕ್ ಅಂಗಡಿಗಳವರು.