
ಕಂಡಕಂಡ ವೇಳೆಯಲ್ಲಿ ಸಿಕ್ಕಸಿಕ್ಕ ಕಡೆಯಲ್ಲೆಲ್ಲ ಸಿಕ್ಕಿದ್ದನ್ನೆಲ್ಲ ತಿಂದು ಹೊಟ್ಟೆ ಕೆಡಿಸಿಕೊಳ್ಳಲು ಯಾರೂ ಇಚ್ಛಿಸುವುದಿಲ್ಲ. ಉತ್ತಮ ಜೀವನಶೈಲಿಯಿಂದ ಆರೋಗ್ಯ ಮಾತ್ರ ದಿವಿನಾಗಿರುವುದಿಲ್ಲ, ಇದರಿಂದ ರೋಗ ನಿರೋಧಕ ಶಕ್ತಿ ಕೂಡ ವರ್ಧಿಸುತ್ತದೆ. ಆರೋಗ್ಯವೇ ಭಾಗ್ಯ. ಹೆಲ್ತ್ ಈಸ್ ವೆಲ್ತ್.
ಹಾಗೆಯೆ, ಒಳ್ಳೆಯ ಲೈಂಗಿಕ ಚಟುವಟಿಕೆಯಿಂದ ನಾವು ಮಾನಸಿಕವಾಗಿ ಮಾತ್ರವಲ್ಲ ದೈಹಿಕವಾಗಿ ಕೂಡ ಸದೃಢವಾಗಿರುತ್ತೇವೆ. ಇದು ವೈಜ್ಞಾನಿಕವಾಗಿ ರುಜುವಾತಾಗಿರುವಂಥ ಸಂಗತಿ. ವೈದ್ಯರು ಕೂಡ ಇದನ್ನೇ ಪ್ರಿಸ್ಕ್ರೈಬ್ ಮಾಡುವುದು. ಗಂಡ ಹೆಂಡತಿ ಸೇರಿ ರಾತ್ರಿ ಆಡುವ ಪ್ರೇಮದಾಟ ತಡೆಯುವುದು ಅನೇಕ ರೋಗಗಳ ಕಾಟ.
ನೀವೆಷ್ಟೇ ವ್ಯಾಯಾಮ ಮಾಡಿ, ಯೋಗ ಮಾಡಿ, ಧ್ಯಾನ ಮಾಡಿ, ಟ್ಯಾಬ್ಲೆಟ್ಟುಗಳನ್ನು ತಿನ್ನಿ, ಟಾನಿಕ್ಕುಗಳನ್ನು ಕುಡಿಯಿರಿ ಕಾಮಕ್ರೀಡೆಯಿಂದ ಸಿಗುವ ಸುಖದ ಮಜಾ ಮತ್ತು ಅದರಿಂದ ಆಗುವ ದೈಹಿಕ ಆರೋಗ್ಯದ ಲಾಭದ ತೂಕವೇ ಬೇರೆ. ಅದು ಸ್ಟ್ರಾಬೆರ್ರಿ ಕೇಕಿನ ಮೇಲಿಟ್ಟ ಚೆರ್ರಿ ಹಣ್ಣಿನಂತೆ.
ಗಂಡು ಹೆಣ್ಣಿನ ನಡುವೆ ಬಾಂಧವ್ಯ ಮಧುರವಾಗಿರಲು ದೈಹಿಕ ಸುಖದ ಅವಶ್ಯಕತೆ ಎಷ್ಟಿದೆಯೋ, ದೈಹಿಕವಾಗಿ ಆರೋಗ್ಯವಂತರಾಗಿರಲು ಕಾಮದ ಅಗತ್ಯವೂ ಇದೆ. ನಿಯಮಿತವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದರೆ ಅನೇಕ ರೋಗಗಳಿಂದ ನಾವು ದೂರವಿರಬಹುದು. ಉತ್ತಮ ಕಾಮಕ್ರೀಡೆಯಿಂದ ಎಂತೆಂಥ ಲಾಭಗಳಿವೆ ಎಂಬುದನ್ನು ಮುಂದಿನ ಸರಣಿ ಲೇಖನಗಳಲ್ಲಿ ನೋಡೋಣ.