•  

ಕೇಳ್ರಪ್ಪೋ ಕೇಳ್ರಿ, ಜಿ-ಸ್ಪಾಟ್ ಇಲ್ವೇ ಇಲ್ವಂತೆ!

Array
G-spot does not exist in women
 
1950ರಲ್ಲಿ ಜನನ ತಾಳಿದಂದಿನಿಂದ ಮಹಿಳೆಯ ಗುಪ್ತಾಂಗದಲ್ಲಿರುವ 1ರಿಂದ 2 ಇಂಚು ಅಗಲವಿರುವ ಈ ಅತ್ಯಂತ ಸಂವೇದನಾಶೀಲ ಅಂಗದ ಬಗ್ಗೆ ಪುಟಪುಟಗಟ್ಟಲೆ ಬರೆಯಲಾಗಿದೆ. ಇಷ್ಟೆಲ್ಲ ಬರೆದ ಮೇಲೆ, ಮಹಿಳೆಯಲ್ಲಿ ಕಾಮೋತ್ಕಟತೆಯನ್ನು ಹೆಚ್ಚಿಸುವ ಈ ಭಾಗ ಅಸ್ತಿತ್ವದಲ್ಲಿಯೇ ಇಲ್ಲ ಎಂದರೆ? ಅದು ಇದೆ ಎಂದು ನಂಬಿರುವ ಮಂದಿಗೆ ಹೆಂಗಾಗಿರಬೇಡ?

ಹೌದು, ಅತ್ಯಂತ ಸೂಕ್ಷ್ಮವಾಗಿರುವ ಈ ಭಾಗವೇ ಜಿ-ಸ್ಪಾಟ್. ಸತತ ಅರುವತ್ತು ವರ್ಷಗಳ ಸುದೀರ್ಘ ಸಂಶೋಧನೆ ನಡೆಸಿದ ನಂತರ, ಜಿ-ಸ್ಪಾಟ್ ಎಂಬ ಭಾಗ ಮಹಿಳೆಯಲ್ಲಿ ಇಲ್ಲವೇ ಇಲ್ಲ ಎಂದು ಅಮೆರಿಕಾದ ವಿಜ್ಞಾನಿಗಳು ಪ್ರಮಾಣ ಮಾಡಿ ಹೇಳಿದ್ದಾರೆ. ತಮ್ಮಲ್ಲಿ ಜಿ-ಸ್ಪಾಟ್ ಖಂಡಿತ ಇದೆ ಎಂದು ನಂಬಿದ್ದ ಮಹಿಳಾಮಣಿಗಳು ನಗುವುದೋ ಅಳುವುದೋ ಎಂದು ಕಕ್ಕಾಬಿಕ್ಕಿಯಾಗಿದ್ದಾರೆ.

ಇಸ್ರೇಲ್ ಮತ್ತು ಅಮೆರಿಕದ ಸಂಶೋಧಕರ ತಂಡ ಸಾಕಷ್ಟು ಸಮೀಕ್ಷೆ ಮಾಡಿ, ಫೋಟೋಗಳನ್ನು ತೆಗೆದು, ಗುಪ್ತಾಂಗದ ಆ ಭಾಗದ ಬಯೋಪ್ಸಿ ನಡೆಸಿ ಕೊನೆಗೆ ಅಂಥದೊಂದು ಭಾಗವೇ ಇಲ್ಲ ಎಂದು ಷರಾ ಬರೆದಿದ್ದಾರೆ. "ಯಾವುದೇ ಸಂಶಯವೇ ಇಲ್ಲ. ಜಿ-ಸ್ಪಾಟ್ ಎಂಬ ತೆಳುವಾದ ಗೋಡೆ ಇಲ್ಲ" ಎಂದು ಸಂಶೋಧಕರು ಖಡಾಖಂಡಿತವಾಗಿ ಹೇಳಿದ್ದಾರೆ.

ಈ ಜಿ-ಸ್ಪಾಟ್ ಎಂಬ ಯೋನಿಯಲ್ಲಿನ ಗೋಡೆಯನ್ನು ಕಂಡುಹಿಡಿದಿದ್ದು, ಡಾ. ಅರ್ನಸ್ಟ್ ಗ್ರಾಫೆನ್ಬರ್ಗ್ ಎಂಬ ಸಂಶೋಧಕ. ಆ ಸಂಶೋಧನೆಯ ಗೌರವಾರ್ಥವಾಗಿ ಆ ಸಂವೇದನಾಶೀಲ ಜಾಗಕ್ಕೆ ಜಿ-ಸ್ಪಾಟ್ ಎಂದು ನಾಮಕರಣ ಮಾಡಲಾಯಿತು. ಅದಾದ ಮೇಲೆ ಜಿ-ಸ್ಪಾಟ್ ಹಿಂದೆ ಬಿದ್ದ ಸೆಕ್ಸಾಲಾಜಿಸ್ಟ್ ಗಳು ಅದರ ಗುಣಗಳ ಬಗ್ಗೆ ಬರೆದದ್ದೇ ಬರೆದದ್ದು.

ತಮಾಷೆಯ ಸಂಗತಿಯೆಂದರೆ, ಜಿ-ಸ್ಪಾಟಿನ ಬಗ್ಗೆ ಗ್ರಾಫೆನ್ಬರ್ಗ್ ಪೇಟೆಂಟ್ ಪಡೆದಿದ್ದಾನಾದರೂ, ಇದರ ಕುರಿತು ಭಾರತದ ಲೈಂಗಿಕ ಗ್ರಂಥ ಕಾಮಸೂತ್ರ ಮತ್ತು 11ನೇ ಶತಮಾನದ ಜಯಮಂಗಲ ಶಾಸನಗಳಲ್ಲಿ ಜಿ-ಸ್ಪಾಟ್ ಬಗ್ಗೆ ಉಲ್ಲೇಖವಾಗಿದೆ. ಶೇ.29ರಷ್ಟು ಮಹಿಳೆಯರು ತಮಗೆ ಅಂಥದೊಂದು ಸುಖನೀಡುವ ಭಾಗವಿದೆಯೆಂದೇ ನಂಬಿದ್ದಾರೆ. ಈಗ ಅದು ಇದೆಯೆಂದು ಸಾರಲು ಮತ್ತೊಂದು ಸಂಶೋಧಕರ ತಂಡ ಟೊಂಕಕಟ್ಟಬೇಕಿದೆ.

English summary
American and Israeli team of scientists have declared that the sensitive spot G-spot does not exist in women at all. The G-spot was named after Dr. Ernst Grafenberg in 1950. But 29 percent women believe that they have that G-spot.
Story first published: Saturday, January 21, 2012, 16:30 [IST]

Get Notifications from Kannada Indiansutras