•  

ರೂಂನಲ್ಲಿ ಯಾರಿಲ್ಲ, ಬೆತ್ತಲಾಗಿ ತಪ್ಪೇನಿಲ್ಲ

Array
Why You Should Be Naked Sometimes?
 
ಜಮಾನ ಎಷ್ಟೇ ಬದಲಾದರೂ, ಮಿನಿ, ಮೈಕ್ರೋ ಮಿನಿ ಧರಿಸಿ ಓಡಾಡತೊಡಗಿದರೂ ಬೆತ್ತಲಾಗುವುದೆಂದರೆ ಮಹಿಳೆಯರು ಹೆದರಿಕೆ ಇದ್ದೇ ಇದೆ. ಸಂಗಾತಿಯ ಎದುರಲ್ಲೂ ಕೂಡಾ ನಗ್ನಳಾದ ಸಖಿ ಮೈಮೇಲೆ ಬೆಡ್ ಶೀಟೋ ನೀಳ ಕೈಗಳನ್ನು ಅಪ್ಪಿಕೊಂಡು ನಾಚಿಕೆ ಪ್ರದರ್ಶಿಸುವುದು ಮಾಮೂಲಿ ಹಾಗೂ ಸಹಜ ಕ್ರಿಯೆ.

ಆದರೆ, ಪ್ರಾಯಕ್ಕೆ ಬಂದ ಮೇಲೆ ಬೆತ್ತಲೆ ಮೈಯ ಒಮ್ಮೆ ನೋಡಿಕೊಳ್ಳುವುದು ಹೆಣ್ಣು/ಗಂಡಿಗೆ ಸಹಜ ಎನಿಸುತ್ತದೆ. ಕೆಲವರು ಬೆತ್ತಲೆ ಮಲಗುವುದನ್ನು ಇಷ್ಟಪಡುತ್ತಾರೆ. ಆದರೆ, ಹಲವರು ಬೆತ್ತಲಾಗುವುದೆಂದರೆ ಅತ್ತ ಇತ್ತ ನೋಡುತ್ತಾರೆ...ರೂಂನಲ್ಲಿ ಯಾರಿಲ್ಲದಿದ್ದರೆ.. ನಿಮ್ಮವರ ಮುಂದೆ ಬೆತ್ತಲಾಗಿ ತಪ್ಪೇನಿಲ್ಲ. ಬೆತ್ತಲಾದರೇನು ಫಲ, ಎಷ್ಟು ಅನುಕೂಲ ಮುಂದೆ ನೋಡೋಣ...

* ಮೊಟ್ಟಮೊದಲು ದಿನದ 24 ಗಂಟೆಯಲ್ಲಿ ನಿಮ್ಮಿಷ್ಟದ ಅವಧಿಯನ್ನು ಅಯ್ದುಕೊಳ್ಳಿ. ಸಂಪೂರ್ಣ ಬೆತ್ತಲಾಗಿ 30 ನಿಮಿಷಗಳ ವಿಶ್ರಾಂತಿ ಪಡೆಯಿರಿ. ಸಮಯ ಹಾಗೂ ಸ್ಥಳದ ಆಯ್ಕೆ ನಿಮಗೆ ಬಿಟ್ಟಿದ್ದು. ನಿಮ್ಮಲ್ಲಿ ನಿಮ್ಮ ಬಗ್ಗೆ ಆತ್ಮವಿಶ್ವಾಸ ಹೆಚ್ಚಿಸಿ, ಇನ್ನಷ್ಟು ನಿರಾಳ ಮನೋಭಾವ ಬೆಳೆಸಿಕೊಳ್ಳಲು ಇದು ಸಹಕಾರಿ.

* ನಿಮ್ಮ ಬಗ್ಗೆ ನಿಮಗೆ ಆರಿವಿಲ್ಲದೆ ಉಂಟಾಗಿರುವ ಕೀಳರಿಮೆ ತೊಡೆದು ಹಾಕಲು ನಗ್ನರಾಗಿ...ನಿಮ್ಮ ದೇಹವನ್ನು ಒಮ್ಮೆ ಸವರಿಕೊಳ್ಳುತ್ತಾ ಕನ್ನಡಿ ಮುಂದೆ ಕೆಲ ಕಾಲ ಮೈಮರೆಯಿರಿ.. ನಿಮ್ಮಲ್ಲಿರುವ ಪ್ರಣಯಾಕಾಂಕ್ಷೆ ಇದರಿಂದ ಹೆಚ್ಚುವುದು. ನಿಮ್ಮ ಅಂಗಾಂಗಗಳ ಆರೈಕೆ, ಆರೋಗ್ಯ, ಅಳತೆ ಪ್ರಮಾಣ ಅರಿಯಲು ಕೂಡಾ ಇದು ಸಹಕಾರಿ.

* ಬೆತ್ತಲಾಗಿ ಮಲಗುವುದರಿಂದ ದೈಹಿಕವಾಗಿ ಒಂದಷ್ಟು ಉಪಯೋಗಗಳು ಸಿಗುತ್ತದೆ. ರಕ್ತ ಸಂಚಲನೆ ಹೆಚ್ಚುತ್ತದೆ. ಕಿಬ್ಬೊಟ್ಟೆಯಲ್ಲಿನ ಘರ್ಷಣೆ, ನೋವು ಮಾಯವಾಗುತ್ತದೆ. ಬಿಗಿಯಾದ ಒಳ ಉಡುಪು ಧರಿಸುವುದರಿಂದ ಉಂಟಾದ ತೊಂದರೆಗಳು ಪರಿಹಾರವಾಗುತ್ತದೆ. ದೇಹ ಹಗುರವೆನಿಸುತ್ತದೆ. ದೇಹದ ಜೊತೆ ಮನಸ್ಸು ಹಗುರಾದರೆ ಸ್ವರ್ಗದಲ್ಲಿ ತೇಲಾಡಿದ ಅನುಭವವಾಗುತ್ತದೆ. ಸೋ.. ಒಮ್ಮೆ ಟ್ರೈ ಮಾಡಿ ನೋಡಿ...ಮೊದಲಿಗೆ ಬಿಗಿ ಉಡುಪು ಕಳಚಿ ಬೆತ್ತಲಾಗಿ ಮಲಗುವುದು ಕಷ್ಟ ಎನಿಸಿದರೆ.. ಹಗುರವಾದ, ಸಡಿಲವಾದ ಉಡುಪುಗಳನ್ನು ಧರಿಸಿರಿ ನಂತರ ಬೆತ್ತಲೆ ನಿದ್ರೆಗೆ ಜಾರುವ ಯತ್ನ ಮುಂದುವರೆಸಿ.

* ಬೆತ್ತಲಾಗುವುದರಿಂದ ತ್ವಚೆ ಸಂರಕ್ಷಣೆಗೆ ಸಹಕಾರಿ. ಬೆವರು ಗ್ರಂಥಿ ಹಾಗೂ ಸೆಬಾಸಿಯೊಸ್ ಗ್ರಂಥಿ ಕಾರ್ಯ ಕ್ಷಮತೆ ಹೆಚ್ಚಿಸುತ್ತದೆ. ಬೆತ್ತಲಾಗುವುದು ಚರ್ಮಕ್ಕೆ ಒಳ್ಳೆಯದು.

* ನಗ್ನತೆ ಸಂಭೋಗಕ್ಕೆ ದಾರಿ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಸರಸ ಬಗ್ಗೆ ಆಸಕ್ತಿ ಹೆಚ್ಚಿಸಲು ಬೆತ್ತಲಾಗುವುದು ಸಹಕಾರಿಯಾಗುತ್ತದೆ. ನಿರಾಸಕ್ತ ಸಂಗಾತಿಯನ್ನು ಸೆಳೆಯಲು ಸ್ಟ್ರಿಪ್ಪಿಂಗ್ ಪ್ರಯೋಗ ಅತ್ಯಂತ ಪರಿಣಾಮಕಾರಿಯಾಗಬಲ್ಲುದು.

* ಗುಪ್ತಾಂಗಗಳ ನೋವು, ಕಡಿತ, ಉರಿ ತಪ್ಪಿಸಲು ಬೆತ್ತಲಾಗುವುದು ಒಳ್ಳೆ ವಿಧಾನ. ಎಲ್ಲಾ ಅಂಗಗಳಿಗೂ ಸೂಕ್ತ ಪ್ರಮಾಣದಲ್ಲಿ ಗಾಳಿ ಸಿಗುವುದರಿಂದ ದುರ್ನಾತ, ಗುಪ್ತಾಂಗಗಳಲ್ಲಿ ಕೆರೆತ ಮುಂತಾದ ಮುಜುಗರಗಳು ತಪ್ಪುತ್ತದೆ.

* ಕೊನೆಯದಾಗಿ ಆತ್ಮ ವಿಶ್ವಾಸ ಹೆಚ್ಚಿಸಿ, ಸಂಗಾತಿಯನ್ನು ಅರಿಯಲು ಸಹಕರಿಸುತ್ತದೆ. ಪರಸ್ಪರ ಒಪ್ಪಿಗೆ, ಸಂಬಂಧ ಬೆಸುಗೆಗೆ ನಗ್ನತೆ ಪೂರಕವಾಗುತ್ತದೆ. ಪುರುಷ ಬಯಸುವ ಪ್ರಚೋದನಕಾರಿ ಒಳ ಉಡುಪು ಅಥವ ಯಾವುದೇ ಉಡುಪು ಧರಿಸಲು ಬೇಕಾದ ವಿಶ್ವಾಸ ಮಹಿಳೆಯರಲ್ಲಿ ಬೆಳೆಯುತ್ತದೆ.

* ಬೆತ್ತಲಾಗುವುದು ತೀರಾ ಖಾಸಗಿ ವಿಷಯವಾಗಿದ್ದು, ಸಂಗಾತಿಯ ಇಚ್ಛೆಗನುಸಾರವಾಗಿ ಬಟ್ಟೆ ಕಳಚಿ..ಒಬ್ಬರೆ ಇದ್ದಾಗ ರೂಮ್ ನಲ್ಲಿ ಯಾರೂ ಇಲ್ಲದಿದ್ದಾಗ ಧೈರ್ಯವಾಗಿ ಆರಾಮವಾಗಿ ಬೆತ್ತಲಾಗಿ ಬೆಡ್ ಮೇಲೆ ಬಿದ್ದುಕೊಳ್ಳಿ..ನೋ ಪ್ರಾಬ್ಲಮ್

English summary
The idea of going naked scares many women. Even in front of their partners, women feel awkward to undress. The urge to hide the body makes your hands instinctively reach out for the blanket. Do you like to be undressed at times? Find out some reasons of why you should be naked sometimes.
Story first published: Wednesday, May 9, 2012, 21:50 [IST]

Get Notifications from Kannada Indiansutras