•  

ಸಂಭೋಗ ದೂರವಿಡಬೇಕಾದ 6 ಕಾರಣಗಳು

Array

ಇಡೀ ಜಗತ್ತನ್ನೇ ಮರೆತು, ಹಮ್ಮುಬಿಮ್ಮು ಅಹಂಕಾರಗಳನ್ನು ಕಳಚಿ, ಅಡೆತಡೆಗಳಿಲ್ಲದ ಸಮಯದಲ್ಲಿ ಗಂಡು ಹೆಣ್ಣು ಮಿಲನ ಮಹೋತ್ಸವ ಆಚರಿಸಿಕೊಳ್ಳುವ ಘಳಿಗೆಯಿದೆಯಲ್ಲ, ಅದು ದುಂಬಿಯೊಡನೆ ಹೂವು ಸಮಾಗಮವಾದಂತೆ, ಕಡಲಿನೊಂದಿಗೆ ನದಿ ಸೇರುವ ಉನ್ಮಾದದಂತೆ. ಎರಡು ದೇಹಗಳು ಒಂದೇ ಆತ್ಮವಾಗುವ ಅಮೃತ ಘಳಿಗೆಯದು.

ಆದರೆ, ಎರಡು ದೇಹಗಳು ಸಂಯೋಗವಾಗುವ ಸಮಯದಲ್ಲಿ ಎರಡು ಮನಸುಗಳು ಒಂದಾಗಿರಬೇಕಲ್ಲ? ಅದು ಎಲ್ಲ ಸಮಯದಲ್ಲಿ ಸಾಧ್ಯವಿಲ್ಲ. ಗಂಡು ಹೆಣ್ಣುಗಳು ಆ ಕ್ಷಣದಲ್ಲಿ ಇರುವ ಮನಸ್ಥಿತಿಯ ಮೇಲೆ ಸಂಭೋಗದ ಯಶಸ್ವಿ ನಿಂತಿರುತ್ತದೆ. ಇದು ಗಂಡು ಹೆಣ್ಣು ಇಬ್ಬರೂ ಸರಿಸಮವಾಗಿ ದುಡಿಯುವ, ಸಂಸಾರವೆಂಬ ರಥವನ್ನು ಒಟ್ಟಾಗಿ ಎಳೆಯುವ, ಒಬ್ಬರಿಗೊಬ್ಬರು ಗೌರವ ಕೊಟ್ಟು ಬದುಕು ಸವೆಸುವ ಕಾಲ.

ಸಂಭೋಗವೆನ್ನುವುದು ಅತ್ಯಂತ ಸಂತಸದಿಂದ ಗಂಡು ಹೆಣ್ಣುಗಳೆರಡು ಬಾಳಿನ ಸಾಮರಸ್ಯ ಕಾಯ್ದುಕೊಳ್ಳಲು ಕಳೆಯುವ ಕಾಲ. ಅಲ್ಲಿ ಇಬ್ಬರಲ್ಲಿಯೂ ಸಂಭೋಗಕ್ಕೆ ಸಮ್ಮತವಿರಬೇಕು. ಮಿಲನ ಮಹೋತ್ಸವವೆಂಬುದು ಬಲವಂತದ ಮಾಘಸ್ನಾನವಾಗಬಾರದು. ಎರಡು ದೇಹಗಳು ಒಂದಾಗುವ ಭರದಲ್ಲಿ ಬದುಕೇ ಛಿದ್ರಛಿದ್ರವಾಗಬಾರದು.

ಆದರೆ, ಅಂತಹ ಸಂದರ್ಭ ಸಿಗುವುದು ತುಂಬಾ ದುರ್ಲಭ. ಗಂಡುಹೆಣ್ಣುಗಳಿಬ್ಬರು ದುಡಿಯುತ್ತಿರುತ್ತಾರೆ. ಇಬ್ಬರೂ ಬೇರೆ ಬೇರೆ ಶಿಫ್ಟಿನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಒಬ್ಬರಲ್ಲಿ ಮೂಡಿದ್ದಾಗ ಇನ್ನೊಬ್ಬರು ಬಳಲಿ ಬೆಂಡಾಗಿರಬಹುದು. ಅಥವಾ ಮನೆತುಂಬ ಜನರಿದ್ದಾಗ ಸಾಧ್ಯವಾಗದೆ ಇರಬಹುದು. ಒಂದು ಮಾತು ಮಾತ್ರ ನೆನಪಿರಲಿ, ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ಎರಡು ಮನಸುಗಳು ಒಂದಾಗದಿದ್ದರೆ ಬಾಳೇ ಬೆಂಕಿಗೆ ಸಿಕ್ಕ ಬಾಳೆ ಎಲೆಯಂತಾಗುತ್ತದೆ. ಇಂತಹ ಅನೇಕ ಘಟನೆಗಳು ನಡೆದಿವೆ.

ಇಲ್ಲಿ, ಗಂಡ ಹೆಂಡಿರಿಬ್ಬರು ಸಂಭೋಗಕ್ಕೆ ಇಳಿಯಲೇಬಾರದಾಗ 6 ಕಾರಣಗಳನ್ನು ಪಟ್ಟಿ ಮಾಡಲಾಗಿದೆ.

ಒಬ್ಬರಿಗೆ ಅಥವಾ ಇಬ್ಬರಿಗೂ ಸಂಭೋಗ ಬೇಡವಾದಾಗ

ಒಬ್ಬರಿಗೆ ಅಥವಾ ಇಬ್ಬರಿಗೂ ಸಂಭೋಗ ಬೇಡವಾದಾಗ

ಇಂಥ ಪರಿಸ್ಥಿತಿ ಅತ್ಯಂತ ಗಹನವಾದದ್ದು ಅನ್ನಿಸದಿರಬಹುದು. ಪ್ರಣಯ ಪಲ್ಲವಿಸುವ ಹೊತ್ತಿನಲ್ಲಿ ಎರಡು ಮನಸುಗಳು ಸಂಭೋಗಕ್ಕಾಗಿ ಶ್ರುತಿಗೊಂಡಿರಬೇಕು. ತೆಳ್ಳನೆಯ ಹುರಿಗಳನ್ನು ಒಂದಕ್ಕೊಂದು ನೀಟಾಗಿ ಹೊಸೆದು ಸರಿಯಾದ ರೀತಿಯಲ್ಲಿ ಬೆಸೆದಾಗ ಮಾತ್ರ ಹಗ್ಗ ಗಟ್ಟಿಯಾಗುತ್ತದೆ. ಇಲ್ಲದಿದ್ದರೆ, ಒಂದು ದಾರವನ್ನು ಎಳೆದರೆ ಸಾಕು ಇಡೀ ಹಗ್ಗವೇ ಸಡಿಲು ಸಡಿಲಾಗುತ್ತದೆ. ಇಂಥ ಸಮಯದಲ್ಲಿ ಬಲವಂತವಾಗಿಯಾದರೂ ಸರಿ ಸಂಭೋಗ ನಡೆಸದಿರುವುದೇ ಲೇಸು.

ದೇಹ ಗಾಯಗೊಂಡಾಗ

ದೇಹ ಗಾಯಗೊಂಡಾಗ

ಇದು ಒಂದು ರೀತಿ ವಿಚಿತ್ರವಾದ ಸನ್ನಿವೇಶ. ಶೇಕ್ಸ್‌ಪಿಯರ್ ನಾಟಕದ ತರಹ ಮಾಡುವುದೋ ಬೇಡವೋ ಎಂಬಂತಹ ಸಂದಿಗ್ಧ ಪರಿಸ್ಥಿತಿ. ಮೊಣಕಾಲಿಗೆ ಗಾಯವಾದಾಗ, ಕೈ ತರಚಿದಾಗ, ಸೊಂಟ ವಿಪರೀತ ಉಳುಕಿದಾಗ, ಬೆನ್ನು ಸಂಭೋಗಕ್ಕೆ ಸಹಕರಿಸದಾದಾಗ ಪರಸ್ಪರ ಮಾತನಾಡಿಕೊಂಡು ಪ್ರಣಯಕೇಳಿಯನ್ನು ಮುಂದೂಡುವುದು ಒಳಿತು. ಅದನ್ನು ಬಿಟ್ಟು ಏನಾದರಾಗಲಿ ಎಂದು ಒಬ್ಬರು ನಿರ್ಧರಿಸಿ ಇನ್ನೊಬ್ಬರನ್ನು ಸಂಭೋಗಕ್ಕೆ ಬಲವಂತ ಮಾಡಿದರೆ ಅನುಭವಿಸುವವರು ಇನ್ನೊಬ್ಬರೇ ಹೊರತು, ಬಲವಂತ ಮಾಡಿದವರು ಅಲ್ಲ. ಇದನ್ನು ಇಬ್ಬರೂ ತಿಳಿಯಬೇಕು.

ದುಃಖಭರಿತ ಸನ್ನಿವೇಶ ಎದುರಾದಾಗ

ದುಃಖಭರಿತ ಸನ್ನಿವೇಶ ಎದುರಾದಾಗ

ದೇಹದ ಗಾಯಕ್ಕೆ ಮುಲಾಮು ಹಚ್ಚಬಹುದು ಆದರೆ ದುಃಖದ ಸನ್ನಿವೇಶ ಎದುರಾದಾಗ ಕಾಮಕೇಳಿಗಿಳಿದರೆ, ಮನಸಿಗಾದ ಗಾಯ ಇನ್ನೂ ಆಳವಾಗುತ್ತದೆ. ಅದು ಎಂದೂ ಮಾಯದೇ ಇರಬಹುದು ಅಥವಾ ದುಃಖದ ಪ್ರಮಾಣವನ್ನು ಇನ್ನೂ ಹೆಚ್ಚಿಸಬಹುದು. ಅಂತಹ ಸಮಯದಲ್ಲಿ ದುಃಖದಲ್ಲಿರುವವರನ್ನು ಅವರಷ್ಟಕ್ಕೆ ಅವರನ್ನು ಬಿಟ್ಟು, ಲಗಾಮಿಲ್ಲದ ಕಾಡು ಕುದುರೆಯಂತಾದ ಮನಸನ್ನು ನಾವೇ ಹದ್ದುಬಸ್ತಿನಲ್ಲಿ ಇಡಬೇಕು. ಸಾಧ್ಯವಾದರೆ ಕೆಲ ಸಾಂತ್ವದ ನುಡಿಗಳನ್ನು ಹೇಳಿ, ದುಃಖಿತರ ಮನಸನ್ನು ತಿಳಿ ಮಾಡಲು ನೋಡಿರಿ.

ಸುಮ್ನೆ ತಮಾಷೆಗಾಗಿ

ಸುಮ್ನೆ ತಮಾಷೆಗಾಗಿ

ಯಾವುದೇ ಭಾವವಿಲ್ಲದ ಗೀತೆಯನ್ನು ಹಾಡಿದರೆ ಮನಸಿಗೆ ತಟ್ಟುವುದೆ? ಶ್ರುತಿ ಇಲ್ಲದ ವೀಣೆಯನ್ನು ಮೀಟಿದರೆ ಸುಶ್ರಾವ್ಯ ನಾದ ಹೊರಹೊಮ್ಮುವುದೆ? ಹಾಗೆಯೆ, ಯಾವುದೇ (ಮದುವೆಯಾಗುವ) ಉದ್ದೇಶವಿಲ್ಲದೆ ಕೇವಲ ಸಂತೋಷಕ್ಕಾಗಿ ನಡೆಸುವ ಕಾಮಕೇಳಿ ಇದೆಯಲ್ಲ, ಅದಕ್ಕಿಂತ ಅನಾಹುತಕಾರಿ ಇನ್ನೊಂದಿಲ್ಲ. ಇಂಥ ಸಂಭೋಗ ನಮ್ಮ ಬಾಳನ್ನು ಮಾತ್ರವಲ್ಲ, ಭವಿಷ್ಯವನ್ನು ಕೂಡ ಸರ್ವನಾಶ ಮಾಡುತ್ತದೆ. ಸಂಭೋಗ ಮಾಡುವುದೇ ಸಂತೋಷಕ್ಕಾಗಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಮಿಲನ ಮಹೋತ್ಸವದಲ್ಲಿಯೂ ಒಂದು ಗಾಂಭೀರ್ಯತೆ ಇರಬೇಕು.

ಬಲವಂತದ ಕಾಮಕೇಳಿ

ಬಲವಂತದ ಕಾಮಕೇಳಿ

ಹೆಣ್ಣಿಗೆ ಕಾಮಕೇಳಿಯಲ್ಲಿ ಎಳ್ಳಷ್ಟೂ ಮನಸ್ಸಿಲ್ಲದಿದ್ದರೂ ಬಲವಂತವಾಗಿ ಸಂಭೋಗಕ್ಕೆ ಎಳೆಯುವುದು ಅತ್ಯಾಚಾರಕ್ಕೆ ಸರಿಸಮ. ಇದರಿಂದ ದೇಹಕ್ಕೆ ಮಾತ್ರ ಗಾಯವಾಗುವ ಸಾಧ್ಯ ಇರುವುದಿಲ್ಲ, ಮನಸ್ಸಿಗೂ ಮಾಯದ ಗಾಯವಾಗುವ ಸಾಧ್ಯತೆ ಇರುತ್ತದೆ. ಇದು ಹೆಣ್ಣಿಗೂ ಅನ್ವಯಿಸುತ್ತದೆ. ಮನಸಿನ ಇಂಗಿತವನ್ನು ಅರಿಯದೆ ತಮ್ಮ ಕಾಮತೃಷೆ ತೀರಿಸಿಕೊಳ್ಳುವ ಒಂದೇ ಉದ್ದೇಶದಿಂದ ಸಂಗಾತಿಯನ್ನು ಸಂಭೋಗಕ್ಕೆ ಸೆಳೆಯುವ ಕ್ರಿಯೆಗಿಂತ ಘೋರವಾದ ಪಾಪ ಇನ್ನೊಂದಿಲ್ಲ. ನಾವು ತೃಪ್ತಿಪಟ್ಟುಕೊಳ್ಳುವುದು ಮಾತ್ರವಲ್ಲ, ಸಂಗಾತಿಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ತೃಪ್ತಿಪಡಿಸುವುದು ನಮ್ಮ ಧ್ಯೇಯವಾಗಬೇಕು.

ಗುಂಡು ಹಾಕಿ ಬಂದಾಗ

ಗುಂಡು ಹಾಕಿ ಬಂದಾಗ

ಕಾಮಕೇಳಿ ನಡೆಸುವ ಕ್ರಿಯೆಯೇ ಮತ್ತೇರಿಸುವಂತಿರುವಾಗ ನಮ್ಮತನವನ್ನೇ ಕಳೆದುಕೊಳ್ಳುವಂತಹ, ಬಾಳನ್ನೇ ಹಾಳು ಮಾಡುವಂತಹ ಮದ್ಯವನ್ನು ಸೇವಿಸಿ ಸಂಭೋಗಕ್ಕೆ ಇಳಿಯುವುದು ತರವಲ್ಲ. ಗಂಡ ಮದ್ಯ ಸೇವಿಸಿ ಬಂದಾಗ, ಹೆಂಡತಿ ನಿರ್ದಾಕ್ಷಿಣ್ಯವಾಗಿ ಸಂಭೋಗವನ್ನು ನಿರಾಕರಿಸಬೇಕು. ಇದು ವೈಸ್ ವರ್ಸಾ ಕೂಡ. ಬಾಯಿಯ ಕೆಟ್ಟ ವಾಸನೆ, ಮಿದುಳನ್ನೇ ಹಿಡಿತದಲ್ಲಿ ಇಟ್ಟುಕೊಳ್ಳಲಾಗದ ಸ್ಥಿತಿಯಲ್ಲಿ ಸಂಭೋಗವಾಗಲಿ ಅಥವಾ ಇನ್ನಾವುದೇ ಕ್ರಿಯೆ ನಡೆಸಿದರೂ ಅದರಿಂದ ಸುಖಕ್ಕಿಂತ ದುಃಖವೇ ಜಾಸ್ತಿ ಸಿಗುತ್ತದೆ.

 

ಇವುಗಳನ್ನು ಗಮನದಲ್ಲಿಟ್ಟು ಕಾಮಕೇಳಿಗಿಳಿದರೆ ಮನೆಯಲ್ಲಿ ಮತ್ತು ಮನದಲ್ಲಿ ಯಾವತ್ತೂ ಹಬ್ಬದ ವಾತಾವರಣವಿರುತ್ತದೆ, ಮನೆಯೇ ನಂದನವನವಾಗುತ್ತದೆ.

English summary
Beware of 6 worst love making ways. Love making should be always enjoyable. You cannot have sex forcefully or when you are not in a mood. Best way is to avoid such acts and strengthen your relationship.
Please Wait while comments are loading...

Get Notifications from Kannada Indiansutras