ಲೈಂಗಿಕ ಕ್ರಿಯೆ ಎನ್ನುವುದು ಸಂತಾನೋತ್ಪತ್ತಿಗೆ, ಮೈ ಮನಸ್ಸಿಗೆ ಮುದ ನೀಡಲು, ಒತ್ತಡವನ್ನು ನಿವಾರಿಸಲು, ಸಂಗಾತಿಗಳ ನಡುವೆ ಬಾಂಧವ್ಯ ವೃದ್ಧಿಸಲು, ಪ್ರೀತಿಯನ್ನು ವ್ಯಕ್ತಪಡಿಸಲು ಇರುವ ಮಾರ್ಗವಾಗಿದೆ. ಒಂದು ವೇಳೆ ನೀವು ಲೈಂಗಿಕ ಕ್ರಿಯೆಯನ್ನು ಮನಸ್ಸಿಗೆ ಮುದ ನೀಡಲು ನಡೆಸುತ್ತಿದ್ದಲ್ಲಿ, ಈ ಅಂಕಣವನ್ನು ತಪ್ಪದೆ ಓದಲೇ ಬೇಕು.
ಲೈಂಗಿಕ ಕ್ರಿಯೆ ಎನ್ನುವುದು ಸಹ ಒಂದು ಸೃಜನಶೀಲ ಪ್ರಕ್ರಿಯೆಯಾಗಿರುತ್ತದೆ. ಇದರಲ್ಲಿ ನಾವು ಸಹ ಸೃಜನಶೀಲತೆಯನ್ನು ಬೆರೆಸಿದರೆ "ಸ್ವರ್ಗಕ್ಕೆ ಕಿಚ್ಚು" ಹಚ್ಚುವುದು ಖಚಿತ. ಒಂದೇ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸುವವರು ನೀವಾಗಿದ್ದಲ್ಲಿ, ನಿಮಗೆ ಲೈಂಗಿಕ ಕ್ರಿಯೆಯ ಮನಮೋಹಕ ಪ್ರಪಂಚದ ಕುರಿತು ನಾವು ತಿಳಿಸುತ್ತೇವೆ.
ಇಲ್ಲವೇ ನೀವು ಮತ್ತು ನಿಮ್ಮ ಸಂಗಾತಿ ಈಗಾಗಲೇ ಬೇರೆ ಬೇರೆ ಭಂಗಿಯಲ್ಲಿ ನಿಮ್ಮ ಮಿಲನವನ್ನು ಆನಂದಿಸುತ್ತಿದ್ದಲ್ಲಿ ಅದರ ಪ್ರಯೋಜನಗಳ ಕುರಿತು ನಿಮ್ಮ ಗಮನ ಸೆಳೆಯುವ ಪ್ರಯತ್ನ ನಾವು ಇಲ್ಲಿ ಮಾಡಿದ್ದೇವೆ. ಲೈಂಗಿಕ ಕ್ರಿಯೆ ನಡೆಸುವ ಭಂಗಿಗಳನ್ನು ಬದಲಾಯಿಸುವುದರಿಂದ ಹಲವಾರು ಪ್ರಯೋಜನಗಳು ದೊರೆಯುತ್ತವೆ ಎಂದು ಬಹುತೇಕ ಮಂದಿ ಹೇಳುತ್ತಾರೆ. ಆದರೆ ಹೇಗೆ ಮತ್ತು ಏಕೆ ಎಂದು ಬಹುತೇಕ ಮಂದಿ ತಿಳಿಸುವುದಿಲ್ಲ ಹಾಗೂ ಇದರ ಕುರಿತಾಗಿ ಬರೆದೂ ಸಹ ಇಲ್ಲ . ಹಾಗಾಗಿ ಈ ಕೊರಗು ನಿವಾರಿಸಲು ನಾವು ಈ ಲೇಖನವನ್ನು ನಿಮಗೆ ನೀಡುತ್ತಿದ್ದೇವೆ. ಮುಂದೆ ಓದಿ....

ನೋಟದಾಗೆ ನಗೆಯ ಮೀಟಿ!
ಒಂದೇ ಬಗೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಮೈಥುನದಲ್ಲಿ ಏಕತಾನತೆ ಮೂಡುತ್ತದೆ. ಅದಕ್ಕಾಗಿ ಮಿಲನದ ನಡುವೆ ಭಂಗಿಗಳನ್ನು ಬದಲಾಯಿಸುವುದರಿಂದ ಸಂಗಾತಿ ನೋಡುವ ನೋಟ ಬೇರೆ ರೀತಿ ಕಂಡು ಸಂತೋಷ ಸಿಕ್ಕುತ್ತದೆ. ಕೆಲವೊಮ್ಮೆ ನಿಮ್ಮ ಭಂಗಿ ನೀವು ಅಂದುಕೊಂಡಷ್ಟು ಮುದ ನೀಡದೆ ಹಳೆಯ ಭಂಗಿಗೆ ಬಂದಾಗ ನಿಮ್ಮ ಸಂಗಾತಿ ನಿಮಗಾಗುವ ಭ್ರಮರನಿರಸನವನ್ನು ನೋಡಿ ನಕ್ಕರೆ ಸಾಕು! ನಿಮಗೆ ಅದರಿಂದ ಮತ್ತಷ್ಟು ಪ್ರೇರಣೆ ಬಂದು ಮತ್ತಷ್ಟು ಉತ್ಸಾಹದಿಂದ ಸಂಭೋಗದಲ್ಲಿ ತೊಡಗಿಕೊಳ್ಳುತ್ತೀರಿ. ಒಟ್ಟಾರೆ ಈ ಕ್ರಿಯೆ ಹೇಗಿರುತ್ತದೆ ಎಂದರೆ ಒಂದು ಸುಂದರ ಚಿತ್ರವನ್ನು ನೇರವಾಗಿ, ಉಲ್ಟಾ ಮಾಡಿ, ವಿವಿಧ ಕೋನದಿಂದ ನೋಡಿದ ಅನುಭವ ನೀಡುತ್ತದೆ.

ಬೆನ್ನು ಹಾಗು ಸ್ತನಗಳ ಜೊತೆಗೆ ಆಟವಾಡಬಹುದು!
ಅದರಲ್ಲೂ ಗಂಡಸರಿಗೆ ಶಿಶ್ನದ ನಂತರ ಅತಿ ಸಂವೇದನಾಕಾರಕವಾದ ಅಂಗ ಯಾವುದೆಂದರೆ ಕಣ್ಣು. ಅವರ ಕಣ್ಣಿಗೆ,ಅದಕ್ಕೆ ಕಾಣುವ ನೋಟಕ್ಕೆ ಯಾವುದೇ ಮುದ ನೀಡಿದರೂ ಅವರ ಎದೆಯಲ್ಲಿ ಮನ್ಮಥ ಬಾಣಗಳ ಪ್ರಭಾವ ಕಾಣಿಸಿಕೊಳ್ಳುತ್ತದೆ. ಇದೇ ಕೆಲಸವನ್ನು ಮಹಿಳೆಯರ ಕಿವಿಗಳು ಮಾಡುತ್ತವೆ. ಅದಕ್ಕೆ ಗಂಡಸರು ಕಣ್ಣಿಗೆ ತಂಪನ್ನು ನೀಡಲು ನೀಲಿ ಚಿತ್ರಗಳು ಅಥವಾ ಕಾಮ ಪ್ರಚೋದಕ ಚಿತ್ರಗಳ ಮೊರೆ ಹೋಗುತ್ತಾರೆ. ಹಾಗಾಗಿ ಮಹಿಳಾ ಸಂಗಾತಿಯು ತಮ್ಮ ಪುರುಷ ಸಂಗಾತಿ ಭಂಗಿ ಬದಲಾಯಿಸಲೂ ಕೇಳಿದಲ್ಲಿ ಅವರ ಇಚ್ಛೆಯನ್ನು ಪೂರೈಸಬೇಕು. ಇದರಿಂದ ಅವರ ಆಸೆ, ಹಂಬಲ ತೀರುತ್ತದೆ ಮತ್ತು ಅವರ ಕಣ್ಣಿಗೂ ಸಹ ತಂಪು ದೊರೆಯುತ್ತದೆ!. ಉದಾಹರಣೆಗೆ ಮಿಷನರಿ ಭಂಗಿಯಲ್ಲಿಯೇ ಪ್ರತಿದಿನ ಲೈಂಗಿಕ ಕ್ರಿಯೆ ನಡೆಸುವವರು ಒಮ್ಮೆ ಶುನಕ (ಶ್ವಾನ) ಭಂಗಿಯಲ್ಲಿ ಪ್ರಯತ್ನಿಸಲು ಹೋದರೆ, ಹೆಣ್ಣಿನ ಯೋನಿಯ ಭಾಗವು ಪುರುಷನಿಗೆ ಚೆನ್ನಾಗಿ ಕಾಣುತ್ತದೆ ಹಾಗು ಪುರುಷನು ತನ್ನ ಸಂಗಾತಿಯ ಪೃಷ್ಠ,ಬೆನ್ನು ಹಾಗು ಸ್ತನಗಳ ಜೊತೆಗೆ ಆಟವಾಡಬಹುದು. ಜೊತೆಗೆ ಮಹಿಳೆಯು ಪುರುಷನ ಶಿಶ್ನದ ಭಾಗವನ್ನು ಸಹ ಸಂಪೂರ್ಣವಾಗಿ ನೋಡಬಹುದು. ಸಂಗಾತಿಗೆ ನೋವುಂಟು ಮಾಡದಿದ್ದಲ್ಲಿ, ಇದು ಒಂದು ಅದ್ಭುತ ಭಂಗಿಯಾಗಿರುತ್ತದೆ.

ವಿವಿಧ ಭಂಗಿಗಳು ವಿವಿಧ ಭಾವನೆಯನ್ನು ನೀಡುತ್ತವೆ
ಲೈಂಗಿಕ ಕ್ರಿಯೆಯು ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಕ್ರಿಯೆಯಾಗಿದೆ. ಇದರಲ್ಲಿ ವಿವಿಧ ಭಂಗಿಗಳು ವಿವಿಧ ಭಾವಗಳನ್ನು ಹೊಂದಿರುತ್ತವೆ. ವಿವಿಧ ಭಂಗಿಗಳಲ್ಲಿ ಶಿಶ್ನವು ಯೋನಿಯ ವಿವಿಧ ಭಾಗಗಳಿಗೆ ತಾಗಿದಾಗ ಮಹಿಳೆಗೆ ತನ್ನದೇ ಆದ ಸುಖ, ಆನಂದ ಇತ್ಯಾದಿ ಭಾವನೆಗಳು ಸಿಗಬಹುದು. ವಿವಿಧ ಭಂಗಿಗಳಲ್ಲಿ ಎತ್ತಿ ಮುದ್ದಾಡುವಾಗ ಸಂಗಾತಿಗಳಲ್ಲಿ ಒಬ್ಬರಿಗೆ ಆನಂದದ ಪರಾಕಾಷ್ಠೆ ದೊರೆಯಬಹುದು. ಹೀಗೆ ಪ್ರತಿಯೊಬ್ಬರು ಒಂದೊಂದು ಭಂಗಿಗೆ ಒಂದೊಂದು ಬಗೆಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ಹೆಣ್ಣು ಮತ್ತು ಗಂಡು ಬೇಧವಿಲ್ಲ.

ಲೈಂಗಿಕ ನ್ಯೂನತೆಗಳಿಗೆ ಇದು ಪರಿಹಾರ
ಭಂಗಿಗಳನ್ನು ಬದಲಾಯಿಸುವುದರಿಂದ ಲೈಂಗಿಕ ನ್ಯೂನತೆಗಳಿಗೆ ಪರಿಹಾರವನ್ನು ಪಡೆಯಬಹುದು. ಉದಾಹರಣೆಗೆ ದೊಡ್ಡ ಮಟ್ಟದ ಶಿಶ್ನವಿರುವ ತನ್ನ ಸಂಗಾತಿಯಿಂದ ಮಹಿಳೆಗೆ ನೋವು ಮತ್ತು ಅಸೌಖ್ಯ ಕಾಡಬಹುದು. ಆಗ ಅವರು ಭಂಗಿಯನ್ನು ಬದಲಾಯಿಸಿಕೊಂಡರೆ, ಇಬ್ಬರಿಗೂ ಸಹ ಆನಂದ ನೀಡುವ ಒಂದು ಮಾರ್ಗ ಸಿಕ್ಕೆ ಸಿಗುತ್ತದೆ. ಇನ್ನೂ ಸರಳ ಎಂದರೆ ಗರ್ಭಿಣಿಯಾದ ಸಂಗಾತಿಯ ಮೇಲೆ ಮಲಗಿ ಲೈಂಗಿಕ ಕ್ರಿಯೆ ನಡೆಸಲು ಕಷ್ಟವಾದಾಗ ಆಕೆಯ ಸಂಗಾತಿ ಭಂಗಿ ಬದಲಾಯಿಸಿಕೊಂಡು ಆಕೆಯ ಹೊಟ್ಟೆಯ ಮೇಲೆ ಭಾರ ಬಿಡದೆ ಸಂಭೋಗದಲ್ಲಿ ಪಾಲ್ಗೊಳ್ಳುವುದಿಲ್ಲವೇ? ಹೀಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸುಖವನ್ನು ಕಂಡುಕೊಳ್ಳುವುದೇ ಈ ಭಂಗಿ ಬದಲಾವಣೆ ಸೂತ್ರದ ತಿರುಳು.

ವಿವಿಧ ಸಂವೇದನೆ ಭಾಗಗಳನ್ನು ಉದ್ದೀಪಿಸಲು ಇದು ಸಹಾಯಕ
ನಮ್ಮ ವಯಸ್ಸಾದಂತೆ ಲೈಂಗಿಕ ಕ್ರಿಯೆಯಲ್ಲೂ ಸಹ ವೈವಿಧ್ಯತೆ ಕಂಡು ಬರುತ್ತದೆ. ಮೊದಲು ನೋಡಿದರೆ ಸಂವೇದನೆಗೆ ಒಳಗಾಗುವ ನಾವು, ಆನಂತರ ಮುಟ್ಟಿದರೆ ಸಂವೇದನೆಗೆ ಒಳಗಾಗುತ್ತೇವೆ. ಆಮೇಲೆ, ಅಪ್ಪಿಕೊಂಡರೆ, ಮುತ್ತು ನೀಡಿದರೆ, ನಗ್ನವಾಗಿ ಸಂಗಾತಿಯನ್ನು ನೋಡಿದಾಗ ಸಂವೇದನೆಗೆ ಒಳಗಾಗುತ್ತೇವೆ. ಹೀಗೆ ಸಂವೇದನೆಯ ಮಟ್ಟ ಮತ್ತು ಅರ್ಥ ಬದಲಾಗುತ್ತಾ ಹೋಗುತ್ತದೆ. ಆದರೆ ಅದೆಲ್ಲಕ್ಕಿಂತ ಮುಖ್ಯವಾಗಿ ಒಂದು ಸಂವೇದನೆಯ ಭಾಗವಿದೆ. ಅದೇ ಯೋನಿಯ ಮೂರು ಸಂವೇದನಾ ಬಿಂದುಗಳು. ಅದನ್ನು ಹೇಗೆ ನೀವು ಉದ್ದೀಪಿಸುವುದು ಎಂದು ತಿಳಿದಲ್ಲಿ, ನಿಮ್ಮ ಕಾರ್ಯ ಅತ್ಯಂತ ಸುಗಮ ಎಂದು ಹೇಳಬಹುದು.

ಪರಾಕಾಷ್ಠೆ ತಲುಪುವ ಮಹಿಳೆ ಏನು ಬಯಸುತ್ತಾಳೋ ಅದನ್ನು ನೀಡಿ
ಗಂಡಸರಿಗೆ ಯಾವುದೇ ಭಂಗಿಯಲ್ಲಿ ಸಂಭೋಗ ಮಾಡಿದರು ಪರಾಕಾಷ್ಠೆ ಅಂದರೆ ಸ್ಖಲನ ಉಂಟಾಗುತ್ತದೆ. ಆದರೆ ಎಲ್ಲಾ ಹೆಂಗಸರಿಗೆ ಈ ಭಾಗ್ಯ ಇರುವುದಿಲ್ಲ. ಅವರು ಕೆಲವೊಂದು ಭಂಗಿಗಳಲ್ಲಿ ಮಾತ್ರ ಪರಾಕಾಷ್ಠೆ ತಲುಪುತ್ತಾರೆ. ಪರಾಕಾಷ್ಠೆಯ ಬಗ್ಗೆ ನಿಮ್ಮ ಮಹಿಳಾ ಸಂಗಾತಿ ಯಾವ ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ನಿಮ್ಮ ಸಂಗಾತಿ ಮೊದಲು ಪರಾಕಾಷ್ಠೆ ತಲುಪಲು ಅವಕಾಶ ಮಾಡಿಕೊಡಿ. ಮಹಿಳೆಯರ ಗುಪ್ತಾಂಗಗಳನ್ನು ಯಾವ ರೀತಿಯಲ್ಲಿ ಸಂವೇದನೆಗೆ ಒಳಪಡಿಸಬೇಕು ಎಂದು ತಿಳಿದ ವ್ಯಕ್ತಿಗೆ ತನ್ನ ಸಂಗಾತಿಯನ್ನು ಪರಾಕಾಷ್ಠೆ ತಲುಪಿಸುವುದು ತುಂಬ ಸುಲಭದ ಕೆಲಸ. ಇದಕ್ಕಾಗಿ ಬೇರೆ ಬೇರೆ ಭಂಗಿಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಮೂಲಕ ನೀವು ನಿಮ್ಮ ಸಂಗಾತಿಯನ್ನು ಪರಾಕಾಷ್ಠೆಗೆ ಹೇಗೆ ತಲುಪಿಸುವುದು ಎಂಬುದನ್ನು ತಿಳಿದುಕೊಳ್ಳಬಹುದು. ಕೆಲವು ಮಹಿಳೆಯರು ಹಲವಾರು ಭಂಗಿಗಳಲ್ಲಿ ಮುಂಕೇಳಿ (ಫೋರ್‌ಪ್ಲೇ) ಆಡಿದಾಗ ಹೆಚ್ಚು ಹೆಚ್ಚು ಪರಾಕಾಷ್ಠೆಗೆ ತಲುಪುತ್ತಾರೆ.

ಇಡೀ ವ್ಯಕ್ತಿಯನ್ನು ಟೋನಿಂಗ್ ಮಾಡುವುದು
ನಮ್ಮ ಸಾಂಪ್ರದಾಯಿಕ ಔಷಧ ಪದ್ಧತಿಯು ಒಂದು ಅಂಗ ಮತ್ತೊಂದು ಅಂಗದ ಜೊತೆಗೆ ಸಂಬಂಧವನ್ನು ಹೊಂದಿದೆ ಎಂದು ತಿಳಿಸುತ್ತದೆ. ಲೈಂಗಿಕ ಕ್ರಿಯೆಯು ಇದಕ್ಕೆ ಸ್ಪಷ್ಟ ನಿದರ್ಶನವನ್ನು ಒದಗಿಸುತ್ತದೆ. ಶಿಶ್ನ ನಿಮಿರುವಿಕೆಗೆ ಮತ್ತು ಯೋನಿ ಒದ್ದೆಯಾಗಲು ಇತರೆ ಅಂಗಗಳನ್ನು ಮುದ್ದಿಸುವುದು, ಚುಂಬಿಸುವುದು ಇತ್ಯಾದಿ ಮಾಡಬೇಕಾಗುತ್ತದೆ. ದೇಹದ ನಾನಾ ಭಾಗಗಳು ಲೈಂಗಿಕ ಕ್ರಿಯೆಗೆ ನೇರವಾಗಿ ಮತ್ತು ಪರೋಕ್ಷವಾಗಿ ನೆರವನ್ನು ನೀಡುತ್ತವೆ. ಭಂಗಿ ಬದಲಾವಣೆಯಿಂದ ಈ ಅಂಶವನ್ನು ಚೆನ್ನಾಗಿ ಅರಿತುಕೊಳ್ಳಬಹುದು ಮತ್ತು ಇತರೆ ಅಂಗಗಳ ಸಹಕಾರವನ್ನು ಸಹ ಪಡೆಯಬಹುದು.ತಿಳಿಯಿತಲ್ಲವೇ? ಇನ್ನೇಕೆ ಒಂದೇ ಭಂಗಿ? ಸಂಭೋಗದಲ್ಲೂ ಸಹ ನಿಮ್ಮ ಸೃಜನಶೀಲತೆಯನ್ನು ತೋರಿಸಿ.