ಯಾವುದೇ ಸಂಬಂಧವಿಲ್ಲದೆ, ಗುರುತು ಪರಿಚಯವಿಲ್ಲದಿದ್ದರೂ ಒಬ್ಬನ ಜೊತೆಗೆ ಕುಡಿದು ಮಲಗಿ ಲೈಂಗಿಕ ಕ್ರಿಯೆಯನ್ನು ಆನಂದಿಸುವುದು ಒಂದು ಅದ್ಭುತ ಅನುಭವವಾಗಿರುತ್ತದೆ. ಆದರೆ ನಿಮ್ಮೊಂದಿಗೆ ಲೈಂಗಿಕ ಕ್ರಿಯೆ ಮಾಡುವ ವ್ಯಕ್ತಿಗೆ ಒಂದು ರಾತ್ರಿಯನ್ನು ಹೇಗೆ ಅದ್ಭುತವಾದ ಅನುಭವವನ್ನು ನೀಡಬಹುದು ಎಂದು ತಿಳಿದಿಲ್ಲವಾದರೆ, ಈ ಅನುಭವ ನಿಮಗೆ ದುಃಸ್ವಪ್ನವಾಗಿ ಬದಲಾಗುವುದರಲ್ಲಿ ಸಂಶಯವಿಲ್ಲ.
ಯಾವುದೇ ಸಂಬಂಧ ಮತ್ತು ಭಯವಿಲ್ಲದೆ ಒಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡು ಸಂತೋಷಪಡುವುದರಲ್ಲಿ ಮಹಿಳೆಯರೂ ಸಹ ಪುರುಷರಿಗಿಂತ ಕಡಿಮೆಯಿಲ್ಲ ಎಂದು ಮನೋವಿಜ್ಞಾನಿಗಳು ತಿಳಿಸುತ್ತಾರೆ. ಅಂದರೆ ಬಾರಿನಲ್ಲಿ ಒಬ್ಬನನ್ನು ಪರಿಚಯ ಮಾಡಿಕೊಂಡು ಆತನ ಜೊತೆಗೆ ಒಂದು ರಾತ್ರಿ ಕಳೆದು ಬರುವುದು ರೋಚಕ ಅನುಭವವಾಗಿರುತ್ತದೆ. ಆದರೆ ಮಹಿಳೆಯರು ಭಾವನಾತ್ಮಕ ವಿಚಾರಗಳಿಗೆ ಹೆಚ್ಚಿನ ಬೆಲೆ ನೀಡುತ್ತಾರೆ.
ಅದಕ್ಕೂ ಮೇಲಾಗಿ ಸುರಕ್ಷತೆಯು ಅದು ರಾತ್ರಿಯ ವೇಳೆಯಲ್ಲಿ ತುಂಬಾ ಮುಖ್ಯವಾಗಿರುತ್ತದೆ. ಬನ್ನಿ ಒಂದು ರಾತ್ರಿಯನ್ನು ಹೇಗೆ ಅದ್ಭುತವಾಗಿ ಮಾಡಿಕೊಳ್ಳಬಹುದು ಎಂಬುದಕ್ಕೆ ನಿಮಗೆ ಕೆಲವೊಂದು ಸಲಹೆಗಳನ್ನು ನಾವು ನೀಡುತ್ತೇವೆ...

ಸುರಕ್ಷತೆಗೆ ಮೊದಲ ಆಧ್ಯತೆ
ಸಿಕ್ಕವರ ಜೊತೆಗೆ ಹೋಗಬೇಡಿ, ಸಿಕ್ಕವರನ್ನು ಆಯ್ಕೆ ಮಾಡಿಕೊಳ್ಳಬೇಡಿ. ಒಂದು ವೇಳೆ ಒಬ್ಬನ ಜೊತೆಗೆ ಹೋಗಬೇಕು ಎಂದು ನಿಮಗೆ ಅನಿಸಿದರೂ ಆತ ಹೇಳಿದ ಸ್ಥಳಕ್ಕೆ ಹೋಗುವ ಬದಲಿಗೆ ನಿಮಗೆ ತಿಳಿದಿರುವ ಸ್ಥಳಕ್ಕೆ ಆತನನ್ನು ಕರೆದುಕೊಂಡು ಹೋಗಿ. ಇದರಿಂದ ನಿಮ್ಮ ಸುರಕ್ಷತೆಯ ಖಾತ್ರಿ ನಿಮಗೆ ಇರುತ್ತದೆ. ಏನಾದರೂ ಯಡವಟ್ಟಾದಲ್ಲಿ ನೀವು ಸುರಕ್ಷಿತವಾಗಿರಬಹುದು.

ರಕ್ಷಣೆಗೆ ಆಧ್ಯತೆ ನೀಡಿ
ಲೈಂಗಿಕವಾಗಿ ಹರಡುವ ರೋಗಗಳಿಗೆ ಬಹುತೇಕ ಮದ್ದಿಲ್ಲ ಎಂಬುದು ನಿಮಗೂ ತಿಳಿದಿರಬಹುದು. ಹಾಗಾಗಿ ಅಪರಿಚಿತನ ಜೊತೆಗೆ ಸಂಭೋಗ ಮಾಡುವಾಗ ಸುರಕ್ಷಿತ ಲೈಂಗಿಕ ವಿಧಾನಗಳನ್ನು ಬಳಸಿ. ಬೇಡದ ಗರ್ಭ ಧರಿಸುವ ಸಾಧ್ಯತೆಯನ್ನು ತಡೆಯಿರಿ.

ಹೆಚ್ಚು ಕುಡಿಯಬೇಡಿ
ಹೆಚ್ಚು ಕುಡಿದು ಸಂತೋಷವನ್ನು ಅನುಭವಿಸಲು ಇದು ಸಮಯವಲ್ಲ. ಏಕೆಂದರೆ ಹೆಚ್ಚಾಗಿ ಕುಡಿದರೆ, ಕುಡಿದ ಮತ್ತಿನಲ್ಲಿ ಕಾಂಡೋಮ್ ಬಳಸುವುದನ್ನು ಮರೆಯಬಹುದು. ಹಾಗಾಗಿ ಇತಿ ಮಿತಿ ಅರಿತು ಕುಡಿಯಿರಿ.

ಇದು ಸುಮ್ಮನೆ ಎಂಬುದನ್ನು ಮರೆಯಬೇಡಿ
ಈ ಸಂಬಂಧ ಕೇವಲ ಒಂದು ರಾತ್ರಿಯವರೆಗೆ ಎಂಬುದನ್ನು ಮರೆಯಬೇಡಿ. ಯಾವುದೇ ಬಂಧಗಳಿಗೆ ಸಿಲುಕಬೇಡಿ. ಒಂದು ರಾತ್ರಿ ನಿಮ್ಮ ಸಂಗಾತಿಯ ಜೊತೆಗೆ ಮಜಾ ಮಾಡಿ, ಅದಕ್ಕಿಂತ ಮೇಲಾಗಿ ಏನನ್ನೂ ಅಪೇಕ್ಷಿಸಬೇಡಿ.

ಮಾರ್ಗದರ್ಶನ ನೀಡಿ
ನಿಮ್ಮ ಸಂಗಾತಿಗೆ ನಿಮ್ಮ ದೇಹದ ಕುರಿತಾಗಿ ಏನೂ ತಿಳಿದಿರುವುದಿಲ್ಲ. ಅದಕ್ಕಾಗಿ ಆತನಿಗೆ ನೀವೇ ಮಾರ್ಗದರ್ಶನ ಮಾಡಿ. ಹೇಗೆ ಮಾಡಿದರೆ ನಿಮಗೆ ಸಂತೋಷ ದೊರೆಯುತ್ತದೆ ಎಂದು ಆತನಿಗೆ ತಿಳಿಸಿ. ಇದರಿಂದ ನಿಮಗೆ ಆನಂದ ದೊರೆಯುವುದರಲ್ಲಿ ಎರಡು ಮಾತಿಲ್ಲ.