ಈ ಟೈಮ್ ಅನ್ನೋದ್ ಇದ್ಯಲ್ಲಾ ಪಕ್ಕಾ 420 ಕಣ್ರಿ.. ಸಮಯದ ಜತೆ ಜೂಜಾಟವಾಡಿ ಗೆದ್ದವನೇ ಮಹಾಶೂರ. ಸರಸಕ್ಕೂ ಸೂಕ್ತ ಸಮಯ ಅಂತಾ ಒಂದು ಇರುತ್ತಾ? ಎಂಬ ಪ್ರಶ್ನೆ ಮೂಡಿದರೆ ಅದಕ್ಕೆ ಇಲ್ಲಿದೆ ಉತ್ತರ.
ಟೈಮಿಂಗ್ ಎಲ್ಲಾ ಕ್ರಿಯೆಯಲ್ಲೂ ಮುಖ್ಯ. ಸರಿಯಾದ ಸಮಯಕ್ಕೆ ಸರಿಯಾದ ವಿಧಾನದಲ್ಲಿ ಸರಿಯಾದ ಯೋಜನೆಯಂತೆ ಸಮಾಗಮವಾದರೆ ಮುಂದೆ ಎಲ್ಲವೂ ಸುಂದರ. ಈ ಸಮಯ ಶೃಂಗಾರಮಯ, ಆನಂದಮಯ, ನೂತನ ಬಾಳಿನ ನವೋದಯ ವಾಗಬೇಕಾದರೆ ಸಮಯದ ಹೊಂದಾಣಿಕೆ ಮುಖ್ಯ.[ಈ ಟಚ್ಚಲಿ ಏನೋ ಇದೆ.. ಸ್ಪರ್ಶ ಸುಖದ ಪಾಠ]
ಜಾತಕ ನೋಡಿ ಮುಹೂರ್ತ ಇಟ್ಟು ಪ್ರಸ್ತ, ಒಸಗೆ, ಶೋಭನ ಅಂತಾ ಆಗೋದು ಮದುವೆ ಸಂಭ್ರಮದಲ್ಲಿದ್ದಾಗ ಮಾತ್ರ.. ಮಿಕ್ಕಂತೆ ನಿಮಗೆ ಮುಹೂರ್ತ ಫಿಕ್ಸ್ ಮಾಡಿಕೊಡೋಕೆ ಯಾವ ಪಂಡಿತರು ಸಿಗಲ್ಲ. ಸಿಕ್ಕರೂ ಫೀ ಕಟ್ಟುವಷ್ಟರಲ್ಲಿ ಸರಸದ ಮೂಡೇ ಮುಕ್ತಾಯವಾಗಿರುತ್ತೆ.[ರತಿಸುಖಕ್ಕಾಗಿ ಕಾಮಸೂತ್ರದ ವಿಶಿಷ್ಟ ಭಂಗಿಗಳು]
ಹಾಗಾದರೆ ಯಾವುದು ಸೂಕ್ತ ಸಮಯ, ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ, ಯಾವುದಾದರೂ ತಿಂಗಳು, ದಿನ ಅಂತಾ ಏನಾದರೂ ಇದ್ಯಾ ಎಂದು ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ..[ಸಂಭೋಗಕ್ಕೆ ಸೂಕ್ತವಾದ ಸಮಯ]
ನಿಮ್ಮಿಬ್ಬರಲ್ಲಿ ಕಾಮದ ಕಿಚ್ಚು ಹೊತ್ತಿಕೊಂಡ ಯಾವುದೇ ಕ್ಷಣ ಸಮಾಗಮಕ್ಕೆ ಅಣಿಯಾಗಬಹುದು. ಅದುವೇ ನಿಮ್ಮ ಸುರತ ಸಮಯ. ಯಾವ ಸಂದರ್ಭದಲ್ಲಿ ಹೇಗೆ ಮೂಡ್ ಬದಲಾಯಿಸಿ ಡಲ್ ಹೊಡೆಯುವ ಬೆಡ್ ರೂಮಿಗೆ ರೋಮ್ಯಾಂಟಿಕ್ ಕಿಚ್ಚು ಹಚ್ಚಿಸುವುದು ಹೇಗೆ ಮುಂದೆ ಓದಿ...

ಮಧ್ಯರಾತ್ರಿಯ ಕೋತಿಯಾಟ
ಗಾಢನಿದ್ದೆಗೆ ಜಾರುವ ಮುನ್ನ ಸರಸದ ಎಳೆಯೊಂದು ಮನದಲ್ಲಿ ಮೂಡಿ ಬಲವಾದ್ರೆ ನಿಮ್ಮ ಪುರುಷನ ನಿದ್ದೆಯನ್ನು ತಕ್ಷಣಕ್ಕೆ ಹಾಳುಗೆಡವಬೇಡಿ. ಸುಕೋಮಲವಾಗಿ ಮುತ್ತಿಡುತ್ತಾ, ಕೊರಳನ್ನು ಬಳಸಿ ಕಿವಿಯನ್ನು ಮೆಲ್ಲಗೆ ಕಚ್ಚಿ ನಿದ್ರಾಭಂಗ ಮಾಡಿ, ನಿಧಾನವಾಗಿ ಎಚ್ಚರ ಸ್ಥಿತಿಗೆ ಬಂದು ಮತ್ತೇರುವಂತೆ ಮಾಡಿ, ನಿದ್ದೆ ಮರೆತು ನಿಮ್ಮೊಳಗೆ ಆವರಿಸಿಕೊಳ್ಳುವಂತಾ ಆಟ ಹೂಡುವುದು ನಿಮಗೆ ಬಿಟ್ಟಿದ್ದು.

ಮಾರ್ನಿಂಗ್ ಮ್ಯಾಡ್ ನೆಸ್
ಬೆಳಕು ಹರಿಯುವುದಕ್ಕೆ ಮುನ್ನ ಪುರುಷ ಸಿಂಹನಿಗೆ ತಮ್ಮ ಶಕ್ತಿ ಪ್ರದರ್ಶನದ ವಾಂಛೆ ಹೆಚ್ಚಾಗುತ್ತದೆ. ಶಾಸ್ತ್ರ ಪುರಾಣ, ವೈದ್ಯರ ಸಂಶೋಧನೆಯಂತೆ ಕೂಡಾ ಮಾರ್ನಿಂಗ್ ಸೆಕ್ಸ್ ಆರೋಗ್ಯಕರ. ಪುರುಷನ ಆಟಕ್ಕೆ ಸಾಥ್ ನೀಡಿ, ಪ್ರತಿರೋಧಿಸಬೇಡಿ. ಸಾಧಾರಣವಾಗಿ ಈ ಅವಧಿಯ ಸಮಾಗಮ ಕಡಿಮೆ ಸಮಯದಿಂದ ಕೂಡಿರುತ್ತದೆ. ಅದಕ್ಕೆ ತಕ್ಕಂತೆ ಸುಖಪಡಿ.

ವೀಕೆಂಡ್ ವಿಹಾರ
ವಾರವೆಲ್ಲ ಸಕತ್ ಬ್ಯುಸಿಯಾಗಿರುವ ಉದ್ಯೋಗನಿರತ ಸಂಗಾತಿಗಳಿಗೆ ವೀಕೆಂಡ್ ವಿಹಾರ ಹೇಳಿ ಮಾಡಿಸಿದ ವಿಧಾನ. ರೆಸಾರ್ಟ್, ಹೋಮ್ ಸ್ಟೇಗಳಲ್ಲಿ ವಾರಾಂತ್ಯ ತಂಗಿದ್ದು, ಆಟೋಟದ ಜತೆಗೆ ಕಾಮದಾಟಕ್ಕೂ ಟೈಮ್ ನೀಡಲು ಒಳ್ಳೆ ಅವಕಾಶವಿತರುತ್ತದೆ. ಜಲಕ್ರೀಡೆ ಇದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಈಜುಕೊಳಕ್ಕೆ ಇಳಿಯಲು ಮುಜುಗರವಾದರೆ, ಬಾತ್ ರೂಮಿನಲ್ಲಿ ಒಂದೇ ಷವರ್ ಕೆಳಗೆ ಕಾದ ದೇಹಗಳನ್ನು ತಂಪಾಗಿಸಿಕೊಳ್ಳಿ.

ಋತು ಚಕ್ರದ ವೇಳೆ
ಅಂಡಾಣುಗಳ ಉತ್ಪತ್ತಿ ವಿಸರ್ಜನೆ ಹಾದಿಯಲ್ಲಿರುವಾಗ ಮಹಿಳೆಯರಲ್ಲಿ ಕಾಮದ ವಾಂಛೆ ಹೆಚ್ಚಾಗುವುದು ಸಹಜ. ಇಂಥ ಸಂದರ್ಭದಲ್ಲಿ ನಿಮ್ಮ ಸಂಗಾತಿಯೂ ಅಚ್ಚರಿ ಮೂಡುವಂತೆ ಭಾವ ಭಂಗಿಯಲ್ಲಿ ಆಕರ್ಷಿಸಿ ನಿಮ್ಮತ್ತ ಸೆಳೆದು ಸಮಾಗಮಕ್ಕೆ ವೇದಿಕೆ ಸಿದ್ಧಪಡಿಸಿಕೊಳ್ಳಿ.

ಕ್ವಿಕ್ ಕಾಮದಾಟ
ಉದ್ಯೋಗಕ್ಕೆ ಹೊರಟು ನಿಂತ ಪುರುಷನನ್ನು ರಮಿಸಿ, ಮುತ್ತಿಟ್ಟು, ತಬ್ಬಿಕ್ಕೊಂಡು ಕಾಮಕೇಳಿಗೆ ಕರೆಯಿರಿ. 10-15 ನಿಮಿಷದ ಸುಖ ನೀಡಿದರೆ ಸಾಕು, ದಿನಪೂರ್ತಿ ಸಂಭ್ರಮ ಮನೆ ಮಾಡುತ್ತದೆ. ಕಾಲದ ಜತೆ ಓಡುವ ಮಂದಿಗೆ ಈ ಕ್ವಿಕ್ ಕಾಮದಾಟ ಥ್ರಿಲ್ಲಿಂಗ್ ಹಾಗೂ ಸೂಕ್ತವೆನಿಸುತ್ತದೆ.

ಶುಭಾಶುಭ ಸಂದರ್ಭ
ಹುಟ್ಟುಹಬ್ಬ, ವಾರ್ಷಿಕೋತ್ಸವ ಇರಲಿ ಅಥವಾ ಕೆಲವೊಮ್ಮೆ ದುಃಖದ ಸಂದರ್ಭವಿರಲಿ ಸಾಂತ್ವನ ಬಯಸುವ ಮನಸ್ಸು ತಣಿಸಲು ದೇಹ ಬಳಸುವುದರಲ್ಲಿ ತಪ್ಪೇನಿಲ್ಲ. ಮುನಿಸುಗೊಂಡ ಸಂಗಾತಿಯನ್ನು ರಮಿಸುವ ಕಲೆ ತಿಳಿದಿರಬೇಕು. ಮಹಿಳೆಯರು ತಮ್ಮ ಸಂಗಾತಿಗೆ ಅಚ್ಚರಿ ಮೂಡುವಂತೆ ವರ್ತಿಸಿ ಅವನ ಕಾಮಾಸಕ್ತಿಯನ್ನು ಕೆರಳಿಸಲು ಸುಖ -ದುಃಖದ ಸಂದರ್ಭಗಳು ಸಹಾಯಕ. ಇದು ಕೆಲವೊಮ್ಮೆ ಪೂರ್ವನಿಯೋಜಿತ, ಕೆಲವೊಮ್ಮೆ ಆಕಸ್ಮಿಕ.