ನಿಮಿರು ವೈಫಲ್ಯದಿಂದ ಸಾಂಗಾತಿಗೆ ಸುಖ ನೀಡಲು ವಿಫಲರಾಗುತ್ತಿರುವ ಪುರುಷ ಪುಂಗವರು ಹೆಚ್ಚು ಚಿಂತಿಸಬೇಕಾದ ಅಗತ್ಯವಿಲ್ಲ. ಗಿಡಮೂಲಿಕೆಗಳಿಂದ ತಯಾರಿಸಲಾದ ಅಶ್ವಗಂಧ ವೈದ್ಯರು ತಿಳಿಸಿದಂತೆ ಬಳಸಿದರೆ ಸಾಕು, ಕೆಲವೇ ದಿನಗಳಲ್ಲಿ ಪುರುಷತ್ವ ಮತ್ತೆ ಚಿಗಿತು ನಿಲ್ಲುತ್ತದೆ.
ಈ ಗಿಡಮೂಲಕೆಯಿಂದ ಲೈಂಗಿಕ ನಿಶ್ಶಕ್ತಿ ಹೋಗುವುದು ಮಾತ್ರವಲ್ಲ, ಪುರುಷರು ದೈಹಿಕವಾಗಿಯೂ ಸದೃಢರಾಗುತ್ತಾರೆ. ಇದು ಪುರುಷರಲ್ಲಿ ಖಿನ್ನತೆಯನ್ನು ದೂರ ಮಾಡುತ್ತದೆ, ಜೀವನಾವಧಿಯನ್ನು ಹೆಚ್ಚಿಸುತ್ತದೆ ಮತ್ತು ಲೈಂಗಿಕ ಶಕ್ತಿ ಪುಟಿದೇಳುವಂತೆ ಮಾಡುತ್ತದೆ.
ಇದನ್ನು ಬಳಸುವುದರಿಂದ ಇದ್ದಕ್ಕಿದ್ದಂತೆ ಪುರುಷತ್ವ ವಾಪಸ್ ಬಂದು ಕೆನೆಯುವ ಕುದುರೆಯಂತಾಗುವುದಿಲ್ಲ. ನಿಯಮಿತವಾಗಿ ಬಳಸುತ್ತಿದ್ದರೆ, ಹಂತಹಂತವಾಗಿ ನಿಮಿರು ದೌರ್ಬಲ್ಯ ಕಡಿಮೆಯಾಗಿ ನಿಮಿರುವಿಕೆ ಹತೋಟಿಗೆ ಬರುತ್ತದೆ, ಕಾಮಕೇಳಿಯ ಉತ್ಸಾಹ ಇಮ್ಮಡಿಯಾಗುವಂತೆ ಮಾಡುತ್ತದೆ.
ವೀರ್ಯವಂತರಾಗಲು ಇದನ್ನು ಪರಿಣಾಮಕಾರಿಯಾಗಿ ಮತ್ತು ಹೆಚ್ಚಿನ ಲಾಭ ಪಡೆಯಲು ಬಳಸಿಕೊಳ್ಳುವುದು ಹೇಗೆ, ನಂತರ ಶಯನಗೃಹದಲ್ಲಿ ಸಂಗಾತಿಯೊಡನೆ ಸ್ವರ್ಗ ಸುಖ ಕಾಣುವುದು ಹೇಗೆ ಎಂಬ ಬಗ್ಗೆ ಸ್ಥೂಲವಾದ ವಿವರಗಳಿವೆ.

ಅಶ್ವಗಂಧದ ಬಳಕೆಯಿಂದ ವೀರ್ಯ ಹೆಚ್ಚು ಉತ್ಪನ್ನ
ಆಯುರ್ವೇದ ಔಷಧ ಅಂಗಡಿಯಿಂದ ಅಶ್ವಗಂಧ ತಂದು ಒಂದು ಟೀಸ್ಪೂನ್ ಪುಡಿಯನ್ನು ತುಪ್ಪದೊಂದಿಗೆ ಬೆರೆಸಬೇಕು. ಅದನ್ನು ಪೇಸ್ಟ್ ರೀತಿಯನ್ನು ಚೆನ್ನಾಗಿ ಕಲೆಸಿ, ಹಾಲಿನೊಂದಿಗೆ ಚೆನ್ನಾಗಿ ಬೆರೆಸಬೇಕು.

ಎಷ್ಟು ದಿನ ತೆಗೆದುಕೊಳ್ಳಬೇಕು?
ಪ್ರತಿದಿನ ಬೆಳಿಗ್ಗೆ ತಿಂಡಿಯನ್ನು ತಿಂದ ನಂತರ ಮೇಲಿನಂತೆ ಕಲಿಸಿಟ್ಟ ಪೇಸ್ಟನ್ನು ಹಾಲಿನೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ ಸತತ 30 ದಿನಗಳ ಕಾಲ ಸೇವಿಸಬೇಕು. 30 ದಿನಗಳು ಕಳೆಯುತ್ತಿದ್ದಂತೆ ನಿಮ್ಮಲ್ಲಿ ಪೌರುಷ ಮರಳುತ್ತಿರುವುದು ಅರಿವಿಗೆ ಬರುತ್ತದೆ.

ನೀವು ನಿರ್ವೀರ್ಯತೆಯಿಂದ ಬಳಲುತ್ತಿದ್ದರೆ
ನಿಮಿರುವಿಕೆಯನ್ನು ಗಟ್ಟಿಗೊಳಿಸಲು ಮಾತ್ರವಲ್ಲ ನಿಮ್ಮಲ್ಲಿ ವೀರ್ಯತೆ ಉತ್ಪನ್ನದ ಕೊರೆಯಿದ್ದರೂ ಇದನ್ನು ಸೇವಿಸಬಹುದು. ಅರ್ಧ ಚಮಚ ಅಶ್ವಗಂಧ ಪುಡಿಯನ್ನು ಅರ್ಧ ಚಮಚ ಸಕ್ಕರೆ ಪುಡಿಯೊಂದಿಗೆ ಬೆರೆಸಿ, ಅದನ್ನು ಉಗುರುಬೆಚ್ಚಗಿನ ಹಾಲಿನೊಂದಿಗೆ ಬೆರೆಸಿ ಕುಡಿಯಿರಿ. 30 ದಿನಗಳ ಕಾಲ ಸೇವಿಸಿದರೆ ವೀರ್ಯೋತ್ಪನ್ನ ಹೆಚ್ಚಿರುತ್ತದೆ.

ಶೀಘ್ರ ಸ್ಖಲನವನ್ನು ಹತೋಟಿಗೆ ತರಲು
ನಿಮಿರು ದೌರ್ಬಲ್ಯವಿರುವುದಿಲ್ಲ, ವೀರ್ಯೋತ್ಪನ್ನದಲ್ಲಿ ಕೊರತೆಯಿರುವುದಿಲ್ಲ. ಆದರೆ, ಕೆಲವೊಬ್ಬರು ಶೀಘ್ರ ಸ್ಖಲನದ ತೊಂದರೆಯಿಂದ ಬಳಲುತ್ತಿರುತ್ತಾರೆ ಮತ್ತು ಈ ಕಾರಣದಿಂದ ಸುಖಿಸಲು ವಿಫಲರಾಗಿರುತ್ತಾರೆ. ಅಂಥವರು ಕೂಡ ಒಂದು ಟೀಸ್ಪೂನ್ ಅಶ್ವಗಂಧದ ಪುಡಿಯನ್ನು ಜೇನಿನೊಂದಿಗೆ ಬೆರೆಸಿ ಸೇವಿಸಿ. ಇದರಿಂದ ಶೀಘ್ರಸ್ಖಲನಕ್ಕೆ ಬ್ರೇಕ್ ಬೀಳುವುದು ಮಾತ್ರವಲ್ಲ, ಅಚ್ಚರಿಯಾಗುವಂತೆ ವೀರ್ಯ ಪುಟಿದೇಳುವಂತೆ ಉತ್ಪತ್ತಿಯಾಗುತ್ತದೆ.

ಯಾರು ತೆಗೆದುಕೊಳ್ಳಬೇಕು
ನಿಮಿರು ವೈಫಲ್ಯ, ವೀರ್ಯದ ಕೊರತೆ, ಶೀಘ್ರ ಸ್ಖಲನದಿಂದ ಬಳಲುತ್ತಿರುವವರು ಕನಿಷ್ಠ 30ರಿಂದ 40 ದಿನಗಳ ಕಾಲ ತಪ್ಪದೆ ತೆಗೆದುಕೊಳ್ಳಬೇಕು. ವಯಸ್ಸು 40 ದಾಟಿದ್ದರೆ, ಪೂರ್ತಿ ಲಾಭ ಪಡೆಯಬೇಕಿದ್ದರೆ ಮೂರು ತಿಂಗಳ ಕಾಲ ಸೇವಿಸಿ. ಆದರೆ, ಇದನ್ನು ಸೇವಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ, ಅವರ ಸಲಹೆ ಪಡೆದ ನಂತರವೇ ಸೇವಿಸುವುದು ಉತ್ತಮ.