ತೆಂಗಿನೆಣ್ಣೆ ಆರೋಗ್ಯಕ್ಕೆ ಒಳ್ಳೆಯದು ಎಂಬುದರಲ್ಲಿ ಎರಡು ಮಾತಿಲ್ಲ. ಕೇರಳ ಮತ್ತು ಕರ್ನಾಟಕದ ಕರಾವಳಿಯಲ್ಲಿ ತೆಂಗಿನೆಣ್ಣೆ ಇಲ್ಲದೆ ಯಾವ ತಿಂಡಿಯೂ ತಯಾರಾಗುವುದಿಲ್ಲ. ದೋಸೆಯಿಂದ ಹಿಡಿದುಕೊಂಡು ಉಪ್ಪಿಟ್ಟಿನವರೆಗೆ ತಿಂಡಿ, ಊಟಗಳಲ್ಲಿ ತೆಂಗಿನೆಣ್ಣೆ ಘಮಘಮಿಸುತ್ತಿರುತ್ತದೆ.
ಗಂಡುಹೆಣ್ಣು ಜೋಡಿಗಳೆರಡರ ದೇಹಗಳೆರಡು ಒಂದಾಗುವ ಸಮಯದಲ್ಲಿ ಕೂಡ ತೆಂಗಿನೆಣ್ಣೆ ಬಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಎಣ್ಣೆಮೈಮೇಲೆಲ್ಲ ಕೈಗಳು ಸ್ವರ್ಗಸುಖ ಅನುಭವಿಸುವಾಗಲೆಲ್ಲ ರಕ್ತ ಉಕ್ಕುವ ಆ ಅನುಭವವಿದೆಯಲ್ಲ ಅದನ್ನು ಅನುಭವಿಸಿದವರಿಗೇ ಗೊತ್ತುಬಿಡಿ.
ಹೀಗಂತ ಮಾತ್ರಕ್ಕೆ, ತೆಂಗಿನೆಣ್ಣೆ ಕಾಮಕೇಳಿ ನಡೆಸುವಾಗ ಎಲ್ಲದಕ್ಕೂ ಒಳ್ಳೆಯದು ಎಂದು ಭಾವಿಸಬೇಡಿ. ಇದು ವ್ಯತಿರಿಕ್ತ ಪರಿಣಾಮವನ್ನೂ ಬೀರಬಹುದು. ಇದನ್ನು ಲ್ಯೂಬ್ರಿಕೆಂಟ್ ಆಗಿ ಹಲವರು ಬಳಸುತ್ತಾರೆ. ಆದರೆ, ಸ್ವಲ್ಪ ತಾಳಿ, ತೆಂಗಿನೆಣ್ಣೆಯ ಬಳಕೆಯಿಂದ ಆಗುವ ಹಾನಿಯನ್ನು ಒಮ್ಮೆ ಪರಿಶೀಲಿಸಿದ ಮೇಲೆ ನೀವೇ ನಿರ್ಧರಿಸಬಹುದು.
ತಜ್ಞರು ಹೇಳುವ ಪ್ರಕಾರ, ತೆಂಗಿನೆಣ್ಣೆ ಅಥವಾ ಪೆಟ್ರೋಲಿಯಂ ಜೆಲ್ಲಿಯನ್ನು ಕೇಳಿ ನಡೆಸುವಾಗ ಯೋನಿಯಲ್ಲಿ ಬಳಸುವುದು ಅಪಾಯಕಾರಿ. ಇದರ ಬದಲಾಗಿ ತಜ್ಞರು ಶಿಫಾರಸು ಮಾಡುವ ಲ್ಯೂಬ್ರಿಕೆಂಟ್ ಗಳನ್ನು ಬಳಸುವುದು ಶ್ರೇಯಸ್ಕರ.
ನೀವೇನು ಹೇಳ್ತೀರಾ, ತೆಂಗಿನೆಣ್ಣೆಗಿಂತ ಅತ್ಯುತ್ತಮವಾದ, ಕಾಮಕೇಳಿಯ ರಸಾಸ್ವಾದ ಹೆಚ್ಚಿಸುವ ಎಣ್ಣೆ ಇನ್ನಾವುದಿದೆ ಎಂದು ಮೊಂಡುವಾದ ಮಾಡುವ ಮೊದಲು ಕೆಳಗಿನ ಅಂಶಗಳನ್ನು ಗಮನವಿಟ್ಟು ಓದಿರಿ.

ತೆಂಗಿನೆಣ್ಣೆ ಬಳಸುವುದು ಅಷ್ಟು ಸುರಕ್ಷಿತವಲ್ಲ
ಕೆಲವರಿಗೆ ತೆಂಗಿನೆಣ್ಣೆ ಅಲರ್ಜಿಯಾಗಿರುತ್ತದೆ. ಕಾಮಕೇಳಿ ತಜ್ಞರು ನಡೆಸಿರುವ ಸಂಶೋಧನೆಯ ಪ್ರಕಾರ ಗುಪ್ತಾಂಗಳಿಗೆ ತೆಂಗಿನೆಣ್ಣೆ ಬಳಸುವುದು ಅಷ್ಟು ಸುರಕ್ಷಿತವೂ ಅಲ್ಲ. ಯೋನಿಯೊಳಗಿನ ಚರ್ಮದ ರಂಧ್ರಗಳನ್ನು ತೆಂಗಿನೆಣ್ಣೆ ಮುಚ್ಚುವುದರಿಂದ ಇದು ಅಷ್ಟು ಪರಿಣಾಮಕಾರಿಯಾದ ಲ್ಯೂಬ್ರಿಕೆಂಟ್ ಆಗಿ ಕೆಲಸ ಮಾಡುವುದಿಲ್ಲ.

ತೆಂಗಿನೆಣ್ಣೆಯ ಬಳಕೆಯಿಂದ ಬ್ಯಾಕ್ಟೀರಿಯಾ ಸಾಯುತ್ತವೆ
ಗೊತ್ತಿರುವಂತೆ ತೆಂಗಿನೆಣ್ಣೆ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಮಹಿಳೆಯ ಗುಪ್ತಾಂಗದಲ್ಲಿ ಹಲವಾರು ಬಗೆಯ ಬ್ಯಾಕ್ಟೀರಿಯಾಗಳು ಇರುತ್ತವೆ ಎಂಬುದು ಕೂಡ ತಿಳಿದಿರುವ ವಿಚಾರ. ಇವುಗಳಲ್ಲಿ ಕೆಲವು ಒಳ್ಳೆಯ ಆರೋಗ್ಯಕರ ಬ್ಯಾಕ್ಟೀರಿಯಾಗಳೂ ಇರುತ್ತವೆ. ತೆಂಗಿನೆಣ್ಣೆಯ ಬಳಕೆಯಿಂದ ಇವು ಕೂಡ ಸಾವಿಗೀಡಾಗುತ್ತವೆ.

ಮಿಲನ ಮಹೋತ್ಸವಕ್ಕೆ ಅನಗತ್ಯ ತೊಂದರೆ
ಕೆಲಸಮಯದ ನಂತರ ತೆಂಗಿನೆಣ್ಣೆ ಗಟ್ಟಿಯಾಗುತ್ತದೆ, ಹೆಚ್ಚಾಗಿ ಚಳಿಗಾಲದಲ್ಲಿ. ಹೊರಗಡೆಯಾದರೆ ಗಟ್ಟಿಯಾದ ತೆಂಗಿನೆಣ್ಣೆಯನ್ನು ಬಿಸಿಮಾಡಿ ತೆಳುಮಾಡಬಹುದು. ಆದರೆ, ಗುಪ್ತಾಂಗದಲ್ಲಿ ಬಳಸಲಾದ ತೆಂಗಿನೆಣ್ಣೆ ಗಟ್ಟಿಯಾದರೆ ಮಿಲನ ಮಹೋತ್ಸವ ಸರಾಗವಾಗದೆ ತೊಂದರೆಯಾಗಬಹುದು. ಈ ಕಾರಣದಿಂದ ಬಳಸದಿರುವುದೇ ಉತ್ತಮ.

ಕಾಂಡೋಮ್ ಗಳು ಸರಿಯಾಗಿ ಸಹಕರಿಸುವುದಿಲ್ಲ
ಜೆಲ್ಲಿ ಲ್ಯೂಬ್ರಿಕೆಂಟ್ಸ್ ಬದಲು ವಾಟರ್ ಬೇಸ್ಡ್ ಲ್ಯೂಬ್ರಿಕೆಂಟ್ಸ್ ಬಳಸುವುದರಿಂದ ಹಿತಕರವಾದ ಅನುಭವ ನಿಮ್ಮದಾಗುತ್ತದೆ. ಎಣ್ಣೆಯ ಬಳಕೆ ಮಾಡಿದರೆ ಕೆಲಬಾರಿ ಕಾಂಡೋಮ್ ಗಳು ಸರಿಯಾಗಿ ಸಹಕರಿಸುವುದಿಲ್ಲ. ಅಲ್ಲದೆ, ಲೈಂಗಿಕ ಚಟುವಟಿಕೆಗೆ ಆಟಿಕೆ ಸಾಮಗ್ರಿಗಳನ್ನು ಬಳಸುವಾಗ ಕೂಡ ತೆಂಗಿನೆಣ್ಣೆ ಅಡ್ಡಿಯಾಗುತ್ತದೆ.

ತಾತ್ಪರ್ಯವೇನು?
ಮಿಲನ ಮಹೋತ್ಸವ ನಡೆಸುವಾಗಲೆಲ್ಲ ಹಿಂದೆ ನೀವು ಹಲವಾರು ಬಾರಿ ತೆಂಗಿನೆಣ್ಣೆ ಬಳಸಿರಬಹುದು. ಆದರೆ, ಮೇಲಿನ ಸಂಗತಿಗಳನ್ನು ಓದಿ ಆಘಾತಕ್ಕೊಳಗಾಗುವ ಅಗತ್ಯವಿಲ್ಲ. ಇನ್ನು ಮೇಲಾದರೂ ಕೂಡಿಕೆ ಸರಳವಾಗುವಂಥ, ಕಾಮೋದ್ರೇಕ ಮತ್ತಷ್ಟು ಹೆಚ್ಚಿಸುವಂಥ ಲ್ಯೂಬ್ರಿಕೆಂಟ್ ಗಳನ್ನೇ ಬಳಸಿ.