ದಂಪತಿಗಳು ತಮ್ಮ ಬೆಡ್‌ರೂಮಿನ ಖಾಸಗಿ ಕ್ಷಣಗಳನ್ನು ವೀಡಿಯೋ ಮಾಡಿ ಕೊಡುವುದೂ ಉಂಟು. ಹೀಗೆ ಸದಸ್ಯರಿಂದ ಸಂಗ್ರಹಿಸಿದ ಅಶ್ಲೀಲ ಸಾಹಿತ್ಯಗಳನ್ನು ವೆಬ್‌ಸೈಟಿಗೆ ಅಪ್‌ಲೋಡ್ ಮಾಡಿ ಅದರ ಮೂಲಕ ಹಣ ಸಂಗ್ರಹಿಸಲಾಗುತ್ತಿದೆ.
200 ದಿಂದೀಚೆಗೆ 'ಫಕ್ ಫಾರ್ ಫಾರೆಸ್ಟ್" ಸಂಘಟನೆಯು ಸೆಕ್ಸ್ ಕುರಿತಾದ ಚಿತ್ರ ಹಾಗೂ ವೀಡಿಯೋಗಳನ್ನು ಮಾರಾಟ ಮಾಡುವ ಮೂಲಕ ಒಟ್ಟು 345,000 ಡಾಲರ್ ಹಣ ಸಂಗ್ರಹಿಸಿದೆ. 2010ರಲ್ಲಿ ಸುಮಾರು 180,000 ಡಾಲರ್ ಹಣ ಸಂಗ್ರಹಿಸಿದ್ದು, ಅದನ್ನು ಅದನ್ನು ಪರಿಸರ ರಕ್ಷಣೆಗಾಗಿ ವಿನಿಯೋಗಿಸಿದೆ ಎಂದು ವರದಿಯೊಂದು ಹೇಳಿದೆ.
"ಸಂಘಟನೆಯತ್ತ ಈಗಾಗಲೇ ಸುಮಾರು 1,300 ರಷ್ಟು ಸಮಾನ ಮನಸ್ಕ ಸ್ಕ್ಯಾಂಡಿನೇವಿಯಾದ ದಂಪತಿ ಆಕರ್ಷಿತರಾಗಿದ್ದಾರೆ. ಅಲ್ಲದೇ ಜರ್ಮನಿಯಿಂದ ಚಿಲಿವರೆಗಿನ ಅನೇಕ ದಂಪತಿ ಕೂಡ ಸಂಘಟನೆ ಸದಸ್ಯರಾಗಿ, ತಮ್ಮ ದಾಂಪತ್ಯ ಜೀವನದಲ್ಲಿನ ಖಾಸಗಿ ರಸನಿಮಿಷಗಳಲ್ಲಿ ಕೆಲವನ್ನು ಹಂಚಿಕೊಳ್ಳಲು ಮುಂದೆ ಬಂದಿದ್ದಾರಂತೆ.
ಮತ್ತು ನಾರ್ವೇಜಿಯನ್ ಟೋಮಿ ಹೋಲ್ ಎಲ್ಲಿಂಗ್‌ಸನ್ ದಂಪತಿ ಹುಟ್ಟು ಹಾಕಿದ್ದು, ಕಳೆದ ಹನ್ನೊಂದು ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಆದರೆ, ಈ ಸಂಘಟನೆಯಿಂದ ಬಂದ ಹಣವನ್ನು ಎಡಗೈಯಲ್ಲೂ ಸಹ ಮುಟ್ಟುವುದಿಲ್ಲ ಎಂದು ಡಬ್ಲ್ಯೂಡಬ್ಲ್ಯೂಎಫ್ (WorldWideFund)ನ ಅಧಿಕಾರಿಗಳು ಹೇಳುತ್ತಾರೆ. ಪರಿಸರದ ಬಗ್ಗೆ ನಮಗೂ ಕಾಳಜಿಗೆ ಇದೆ ಆದರೆ ಈ ರೀತಿ ಬಂದ ಹಣ ಪರಿಸರ ರಕ್ಷಣೆ ಬಳಸಲು ಸರಿಯಲ್ಲ ಎನ್ನುತ್ತಾರೆ. ಲೋಕೋ ಭಿನ್ನ ರುಚಿಃ, ಪರಿಸರ ಉಳಿಯಲು ಏನೆಲ್ಲಾ ಮಾಡಬೇಕಪ್ಪ.