•  

ಈ ಟಚ್ಚಲಿ ಏನೋ ಇದೆ.. ಸ್ಪರ್ಶ ಸುಖದ ಪಾಠ

Array

ಪ್ರೇಮ ಕಾಮದ ಆಟದ ಮೊದಲ ಇನ್ನಿಂಗ್ಸ್ ಶುರುವಾಗುವುದೇ ಸ್ಪರ್ಶ ಸುಖದಿಂದ...ಅಲ್ಲಿ ಮುಟ್ಟಿಬಿಟ್ಟೆ. ಮೈ ಜುಂ ಅಂದುಬಿಟ್ಟಿತು ಎಂದು ಹೇಳುವುದನ್ನು ಕೇಳಿರುತ್ತೀರಾ. ಪ್ರತಿ ಮನುಷ್ಯನ ದೇಹದಲ್ಲಿ ಕರೆಂಟ್ ಪಾಸ್ ಆಗುತ್ತಿರುತ್ತದೆ. ಅದರಲ್ಲೂ ನಿಮ್ಮ ಸಂಗಾತಿ ಸ್ಪರ್ಶ ಸಿಕ್ಕರೆ ಹಿತವಾದ ಶಾಕ್ ಆಗುವುದಂತೂ ನಿಜ.

ಸ್ತ್ರೀ ಹಾಗೂ ಪುರುಷರಲ್ಲಿ ಪ್ರತ್ಯೇಕವಾದ ಉದ್ರೇಕ ಪ್ರದೇಶಗಳಿರುತ್ತದೆ. ಆದು ಯಾವುದು, ಎಲ್ಲಿ ಎಂಬುದು ಮುಂದೆ ನೋಡೋಣ. ಉದ್ರೇಕತೆಗೆ ಏಳೆದೊಯ್ಯಬಲ್ಲ ಈ ಪ್ರದೇಶಗಳು ಪ್ರತಿ ಪುರುಷ ಸ್ತ್ರೀಯರ ಆಕರ್ಷಣೆ ಅಂಗದ ಮೇಲೆ ನಿಂತಿರುತ್ತದೆ.

ಮಹಿಳೆಯರ ಉಬ್ಬು ತಗ್ಗುಗಳನ್ನು ನೋಡಿ ಎಕ್ಸೈಟ್ ಆಗುವುದು ಮಾಮೂಲಿ. ಮಹಿಳೆಯರಿಗೂ ತಮ್ಮ ಸೊಂಟ, ಕಿಬ್ಬೊಟ್ಟೆ, ತೊಡೆ, ಎದೆ, ಪೃಷ್ಠವನ್ನು ಮೃದುವಾಗಿ ಹಿಂಡಿ ಹಿಪ್ಪಿ ಮಾಡುವ ಕಾಮಪುರುಷನಿಗಾಗಿ ಹಾತೊರೆಯುತ್ತಿರುತ್ತಾರೆ.

Erogenous Places Men Want To Be Touched
 

ಆದರೆ, ಪುರುಷರ ಅಂಗಗಳಲ್ಲಿ ಉದ್ರೇಕತೆ ಹೇಗೆ ಒಮ್ಮಿಸಬಹುದು ಎಂದು ಆಕೆಗೆ ತಿಳಿಯುವುದಾದರೂ ಹೇಗೆ? ಕೆಲವರಿಗೆ ಪುರುಷರು ಕರಡಿಯಂತೆ ರೋಮಮಯವಾಗಿದ್ದರೆ ಚೆನ್ನ. ಮತ್ತೆ ಕೆಲವರಿಗೆ ಸಲ್ಮಾನ್ ದೇಹದಂತೆ ನೀಟ್ ಶೇವ್ ಆಗಿದ್ದರೆ ಓಕೆ. ಎಲ್ಲಾ ಪುರುಷರ ಅಂಗ ಸೌಷ್ಟವ ಬಾಡಿ ಬಿಲ್ಡರ್ ಮಾದರಿಯಲ್ಲಿರುತ್ತದೆ ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ.

ಅದಕ್ಕಾಗಿ ಪುರುಷರ ಮನೋಕಾಮನೆ ಉದ್ರೇಕಿಸುವ ಅಂಗ ಪ್ರದೇಶಗಳತ್ತ ನಮ್ಮ ಅಕ್ಷರಗಳು ಇನ್ಮುಂದೆ ನುಗ್ಗಲಿದೆ..

ಕುತ್ತಿಗೆ: ಕೊರಳ ಬಳಿ ಹಾವು ಸುತ್ತಿದ್ದಂತೆ ಕೈ ಬಳಸಿ ಬರ ಸೆಳೆದು ಮುದ್ದಿಸುವುದು ಹೆಂಗಳೆಯರಿಗೆ ಮಾತ್ರವಲ್ಲ ಪುರುಷರಿಗೂ ಇಷ್ಟವಾದ ಕ್ರಿಯೆ. ಹಾಂಗಂತ ನಿಮಗಿಂತ ಎತ್ತರವಿರುವ ನಿಮ್ಮ ಸಂಗಾತಿಯ ಕುತ್ತಿಗೆ ಹಿಡಿದು ಜಗ್ಗಾಡಬೇಡಿ..ಕುತ್ತಿಗೆ ತುಂಬಾ ಸೂಕ್ಷ್ಮವಾದ ಸಂವೇದನಾಯುಕ್ತ ಅಂಗ. ಇಷ್ಟಪಡುವ ಗೆಳೆಯ ಕೊರಳ ಚುಂಬಿಸಿ, ಆತನ ಕುತ್ತಿಗೆಯನ್ನು ಬಳಸಿ ಮುದ್ದಿಸಿ ನೋಡಿ ಎಷ್ಟೇ ಎತ್ತರ ಆಳಾದರೂ ತಲೆ ಬಗ್ಗಿಸಿ ನಿಮ್ಮ ಕಡೆಗೆ ವಾಲುತ್ತಾನೆ. ಕುತ್ತಿಗೆ ಮುಂಭಾಗ, ಹಿಂಭಾಗ ಎರಡನ್ನು ಯಥೇಚ್ಛವಾಗಿ ಚುಂಬಿಸಿ ಪ್ರೀತಿ ಹೆಚ್ಚಾದರೆ, ಉದ್ರೇಕ ಅತಿಯಾದರೆ ನಾಲಗೆ ಹೊರ ಚಾಚಿ ಹಾಗೆ ಕುತ್ತಿಗೆಯನ್ನು ಒದ್ದೆ ಮಾಡಿಬಿಡಿ ಅಡ್ಡಿಯಿಲ್ಲ.

ಹಣೆ(ಕಣ್ಣಿನ ಹತ್ತಿರದ ಭಾಗ) : ನಗರ ಜೀವನದಲ್ಲಿ ಹೊರಗೆ ದುಡಿಯುವ ಗಂಡು ಸಾಕಷ್ಟು ಜಂಜಾಟದ ನಡುವೆ ಕಳೆದು ಮನೆಗೆ ಮರಳಿದ ಮೇಲೆ ಬಯಸುವುದು ನಾಲ್ಕು ಒಳ್ಳೆ ಮಾತು ಹಾಗೂ ಹಿತವಾದ ಸ್ಪರ್ಶ ಸುಖವನ್ನು ಮಾತ್ರ. ಹೀಗಾಗಿ ದಣಿದ ನಿಮ್ಮ ಸಂಗಾತಿಯನ್ನು ಉಲ್ಲಾಸದ ಮೂಡ್ ಗೆ ತರಬೇಕಾದರೆ ವಿಕ್ಸ್, ಅಮೃತಾಂಜನ್ ತೆಗೆದುಕೊಂಡು ಆತನ ಹಣೆಯ ಭಾಗಕ್ಕೆ ನಿಧಾನವಾಗಿ ಮಸಾಜ್ ಮಾಡಿ. ಇದರಿಂದ ಒತ್ತಡ ನಿವಾರಣೆಯಾಗುವುದಲ್ಲದೆ. ಆತನದ ಸೂಕ್ಷ್ಮಾಂಗಗಳು ಉದ್ರೇಕಗೊಳ್ಳುತ್ತದೆ.

ನಿಧಾನಗತಿಯಿಂದ ಮಸಾಜ್ ಆರಂಭಿಸಿ ಮೆಲ್ಲಗೆ ಒತ್ತಡ ಹೆಚ್ಚು ಮಾಡುತ್ತಾ ಇರಿ.ಕಿವಿಯ ಎರಡು ಬದಿಯಿಂದ ಹಣೆಯ ಮಧ್ಯ ಭಾಗದ ತನಕ ನಿಮ್ಮ ಬೆರಳು ಮೃದು ಮಸಾಜ್ ನೀಡಲಿ. ಇದೇ ವೇಳೆಯಲ್ಲಿ ಆತನ ಮನಸ್ಸು ಪ್ರಶಾಂತವಾಗುತ್ತಿದ್ದಂತೆ ಆತನ ಮುಖವನ್ನು ನಿಮ್ಮ ಮಧ್ಯಭಾಗಕ್ಕೆ ಬರುವಂತೆ ಒತ್ತರಿಸಿಕೊಂಡು ಮತ್ತೆ ಮಸಾಜ್ ಮುಂದುವರೆಸಿ. ಆಗ ನೋಡಿ ಮಜಾ .. ಮಸಾಜ್ ನಂತರ ಮಂಚಕ್ಕೆ ಅಹ್ವಾನ ಬಂದೇ ಬರುತ್ತದೆ.

ಕೈ, ತೋಳು, ಕಾಲು: ಕೈ ಕೈ ಹಿಡಿದು ಜೊತೆಜೊತೆಯಲ್ಲಿ ನಡೆಯುವುದು ಎಲ್ಲಾ ಪ್ರೇಮಿಗಳ, ಸಂಗಾತಿಗಳ ಲಕ್ಷಣ. ನಾನು ನಿನ್ನ ಜೊತೆ ಎಲ್ಲಾ ಸಂದರ್ಭದಲ್ಲೂ ಇರುತ್ತೇನೆ ಎಂಬ ಭದ್ರತಾ ಭಾವ ಇದರಲ್ಲಿ ಮೂಡುತ್ತದೆ. ಕೈ ನೆಟಿಕ್ ತೆಗೆಯುವುದು. ಒರಟಾದ ಕೈಗಳನ್ನು ಹಿತವಾಗಿ ಚುಂಬಿಸುವುದು, ಪಾದಗಳಲ್ಲಿ ಕಿತ್ತಾಟ ಮಾಡುವುದು ಎಲ್ಲರಿಗೂ ತಿಳಿದ ವಿದ್ಯೆ. ಕೈ ಕೊಡವಿ ಕೊಂಡು ಸಂಗಾತಿ ಹೊರಟರೂ ಕೈ ಎಳೆದು ಮತ್ತೆ ನಿಮ್ಮತ್ತ ಸೆಳೆಯುವುದನ್ನು ಮರೆಯಬೇಡಿ.

ಕೆಳ ಹಿಂಭಾಗ: ಪುರುಷ ಹಾಗೂ ಸ್ತ್ರೀಯರ ನಿತಂಬ, ಸೊಂಟದ ಭಾಗ ಎಂದಿದ್ದರೂ ಆಕರ್ಷಕ ಅಂಗಗಳೇ. ನಿತಂಬದ ಸ್ಪರ್ಶಕ್ಕೆ ಹೆಣ್ಣು ಕೂಡಾ ಹಾತೊರೆಯುವಂತೆ ಪುರುಷ ಕೂಡಾ ತನ್ನ ದಷ್ಟ ಪುಷ್ಟ ಅಂಗಾಂಗಗಳನ್ನು ಸಂಗಾತಿ ಸ್ಪರ್ಶಿಸಲಿ ಎಂದು ಬಯಸುತ್ತಾನೆ. ಸೊಂಟ ಹಾಗೂ ಸೊಂಟಕ್ಕಿಂತ ಸ್ವಲ್ಪ ಮೇಲ್ಭಾಗದ ಬೆನ್ನುಹರಿ ಮಸಾಜ್ ಹಾಗೂ ಹಿತವಾದ ಸ್ಪರ್ಶ ಸದಾಕಾಲ ಉದ್ರೇಕಗೊಳಿಸುವ ಪ್ರದೇಶವಾಗಿ ವೈದ್ಯರಿಂದ ಪರಿಗಣಿಸಲ್ಪಟ್ಟಿದೆ. ಅಸಂಖ್ಯ ಪ್ರಮಾಣದ ಶಕ್ತಿಯನ್ನು ಉದ್ರೇಕಿಸುವ ಹಾಗೂ ಉತ್ಪಾದಿಸಬಲ್ಲ ಶಕ್ತಿ ಕೇಂದ್ರವಾದ ಈ ಪ್ರದೇಶಕ್ಕೆ ಯೋಗಶಾಸ್ತ್ರ, ಕಾಮಶಾಸ್ತ್ರದಲ್ಲೂ ತುಂಬಾ ಮಹತ್ವವಿದೆ.

ರಕ್ತ ಕಣ್ಣೀರು ಚಿತ್ರದಲ್ಲಿ ನಾಯಕ ಉಪೇಂದ್ರ ಮಣಿಯಮವಾದ ನಾಯಕಿಯ ಮೈಮಾಟದ ಕೊಂಡಿಯನ್ನು ಕೊಳಚಲು ಸ್ಪರ್ಶಿಸುವುದೂ ಕೂಡಾ ಇದೇ ಭಾಗವನ್ನು ಎಂಬುದು ಸಿನಿರಸಿಕರಿಗೆ ತಿಳಿದ ವಿಷಯ.

ಕಿಬ್ಬೊಟ್ಟೆಯ ಪ್ರದೇಶ: ಎಲ್ಲಾ ರೀತಿಯ ಅಂಗಾಂಗಗಳ ಸ್ಪರ್ಶ ಸುಖದ ನಂತರ ಕೊನೆ ವೇಳೆಯಲ್ಲಿ ಹೇಳದೆ ಕೆಳಗೆ ಕೈಗಳು ಗುಪ್ತಾಂಗದ ಕಡೆಗೆ ಹೋಗುವುದುದಿದೆ. ಈ ಭಾಗದಲ್ಲಿ ಮನ ಬಂದಂತೆ ಬೆರಳಿನಾಟವಾಡಬಹುದಾದರೂ ಸಂಗಾತಿಯ ಒಪ್ಪಿಗೆ ಅಗತ್ಯ. ನಿಮ್ಮ ಮೃದು ಬೆರಳಿನಿಂದ ಕಿಬ್ಬೊಟ್ಟೆಯನ್ನು, ಗುಪ್ತಾಂಗವನ್ನು ಸ್ಪರ್ಶಿ ಉದ್ರೇಕಗೊಳಿಸಿ. ಸಂಭೋಗಕ್ಕೂ ಮುನ್ನ ಓರಲ್ ಸೆಕ್ಸ್ ಅಗತ್ಯಬಿದ್ದರೆ ಆತ ಬಯಸಿದರೆ ಹಿಂಜರಿಯದೆ ಮುಂದುವರೆಯಿರಿ.

ಮುಂಗಾಲಿನ ಹಿಂಬದಿ: ಪುರುಷನ ತೊಡೆ ಮಾತ್ರವಲ್ಲದೆ ಹಿಂಗಾಲಿನ ಬದಿ ಮೃದು ಚರ್ಮವನ್ನು ತನ್ನ ಸಂಗಾತಿಯೂ ಕಾಲಿನಿಂದ ಹಿತವಾಗಿ ಸ್ಪರ್ಶಿಸುವ ಸುಖವನ್ನು ಪ್ರತಿ ಪುರುಷ ಬಯಸುತ್ತಾನೆ. ಕಾಲಿನಲ್ಲಿ ಆಟವಾಡುವಾಗ ಹಿಂಜರಿಕೆಯನ್ನು ಕಟ್ಟಿಟ್ಟಿ. ಧೈರ್ಯವಾಗಿ ಸಂಗಾತಿಗೆ ಹಿತ ಸ್ಪರ್ಶಸುಖ ನೀಡಿ. ಇವೇ ಕೆಲವು ಪ್ರದೇಶಗಳು ಪುರುಷನ ಕಾಮಜನಕ ಪ್ರಧಾನ ಕೇಂದ್ರಗಳಾಗಿದೆ.

English summary
There are many erogenous zones where you would like to be touched by your partner. Both men and women have their own sensual zones. You can touch the groin or love his chest but, there are few body parts that men wish you touch. Check out some body parts of men where they want to be touched.
Please Wait while comments are loading...

Get Notifications from Kannada Indiansutras

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Indiansutras sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Indiansutras website. However, you can change your cookie settings at any time. Learn more