ಹಸ್ತಮೈಥುನದಿಂದ ಲೈಂಗಿಕ ಉನ್ಮಾದ ಹತೋಟಿ ಜೊತೆಗೆ ಉದ್ವೇಗವನ್ನು ಕಳೆದುಕೊಳ್ಳುವ ಜತೆಗೆ ಸಂತೋಷ ಹೆಚ್ಚುತ್ತದೆ. ಹಸ್ತಮೈಥುನ ಸ್ತ್ರೀ, ಪುರುಷರು ಆಚರಿಸುವ ವಯೋ ಸಹಜ ಪ್ರಕ್ರಿಯೆಯಾಗಿದೆ. ಹಾಸಿಗೆ ಮೇಲೆ ಹೆಚ್ಚು ಕಾಲ ಹಸ್ತಮೈಥುನದ ಸುಖ ಹೊಂದಲು ಇಲ್ಲಿ ಕೆಲವು ಸಲಹೆ, ಸೂಚನೆಗಳನ್ನು ನೀಡಲಾಗಿದೆ. ಗಮನಿಸಿ.. ನಿಧಾನವಾಗಿ ಪಾಲಿಸಿ ಆಚರಿಸಿ, ಆನಂದಿಸಿ.
ಯಂತ್ರಕ್ಕೆ ಬೇಕು ಎಣ್ಣೆ: ಎಣ್ಣೆ ಎಂದಾಕ್ಷಣ ಪಕ್ಕದಲ್ಲಿರೋ ವೈನ್ ಶಾಪ್ ಕಡೆ ಓಡಬೇಡಿ. ಯಾವುದೇ ಯಂತ್ರ ತುಕ್ಕು ಹಿಡಿಯದಂತೆ ಸರಾಗವಾಗಿ ಚಲಿಸಲು ಅದಕ್ಕೆ ಕೀಲೆಣ್ಣೆ ಹಾಕಲೇಬೇಕು. ಅದೇ ರೀತಿ ಹಸ್ತಮೈಥುನ ಪ್ರಕ್ರಿಯೆ ಸರಾಗವಾಗಿ ಆಗಲು ಸುಖ ಅನುಭವದ ನೈಜತೆಗೆ ಎಣ್ಣೆ ಬಳಿಯುವುದೊಂದೇ ಮಾರ್ಗ. ಮೃದುವಾದ ಅಂಗವನ್ನು ಯಂತ್ರದಂತೆ ಹಿಂದಕ್ಕೆ ಮುಂದಕ್ಕೆ ಆಡಿಸುವುದು ಸುಲಭ. ಒಣ ಕೈಗಳಿಂದ ಒರಟಾಗಿ ಬಲ ಪ್ರಯೋಗ ಮಾಡಿದರೆ ಸುಖಕ್ಕಿಂತ ಶಿಶ್ನಕ್ಕೆ ಅಪಾಯ ಒದಗುವ ಸಂಭವವೇ ಹೆಚ್ಚು.
ಏನಾದರೂ ಆಗಲಿ ಆತುರ ಬೇಡ: ಈ ಲೇಖನ ಶೀರ್ಷಿಕೆಯಲ್ಲೇ ಹೇಳಿದಂತೆ ಹಸ್ತಮೈಥುನದ ದೀರ್ಘಕಾಲದ ಹೆಚ್ಚು ಸುಖ ಅನುಭವಿಸಲು ಬಯಸುವವರು ಆತುರದ ಕ್ರಿಯೆಗೆ ಬ್ರೇಕ್ ಹಾಕಲೇಬೇಕು. ಎರಡು ಮೂರು ಸ್ಟ್ರೋಕ್ ನಲ್ಲೇ ಸ್ಖಲನವಾದರೆ ಮುಂದೆ ಶೀಘ್ರ ಸ್ಖಲನದ ತೊಂದರೆ ಇದೆ ಎಂಬ ಶಂಕೆ ಕಾಡಬಹುದು.
ಅಲ್ಲದೆ, ಆತುರದ ಉನ್ಮಾದ, ಉದ್ರೇಕತೆ ಕ್ಷಣಿಕವಾದರೂ ಹತೋಟಿಯಲ್ಲಿಡಬಹುದಾಗಿದ್ದು, ಇದು ನಿಮ್ಮ ಉದ್ದೇಶವಾಗಬೇಕು. ಕನಿಷ್ಠ ಪಕ್ಷ 20 ನಿಮಿಷದ ಹಸ್ತಮೈಥುನ ಸುಖ ಅನುಭವಿಸದಿದ್ದರೆ ಸುಖ ಉಂಡಂತೆ ಆಗುವುದಿಲ್ಲ. 20 ನಿಮಿಷವನ್ನು ಇನ್ನಷ್ಟು ಹಿಗ್ಗಿಸುವ ಸಾಮರ್ಥ್ಯ ನಿಮ್ಮ ಕೈಲಿದೆ. 20 ನಿಮಿಷಕ್ಕೂ ಮುನ್ನ ವೀರ್ಯಸ್ಖಲನದ ಸೂಚನೆ ಸಿಕ್ಕರೆ ತಕ್ಷಣವೇ ನಿಮ್ಮ ಮನಸ್ಸನ್ನು ಬೇರೆಡೆ ಹರಿಸಿ..ಕ್ಷಣ ಕಾಲ ಸುಧಾರಿಸಿಕೊಂಡು ನಂತರ ನಿಮ್ಮ ಕೆಲಸ ಮುಂದುವರೆಸಿ.
ಪೋರ್ನ್ ನೋಡಿ ಕೈ ಕೆಲಸಕ್ಕೆ ಇಳಿಬೇಡಿ: ಕಲ್ಪನೆ ಇಲ್ಲದೆ ಕಾಮನೆ ಹುಟ್ಟದು. ಕಲ್ಪನೆ ಹುಟ್ಟಿಸಿಕೊಳ್ಳಲು ಪೋರ್ನ್ ಚಿತ್ರ, ವಿಡಿಯೋ ನೋಡುವುದು ಎಲ್ಲಾ ಬಲಿತ ಪುರುಷರ ಸಹಜ ಅಭ್ಯಾಸ. ಆದರೆ, ಪೋರ್ನ್ ನೋಡಿ ಹಸ್ತ ಮೈಥುನ ಕ್ರಿಯೆಗೆ ಕೈ ಹಚ್ಚಿದರೆ ನಿರಾಶೆ ಗ್ಯಾರಂಟಿ. 10 ನಿಮಿಷದ ಸುಖ 1 ನಿಮಿಷಕ್ಕೆ ಮುಗಿದು ಬಿಡುತ್ತದೆ ಎಚ್ಚರ.
ಇದಕ್ಕೆ ಪರಿಹಾರವಿಲ್ಲವೇ? ಪೋರ್ನ್ ನೋಡಿದ ಮೇಲೆ ತ್ವರಿತವಾಗಿ ಮನೋ ಕಾಮನೆಯನ್ನು ಏರಿಸಿಕೊಂಡು ಮುಖ ಕಿವುಚುವ ಬದಲು.. ಪೋರ್ನ್ ಜೊತೆ ಜೊತೆಗೆ ಹಸ್ತಮೈಥುನ ಕ್ರಿಯೆಗೆ ಚಾಲನೆ ಕೊಟ್ಟು ಬಿಡಿ. ಸಿನ್ಮಾ ಮುಗಿಯುತ್ತಿದ್ದಂತೆ ಎಲ್ಲವೂ ಶುಭಂ ಆಗಿ ಬಿಡುತ್ತದೆ. ಆದರೆ, ಶೀಘ್ರಸ್ಖಲನದ ಮೇಲೆ ನಿಯಂತ್ರಣ ಹೊಂದಿದ್ದರೆ ಚಿತ್ರ ನೋಡಲೇಬೇಕೆಂದಿಲ್ಲ. ಚಿತ್ರದ ನೆಗಟಿವ್ ಮನದಲ್ಲಿ ಸುಳಿದರೂ ಸಾಕು ಸುಖದ ಅನುಭವ ಮೊದಲಾಗುತ್ತದೆ.
ಉಸಿರಾಟದ ಮೇಲೆ ನಿಗಾ ಇರಲಿ: ಹಸ್ತ ಮೈಥುನ ಒಂದು ಸುಖದ ಪ್ರಕ್ರಿಯೆಯಾಗಿ ಆಚರಿಸಬೇಕೇ ಹೊರತೂ ಬಲ ಪ್ರದರ್ಶನ ಅಥವಾ ಯಾವುದೋ ಜಿದ್ದಿಗೆ ಬಿದ್ದಂತೆ ಆಚರಿಸುವುದು ತರವಲ್ಲ. ಹೀಗಾಗಿ ಹಸ್ತಮೈಥುನದ ಕ್ರಿಯೆ ಸಂದರ್ಭದಲ್ಲಿ ಉಸಿರಾಟದ ಮೇಲೆ ನಿಯಂತ್ರಣ ಬಲು ಮುಖ್ಯ. ಉನ್ಮಾದಕ್ಕೆ ಬಿದ್ದಂತೆ ಉಸಿರಾಟದ ಮೇಲೆ ಹತೋಟಿ ಕಳೆದುಕೊಂಡರೆ ಸುಖ ಅನುಭವಿಸುವುದಿರಲಿ, ಸುಧಾರಿಸಿಕೊಳ್ಳಲಿಕೆ ಸಮಯ ಹಿಡಿಯುತ್ತದೆ.
ಆರೋಗ್ಯದ ದೃಷ್ಟಿಯಿಂದಲೂ ಉಸಿರಾಟದ ನಿಯಂತ್ರಣ ಪ್ರಮುಖ ಅಂಶವಾಗಿದೆ. ಉದ್ರೇಕತೆ ಹೆಚ್ಚಾಗುತ್ತಿದ್ದಂತೆ ಹಾಗೂ ಸ್ಖಲನದ ತುತ್ತತುದಿ ತಲುಪಿದ ಕ್ಷಣ ಮನಸ್ಸಿನಲ್ಲಿ ವಿಚಿತ್ರವಾದ ಆಹ್ಲಾದಕರ ಭಾವನೆ ಉಂಟಾಗುತ್ತದೆ. ಉದ್ರೇಕತೆಯನ್ನು ಮನಸ್ಸಿನ ನಿರಾಳತೆ ಉಸಿರಿನ ನಿಯಂತ್ರಣ ಕಾಯ್ದುಕೊಂಡರೆ ಸುಖದ ಪರಿಣಾಮ ಅಧಿಕವಾಗುವುದರಲ್ಲಿ ಯಾವುದೇ ಅಚ್ಚರಿಯಿಲ್ಲ.
ಮೂತ್ರದ ಟ್ಯಾಂಕ್ ಖಾಲಿ : ಹಸ್ತಮೈಥುನಕ್ಕೂ ಮುನ್ನ ಮೂತ್ರದ ಟ್ಯಾಂಕ್ ಖಾಲಿ ಮಾಡಿಕೊಳ್ಳಿ. ನೀರು ತುಂಬಿದ ಮೂತ್ರ ಚೀಲದೊಂದಿಗೆ ಹಸ್ತಮೈಥುನಕ್ಕೆ ಇಳಿದು ಕ್ಷಣಾರ್ಧದಲ್ಲೇ ಸ್ಖಲನ ಅಥವಾ ಉದ್ರೇಕತೆ ಅನುಭವಿಸಿ ತೊಂದರೆ ಅನುಭವಿಸುವುದಿದೆ. ಆದರೆ, ತೀವ್ರ ದಣಿವಾದಾಗ ಕೂಡಾ ಹಸ್ತ ಮೈಥುನ ಒಳ್ಳೆಯದಲ್ಲ. ಯಾವುದಕ್ಕೂ ಮೂತ್ರ ವಿಸರ್ಜಿಸಿ ಹಸ್ತ ಮೈಥುನ ಕ್ರಿಯೆಗೆ ತೊಡಗುವುದರಲ್ಲಿ ತಪ್ಪೇನಿಲ್ಲ.
ಹಸ್ತಮೈಥುನದ ಉದ್ದೇಶ ಲೈಂಗಿಕ ಸುಖವನ್ನು ಅನುಭವಿಸುವುದು ಅನ್ನುವುದನ್ನು ಮರೆಯಬೇಡಿ. ಹಸ್ತಮೈಥುನವನ್ನು ಯಾವುದೇ ಕಾರಣಕ್ಕೂ ಹತ್ತಿಕ್ಕಲು ಪ್ರಯತ್ನಿಸಬೇಡಿ. ಮನಸ್ಸಿನಲ್ಲಿ ಉದ್ಭವಿಸುವ ಲೈಂಗಿಕ ಭಾವನೆಗಳನ್ನು ಹೊರಗೆಡವಲು ಪ್ರಕೃತಿ ನೀಡಿರುವ ನೈಸರ್ಗಿಕ ಕ್ರಿಯೆ ಇದಾಗಿದೆ. ಹೆಣ್ಣು ಗಂಡು ಬೇಧವಿಲ್ಲದೆ ಲೈಂಗಿಕ ಹಾಗೂ ಮಾನಸಿಕ ತಾಕಲಾಟಗಳನ್ನು ಹಸ್ತಮೈಥುನ ಸರಿದೂಗಿಸುತ್ತದೆ.