ಕಾಲಿಗೆ ಕಟ್ಟಿದ ಗೆಜ್ಜೆ ಸದ್ದು ಹೆಜ್ಜೆಗೆ ಕೂಡ ಕೇಳದಂತೆ, ಕೈಯಲ್ಲಿ ಹಾಲಿನ ಲೋಟವನ್ನು ಹಿಡಿದು, ಮುಖದಲ್ಲಿ ಲಜ್ಜೆಯನ್ನು ಹೊದ್ದು, ಮೆಲ್ಲಮೆಲ್ಲನೆ ಕೋಣೆಯೊಳಗೆ ಮಡದಿ ನಡೆದು ಬರುವಾಗ ನಿಮ್ಮ ಹೃದಯದಲ್ಲಿ ಸಾವಿರಾರು ಚಿಟ್ಟೆಗಳು ಸರಸವಾಡುತ್ತಿರುತ್ತವೆ.
ನಿಮ್ಮ ಮನದಲ್ಲಿ ಮಾತ್ರವಲ್ಲ ಇನಿಯನ ಬಳಿ ಮೊದಲ ಬಾರಿ ಬರುವಾಗ ಆಕೆಯಲ್ಲೂ ಕೌತುಕದ ಕವಾಟ ತೆರೆದಿರುತ್ತದೆ. ಹಗ್ಗ ಕಿತ್ತ ಹೋರಿಯಂತೆ ಆತನನ್ನು ನೋಡಿ ಎದೆಯ ಬಡಿತ ನೂರಿಪ್ಪತ್ತು ದಾಟಿರುತ್ತದೆ. ಹೇಗೋ ಏನೋ ಎಂಬ ಅಳಲು ಆಕೆಯ ಮನದಲ್ಲಿ ಮನೆಮಾಡಿರುತ್ತದೆ.
ಈಗಾಗಲೆ ಆಕೆಯನ್ನು ಹಲವಾ ಬಾರಿ ಸ್ಪರ್ಶಿಸಿದ್ದರೂ ಈ ಸ್ಪರ್ಶದಲ್ಲಿ ಏನೋ ಮುದವಿರುತ್ತದೆ. ಆಕೆಯಲ್ಲಿ ಕಾಮಕವನವನ್ನು ಅರಳಿಸುವುದು ಹೇಗೆ? ಏನು ಮಾಡಿದರೆ ಆಕೆ ನನಗೆ ಇನ್ನಷ್ಟು ಹತ್ತಿರವಾಗಬಹುದು? ಮಿಲನಮಹೋತ್ಸವವನ್ನು ಅವಿಸ್ಮರಣೀಯ ಮಾಡಲು ಏನು ಮಾಡಲಪ್ಪಾ ಅಂತ ಆತ ಪ್ರಶ್ನೆಯ ಸುಳಿಯಲ್ಲಿ ಸಿಲುಕಿರುತ್ತಾನೆ.
ಇದು ಯಾರು ಹೇಳಿಕೊಡುವ ಪಾಠವೂ ಅಲ್ಲ, ಕಲಿಯಲು ನಾವು ವಿದ್ಯಾರ್ಥಿಗಳೂ ಅಲ್ಲ. ಎರಡು ಮನಸ್ಸುಗಳು, ಹೃದಯಗಳು ಬೆರೆತಾಗ, ಉಸಿರು ಒಂದಾದಾಗ, ಬಟ್ಟೆ ಕಳಚಿ ಬೆತ್ತಲಾದಾಗ ನಮ್ಮ ದೇಹವೇ ಕಾಮದಾಟದ ಮೈದಾನವಾಗುತ್ತದೆ, ನಾವೇ ಕಾಮಪಾಠದ ವಿಶ್ವವಿದ್ಯಾಲಯವಾಗುತ್ತೇವೆ.
ಆದರೂ, ಕೆಲವೊಂದು ಟಿಪ್ಸ್ ಗಳು ಇಲ್ಲಿವೆ, ಬೇಕಿದ್ದರೆ ಓದಿರಿ, ಸಾಧ್ಯವಾದರೆ ಅಳವಡಿಸಿಕೊಂಡು ಆ ಮಿಲನದ ರಾತ್ರಿಯನ್ನು ಮರೆಯದ ರಾತ್ರಿಯನ್ನಾಗಿ ಮಾಡಿಕೊಳ್ಳಿ.
ಕ್ಯಾಂಡಲ್ ಬೆಳಕಿನಲ್ಲಿ ಕೆಣಕುವ ಆ ನೋಟ
ಧಿಗ್ಗನೆ ಉರಿಯುತ್ತಿರುವ ಟ್ಯೂಬ್ ಲೈಟಿನಡಿಯಲ್ಲಿ ನಮ್ಮ ಮನವೂ ಟ್ಯೂಬ್ ಲೈಟಿನಂತಾಗುತ್ತದೆ. ಅದನ್ನು ಆರಿಸಿ, ಲಾಸ್ಯವಾಡುವ ಬೆಳಕಿನ ಮೊಂಬತ್ತಿಗಳನ್ನು ಉರಿಸಿರಿ. ಆ ನಯವಾಗಿ ಉರಿಯುವ ಬೆಳಕಿನಲ್ಲಿ ಕಾಮದ ಕಿಡಿ ಝಗ್ಗನೆ ಹೊತ್ತಿಕೊಂಡಿರುತ್ತದೆ. ಆ ಬೆಳಕಿನಲ್ಲಿ ಕಣ್ಣು ಕಣ್ಣು ಕಲೆತಾಗ, ಮನವು ಉಯ್ಯಾಲೆಯಾಗಿ ಆಡಿರುತ್ತದೆ, ಹೃದಯ ಬಿಡಲಾರೆ ಎಂದು ಕೂಗಿರುತ್ತದೆ.
ಹೃದಯ ಹೃದಯದ ಬಡಿತದ ಜೊತೆ
ಅಡ್ಡಿಯಾಗಿರುವ ಬಟ್ಟೆಯನ್ನು ಕಿತ್ತುಬಿಸಾಡಿ ದೇಹಗಳೆರಡು ಒಂದಾಗಲು ತವಕಿಸುತ್ತಿರುವಾಗ, ಸ್ಮಶಾನಮೌನದ ಆ ಸ್ಥಳದಲ್ಲಿ ಉದ್ವೇಗ ತುಂಬಿದ ಹೃದಯದ ಬಡಿತ ಕಿವಿಯನ್ನು ಅಪ್ಪಳಿಸುತ್ತಿರುತ್ತದೆ. ಅದರ ಜೊತೆಗೆ ಮನವನ್ನು ಹಗುರ ಮಾಡುವ, ಕಿವಿಗೆ ಇಂಪಾದ ರೋಮ್ಯಾಂಟಿಕ್ ಹಾಡು ದೂರದಲ್ಲೆಂದಲೋ ಕೇಳಿಬರುವಂತಿದ್ದರೆ ಅದರ ಮಜಾನೇ ಬೇರೆ.
ಊದುಬತ್ತಿಯ ಪರಿಮಳ ಪಸರಿಸುತ್ತಿದ್ದರೆ....
ಹಾಸಿಗೆಯ ಮೇಲೆ ಹರಡಿದ ಮಲ್ಲಿಗೆಯ ಕಂಪು, ಹೊಸದಾದ ಕಟ್ಟಿರುವ ಹಾರಾಡುವ ಕರ್ಟನ್ನುಗಳು ಸೂಸುವ ಆ ವಿಚಿತ್ರ ವಾಸನೆಯ ಜೊತೆಗೆ ಆಕೆಯ ಕಂಕುಳ ಸಂದಿಯ ಬೆವರಿನ ವಾಸನೆಯನ್ನು ಮೂಸಲು ನಾಸಿಕ ತುದಿಗಾಲ ಮೇಲೆ ನಿಂತಿರುತ್ತದೆ. ಇದರ ಜೊತೆಗೆ ಇಡೀ ಕೋಣೆಯನ್ನು ಆವರಿಸಿಕೊಳ್ಳುವಂತೆ ಹಿತವಾದ ಊದುಬತ್ತಿಯ ಪರಿಮಳ ಪಸರಿಸುತ್ತಿದ್ದರೆ.... ಆಹಾ!
ಕಾಮದ ಕಿಚ್ಚುಹತ್ತಲು ಸಮಯವೆಷ್ಟು ಬೇಕು?
ಅದು ಏನನ್ನೂ ತಿನ್ನುವ ಸಮಯವಲ್ಲ, ಏನನ್ನೂ ತಿನ್ನಬೇಕೆಂದು ಅನ್ನಿಸುವುದಿಲ್ಲ. ಟೇಬಲ್ ಮೇಲೆ ಇಟ್ಟಿರುವ ಹಾಲು ಅಲ್ಲೇ ಇರುತ್ತದೆ, ಪೇರಿಸಿಟ್ಟ ಹಣ್ಣುಹಂಪಲು ಬಾಡುತ್ತಿರುತ್ತವೆ, ಬಾದಾಮಿ ಗೋಡಂಬಿ ನಿದ್ದೆ ಮಾಡುತ್ತಿರುತ್ತವೆ... ಆದರೆ, ಚಾಕಲೇಟು ತುಟಿತುಟಿಗಳು ಬೆರೆಯುವ ಸಮಯದಲ್ಲಿ ಕರಗಿಹೋದರೆ ಕಾಮದ ಕಿಚ್ಚುಹತ್ತಲು ಸಮಯವೆಷ್ಟು ಬೇಕು?
ಮೊದಲ ರಾತ್ರಿಯ ಆ ಮೊದಲ ಸ್ಪರ್ಶ!
ಮೊದಲ ರಾತ್ರಿಯ ಆ ಮೊದಲ ಸ್ಪರ್ಶ! ನುಣ್ಣನೆಯ ನವಿಲುಗರಿಯಂತೆ ಆ ನಿಮ್ಮ ಬೆರಳು ಆಕೆಯನ್ನು ಸೋಕುತ್ತಿದ್ದಂತೆ ಹಿತವಾಗಿ ಕರೆಂಟು ಹೊಡೆದಂತಾಗಿರುತ್ತದೆ. ಆ ಸ್ಪರ್ಶದಲ್ಲೂ ಪ್ರೀತಿಯ ಆರ್ದ್ರತೆಯಿರಬೇಕು, ಆತ್ಮೀಯತೆಯಿರಬೇಕು, ಆಕೆಯಲ್ಲಿ ಆ ಅಪ್ಪುಗೆ ವಿಶ್ವಾಸ ತುಂಬುವಂತಿರಬೇಕು. ಆಕೆಯ ಎದೆಯ ಮೇಲಿನ ಸೆರಗು ಜಾರುಬಂಡೆಯಾಡುತ್ತಿದ್ದಂತೆ ಕಾಮನಬಿಲ್ಲು ಹೆದೆಯೇರಿರುತ್ತದೆ.