•  

ಆಕೆಯ ಆ ಭಾಗವನ್ನೆಲ್ಲಾ ನಯವಾಗಿ ಸ್ಪರ್ಶಿಸಿ ನೋಡಿ!

Array

ಯಾವಾಗಲೂ ಸಂಭೋಗದಲ್ಲಿಯೇ ಸುಖವನ್ನು ಪಡೆಯಲೂ ಆಗುವುದಿಲ್ಲ ಹಾಗು ನೀಡಲು ಆಗುವುದಿಲ್ಲ. ಅದಕ್ಕಾಗಿ ಮಹಿಳೆಯರನ್ನು ಸಂತೋಷಪಡಿಸಲು ಮುಂಕೇಳಿ (ಫೋರ್‌ಪ್ಲೇ) ಗಿಂತ ಮತ್ತೊಂದು ಮಾರ್ಗ ಇಲ್ಲ ಎಂಬುದನ್ನು ನೀವು ಅರಿತುಕೊಳ್ಳಬೇಕು.

ಮಹಿಳೆಯರಲ್ಲಿ ತುಟಿಗಳು, ಸ್ತನಗಳು, ಪೃಷ್ಠಗಳು ಅಥವಾ ಜನನಾಂಗಗಳನ್ನು ಮಾತ್ರ ಸ್ಪರ್ಶಿಸಬೇಕು ಎಂದು ನೀವು ಭಾವಿಸಿದಲ್ಲಿ, ನೀವು ಒಂದು ವಿಚಾರವನ್ನು ಮರೆತಿರುತ್ತೀರಿ. ಮಹಿಳೆಯರ ದೇಹದಲ್ಲಿ ಹಲವಾರು ಭಾಗಗಳು ಸೂಕ್ಷ್ಮವಾಗಿ ಸಂವೇದನೆಯನ್ನು ವ್ಯಕ್ತಪಡಿಸುತ್ತವೆ. ಆ ಭಾಗಗಳನ್ನು ಪ್ರೀತಿಯಿಂದ ಸ್ಪರ್ಶಿಸಿದಾಗ ಹೆಣ್ಣಿಗೆ ಉತ್ತಮ ಆನಂದ ದೊರೆಯುತ್ತದೆ. ಇದರಿಂದ ಲೈಂಗಿಕ ಕ್ರಿಯೆ ಮತ್ತಷ್ಟು ಆನಂದದಾಯಕವಾಗಿರುತ್ತದೆ. ಬನ್ನಿ ಆ ಭಾಗಗಳು ಯಾವುವು ಎಂದು ತಿಳಿದುಕೊಳ್ಳೋಣ.....  

ನೆತ್ತಿ

ನೆತ್ತಿ

ನಮ್ಮಲ್ಲಿ ಬಹುತೇಕರು ನೆತ್ತಿಯ ಮಹತ್ವವನ್ನು ತಿಳಿದುಕೊಂಡಿರುವುದಿಲ್ಲ. ನೆತ್ತಿಯ ಸಾವಿರಾರು ಕೂದಲಿನ ಬುಡಗಳಲ್ಲಿ ಒಂದು ಸೂಕ್ಷ್ಮ ಸಂವೇದನೆ ಇರುತ್ತದೆ
ನೀವು ಲೈಂಗಿಕ ಕ್ರಿಯೆ ಮಾಡುವಾಗ ತಲೆಯ ಕೂದಲಿನಲ್ಲಿ ಕೈ ಬೆರಳುಗಳನ್ನು ಆಡಿಸಿ, ಆ ಭಾಗಕ್ಕೆ ಮೃದುವಾದ ಮಸಾಜ್ ಮಾಡಿ. ಇದರಿಂದ ನಿಮ್ಮ ಸಂಗಾತಿಗೆ ಆಗುವ ಆನಂದವನ್ನು ನೀವೇ ನೋಡಿ!

ಮಂಡಿಗಳ ಹಿಂಭಾಗ

ಮಂಡಿಗಳ ಹಿಂಭಾಗ

ಮಂಡಿಗಳ ಹಿಂದೆ ಇರುವ ತ್ವಚೆಯು ತುಂಬಾ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತದೆ. ಅದರಲ್ಲೂ ನಿಮ್ಮಾಕೆ ಸ್ಕರ್ಟ್ ಧರಿಸಿದ್ದಲ್ಲಿ, ನಿಮ್ಮ ಬೆರಳುಗಳನ್ನು ಈ ಭಾಗದಲ್ಲಿ ಆಡಿಸಿ. ಆಗ ನೋಡಿ ಆಕೆಯಲ್ಲಿ ಮನ್ಮಥನ ಲೀಲೆ ಹೇಗೆ ಉಕ್ಕುತ್ತದೆ ಎಂದು!.

ಒಳ ತೊಡೆಗಳು

ಒಳ ತೊಡೆಗಳು

ಒಮ್ಮೆ ನಿಮ್ಮ ಸಂಗಾತಿ ಒಳ್ಳೆಯ ಮೂಡಿನಲ್ಲಿ ನಿಮ್ಮೊಂದಿಗೆ ಸರಸವಾಡುತ್ತಿದ್ದಲ್ಲಿ, ಆಕೆಗೆ ಮತ್ತಷ್ಟು ಆನಂದವನ್ನು ನೀಡಲು ಆಕೆಯ ಆ ಆನಂದ ನೀಡುವ ಭಾಗವಾದ ಒಳ ತೊಡೆಯನ್ನು ಸ್ಪರ್ಶಿಸಿ.
ನಿಮಗೆ ಎರಡು ಆಯ್ಕೆಗಳಿರುತ್ತವೆ ಒಂದು ನಿಮ್ಮ ಕೈಬೆರಳುಗಳಿಂದ ಆಕೆಯ ಈ ಭಾಗವನ್ನು ಸ್ಪರ್ಶಿಸಿ ಇಲ್ಲವೇ ನಾಲಿಗೆಯಿಂದ ಸ್ಪರ್ಶಿಸಿ. ಎರಡೂ ಬಗೆಯಲ್ಲೂ ಆಕೆಯಲ್ಲಿ ನೀವು ಕಾಮೋತ್ತೇಜನವನ್ನು ತರಬಹುದು.

ಮೊಣಕೈ

ಮೊಣಕೈ

ಒಂದು ವೇಳೆ ನೀವು ಹಕ್ಕಿ ಪುಕ್ಕದಷ್ಟು ಸೂಕ್ಷ್ಮವಾದ ಸ್ಪರ್ಶವನ್ನು ನೀಡುವಂತಿದ್ದಲ್ಲಿ, ಮೊಣಕೈ ಭಾಗವನ್ನು ಮರೆಯಬೇಡಿ. ಮೊಣಕೈ ಹಿಂದಿನ ಭಾಗವು ಹುಡುಗಿಯರನ್ನು ಉದ್ರೇಕಗೊಳಿಸುವಂತಹ ಸೂಕ್ಷ್ಮ ಭಾಗಗಳಲ್ಲಿ ಒಂದಾಗಿರುತ್ತದೆ.

ಪಾದ

ಪಾದ

ನಿಮ್ಮ ಸಂಗಾತಿ ಆಯಾಸಗೊಂಡಾಗ ನೀವು ಮಾಡಬಹುದಾದ ಅತ್ಯಂತ ಆನಂದ ತರುವಂತಹ ಕೆಲಸವೆಂದರೆ ಅದು ಪಾದಗಳಿಗೆ ಮಸಾಜ್ ಮಾಡುವುದು! ಇದು ಮೊದಲು ವಿಶ್ರಾಂತಿಯನ್ನು ನೀಡುತ್ತದೆ, ನಂತರ ಉತ್ತಮ ಮೂಡ್ ಸಹ ನೀಡುತ್ತದೆ. ಜೊತೆಗೆ ಪಾದಗಳಿಗೆ ನೀಡುವ ಮಸಾಜ್‌ನಿಂದ ಆಕೆಯ ಹೃದಯ ನಿಮ್ಮ ಕುರಿತಾಗಿ ಕೃತಜ್ಞತೆ ವ್ಯಕ್ತಪಡಿಸುತ್ತದೆ.
ಯಾವಾಗ ಆಕೆಗೆ ನಿಮ್ಮ ಬಗ್ಗೆ ಒಳ್ಳೆಯ ಭಾವನೆ ಬರುತ್ತದೆಯೋ, ಆಗ ನೀವು ಆಕೆಯೊಂದಿಗೆ ಸರಸ ಸಲ್ಲಾಪವೇನು? ಸಂಭೋಗದಲ್ಲಿ ಸಹ ತೊಡಗಬಹುದು. ಅದಕ್ಕಾಗಿ ಈ ಮೇಲೆ ತಿಳಿಸಿರುವ ಸ್ಪರ್ಶ ಕಲೆಯನ್ನು ಕರಗತ ಮಾಡಿಕೊಳ್ಳಿ ಮತ್ತು ಅದನ್ನು ಪ್ರಯೋಗಿಸಿ!

 
English summary
There are so many other places in her body which can be touched with love. And your touch will surely offer a better impact. Here are some places to start off with.
Story first published: Thursday, May 4, 2017, 23:14 [IST]

Get Notifications from Kannada Indiansutras