ಬೆಂಗಳೂರು, ಜುಲೈ 25: ಭಗವದ್ಗೀತೆಯ ಮಹತ್ವವನ್ನು ಭಗವದ್ಗೀತೆಯ ಅಭಿಯಾನವು ಹಾಳು ಮಾಡುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎ.ಜೆ ಸದಾಶಿವ ವಿಷಾದ ವ್ಯಕ್ತಪಡಿಸಿದರು.ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗಶ್ರೀ ಕಲಾ ಸಂಸ್ಥೆ , ದಯಾನಂದ ಸಾಗರ್ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ದಯಾನಂದ ಸಾಗರ್ ಸ್ಮರಣಾರ್ಥ ರಾಜ್ಯಮಟ್ಟದ ಸಾಂಸ್ಕೃತಿಕ ರಂಗೋತ್ಸವ ಕಾರ್ಯಕ್ರಮದಲ್ಲಿ ಭಾಗವಹಸಿ ಅವರು ಮಾತನಾಡಿದರು.ಜನರು ಭಗವದ್ಗೀತೆಯನ್ನು ಜ್ಞಾನಕ್ಕಿಂತ ಭಕ್ತಿಯಿಂದ ನೋಡುತ್ತಾರೆ. ನಿಸ್ಪ್ರಹ ಪ್ರವಚನದಿಂದ ಆಗುವ ಪರಿಣಾಮ ಸರ್ಕಾರ ಆದೇಶಿಸಿರುವ ಭಗವದ್ಗೀತೆ ಅಭಿಯಾನದಿಂದ ಆಗುವುದಿಲ್ಲ ಎಂದರು. ಪ್ರತಿಯೊಬ್ಬರು ಮಾತೃ ಭಾಷೆ ಕನ್ನಡದ ಮೇಲೆ ಅಭಿಮಾನವನ್ನು ಇಟ್ಟುಕೊಳ್ಳುವ ಮೂಲಕ ಭಾಷೆಯನ್ನು ಉಳಿಸಿ, ಬೆಳೆಸಿ, ಅಭಿವೃದ್ಧಿಗೊಳಿಸಬೇಕು ಎಂದರು.ಈ ಸಂದರ್ಭದಲ್ಲಿ ನ್ಯಾಯಮೂರ್ತಿ ವೆಂಕಟಾಚಲಯ್ಯ, ಅಧ್ಯಾತ್ಮಿಕ ಚಿಂತಕ ಪಾವಗಡ ಪ್ರಕಾಶ ರಾವ್, ಕಸಾಪ ಅಧ್ಯಕ್ಷ ನಲ್ಲೂರು ಪ್ರಸಾದ್, ಚಿತ್ರನಟ ದೊಡ್ಡಣ್ಣ, ನಿರ್ದೇಶಕ ಪಿ.ಶೇಷಾದ್ರಿ, ವೈದ್ಯ ಡಾ.ಕೆ ವೆಂಕಟರಮಣ, ಜಾನಪದ ರಂಗಭೂಮಿ ಕಲಾವಿದೆ ಅನುಪಮ ಹೊಸಕೆರೆ ಇವರುಗಳು ಸಾಗರ್ ಪ್ರಶಸ್ತಿಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ಜ್ಯೋತಿಷಿ ಸಚ್ಚಿದಾನಂದಬಾಬು, ಇಸ್ಕಾನ್ ದೇವಾಲಯದ ತಿರು, ದಯಾನಂದ ಸಾಗರ್ ಪ್ರತಿಷ್ಠಾನದ ಪ್ರೇಮಚಂದ್ರ ಸಾಗರ್ ಉಪಸ್ಥಿತರಿದ್ದರು.
Indiansutras - Get Notifications. Subscribe to Kannada Indiansutras.
Bhagavad Gita introduction in schools not a good idea, Bhagavad Gita will lose its sanctity said Former chief justice S J Sadashiva in Bangalore on July 24.