•  

ಪುರುಷನ ಉದ್ರೇಕಿಸುವ ಕಲೆ ಕಲಿತವಳೆ ಮದನಾರಿ!

Array
Sensual Tips to Woman to turn men ON
 
ಏಕಾತಾನತೆ ಆದ್ರೆ ಎಲ್ಲವೂ ಬೋರ್ ಆಗುತ್ತದೆ ನಿಜ. ಅದರೆ, ಪುರುಷರಂತೆ ಕಾಮನ್ ಆಗಿ ಕಾಮದಾದುರತೆ ತೋರುವ ಧೈರ್ಯ ಮಾನಿನಿಯರಿಗೆ ಕಮ್ಮಿ. ಲೈಂಗಿಕ ಕ್ರಿಯೆಯಲ್ಲಿ ಪುರುಷರಿಗೆ ಆತುರ ಜಾಸ್ತಿ, ಮಿಸ್ಟೇಕ್ಸ್ ಜಾಸ್ತಿ. ಆದರೆ, ಹೆಣ್ಣು ಜಾಣೆ, ತನ್ನ ತಪ್ಪುಗಳನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಅಮಾಯಕತ್ವದ ಶ್ರೀರಕ್ಷೆಯಲ್ಲಿ ಪುರುಷನನ್ನು ಬಂಧಿಸಿಬಿಡುತ್ತಾಳೆ.

ಆದರೂ, ಸೆಕ್ಸ್ ವಿಷಯದಲ್ಲಿ ಹೆಣ್ಣಿಗೂ ಸಲಹೆ, ಸೂಚನೆಗಳು ಬೇಕಾಗುತ್ತದೆ. ನಿರಾಸಕ್ತ ಪುರುಷರನ್ನು ಉದ್ರೇಕಿಸಿ ಮನತಣಿಸಿಕೊಂಡು ಸುಖ ಹಂಚಿಕೊಳ್ಳುವ ಕಲೆ ಕಲಿತು ಆಕೆ ಮದನಾರಿಯಾಗಿ ಮೆರೆಯಬೇಕಾಗುತ್ತದೆ. ಏಕೆಂದರೆ ಸೆಕ್ಸ್ ಎಂಬುದು ಪುರುಷರಿಗೆ ಸುಖದ ವಿಷ್ಯವಾದರೆ, ಮಹಿಳೆಗೆ ಪ್ರತಿಷ್ಠೆಯ ವಿಷ್ಯ. ಸೋ, ಕೆಲವು ಟಿಪ್ಸ್ ಇಲ್ಲಿದೆ ಆಚರಿಸಿ, ಆನಂದಿಸಿ...

* ಆತುರ ಬೇಡ: ಕಾಮಪ್ರಕ್ರಿಯೆಯಲ್ಲಿ ಪುರುಷರೇ ಆತುರಗಾರರಾದರೂ, ನಿಮ್ಮ ಸಂಗಾತಿಯ ಮನ ಇಂಗಿತವನ್ನು ಅರಿತು, ಸಮಯಕ್ಕೆ ಸರಿಯಾಗಿ ವಿವಸ್ತ್ರಳಾಗುವ ಕಲೆ ಸಿದ್ಧಿಸಿಕೊಳ್ಳಿ.

* ಲೈಂಗಿಕ ಕ್ರಿಯೆಗೆ ತೊಡಗುವ ಮುನ್ನ ಅತಿ ಹೆಚ್ಚು ನಾಚಿ, ಅತಿ ಬಿಗುಮಾನ, ಅತಿ ಆತ್ಮವಿಶ್ವಾಸ ಎಲ್ಲವೂ ಅನರ್ಥಕ್ಕೆ ಕಾರಣ. ಬೆಡ್ ಶೀಟ್ ಎಳೆದುಕೊಂಡು ಅಥವಾ ಕರ್ಟನ್ ಮರೆಯಲ್ಲಿ ಬಟ್ಟೆ ಕಳಚಿ ಅರಸಿಕತನ ತೋರಬೇಡಿ.

* ಸರ್ವ ಸಮರ್ಪಣೆಗೆ ಸಿದ್ಧ ಎಂಬ ಭಾವ ನಿಮ್ಮಲ್ಲಿರಲಿ. ಸಂಗಾತಿಯ ಸೆಳೆಯುವ, ಸೆಳೆದು ಕೈವಶ ಮಾಡಿಕೊಳ್ಳುವ ಕಲೆ ಮಾನಿನಿಗೆ ತಾನಾಗೇ ಇರುತ್ತದೆ ಆದರೆ, ಸೂಕ್ತ ಸಮಯಕ್ಕೆ ಪ್ರಕಟಗೊಳಿಸಬೇಕು ಅಷ್ಟೇ.

* ಅಚ್ಚರಿ ಮೂಡಿಸಿ: ಏಕತಾನತೆಯನ್ನು ದೂರಾಗಿಸಲು ನಿಮ್ಮ ಸಂಗಾತಿಗೆ ಸಣ್ಣ ಸಣ್ಣ ಸರ್ಪ್ರೈಜ್ ನೀಡಿ. ಎಂದೂ ತೊಟ್ಟಿರದ ಸೆಕ್ಸಿ ಡ್ರೆಸ್ ಹಾಕಿಕೊಳ್ಳಿ. ಆಫೀಸ್ ನಿಂದ ದಣಿದು ಬರುವ ಪತಿಯನ್ನು ಮೂಡ್ ಗೆ ಕರೆತರಲು ನಿಮ್ಮ ಡ್ರೆಸ್ ಪ್ರಮುಖ ಅಸ್ತ್ರವಾಗಬಲ್ಲದು.

* ಸ್ವಪ್ರತಿಷ್ಠೆ ಬಿಟ್ಟು ಬಿಡಿ: ಇವು ಜಗದೇಕ ಸುಂದರಿ ಇರಬಹುದು. ಆದರೆ, ಲೈಂಗಿಕ ಕ್ರಿಯೆ ವಿಷಯಕ್ಕೆ ಬಂದರೆ ಪರಸ್ಪರ ಕೊಟ್ಟು ತಗೋ ಕ್ರಿಯೆಗೆ ಶರಣಾಗಲೇಬೇಕು. ನಾನೇ ಗ್ರೇಟ್ ಎನ್ನುವಂತೆ ಬೀಗಿದರೆ, ಆತುರುಗಾರ ಪುರುಷನಿಗೆ ಸಹಿಸಲು ಅಸಾಧ್ಯವಾದೀತು. ಇಬ್ಬರು ಸಮಾನರು ಎಂಬ ಅಂಶ ನೆನಪಿಡಿ. ಆಗ ಮಾತ್ರ ಸ್ವರ್ಗ ಸುಖ ಪಡೆಯಲು ಸಾಧ್ಯ.

* ಅರಿಯದ ಅಜ್ಞಾನಿ ಸಂಗಾತಿಗೆ ಸ್ಟೆಪ್ ಬೈ ಸ್ಟೆಪ್ ಕಾಮಪಾಠ ಮಾಡುತ್ತಾ ಪಳಗಿಸಿಕೊಳ್ಳಿ. ಒಂದು ಮಾದಕ ನಗೆ, ಮುತ್ತು ಆತನನ್ನು ಈ ಲೋಕದಿಂದ ಬೇರೆಡೆ ವಿರಹಿಸುವಂತೆ ಮಾಡಬಲ್ಲಗು. ಅದರೆ ಪುರುಷನಿಗಿಂತ ಅತಿಯಾದ ಉತ್ಸುಕತೆ ತೋರಿ, ಅನರ್ಥಕ್ಕೆ ಕಾರಣರಾಗಬೇಡಿ.

* ಶುಚಿತ್ವಕ್ಕೆ ಮಹತ್ವ ನೀಡಿ: ಹೊಸ ಒಳ ಉಡುಪು ಧರಿಸಿ, ಖಾಸಗಿ ಸ್ಥಳಗಳನ್ನು ಶುಚಿಗೊಳಿಸುವುದನ್ನು ಮರೆಯಬೇಡಿ. ಅಗತ್ಯವಿದ್ದರೆ ಸಂಗಾತಿಗೆ ಒಪ್ಪಿಗೆ ಇದ್ದರೆ ಮಾತ್ರ ಹೆಚ್ಚಿನ ಸೌಂದರ್ಯವರ್ಧಕಕ್ಕೆ ಮೊರೆ ಹೋಗಿ. ಹೆಚ್ಚು ಮೇಕಪ್ ಮಾಡಿಕೊಂಡು ಶೂಟಿಂಗ್ ಗೆ ರೆಡಿಯಾದಂತೆ ಪೋಸ್ ಕೊಡಬೇಡಿ. ಪುರುಷನನ್ನು ಸೆಳೆಯಲು ನಿಮ್ಮ ನೋಟ ಸಾಕು ನಂತರದ ಕ್ರಿಯೆಗೆ ಮೈಮಾಟವೇ ಬೇಕು.

* ಸ್ಪರ್ಶದಲ್ಲೇ ಇಲ್ಲಾ ಇದೆ: ಚುಂಬನ ಹೇಗೆ ಸಂಭೋಗಕ್ಕೆ ನಾಂದಿ ಹಾಡುತ್ತದೆಯೋ, ಸ್ಪರ್ಶ ಸುಖ ಕೂಡಾ ಮನದಲ್ಲಿ ಹಲವು ಕಾಮನೆಗಳನ್ನು ಏಳುವಂತೆ ಮಾಡುತ್ತದೆ. ನಿನ್ನ ಜೊತೆ ನಾನಿದ್ದೇನೆ ಎಂಬ ಭಾವದಿಂದ ಹಿತವಾದ ಸ್ಪರ್ಶ ನೀಡಿ ಹುರಿದುಂಬಿಸಿ. ಎಂಥಾ ಬೆಂಕಿನವಾಬನಾದರೂ ಮಂಜುಗೆಡ್ಡೆಯಂತೆ ಕರಗಿ ಬಿಡುತ್ತಾನೆ.

* ಮಲಗುವ ಕೋಣೆ ಬಗ್ಗೆ: ಕೋಣೆ ಸಿಂಗರಿಸುವುದಕ್ಕಿಂತ ಸ್ವಚ್ಛವಾಗಿರಲಿ. ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಮಂದ ಬೆಳಕು, ಪ್ರಖರ ಬೆಳಕು ಆತನಿಗೆ ಹೇಗೆ ಬೇಕೋ ಹಾಗೆ ಅರೇಂಜ್ ಮಾಡಿ. ಸ್ಟ್ರಿಪಿಂಗ್ ಇಷ್ಟಪಡುವ ಸಂಗಾತಿಯಾದರೆ, ಲೈಟ್ ಆನ್ ಮಾಡಿ ಮುಂದೆ ನಿಮ್ಮ ಟ್ಯಾಲೆಂಟ್ ತೋರಿಸಿ, ಮೊದಲೆ ಹೇಳಿದಂತೆ ಕಾಮಕ್ರೀಡೆ ಟ್ವೆಂಟಿ 20 ಮ್ಯಾಚ್ ಅಲ್ಲ. ಆತುರಾತುರವಾಗಿ ಮುಗಿಸಲು.

* ಸಂಭೋಗ ಸುಖ ಅನುಭವಿಸಿದ ತಕ್ಷಣವೆ ನಿದ್ರೆಗೆ ಜಾರುವುದು ಬಹುತೇಕ ಪುರುಷರ ಜಾಯಮಾನ. ಆದರೆ, ಇದನ್ನು ಸಹಿಸದ ಮಹಿಳೆಯರು ಗೊಣಗುಟ್ಟುವುದು, ಸಂಗಾತಿಯ ಸುಖನಿದ್ರೆಯನ್ನು ಹಾಳು ಮಾಡುವುದು ಸಾಮಾನ್ಯವಾಗಿ ಸಮಸ್ಯೆಗೆ ಕಾರಣವಾದೀತು.

ಈ ರೀತಿ ಚರ್ಯೆ ಹೆಚ್ಚು ಆಯಾಸಗೊಳ್ಳದ ಮಹಿಳೆಯರಲ್ಲಿ ಕಂಡುಬರುತ್ತದೆ. ಆದರೆ, ಪುರುಷರೇನು ಸೆಕ್ಸ್ ಮೆಷಿನ್ ಗಳಲ್ಲ ಎಂಬುದನ್ನು ನೆನಪಿಡಿ. ಈ ವಿಷಯದಲ್ಲಿ ಮಾತ್ರ ಪುರುಷರನ್ನು ಹಿಂಬಾಳಿಸುವುದನ್ನು ಸ್ವಲ್ಪ ಕಲಿಯಿರಿ.

ನೆನಪಿಡಿ, ನಿಮ್ಮ ಮೃದುತ್ವದ ಲಾಭ ಪಡೆದು, ಕಾದ ಕುಲುಮೆಯಂತಿರುವ ಪುರುಷರ ಅಂಗಾಗಗಳನ್ನು ಕರಗಿಸಿಬಿಡಿ. ಯಾವುದೇ ಮುಜುಗರವಿಲ್ಲದೆ ಸಮಸ್ಯೆಗಳನ್ನು ಹಂಚಿಕೊಂಡು ಸಮಾಧಾನ ಕಂಡುಕೊಂಡರೆ ಮಾತ್ರ ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದು.

English summary
If you are losing the interest and craze then it is time to reignite the passion in him. Get him into the mood for lovemaking. With the passage of time, men can get bored of the monotonous lovemaking so try these turn on sensual tips to increase his drive and get him in mood!
Story first published: Wednesday, November 30, 2011, 12:46 [IST]

Get Notifications from Kannada Indiansutras