ರಕ್ತದಲ್ಲಿನ ಸಕ್ಕರೆ ಪ್ರಮಾಣದ ಬಗ್ಗೆ ಎಚ್ಚರಿಕೆ, ವಿಟಮಿನ್, ಪ್ರೊಟಿನ್ ಗಳ ಸೇವನೆ ಇವೇ ಕೆಲವು ಅಂಶಗಳು ಸೇರಿವೆ. ಆದರೆ, ಇದಕ್ಕಾಗಿ ಪ್ರತ್ಯೇಕ ಚಾರ್ಟ್ ತಯಾರಿಸಿಕೊಂಡು ತಲೆ ಕೆಡಿಸಿಕೊಂಡು ಕೂರಬೇಕಿಲ್ಲ.
* ಕೆಲ ತರಕಾರಿ ಹಾಗೂ ಖಾದ್ಯಗಳಲ್ಲಿ ವಿಟಮಿನ್ನುಗಳು ಪ್ರಣಯದಾಟಕ್ಕೆ ಪುಷ್ಟಿ ನೀಡುತ್ತದೆ ಎಂದು ತಿಳಿದು ಬರುತ್ತದೆ.
ಉದಾಹರಣೆಗೆ ತತ್ತಿಯಲ್ಲಿನ ವಿಟಮಿನ್ನುಗಳು ಮಾನಸಿಕ ಒತ್ತಡವನ್ನು ಕಡಿಮೆಮಾಡುತ್ತವೆ.ಇದರಿಂದ ಅವಧಿಗೆ ಮುಂಚೆ(ಕ್ಲೈಮಾಕ್ಸ್) ವೀರ್ಣ ಸ್ಖಲನವಾಗುವುದು ತಪ್ಪುತ್ತದೆ.
* ವೆನ್ನಿಲ್ಲಾ ಐಸ್ ಕ್ರೀಮ್ ನಲ್ಲಿರುವ ಕ್ಯಾಲ್ಸಿಯಂ ನಿಮ್ಮ ಉದ್ರೇಕಾವಸ್ಥೆಯನ್ನು ಕಾಯ್ದಿಡುತ್ತದೆ. * ಧಾನ್ಯಗಳಲ್ಲಿನ ಫೋಲಿಕ್ ಆಮ್ಲ ರಕ್ತಧಮನಿಗಳನ್ನು ಶುದ್ಧಗೊಳಿಸಿ, ರಕ್ತ ಸಂಚಾರ ಸುಗಮಗೊಳಿಸುತ್ತದೆ.
* ಬೂದುಗುಂಬಳಕಾಯಿ, ನುಗ್ಗೇಕಾಯಿ, ಸೂರ್ಯಕಾಂತಿ(ಎಣ್ಣೆ ಅಥವಾ ಬೀಜ), ನಾರಿನಂಶವಿರುವ ಅಗಸೆಯ ಬೇರು, ಸೆಣಬು ಬಳಕೆ ಹಾಗೂ ಎಳ್ಳು ಸೇವನೆ ಅಗತ್ಯ.
* ನಾರಿನಂಶವಿರುವ ಅಗಸೆ, ಎಳ್ಳು ಮುಂತಾದವುಗಳ ಎಣ್ಣೆಗಳನ್ನು ಅಡುಗೆಯಲ್ಲಿ ಬಳಸಬಹುದು. ಅಧಿಕಪ್ರಮಾಣದ ಸತುವಿನ ಆಹಾರವನ್ನು ಸೇವಿಸಬಹುದು.
* ಮಾಂಸಹಾರಿಗಳು ಮೀನು, ಟರ್ಕಿ, ಕೋಳಿ, ಮೀನುಗಳಲ್ಲಿ ಟೂನಾ, ಮಕ್ಯಾರೆಲ್, ಸಾಲ್ಮಾನ್ ಜಾತಿಯ ಮೀನುಗಳು ಪುಷ್ಟಿದಾಯಕ ಎನಿಸಿದೆ.
ಉಳಿದಂತೆ ಕಾಮನ್ ಆಗಿ ಸಕ್ಕರೆ ಹಾಗೂ ಸಿಹಿ ಪದಾರ್ಥ ಹೆಚ್ಚಿರುವ ಖಾದ್ಯಗಳನ್ನು ವರ್ಜಿಸಿ, ನಿಮ್ಮ ದೇಹದ ಕೊಬ್ಬಿನಾಂಶ ಸಮತೋಲನಕ್ಕೆ ಇದು ಅವಶ್ಯ. ಅಲ್ಲದೆ, ಇದು ಇತರೆ ಕಾಯಿಲೆಗಳಿಂದಲೂ ನಿಮ್ಮ ದೇಹವನ್ನು ಕಾಯುತ್ತದೆ.
* ಕರದ ಎಣ್ಣೆ ಪದಾರ್ಥ, ಸಂಸ್ಕರಿತ ಮಾಂಸ ಹಾಗೂ ಕೊಬ್ಬಿನಂಶ ಹೆಚ್ಚಿರುವ ಆಹಾರ ಪದಾರ್ಥಗಳು ನಿಮ್ಮ ಉತ್ಸುಕತೆಗೆ ಮಾರಕ.
ಉತ್ತಮ ಲೈಂಗಿಕ ಕ್ರಿಯೆಗೆ ದೇಹದ ಆರೋಗ್ಯ, ಆಹಾರ ಸೇವನೆ ಅತಿ ಅವಶ್ಯ. ಇದಕ್ಕಾಗಿ ವಾಮಮಾರ್ಗಗಳನ್ನು ಬಳಸಿ, ದೇಹವನ್ನು, ಹಣವನ್ನು ಹಾಳು ಮಾಡುವುದರ ಬದಲು ಆಹಾರದಲ್ಲಿ ದೊರೆಯುವ ಖನಿಜಾಂಶ, ಪ್ರೊಟಿನ್, ವಿಟಮಿನ್ನುಗಳನ್ನು ಸೇವಿಸಿ.
ಆಹಾರ ಸೇವನೆಯ ಜೊತೆಗೆ ಕೊಂಚ ವ್ಯಾಯಮವೂ ಅಗತ್ಯ. ಇದರಿಂದ ದೇಹದ ಸಮತೋಲನ ಕಾಯ್ದುಕೊಳ್ಳಬಹುದು. ಕಾಮಕ್ರೀಡೆಯಲ್ಲಿ ಸುಲಭವಾಗಿ ಜಯಗಳಿಸಬಹುದು.