•  

ಕಾಮಸೂತ್ರ: ಒಂದು ಮುತ್ತಿನ ಗಮ್ಮತ್ತು

Array
Kissing Facts
 
ಮುತ್ತಿಡುವುದು. ಸುರತ ಕ್ರೀಡೆಗೆ ಆರಂಭದ ಸೂಚಕ, ಮುತ್ತು ನೀಡುವುದು ಒಂದು ಕಲೆ. ಅದು ಎಲ್ಲರಿಗೂ ಸುಲಭವಾಗಿ ತಕ್ಷಣಕ್ಕೆ ಸಿದ್ಧಿಸುವುದಿಲ್ಲ. ಆದರೆ, ಮುತ್ತಿನ ಮತ್ತಿಗೆ ಒಳಗಾಗಿ, ಒಳಗಾಗಿ ಅಭ್ಯಾಸ ಬಲದಿಂದ ಎಲ್ಲವೂ ತಾನೇ ತಾನೇಗೆ ಅಧರಗತವಾಗಿ ಬಿಡುತ್ತದೆ. ಮುತ್ತಿಗೆ ಮತ್ತೇರಿಸುವುದೊಂದು ಗುಣವಲ್ಲ. ಮುತ್ತಿಡುವುದರಿಂದ ಅನೇಕ ದೈಹಿಕ ಬದಲಾವಣೆಗಳಾಗುತ್ತವೆ ಹಾಗೂ ಆರೋಗ್ಯಕ್ಕೆ ಅವಶ್ಯ ಕೂಡಾ. ಕೇವಲ ಒಂದು ಮುತ್ತಿನಿಂದ ಇಷ್ಟೆಲ್ಲಾ ಪ್ರಯೋಜನ ಇದ್ಯಾ ಎಂದು ಹುಬ್ಬೇರಿಸುವಂತೆ ಮಾಡುವ ಕೆಲವು ಸಂಗತಿಗಳು ಇಲ್ಲಿವೆ.

ಇದಕ್ಕೂ ಮುನ್ನ ಮುತ್ತಿಡುವ ಮೋಹಕ ವಿಧಾನದ ಬಗ್ಗೆ ನಾಲ್ಕಾರು ಸಾಲುಗಳು.ಸಂಭೋಗ ಪರಾಕಾಷ್ಠೆಗೆ ಮುತ್ತಿನ ಮತ್ತೇ ನಾಂದಿ. ಹೆಂಗಳೆಯರನ್ನು ಕೆರಳಿಸುವುದು' ಒನ್ ಸಿಂಪಲ್ ಕಿಸ್' ಎನ್ನುವುದನ್ನು ಮಾತ್ರ ಮರೆಯಬೇಡಿ. ಮುತ್ತಿಡುವುದರಲ್ಲಿ ಪರಿಣಿತನಾದವನು ಮಾನಿನಿಯ ನಿದಿರೆ ಸುಲಭದಲ್ಲಿ ಕೆಡಿಸಬಲ್ಲ.

ಬಲಾತ್ಕಾರವಾಗಿ ತುಟಿಗೆ ತುಟಿ ಸೇರಲು ಹಾತೊರೆಯಬೇಡಿ. ಮುತ್ತಿಡಲು ನಾನಾ ಅಂಗಗಳಿವೆ. ನಿಧಾನಗತಿಯಿಂದ ಒಂದೊಂದೇ ಅಂಗವನ್ನು ವಶಪಡಿಸಿಕೊಂಡ ನಂತರ ಅಂತಿಮ ಮಧುವನ್ನು ಹೀರಲು ಮುಂದಾಗಿ, ಆಗ ಆಕೆ ತಾನಾಗೇ ಶರಣಾಗುವಳು. ಮುತ್ತಿನ ಮತ್ತೇರಿಸಿಕೊಳ್ಳುವುದರಲ್ಲಿ ಹೆಂಗಳೆಯರೇ ಹೆಚ್ಚು ಜಾಣೆಯರಂತೆ.

ಮುಂದಿನ ಬಾರಿ ಮುತ್ತಿಡಲು ಸಿದ್ಧತೆ ಈ ಕೆಳಗಿನ ಅಂಶಗಳು ನಿಮ್ಮ ಮನಸ್ಸಿನಲ್ಲಿ ಸುಳಿದಾಡಿದರೆ ನಾವು ಜವಾಬ್ದಾರಲ್ಲ.

* ನಿಮಗೆ ಗೊತ್ತಾ, ಕಿಸಿಂಗ್ ನಿಂದ ದೇಹ ತೂಕ ಇಳಿಸಬಹುದು ಹಾಗೂ ಕ್ಯಾಲೋರಿ ಕಮ್ಮಿ ಮಾಡಿ ಚಟುವಟಿಕೆಯಿಂದ ಓಡಾಡಬಹುದು. ಆದರೆ, ನಿಮ್ಮ ಸಂಗಾತಿ ಜೊತೆ ಉತ್ಕಟವಾಗಿ ಚುಂಬನ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು.

* ತುಟಿಗಳು ಕೈಬೆರಳಿನಂತಲ್ಲ. ಹೆಣ್ಣಿನ ತುಟಿಗಳನ್ನು ಅತ್ಯಂತ ಉದ್ರೇಕಕಾರಿ ವಲಯ ಎನ್ನಬಹುದು. ಸ್ಪರ್ಶಸುಖಕ್ಕೆ ಪುರುಷರು ಹಾತೊರೆಯುವಂತೆ, ಹೆಂಗಳೆಯರೂ ಕೂಡಾ ಕಾತುರರಾಗಿರುತ್ತದೆ. ಆದರೆ, ಸ್ಪರ್ಶದಲ್ಲೂ ಅರ್ಜುನನಂತೆ ಕಲೆಗಾರಿಕೆ ಮುಖ್ಯ. ಭೀಮನಂತೆ ಘರ್ಜಿಸಿ ಮುನ್ನುಗ್ಗುವಂತಿಲ್ಲ. ಅಧರಗಳ ಸೂಕ್ಷ್ಮತೆ ಹಾಗೂ ಮೃದು ಸಂವಹನಕ್ಕೆ ತಕ್ಕಂತೆ ಕುಣಿಯುವುದು ಅಗತ್ಯ.

* ಕಿಸ್ ಗೂ ದಂತಕ್ಷಯಕ್ಕೂ ಸಂಬಂಧವಿದೆ ಎಂದರೆ ಅಚ್ಚರಿಯಾಗಬಹುದು. ಉತ್ತಮವಾದ ಚುಂಬನಪಟುವಿಗೆ ದಂತ ಸಂಬಂಧಿ ಸಮಸ್ಯೆಗಳು ಕಮ್ಮಿ. ದಂತ ಸಮಸ್ಯೆ ಪರಿಹರಿಸಿಕೊಳ್ಳಬೇಕೆ ಒಂದು ಕಿಸ್ ಮಾಡಿ ಸಾಕು ಎಂಬ ಸಲಹೆ ಎಲ್ಲರೂ ಪಾಲಿಸಿದರೆ, ಡೆಂಟಿಸ್ಟ್ ಗಳ ಜೋಬಿಗೆ ಕತ್ತರಿ ಗ್ಯಾರಂಟಿ.

* ಎಲ್ಲಾ ಬ್ಯಾಕ್ಟೀರಿಯಾಗಳು ತೊಂದರೆ ಕೊಡುವುದಿಲ್ಲ. ಕೆಲವು ಉಪಯುಕ್ತ ಬ್ಯಾಕ್ಟೀರಿಯಾಗಳು ಇರುತ್ತವೆ. ಪರಸ್ಪರ ಕಿಸ್ ಮಾಡುವ ಮೂಲಕ ಬ್ಯಾಕ್ಟೀರಿಯಾ ವಿನಿಮಯವಾಗುತ್ತದೆ. ಬಾಯಿ ಎಂಬ ಬ್ರಹ್ಮಾಂಡದಲ್ಲಿ ಸುಮಾರು 10 ಮಿಲಿಯನ್ ಬ್ಯಾಕ್ಟೀರಿಯಾ ಇರುತ್ತದೆ ಎಂಬುದು ಒಂದು ಅಂದಾಜು.

* ಒತ್ತಡ ನಿವಾರಣೆಗೆ ಮುತ್ತಿಡುವುದೇ ಮಹಾ ಮದ್ದು. ಅದರಲ್ಲೂ ಹೆಂಗಳೆಯರು ಅನುಭವಿಸುವ ಮಾನಸಿಕ, ಭಾವನಾತ್ಮಕ ನೋವುಗಳನ್ನು ಕ್ಷಣದಲ್ಲಿ ನಿವಾರಿಸುವ ಶಕ್ತಿ ಚುಂಬನಕ್ಕಿದೆ. ಆದರೆ, ಒತ್ತಡದಲ್ಲಿರುವಾಗ ಪರಸ್ಪರ ಹಿತವಾದ ಚುಂಬನ ಸಿಕ್ಕರೆ ಒಳ್ಳೆಯದು. ಅದರ ಬದಲು ಅವಸರಕ್ಕೆ ಅಥವಾ ಏನೋ ಮುತ್ತು ನೀಡಬೇಕಲ್ಲ ಎಂದು ನೀಡಿದರೆ ಇನ್ನಷ್ಟು ಮನಸ್ಸು ಕೆಡುವುದು ಖಂಡಿತ.

* ಮುತ್ತಿಡುವುದು ಒಂದು ರೀತಿ ಸಾಂಕ್ರಮಿಕ ಕಾಯಿಲೆಯೂ ಆಗಬಹುದು. ಆದರೆ, ಕಿಸ್ ಮಾಡುವಾಗ ಮುಜುಗರ ಇರಲೇ ಬಾರದು. ಜಗತ್ತಿನ ಪರಿವೇ ಇಲ್ಲದೆ ಕೆಲ ನಿಮಿಷಗಳ ಕಾಲ ದೀರ್ಘ ಚುಂಬನ ಸಾಧಿಸಿದರೆ, ಅರ್ಧ ಗಂಟೆ ಧ್ಯಾನ ಮಾಡಿ ನಿಶ್ಚಿಂತೆ ಫಲ ಉಂಡಷ್ಟೇ ಸುಖ ಸಿಗುತ್ತದೆ.

* ಒಪ್ಪಿಗೆ ಇಲ್ಲದೆ ಯಾರಿಗೂ ಕಿಸ್ ಮಾಡಬೇಡಿ. ಇದರಿಂದ ಅಕಸ್ಮಾತ್ ಕಿಸ್ ಪಡೆದ ವ್ಯಕ್ತಿ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯಪಡುವಂತಾಗುತ್ತದೆ. ಯಾರು ಯಾರಿಗೆ ಎಲ್ಲೆಲ್ಲಿ ಮುತ್ತಿಡಬೇಕು ಅಲ್ಲೇ ಮುತ್ತಿಡಿ. ಭಾವನೆಗಳ ಭರದಲ್ಲಿ ಮುನ್ನುಗ್ಗಬೇಡಿ. ಇದು ಅನರ್ಥಕ್ಕೆ ದಾರಿ ಮಾಡಿತು.

ಸೂಚನೆ: ನಿಮ್ಮ ನಿಮ್ಮ ಸಂಗಾತಿಗಳ ಅಥವಾ ಅತಿ ನಂಬಿಕೆಯ ವ್ಯಕ್ತಿಗಳ ಜೊತೆ ಮೇಲೆ ಹೇಳಿರುವ ಆಚರಣೆಗಳನ್ನು ಪ್ರಯೋಗಿಸಿ ಆನಂದಿಸಿ. ಸಾರ್ವಜನಿಕವಾಗಿ ಭಾವನೆಗಳನ್ನು ಹರಿಯಬಿಟ್ಟು ವ್ಯಥೆಪಡಬೇಡಿ.

English summary
Kissing Facts for those couples in love. It helps to enhance lovemaking for couples also warding off dental problems. kissing comes with a lot of affects which is proved to be good for one's health.
Story first published: Friday, February 11, 2011, 13:31 [IST]

Get Notifications from Kannada Indiansutras