
ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ತುಪ್ಪಕ್ಕೆ ಯಾಕ್ ಹುಡ್ಕೋದು ಅಲ್ವೆ? ಇಡೀ ದಿನ ಮನೆಯಲ್ಲಿ ದುಡಿಯುವ ಕೈಗಳಿಗೆ ಮೃದುತ್ವದ ಸುಖದ ಅನುಭವ ಬೇಕಾಗಿರುತ್ತದೆ. ಮೆಲ್ಲನೆ ಕೈಯನ್ನು ಒತ್ತುವುದು, ಸಾಕು ಎನ್ನುವವರೆಗೆ ಅಮುಕುವುದು... ಆ ಒಂದು ಟಚ್ಚಲೇ ಏನೋ ಮಾಂತ್ರಿಕತೆ ಅಡಗಿರುತ್ತದೆ. ಬೆರಳ ತುದಿಯನ್ನು ಚುಂಬಿಸುತ್ತ ಭುಜದವರೆಗೆ ಮುತ್ತಿನ ಸುರಿಮಳೆಗರೆಯಿರಿ, ಅದೇ ಕಾಮಚೇಷ್ಟೆಯನ್ನು ಕ್ಲೈಮ್ಯಾಕ್ಸ್ ವರೆಗೆ ಮುಂದುವರಿಸಿರಿ.
ಕ್ಲೈಮ್ಯಾಕ್ಸ್ ಹಂತ ತಲುಪುತ್ತಿದ್ದಂತೆ, ಕೈಮೇಲಕ್ಕೆ ಚಾಚಿ ಅಂಗಾತ ಮಲಗಿದ ಸಂಗಾತಿಯ ಮೃದುವಾದ ಅಂಗೈಗಳನ್ನು ನಿಮ್ಮ ಅಂಗೈಗಳಿಂದ ಆವರಿಸಿಕೊಂಡು ಹದ್ದುಮೀರಿ ಮುಲುಕಾಡುವುದು ಆಕೆಗೆ ನೀಡುವ ಸುಖವನ್ನು ದುಪ್ಪಟ್ಟು ಮಾಡುತ್ತದೆ. ಆದರೆ, ಒಂದು ಮಾತು ನೆನಪಿಡಿ, ಅಂಗೈಯಲ್ಲಿ ಸುಖದ ರಹಸ್ಯ ಅಡಗಿದೆ ಎಂದು ಬರೀ ಅದರತ್ತವೇ ಹೆಚ್ಚಿನ ಗಮನ ಹರಿಸಿದರೆ ಕೆಟ್ಟಿರೆಂದೇ ಅರ್ಥ. ಮಿಥುನ ರಾಶಿಯ ಸಂಗಾತಿಯನ್ನು ಕಾಮದಾಟಕ್ಕೆ ಅಣಿಗೊಳಿಸಲು ಅಂಗೈಯನ್ನು ರಮಿಸುವುದು ಮೊದಲನೇ ಹಂತವಷ್ಟೆ. ಮುಂದಿನ ಹಂತ ಹೇಗಿರಬೇಕೆಂದು ನೀವೇ ನಿರ್ಧರಿಸಿ. ಆಲ್ ದಿ ಬೆಸ್ಟ್.
ಓದಿರಿ : ಕರ್ಕಾಟಕ ರಾಶಿ ಮಹಿಳೆಯ ಲವ್ ಮೀಟರ್...