
ಅಮರ ಮಧುರ ಅನುಭವ ನೀಡುವ ಅಧರಗಳನ್ನು ನೋಡುತಲೆ ಗಂಡು ಜೇನು ಹೀರುವ ದುಂಬಿಯಂತಾಗುತ್ತಾನೆ, ಆ ಜೇನನು ಹೀರುತಲೆ ಲೋಕದ ಇರುವನ್ನು ಮರೆತು ಸ್ವರ್ಗದಲಿ ತೇಲಾಡಲು ಪ್ರಾರಂಭಿಸುತ್ತಾನೆ. ಕರ್ಕಾಟಕ ರಾಶಿಯ ಮಹಿಳೆಯ ಲೈಂಗಿಕತೆಯನ್ನು ಉದ್ದೀಪಿಸುವ ಕೇಂದ್ರವೇ ಅಂದವಾದ ಅಧರದಲ್ಲಿ ಅಡಗಿದೆ.
ಅಧರತತ್ತ ಒಂದು ತುಂಟ ನೋಟ, ಕಾಮನೆ ಕೆರಳಿಸುವಂತೆ ಬೆರಳ ತುದಿಯ ನರ್ತನ, ಜೇನನು ಹೀರಲು ದುಂಬಿಗೆ ಆಹ್ವಾನ, ಎಲ್ಲ ರಸಾಸ್ವಾದವನ್ನು ಒಮ್ಮೆಲೇ ಹೀರುವಂಥ ಸುದೀರ್ಘ ಚುಂಬನ... ಒಂದೊಂದೇ ಹಂತಗಳು ಪಲ್ಲಂಗದ ಮೇಲೆ ಮಲ್ಲಿಗೆಯ ಹೂವಿನ ಹಾಸಿಗೆಯನ್ನು ಹಾಸಿಬಿಡುತ್ತದೆ, ಸ್ವರ್ಗದ ಬಾಗಿಲು ತಾನಾಗಿಯೇ ತೆರೆದುಬಿಡುತ್ತದೆ.
ಕರ್ಕಾಟಕ ರಾಶಿಯ ಮಹಿಳೆಯನ್ನು ವಶಮಾಡಿಕೊಳ್ಳುವ ಇನ್ನೊಂದು ಕಾಮಾಸ್ತ್ರವೆಂದರೆ ರಸಿಕತನವನ್ನು ಜಾಗೃತಗೊಳಿಸುವ ಆಕೆಯ ಅಂದದ ಕುಚಗಳು. ಬೆತ್ತಲಾದ ಕುಚಗಳನ್ನು ಚುಂಬಿಸುವುದು, ಹಿತವಾಗುವಂತೆ ಮೆಲ್ಲಗೆ ಕಚ್ಚುವುದು, ಮರ್ದಿಸುವುದು, ಎದೆಯ ಅನುರಾಗವನ್ನು ಹೀರುವುದು ಕೂಡ ಆಕೆಗೆ ಇಷ್ಟ.
ಒಂದು ಭವ್ಯವಾದ ಮಿಲನ ಮಹೋತ್ಸವಕ್ಕೆ ಸಂಗಾತಿಯನ್ನು ಅಣಿಗೊಳಿಸಲು ಇದಕ್ಕಿಂತ ಇನ್ನೇನು ಬೇಕು? ಆಕೆಯ ಇಷ್ಟಗಳನ್ನು ತಿಳಿದು, ಹಿತಮಿತವಾದ ವರ್ತನೆಯೊಂದಿಗೆ ಕಾಮದಾಟಗಳನ್ನು ಆಡಿದರೆ ಕರ್ಕಾಟಕ ಸಂಗಾತಿಯನ್ನು ಪ್ರೇಮಪಾಶದಲ್ಲಿ ಬೀಳಿಸುವುದು ಅಷ್ಟು ಕಷ್ಟದ ಕೆಲಸವೇನಲ್ಲ. ಆದರೆ, ಆ ಬಗೆಯ ರಸಿಕತನ ನಿಮ್ಮಲ್ಲಿರಬೇಕಷ್ಟೆ.
ನಿರೀಕ್ಷಿಸಿ : ಕೆರಳಿದ ಸಿಂಹಿಣಿಯನ್ನು ಪಳಗಿಸುವುದು ಹೇಗೆ?