•  

ಸುರತ ಕ್ರೀಡೆಗೆ ಬೇಕು ಸಮತೂಕದ ಆಹಾರ

Array
Healthy Diet For Good Sex
 
ಸಾಮಾನ್ಯವಾಗಿ ನಿಮ್ಮ ಪರಿಪೂರ್ಣ ಲೈಂಗಿಕ ಆರೋಗ್ಯಕ್ಕೆ ಈ ಮಾತ್ರೆ ನುಂಗಿ, ಈ ಪಾನೀಯ ಕುಡಿಯಿರಿ ಎಂದೆಲ್ಲಾ ಜಾಹೀರಾತು ನೋಡಿರುತ್ತೀರಾ. ಆದ್ರೆ ಈ ರೀತಿ ಮಾತ್ರೆ, ಜ್ಯೂಸುಗಳು ಹಾಗೂ ಚಾಕಲೋಟುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುವುದರ ಜೊತೆಗೆ ನಿದ್ರೆಯ ಜೋಂಪು ಹೆಚ್ಚಾಗುವುದು ಸಾಮಾನ್ಯ. ನಿದ್ರೆಗೆ ಶರಣಾದರೆ ಇನ್ನು ಪ್ರಣಯದ ಮಾತೆಲ್ಲಿ?

ಶತಶತಮಾನಗಳಿಂದಲೂ ಪ್ರಣಯಕ್ಕಾಗಿ ಆರೋಗ್ಯವರ್ಧನೆ, ದೈಹಿಕ ಕಸರತ್ತು ನಡೆಸಿಕೊಂಡು ಬಂದಿದ್ದಾರೆ ನಮ್ಮ ಪುರುಷಸಿಂಹಗಳು. ಸರಿಯಾದ ಆಹಾರ ಕ್ರಮ, ಕಟ್ಟುನಿಟ್ಟಾದ ಕಸರತ್ತಿನ ಜೊತೆಗೆ ಅತಿಮುಖ್ಯವಾಗಿ ಬೇಕಾಗಿರುವುದು ಆತ್ಮವಿಶ್ವಾಸ. ಪ್ರತಿಯೊಬ್ಬರು, ಅದು ಹೆಣ್ಣಾಗಲಿ, ಗಂಡಾಗಲಿ ತಮ್ಮನ್ನು ತಾವು ದೈಹಿಕವಾಗಿ ಕೀಳಾಗಿ ಕಾಣುವುದನ್ನು ಬಿಟ್ಟುಬಿಡಬೇಕು. ತಮ್ಮನ್ನು ತಾವು ಜಗತ್ತಿನ ಪರಿಪೂರ್ಣ ಕಾಮ ಪುರುಷ ಮನ್ಮಥ, ರತಿಯರಂತೆ ಭಾವಿಸಿದರೆ ತಪ್ಪಿಲ್ಲ. ಇದರಿಂದ ಹೆಚ್ಚಿನ ಬಲಬಂದಂತೆ. ಅದು ಬಿಟ್ಟು ಹಾಸಿಗೆ ಮೇಲೆ ಕೂತು ತಮ್ಮ ದೇಹದ ಬಗ್ಗೆ ತಾವೇ ಅಸಹ್ಯಪಟ್ಟುಕೊಂಡರೆ ಮುಂದಿನ ಕಾರ್ಯ ಇಂಧನವಿಲ್ಲದೆ ವಾಹನ ಚಲಿಸಿದಂತೆಯೇ ಸೈ!

ಅನೇಕ ಮೂಲಗಳ ಪ್ರಕಾರ ಕೆಲ ತರಕಾರಿ ಹಾಗೂ ಖಾದ್ಯಗಳಲ್ಲಿಮ ವಿಟಮಿನ್ನುಗಳು ಪ್ರಣಯದಾಟಕ್ಕೆ ಪುಷ್ಟಿ ನೀಡುತ್ತದೆ ಎಂದು ತಿಳಿದುಬಂದಿದೆ. ಉದಾಹರಣೆಗೆ ಮೊಟ್ಟೆಯಲ್ಲಿನ ವಿಟಮಿನ್ನುಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತವೆ, ಇದರಿಂದ ಅವಧಿಗೆ ಮುಂಚೆ(ಕ್ಲೈಮಾಕ್ಸ್) ವೀರ್ಣ ಸ್ಖಲನವಾಗುವುದು ತಪ್ಪುತ್ತದೆ. ವೆನ್ನಿಲ್ಲಾ ಐಸ್ ಕ್ರೀಮ್‌ನಲ್ಲಿರುವ ಕ್ಯಾಲ್ಸಿಯಂ ನಿಮ್ಮ ಉದ್ರೇಕಾವಸ್ಥೆಯನ್ನು ಜಾಸ್ತಿ ಹೊತ್ತು ಕಾಯ್ದಿಡುತ್ತದೆ. ಇನ್ನು ಧಾನ್ಯಗಳಲ್ಲಿನ ಫೋಲಿಕ್ ಆಮ್ಲ ರಕ್ತಧಮನಿಗಳನ್ನು ಶುದ್ಧಗೊಳಿಸಿ, ರಕ್ತ ಸಂಚಾರ ಸುಗಮಗೊಳಿಸುತ್ತದೆ. ಇವೇ ಮುಂತಾದ ವಿಷಯಗಳ ಮೇಲೆ ಕೊಂಚ ಗಮನಹರಿಸಿದರೆ, ಆರೋಗ್ಯಪೂರ್ಣ ಲೈಂಗಿಕ ಕ್ರಿಯೆಗೆ ಯಾವುದೇ ಅಡ್ಡಿಯಿರುವುದಿಲ್ಲ.

ಪ್ರಣಯಕ್ಕೆ ಸಮತೋಲನ ಆಹಾರಕ್ರಮ

ಲೈಂಗಿಕ ಶಕ್ತಿ ವರ್ಧನೆ ಸಮತೋಲನ ಆಹಾರ ಸೇವನೆ ಅತ್ಯಗತ್ಯ. ರಕ್ತದಲ್ಲಿನ ಸಕ್ಕರೆ ಪ್ರಮಾಣದ ಬಗ್ಗೆ ಎಚ್ಚರಿಕೆ, ವಿಟಮಿನ್, ಪ್ರೊಟಿನ್‌ಗಳ ಸೇವನೆ ಇವೇ ಕೆಲವು ಅಂಶಗಳು ಸೇರಿವೆ. ಅವುಗಳಲ್ಲಿ ಕೆಲವನ್ನು ಪಟ್ಟಿ ಮಾಡುವುದಾದರೆ,

* ಸಕ್ಕರೆ ಹಾಗೂ ಸಿಹಿ ಪದಾರ್ಥ ಹೆಚ್ಚಿರುವ ಖಾದ್ಯಗಳನ್ನು ವರ್ಜಿಸಿ, ನಿಮ್ಮ ದೇಹದ ಕೊಬ್ಬಿನಾಂಶ ಸಮತೋಲನಕ್ಕೆ ಇದು ಅವಶ್ಯ.
* ಕಾಫಿ, ಟೀ, ಚಾಕಲೋಟ್, ಆಲ್ಕೋಹಾಲ್ ಹಾಗೂ ಸಿಗರೇಟುಗಳಿಂದ ದೂರವಿರಿ. ಚಟವಿದ್ದವರು ಕಮ್ಮಿಮಾಡಿ.
* ಪೌಷ್ಟಿಕಾಂಶ ಭರಿತ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಹಾಗೂ ಬೇಳೆಗಳನ್ನು ತಿನ್ನಿ.
* ಮಾಂಸಹಾರಿಗಳು ಮೀನು, ಟರ್ಕಿಹಕ್ಕಿ, ಕೋಳಿ ಮುಂತಾದವುಗಳನ್ನು ಸೇವಿಸಬಹುದು.
* ಟೂನಾ, ಮಕ್ಯಾರೆಲ್, ಸಾಲ್ಮಾನ್ ಜಾತಿಯ ಮೀನುಗಳು ಪುಷ್ಟಿದಾಯಕ ಎನಿಸಿದೆ.
* ಪುರುಷರಿಗೆ ಶೆಲ್ ಮೀನುಗಳು(ಕಪ್ಪೆ ಚಿಪ್ಪು) ಶಕ್ತಿವರ್ಧಕವಾಗಿದೆ. ಅದರಲ್ಲಿ ಅಧಿಕಪ್ರಮಾಣದ ಸತುವಿನ ಅಂಶವಿರುತ್ತದೆ.
* ಬೂದುಗುಂಬಳಕಾಯಿ, ನುಗ್ಗೇಕಾಯಿ, ಸೂರ್ಯಕಾಂತಿ(ಎಣ್ಣೆ ಅಥವಾ ಬೀಜ), ನಾರಿನಂಶವಿರುವ ಅಗಸೆಯ ಬೇರು, ಸೆಣಬು ಬಳಕೆ ಹಾಗೂ ಎಳ್ಳು ಸೇವನೆ ಅಗತ್ಯ.
* ನಾರಿನಂಶವಿರುವ ಅಗಸೆ, ಎಳ್ಳು ಮುಂತಾದವುಗಳ ಎಣ್ಣೆಗಳನ್ನು ಅಡುಗೆಯಲ್ಲಿ ಯಥೇಚ್ಛವಾಗಿ ಬಳಸಬಹುದು.

ಕರಿದ ಎಣ್ಣೆ ಪದಾರ್ಥ ಸೇವನೆಯನ್ನು ಕಮ್ಮಿಮಾಡಿ. ಸಂಸ್ಕರಿತ ಮಾಂಸ ಹಾಗೂ ಕೊಬ್ಬಿನಂಶ ಹೆಚ್ಚಿರುವ ಆಹಾರ ಪದಾರ್ಥಗಳು ನಿಮ್ಮ ಉತ್ಸುಕತೆಗೆ ಮಾರಕವಾಗಿ ಪರಿಣಮಿಸುತ್ತದೆ. ಠೊಣಪರಿಗೆ ಇದು ಒಂದು ರೀತಿ ಎಚ್ಚರಿಕೆ ಗಂಟೆ, ದಪ್ಪ ದೇಹ ಸುರತ ಕ್ರೀಡೆಯಲ್ಲಿ ಎಂದಿಗೂ ಅಡ್ಡಿ. ಕೊಬ್ಬಿನಂಶ ಹೆಚ್ಚಿದ ದೇಹ ಶ್ರಮವಹಿಸಿ ಕಾರ್ಯಕ್ಕೆ ಮುಂದಾಗಿ, ಬಹುಬೇಗ ಆಯಾಸಗೊಳ್ಳುವುದು ಸಾಮಾನ್ಯ. ಆದ್ದರಿಂದ ದೇಹವನ್ನು ಸಪೂರವಾಗಿ ಇಟ್ಟುಕೊಳ್ಳುವುದು ಮುಖ್ಯ. ಹಾಗಂತ ಶಾರುಖ್, ಹೃತಿಕ್ ರೀತಿ ಸಿಕ್ಸ್ ಪ್ಯಾಕ್ ಅಬ್ಸ್ ಬೇಕು ಅಂತಲ್ಲಾ. ದೇಹ ಆರೋಗ್ಯ ಪೂರ್ಣವಾಗಿ ನಿಮಗೆ ನಿಮ್ಮ ದೇಹ ಎಲ್ಲಾ ಕೆಲಸಗಳಲ್ಲೂ ಭಾರ ಅನಿಸಬಾರದು ಅಷ್ಟೆ.

ಉತ್ತಮ ಲೈಂಗಿಕ ಕ್ರಿಯೆಗೆ ದೇಹದ ಆರೋಗ್ಯ, ಆಹಾರ ಸೇವನೆ ಅತಿ ಅವಶ್ಯ. ಇದಕ್ಕಾಗಿ ವಾಮಮಾರ್ಗಗಳನ್ನು ಬಳಸಿ, ದೇಹವನ್ನು, ಹಣವನ್ನು ಹಾಳು ಮಾಡುವುದರ ಬದಲು, ನೈಸರ್ಗಿಕವಾಗಿ ನಾವು ದಿನನಿತ್ಯ ಸೇವಿಸುವ ಆಹಾರದಲ್ಲಿ ದೊರೆಯುವ ಖನಿಜಾಂಶ, ಪ್ರೊಟಿನ್, ವಿಟಮಿನ್ನುಗಳೇ ಸಾಕು. ಆಹಾರ ಸೇವನೆಯ ಜೊತೆಗೆ ಕೊಂಚ ವ್ಯಾಯಾಮವೂ ಅಗತ್ಯ. ಇದರಿಂದ ದೇಹದ ಸಮತೋಲನ ಕಾಯ್ದುಕೊಳ್ಳಬಹುದು. ಸರಿಯಾದ ಆಹಾರ ಸಮಪ್ರಮಾಣದಲ್ಲಿ ಸೇವಿಸುವುದನ್ನು ಅಭ್ಯಾಸವಾಗಿಸಿಕೊಂಡವರಿಗೆ ಹಾಸಿಗೆಯಲ್ಲಿ ಎಂದೂ ಸೋಲಿಲ್ಲ.

English summary
Are some foods better than others for fueling good sex? A healthy diet is healthy for your lovemaking life.
Story first published: Wednesday, August 6, 2008, 16:11 [IST]

Get Notifications from Kannada Indiansutras