ವೇಶ್ಯಾವೃತ್ತಿಯನ್ನು ನಮ್ಮ ದೇಶದಲ್ಲಿ ನಿರಾತಂಕವಾಗಿ ಸಾಗಿಸಲು ಕಾನೂನು ಕಟ್ಟಳೆಗಳು ಅಡ್ಡಿ ಬರುತ್ತವೆ. ಆದರೆ, ಬಹಳಷ್ಟು ದೇಶಗಳಲ್ಲಿ ವೇಶ್ಯಾವೃತ್ತಿ ವ್ಯವಸ್ಥಿತ ವ್ಯಾಪಾರವಾಗಿ ಮುಂದುವರಿಯುತ್ತಿದೆ. ಆರ್ಥಿಕ ಬಿಕ್ಕಟ್ಟಿನ ಸುನಾಮಿ ಇಡೀ ದೇಶಗಳನ್ನೇ ನುಂಗುತ್ತಿದ್ದರೆ ವೇಶ್ಯಾವೃತ್ತಿ ಮೇಲೆ ಅದರ ಪರಿಣಾಮ ಎಳ್ಳಷ್ಟು ಉಂಟಾಗಿಲ್ಲ ಎನ್ನುತ್ತವೆ ಆಸ್ಟ್ರೇಲಿಯಾದ ವೇಶ್ಯಾವೃತ್ತಿ ಉದ್ಯಮದ ಮೂಲಗಳು.
ಇಡೀ ವಿಶ್ವದಲ್ಲೇ ಜಾಗತಿಕ ಆರ್ಥಿಕ ಬಿಕ್ಕಟ್ಟು ಉಸಿರುಗಟ್ಟಿಸುವ ಪರಿಸ್ಥಿತಿ ತಂದಿದೆ. ಪ್ರಪಂಚದ ಮೂಲೆ ಮೂಲೆಗಳಲ್ಲಿರುವ ವಿಟರು(ಕಾಮಾಸಕ್ತರು) ಮಾತ್ರ ಇದರ ಬಗ್ಗೆ ಸ್ವಲ್ಪವೂ ತಲೆ ಕೆಡಿಸಿಕೊಂಡಿಲ್ಲ.ನಿರಾತಂಕವಾಗಿ ವೇಶ್ಯಾವಾಟಿಕೆ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಕಾಮತೃಷೆಯನ್ನು ನೀಗಿಸಿಕೊಳ್ಳುತ್ತಿದ್ದಾರೆ. ವಿಟರು ವೇಶ್ಯಾವೃತ್ತಿಯನ್ನು ಧೂಮಪಾನದಂತೆ ಸ್ವೀಕರಿಸುತ್ತಿದ್ದಾರೆ ಎನ್ನುತ್ತಾರೆ ಆಸ್ಟ್ರೇಲಿಯಾದ ವೇಶ್ಯಾವೃತ್ತಿ ಕೇಂದ್ರಗಳ ನಿರ್ವಾಹಕರು. 'ಇದುವರೆಗೂ ನಮ್ಮ ವ್ಯಾಪರದ ಮೇಲೆ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪ್ರಭಾವ ಉಂಟಾಗಿಲ್ಲ.ಇನ್ನು ಮುಂದೆಯೂ ನಮ್ಮ ವ್ಯಾಪಾರಕ್ಕೆ ಯಾವುದೇ ಹೊಡೆತ ಬೀಳುವುದಿಲ್ಲ' ಎಂದು ಸಿಡ್ನಿಯಲ್ಲಿನ ಬೋರ್ಡೆಲ್ಲೊ ಎಂಬ ವೇಶ್ಯಾವೃತ್ತಿ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.
'ಆರ್ಥಿಕ ವ್ಯವಸ್ಥೆಗಳಿಗೆ ಹೊಡೆತ ಬಿದ್ದಾಗ ಎಲ್ಲ ಕಂಪನಿಗಳು ಮಗುಚಿಕೊಂಡಿದ್ದರೆ, ಆಲ್ಕೋಹಾಲ್, ಧೂಮಪಾನ, ಜೂಜು, ವ್ಯಭಿಚಾರದಂತಹ ಉದ್ಯಮಗಳು ಮಾತ್ರ ಬ್ಲೂಚಿಪ್ ಕಂಪನಿಗಳ ತರಹ ವಿಶ್ವ ಮಾರುಕಟ್ಟೆಗಳಲ್ಲಿ ಪ್ರಕಾಶಿಸುತ್ತಿವೆ. ಏಕೆಂದರೆ, ಪುರುಷರು ಆಲ್ಕೊಹಾಲ್, ಧೂಮಪಾನ ಹಾಗೂ ಕಾಮಕ್ರೀಡೆಯನ್ನು ಮಾತ್ರ ಬಿಡಲು ಸಿದ್ಧರಿಲ್ಲ' ಎಂದು ಕೇಥರೀನ್ ಎಂಬ ಮಹಿಳೆಯೊಬ್ಬರು ಪುರುಷರ ಬಗ್ಗೆ ಹೊಸ ವ್ಯಾಖ್ಯಾನವನ್ನೇ ನೀಡಿದ್ದಾರೆ.
ಮುಂಬರುವ ಬೇಸಿಗೆ ಕಾಲ, ರಗ್ಬಿ ಕ್ರೀಡೆಗಳು ನಮ್ಮ ವ್ಯಾಪಾರವನ್ನು ಮತ್ತಷ್ಟು ಹೆಚ್ಚ್ಚಿಸುತ್ತದೆ ಎಂದು ಕೆಥರೀನ್ ತಿಳಿಸಿದರು. 'ಈ ವಾರ ಸಹ ವ್ಯಾಪಾರ ಚೆನ್ನಾಗಿ ನಡೆಯಿತು. ಕಳೆದ ಎರಡು ವಾರಗಳಿಂದ ವ್ಯಾಪಾರದಲ್ಲಿ ಅಭಿವೃದ್ಧಿ ಉಂಟಾಗುತ್ತಿದೆ. ಮುಂದಿನ ಬೇಸಿಗೆ ಹೊತ್ತಿಗೆ ವ್ಯಾಪಾರ ಮತ್ತಷ್ಟು ಜೋರಾಗಲಿದೆ' ಎನ್ನ್ನುತ್ತಾರೆ ಅವರು.