•  

ಮಾನಿನಿಯಿರಲಿ ಮದಿರೆಯಿರಲಿ ಹಳೆಯದಾಗಿರಲಿ!

Array
Middle-aged women are most sensuous
 
ವೈನ್ ಹಳೆದಾಗಿದ್ದರೆ ಬಲು ರುಚಿಯಂತೆ ಇದು ನಮ್ಮ ಗುಂಡಣ್ಣ ಕಂಡುಕೊಂಡ ಸತ್ಯವಲ್ಲ. ಅಂದಿನಿಂದ ಇಂದಿನವರೆಗೂ ಗುಂಡಿನ ಮತ್ತಿಗೆ ಒಳಗಾದವರ ಅನುಭವದ ಮಾತು. ಹಾಗೆಯೇ ಸೌಂದರ್ಯದವಿಷ್ಯಕ್ಕೆ ಬಂದರೆ ಹದಿಹರೆಯದ ಬಾಲೆಯರಿಗಿಂತ ಮಧ್ಯವಯಸ್ಕ ಮಾನಿನಿಯರೇ ಹೆಚ್ಚು ಪ್ರಚೋದನಕಾರಿ ಎಂದು ಇತ್ತೀಚೆಗೆ ಸಮೀಕ್ಷೆ ನಡೆಸಿದ ದೂರ ದೇಶದ ವೈದ್ಯ ರಾಬರ್ಟ್ ಹಾಗೂ ಅವರ ತಂಡ ಕಂಡು ಕಂಡಿರುವ ಸತ್ಯ. ಮೇಕಪ್ ಸಹಿತ ಅಥವಾ ರಹಿತವಾಗಿಯಾದರೂ 34-40 ವರ್ಷದ ಮಹಿಳೆಯರ ಸೌಂದರ್ಯಎಲ್ಲರನ್ನೂ ಸೆಳೆಯಬಲ್ಲದಂತೆ.

ಸುಮಾರು ಸಾವಿರಕ್ಕೂ ಅಧಿಕ ಜನರನ್ನು ಈ ಬಗ್ಗೆ(ಕಾಮಕೇಳಿಯಲ್ಲಿ ತೃಪ್ತಿಕೊಟ್ಟ ಅಂದಾಜು ವಯೋಮಾನ) ಕೇಳಿದಾಗ ಶೇ. 56ಕ್ಕೂ ಅಧಿಕ ಮಂದಿ ಹೇಳುವ ಪ್ರಕಾರ ಹದಿಹರೆಯದ ದಿನಗಳಿಗಿಂತ 35ರ ಹರೆಯದಲ್ಲಿನ ಕಾಮಕೇಳಿಯಲ್ಲಿ ಉನ್ಮಾದ, ಆನಂದ, ಸುಖ ಹೆಚ್ಚು ಎಂದಿದ್ದಾರೆ. ಇದಕ್ಕೆ ಪೂರಕವಾಗಿರುವ ಅಧ್ಯಯನದ ಪ್ರಕಾರ 20ರಿಂದ 30ರ ಆಸುಪಾಸಿನ ಯುವತಿಯರಿಗೆ ತಿಂಗಳಲ್ಲಿ ಕನಿಷ್ಠವೆಂದರೂ 10ರಿಂದ 12 ಬಾರಿ ರತಿಕ್ರೀಡೆಯಾಡಲು ಇಷ್ಟಪಡುತ್ತಾರೆ. ಅದೇ 45ರಿಂದ 60 ವರ್ಷ ವಯಸ್ಸಿನವರಿಗೆ ತಿಂಗಳಿಗೆ 5 ಬರಿ ಕಾಮಕೇಳಿ(ಕೇಲಿ) ಸಾಕಂತೆ. ಆದರೆ ಬಹುಜನರ ಅಭಿಪ್ರಾಯದಂತೆ ಸುಮಾರು 34ರ ಹರೆಯದಲ್ಲಿದ್ದಾಗ ಪಡೆವ ಸುಖ ತೃಪ್ತಿದಾಯಕ ಎನ್ನಲಾಗಿದೆ.

ವಯಸ್ಸಾಗುತ್ತಾ ಹೋದಂತೆ ಮಹಿಳೆಯರ ಜೀವನಶೈಲಿ ಬದಲಾಗುತ್ತಾ , ಕಾಮತೃಷೆ ಕಮ್ಮಿಯಾದರೂ, ಕಾಮತೃಪ್ತಿ ಹೆಚ್ಚು ಎಂದು ತಿಳಿದುಬಂದಿದೆ. 35ರ ಹರೆಯದ ಚೆಲುವೆ ಎಲ್ಲಾ ರೀತಿಯ ಸುಖ ಸೋಪಾನದಲ್ಲಿ ತೇಲುತ್ತಿರುತ್ತಾಳೆ. ಕಾಮಕೇಳಿಯಲ್ಲಿ ನಿಯಂತ್ರಣ ಸಾಧಿಸಿ ತೃಪ್ತಿ ಹೊಂದುವ ಎಲ್ಲಾ ಕಲೆಯನ್ನು ತನ್ನದಾಗಿಸಿಕೊಂಡಿರುತ್ತಾಳೆ ಎಂದು ಖ್ಯಾತ ತಜ್ಞೆ ಕ್ಯಾಥ್ರೀನ್ ಹೂಡ್ ಟೆಲಿಗ್ರಾಫ್ ನ ಅಂಕಣದಲ್ಲಿ ಬರೆದಿದ್ದಾರೆ.

ಹರೆಯದ ಹೆಣ್ಣನ್ನು ಬದಿಗೊತ್ತಿ, ಮಧ್ಯವಯಸ್ಕ ಕನ್ಯಾಮಣಿ/ಮಾನಿನಿಯರತ್ತ ಪುರುಷ ಸಿಂಹನ ನೋಟ ತಿರುಗಲು ಕಾರಣ ಬಹುಶಃ ಆಕೆಯ ಸೌಂದರ್ಯದ, ಕಾಮದಾಟದ ಗುಟ್ಟನ್ನು ಗಂಡಸರು ತಿಳಿದಿರುವುದೇ ಆಗಿರಬಹುದೇ?

English summary
'Wine and women get better with age', and rightly so. According to a new UK survey, women feel the sexiest is 34.
Story first published: Tuesday, February 24, 2009, 17:35 [IST]

Get Notifications from Kannada Indiansutras