ಲೈಂಗಿಕ ಆಸಕ್ತಿಯನ್ನು ಕಳೆದುಕೊಂಡು ಖಿನ್ನರಾಗಿರುವ ಮಹಿಳೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಮಾತ್ರೆಯನ್ನು ಕಂಡುಹಿಡಿಯಲಾಗಿತ್ತು. ಆದರೆ, ಈ ಮಾತ್ರೆಯ ಬಳಕೆಯಿಂದ ಖಿನ್ನತೆ ದೂರವಾಗುತ್ತಾದರೂ ಕಾಮಾಸಕ್ತಿಗೆ ಯಾವುದೇ ಉತ್ತೇಜನ ದೊರೆಯುತ್ತಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಮಾತ್ರೆ ಸಂಶೋಧನೆಯ ಮೂಲ ಉದ್ದೇಶವೂ ಅದೇ ಆಗಿದೆ.
ಅದಲ್ಲದೆ, ದೀರ್ಘ ಕಾಲ ಬಳಸಿದರೆ ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ ಎಂಬ ಬಗ್ಗೆಯೂ ಮಂಡಳಿ ಸಂತಸ ವ್ಯಕ್ತಪಡಿಸಿಲ್ಲ. ಮಾತ್ರೆ ಪರಿಣಾಮಕಾರಿಯಾಗಿದೆಯಾದರೂ ಇನ್ನೂ ಹೆಚ್ಚಿನ ಸಂಶೋಧನೆ ನಡೆಸಬೇಕು ಎಂಬ ಅಭಿಪ್ರಾಯಕ್ಕೆ ತಜ್ಞರು ಬಂದಿದ್ದಾರೆ. ಇದರಿಂದ ನಿರಾಶೆ ವ್ಯಕ್ತಪಡಿಸಿರುವ ಜರ್ಮನಿಯ ಫಾರ್ಮಾಸ್ಯುಟಿಕಲ್ ಕಂಪನಿ ಬೋರಿಂಜರ್ ಮತ್ತಷ್ಟು ಸಂಶೋಧನೆ ನಡೆಸಲು ನಿರ್ಧರಿಸಿದೆ.
ಒಂದು ಅಂದಾಜಿನ ಪ್ರಕಾರ, ಜಗತ್ತಿನಲ್ಲಿ ಶೇ.40ರಷ್ಟು ಮಹಿಳೆಯರು ಸಂಪೂರ್ಣ ಕಾಮತೃಪ್ತಿ ಪಡೆಯುವಲ್ಲಿ ಸೋಲುತ್ತಿದ್ದಾರೆ. ಈ ಕಾರಣದಿಂದಲೇ ಫಿಮೇಲ್ ವಯಾಗ್ರಾಗೆ ಚಾಲನೆ ದೊರೆತಿತ್ತು. ಗಂಡಸರ ವಯಾಗ್ರಾದಂತೆಯೇ ಫಿಮೇಲ್ ವಯಾಗ್ರಾ ಕೂಡ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿರುತ್ತದೆ ಎಂದು ಹೇಳಲಾಗಿತ್ತು. ಗಂಡಸರಿಗೆ ಸರಿಸಮಾನವಾಗಿ ಹೆಂಗಸರು ಕೂಡ ಅಷ್ಟೇ ತೀವ್ರತೆಯಿಂದ ಕಾಮಾನಂದ ಪಡೆಯಬಹುದು ಎಂದು ಸಂಶೋಧನಾ ಕಂಪನಿ ಹೇಳಿತ್ತು. ಇದಕ್ಕಾಗಿ ಸಾವಿರಕ್ಕೂ ಹೆಚ್ಚಿನ ಮಹಿಳೆಯರ ಮೇಲೆ ಇದನ್ನು ಪ್ರಯೋಗಿಸಲಾಗಿತ್ತು.
ಸದ್ಯಕ್ಕೆ ಫಿಮೇಲ್ ವಯಾಗ್ರಾ ಮಾರುಕಟ್ಟೆಗೆ ಬರುವುದು ತಡವಾಗುತ್ತಿದೆ. ಆದರೆ, ಮಹಿಳೆಯರು ಇದರಿಂದ ನಿರಾಶರಾಗಬೇಕಿಲ್ಲ, ಸಂಶೋಧನೆ ಇನ್ನೂ ಜಾರಿಯಲ್ಲಿದೆ.