1. ಆಟದ ಆರಂಭಕ್ಕೂ ಮುನ್ನ ಮ್ಯಾಜಿಕ್
ಯಾವುದೇ ಆಟ ಆಡಬೇಕಾದರೆ ಆಟಗಾರರಿನಿಗೆ ಮನಸ್ಥಿತಿ ಮುಖ್ಯ. ಆಟಗಾರನಿಗೆ ಯಾವುದೇ ಒತ್ತಡದ ಇರಬಾರದು. ಹಾಗೆಯೇ ಲೈಂಗಿಕ ಆಟ ಶುರುವಾಗುವುದಕ್ಕೂ ಮುನ್ನ ಮನಸ್ಸು ಹಗುರವಾಗಿರಬೇಕು. ಒಬ್ಬರಿಗೊಬ್ಬರು ತಬ್ಬಿಕೊಳ್ಳುವ ಮೂಲಕ. ಮೋಂಬತ್ತಿ ಬೆಳಕಿನಲ್ಲಿ ರಾತ್ರಿ ಊಟ ಮಾಡುವ ಮೂಲಕ ಮನಸ್ಸುಗಳು ಹೂವಾಗುತ್ತವೆ.
2. ಮೆಲ್ಲುಸಿರೇ ಸವಿಗಾನ ಎದೆ ಝಲ್ಲೆನೆ ಹೂವಿನ ಬಾಣ
ಮೋಂಬತ್ತಿ ಬೆಳಕಿನಲಿ ಬಿಸಿಬಿಸಿಯಾದ ಆವಿಯ ಸ್ನಾನ ಮಾಡುವುದರಿಂದ ಮನಸುಗಳು ಒತ್ತಡದಿಂದ ಮುಕ್ತವಾಗುತ್ತವೆ. ಮೋಂಬತ್ತಿಯ ಬೆಳಕು ರಸಮಯ ಕ್ಷಣಗಳಿಗೆ ಮುನ್ನುಡಿ ಬರೆಯುತ್ತದೆ. ಸುವಾಸನೆಭರಿತ ಮೋಂಬತ್ತಿಯಾದರೆ ಇನ್ನೂ ಉತ್ತಮ. ಮೋಂಬತ್ತಿಯ ಮಂದಬೆಳಕು ಹಾಗೂ ಸುವಾಸನೆಭರಿದ ಗಾಳಿ ಆಸೆಯ ಬಲೂನಿಗೆ ಜೀವ ತುಂಬುತ್ತದೆ ಎಂಬುದು ನೆನಪಿರಲಿ.
3. ರೋಮಾಂಚನ ದಾಂಪತ್ಯದನುಸಂಧಾನ
ಚಾಕೊಲೇಟ್ ಎಂಬ ಸಿಹಿ ಹಲವು ಅದ್ಭುತಗಳನ್ನು ಮಾಡುತ್ತದೆ. ಐಸ್ ಕ್ರೀಂ ಜೊತೆ ಚಾಕೋಲೇಟನ್ನು ಹಂಚಿಕೊಂಡು ತಿನ್ನಿ. ಒಬ್ಬೊರಿಗೊಬ್ಬರು ತಿನ್ನಿಸಿಕೊಳ್ಳುವುದು ಉತ್ತಮ. ಚಾಕೋಲೇಟ್ ತಿನ್ನುತ್ತಾ ತಿನ್ನುತ್ತಾ ಮಧುಮಂಚಕೆ.. ವಿಧಿಹಂಚಿಕೆ..ಅದಕೇಕೆ ಅಂಜಿಕೆ ಬಾಲೆ..ಎಂದು ಹಾಡುತ್ತಾ ಜಿಗಿಯಬಹುದು.
4. ಅವರಿಗೇನು ಬೇಕು ಎಂಬುದನ್ನು ತಿಳಿ ಜಾಣೆ
ಅಭಿನಂದನೆಗಳನ್ನು ತಿಳಿಸುವುದು, ಅವರ ಬೇಕು ಬೇಡಗಳನ್ನು ಅರಿತ ಹೆಣ್ಣಿನ ಕಾಲ ಬುಡದಲ್ಲಿ ಗಂಡು ಬಂದು ಬೀಳುತ್ತಾನೆ. ಬಚ್ಚಿಟ್ಟುಕೊಂಡ ರಹಸ್ಯಗಳನ್ನು ಒಂದೊಂದಾಗಿ ಬಿಚ್ಚಿಡುವ ಮೂಲಕ ದಾಂಪತ್ಯ ಜೀವನ ಹೊಸ ಹೊಸ ಅರ್ಥಗಳನ್ನು ಕಂಡುಕೊಂಡು ಬಾಂಧವ್ಯ ಮತ್ತಷ್ಟು ಹೆಚ್ಚುತ್ತದೆ.
5. ಆಟ ಗೆಲ್ಲಲು ಹುರುದುಂಬಿಸಿ
ಆಟ ಆರಂಭಿಸಿ. ನಿಮ್ಮನ್ನು ನೀವು ಸಂಪೂರ್ಣ ಅನಾವರಣಗೊಳಿಸಿಕೊಳ್ಳಿ. ಅವನು ಏನನ್ನು ಹೆಚ್ಚಾಗಿ ಬಯಸುತ್ತಿದ್ದಾನೆ ಎಂಬುದನ್ನು ತಿಳಿದುಕೊಳ್ಳಿ. ಅವನ ಬಯಕೆಗಳನ್ನು ಮತ್ತೆ ಮತ್ತೆ ಈಡೇರಿಸುವ ಮೂಲಕ ಇಬ್ಬರೂ ಪರಾಕಾಷ್ಠೆಗೆ ತಲುಪಬಹುದು. ಹೊಸ ಆಟ ಆಡಲು ಮತ್ತೆ ಹುರುದುಂಬಿಸಿ. ರಸಮಯ ರಾತ್ರಿಗಳು ಸುಮಧುರರಾತ್ರಿಗಳಾಗಿ ಬದಲಾಗುತ್ತವೆ.