ಆದರೆ, ಎಷ್ಟೋ ಬಾರಿ ತೀರಾ ಸಿಲ್ಲಿ ಎನ್ನುವಷ್ಟರ ಮಟ್ಟಿಗೆ ಕೆಲವು ಮಿಸ್ಟೇಕ್ ಮಾಡಿ ಪಾರ್ಟ್ನರ್ ನ ಮೂಡ್ ಎಲ್ಲಾ ಹಾಳುಗೆಡಿಸಿ ಬಿಡುತ್ತಾರೆ ಈ ಗಂಡಸರು. ಸೋ, ಇಲ್ಲಿ ಕಾಳಜಿ ವಹಿಸಬೇಕಾದ ಒಂದಿಷ್ಟು ವಿಷಯಗಳ ಬಗ್ಗೆ ನೋಡೋಣ.
ತಾಳ್ಮೆಯಿರಲಿ: 'ಕಾಮಾತುರನಾಂ ನ ಭಯಂ ನ ಲಜ್ಜಾ:' ಎಂಬ ಮಾತಿದ್ದರೂ ಮೆಚ್ಚಿನ ಮಡದಿ ಜೊತೆಯಿರುವಾಗ, ರಾತ್ರಿ ಪೂರ್ತಿ ನಿಮ್ಮದಾಗಿರುವಾಗ ಆತುರ ಏಕೆ? ನಿಧಾನವೇ ಪ್ರಧಾನವಾಗಲಿ. ಬಟ್ಟೆ ಕಳಚುವುದಾಗಿ, ಮುತ್ತಿಡುವುದಾಗಿ ಅಥವಾ ಸುರತ ಚೇಷ್ಟೆಯಲ್ಲಿ ತೊಡಗುವುದಾಗಿ ಯಾವುದರಲ್ಲೂ ಅವಸರ ತೋರಬೇಡಿ, ಹೆಂಗಸರಿಗೆ ನಿಧಾನವಾಗಿ ಅಂಗ ಅಂಗಗಳಲ್ಲೂ ಅಸಕ್ತಿ ಕೆರಳಿಸುವ ಕ್ರಿಯೆ ಎಂದರೆ ಪರಮ ಇಷ್ಟ.
ಮುತ್ತಿನ ಮೋಹಕತೆ: ಸಂಭೋಗಕ್ಕೂ ಪರಾಕಾಷ್ಠೆಗೆ ಮುತ್ತಿನ ಮತ್ತೇ ನಾಂದಿ. ಮುತ್ತಿಡುವುದು ಒಂದು ಕಲೆ. ಕೆಲವರಿಗೆ ತಕ್ಷಣಕ್ಕೆ ಸಿದ್ಧಿಸುವುದಿಲ್ಲ. ಹೆಂಗಳೆಯರನ್ನು ಕೆರಳಿಸುವುದು' ಒನ್ ಸಿಂಪಲ್ ಕಿಸ್' ಎನ್ನುವುದನ್ನು ಮಾತ್ರ ಮರೆಯಬೇಡಿ. ಮುತ್ತಿಡುವುದರಲ್ಲಿ ಪರಿಣಿತನಾದವನು ಮಾನಿನಿಯ ನಿದಿರೆ ಸುಲಭದಲ್ಲಿ ಕೆಡಿಸಬಲ್ಲ.
ಬಲಾತ್ಕಾರವಾಗಿ ತುಟಿಗೆ ತುಟಿ ಸೇರಲು ಹಾತೊರೆಯಬೇಡಿ. ಮುತ್ತಿಡಲು ನಾನಾ ಅಂಗಗಳಿವೆ. ನಿಧಾನಗತಿಯಿಂದ ಒಂದೊಂದೇ ಅಂಗವನ್ನು ವಶಪಡಿಸಿಕೊಂಡ ನಂತರ ಅಂತಿಮ ಮಧುವನ್ನು ಹೀರಲು ಮುಂದಾಗಿ, ಆಗ ಆಕೆ ತಾನಾಗೇ ಶರಣಾಗುವಳು. ಮುತ್ತಿನ ಮತ್ತೇರಿಸಿಕೊಳ್ಳುವುದರಲ್ಲಿ ಹೆಂಗಳೆಯರೇ ಹೆಚ್ಚು ಜಾಣೆಯರಂತೆ.
ಒರಟಾಟ ಬೇಡವೇ ಬೇಡ: ರಫ್ ಅಂಡ್ ಟಫ್ ಆದ ಸ್ಟಿಫ್ ದೇಹದ ಗಂಡಿಗೆ ಹೆಣ್ಣು ಸೋಲುವುದು ಸರ್ವವಿದಿತವಾದರೂ, ತನ್ನ ಸೂಕ್ಷ್ಮ ಅಂಗಗಳ ಮೇಲೆ ಸುಖದ ಹೆಸರಿನಲ್ಲಿ ಹಾನಿಯಾಗುವಷ್ಟು ಒತ್ತಡ ಹೇರಿಕೊಳ್ಳಲು ಯಾವ ಹೆಣ್ಣು ಕೂಡಾ ಇಷ್ಟಪಡುವುದಿಲ್ಲ. ಸರಳವಾಗಿ, ಮೃದುವಾಗಿ ಮುಂದುವರೆಯಿರಿ, ಒತ್ತಡ ಹೆಚ್ಚಾದರೂಅದನ್ನು ನಿಭಾಯಿಸುವ ಕಲೆ ಆಕೆಗೆ ಗೊತ್ತಿರುತ್ತದೆ.
ಶುದ್ಧತೆಗೆ ಇರಲಿ ಸ್ವಲ್ಪ ಆದ್ಯತೆ: ಕೆಲವರಿಗೆ ಗಂಡಸರ ಬೆವರಿನ ವಾಸನೆಯೇ ಮಾದಕವಾಗಿ ಪ್ರೋತ್ಸಾಹ ನೀಡಬಲ್ಲದಾದರೂ, ಅದನ್ನೇ ಸಿಕ್ಕ ಅವಕಾಶವೆಂದು ಮುಂದುವರೆಯುವ ಗಂಡಸರಿಗೆ ನಿರಾಶೆ ಕಾದಿರುತ್ತದೆ. ಹಾಸಿಗೆಯನ್ನು ಏರುವ ಮೊದಲು ಸ್ನಾನ ಮಾಡಲಾಗದಿದ್ದರೂ, ಕನಿಷ್ಠ ಕೈಕಾಲು ಮುಖ ತೊಳೆದುಕೊಳ್ಳಿ ಅದರಲ್ಲೂ ಗುಪ್ತಾಂಗಳನ್ನು ಶುಚಿಯಾಗಿಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಕಾಂಡೋಮ್ ಕಾಲ ಕಸವಾಗದಿರಲಿ: ಗಂಡಸರು ಸ್ವಲ ಏನು ಸ್ವಲ್ಪ ಜಾಸ್ತಿನೇ ಕೇರ್ ಲೆಸ್ ಎಂಬುದು ಹೇಳದೇ ಇರಲು ಆಗದು. ಉಟ್ಟ ಬಟ್ಟೆಯನ್ನು ಕಳಚಿದಲ್ಲೇ ಬಿಟ್ಟರೂ ಸರಿ, ಬಳಸಿದ ಕಾಂಡೋಮ್ ಗಳನ್ನು ನೆಲದ ಮೇಲೆ ಎಸೆಯಬೇಡಿ. ಸುರತ ಕ್ರಿಯೆಯಲ್ಲಿ ಸ್ಪಂದಿಸುವ ಭಗಿನಿ, ಕಂಡ ಕಂಡಲ್ಲಿ ಕಾಂಡೋಮ್ ಬಿದ್ದಿರುವುದನ್ನು ಕಂಡರೆ ನಾಗಿನಿಯಂತೆ ಬುಸುಗುಟ್ಟುವುದು ಗ್ಯಾರಂಟಿ.
ಕ್ರಿಯೆ ಮೊದಲು ಹೇಗೋ ನಿಮ್ಮ ವಾಸನೆ, ಅಶುಚಿತ್ವವನ್ನು ಆಕೆ ಸಹಿಸಿಕೊಂಡರೂ ಎಲ್ಲಾ ಮುಗಿದ ನಂತರ ಬಹುಪಾಲು ಹೆಂಗೆಳೆಯರು ಎಲ್ಲವನ್ನೂ ಕ್ಲೀನ್ ಆಗಿ ನೋಡ ಬಯಸುತ್ತಾರೆ. ಸೋ, ಬಳಸಿದ ಕಾಂಡೋಮ್ ಗಳನ್ನು ಒಂದು ಕವರ್ ನಲ್ಲಿ ಹಾಕಿ ಕಸದ ಬುಟ್ಟಿಗೆ ಹಾಕುವುದನ್ನು ಮರೆಯಬೇಡಿ. Afterall ಇದು ನಿಮ್ಮ ರಕ್ಷಾಕವಚ ಎಂಬುದನ್ನು ನೆನಪಿಡಿ.
ಸೇ ನೋ ಟು ಮದ್ಯ, ಮಾಂಸ, ಮಾದಕ ದ್ರವ್ಯ: ಸುರತ ಕ್ರೀಡೆಯಲ್ಲಿ ಸಕಲ ಸುತ್ತುಗಳನ್ನು ದಾಟಿ ಜಯಶಾಲಿಯಾಗಬೇಕಾದರೆ, ಮದ್ಯ ಸೇವಿಸಿ ಕ್ರಿಯೆಗೆ ತೊಡಗಬೇಡಿ. ದೇಹದಷ್ಟೇ ಮನಸ್ಸು ಕೂಡಾ ಅತಿಮುಖ್ಯ. ಸೋ, ನಿಮ್ಮ ಮನಸ್ಸು ಕಂಟ್ರೋಲ್ ನಲ್ಲಿರಲಿ. ಮಾದಕ ದ್ರವ್ಯ, ಶಕ್ತಿ ಹೆಚ್ಚಿಸುವ ಮಾತ್ರೆಗಳು ಅದು ಇದೂ ಎಂದು ತೆಗೆದುಕೊಂಡು ಪರೀಕ್ಷೆಗೆ ಇಳಿಯಬೇಡಿ.
ಸುರತದಲ್ಲಿ ಪರಾಕಾಷ್ಠೆ ಸ್ಥಿತಿ ತಲುಪಲು ತಡವಾದರೂ ಚಿಂತೆಯಿಲ್ಲ. ಗುಳಿಗೆ ನುಂಗಿದಾಕ್ಷಣ ಉದ್ರೇಕ ಸ್ಥಿತಿ ಹೆಚ್ಚುವುದೇ ಹೊರತೂ ಉನ್ಮತ್ತರಾಗಿ ಹತೋಟಿ ತಪ್ಪುವುದು ಖಂಡಿತಾ. ಇನ್ನು ಮಾಂಸ ಸೇವನೆಯ ವಿಷಯಕ್ಕೆ ಬಂದರೆ, ಸುರತಕ್ಕೆ ಇಳಿಯುವ ಮುನ್ನ ಮಾಂಸ ಸೇವನೆ ಬೇಡ. ಮುಖ್ಯ ಕಾರಣ ನಿಮ್ಮ ಬಾಯಿಯ ದುರ್ವಾಸೆನೆ ಆಕೆಯ ನಿರಾಸಕ್ತಿಗೆ ಕಾರಣವಾಗಬಹುದು.
ಹಾಗಂತಾ ಮಾಂಸ ಮಡ್ಡಿ ಬೇಡ ಅನ್ನುವುದಕ್ಕಾಗುತ್ತದೆಯೇ, ಖಂಡಿತಾ ಪುಷ್ಕಳ ಭೋಜನ ಮಾಡಿ, ಆದರೆ, ಚೆನ್ನಾಗಿ ಅರಗಿಸಿಕೊಂಡು ಕಾಮದ ಹಸಿವನ್ನು ಇಂಗಿಸಿಕೊಳ್ಳಲು ಮುಂದಾಗಿಸಿ, ಆಗ ಜಯ ನಿಮಗೆ ಕಟ್ಟಿಟ್ಟ ಬುತ್ತಿ.