ಪ್ರಣಯೋತ್ಸಹ ಉಕ್ಕಿದಾಗ ಅದುಮಿಡುವುದು ಕಷ್ಟ ಹಾಗೂ ಅಪಾಯ ಕೂಡಾ. ಆದರೆ, ಕಾಮಕೇಳಿಗೆ ಪೂರಕವಾದ ವಾತಾವರಣ ಅಗತ್ಯ. ಇರುವ ನೆಲೆಯನ್ನೇ ಸುಂದರವಾಗಿರಿಸಿಕೊಂಡರೆ ಕಾಮೋನ್ಮಾದಕ್ಕೆ ಯಾರ ತಡೆಯೂ ಇರುವುದಿಲ್ಲ.
ಪ್ರಣಯದಾಟವೆಂದರೆ ಪಂಚೇದ್ರಿಯಗಳಲ್ಲಿ ಭಾವನೆಗಳ ಏರಿಳಿತ. ಮೈಮನ ತಣಿಸುವ ಬಯಕೆ ಥಣಿಸಿಕೊಳ್ಳಲು ಅಣಿಯಾಗುವ ಮುನ್ನ ಮಲಗುವ ಕೋಣೆಯ ಕದ, ಕಿಟಕಿ, ಮಂಚ, ದೀಪ, ನೆಲಹಾಸು.. .. ಇತ್ಯಾದಿಗಳ ಬಗ್ಗೆ ಕೊಂಚ ಗಮನ ಹರಿಸುವುದೊಳಿತು. ರತಿಕ್ರೀಡೆಯ ರಸನಿಮಿಷಗಳು ಬಹುಬೇಗ ಕರಗದಿರಲು ಸುತ್ತಲ ವಾತವಾರನವನ್ನು ಹೇಗೆಲ್ಲಾ ಸಜ್ಜುಗೊಳಿಸಬೇಕು ಎಂಬ ಪ್ರಶ್ನೆಗೆ ಒಂದಿಷ್ಟು ಸಲಹೆ ಸೂಚನೆಗಳು ಇಲ್ಲಿವೆ. ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ನಿಮ್ಮದಾಗಿದೆ.
* ಗರೀಬಿ ಇದ್ದರೂ ಗಲೀಜು ರೂಮಿನಲ್ಲಿರಬಾರದು. ಮಲಗುವ ಕೋಣೆಯನ್ನು ಸದಾ ಸ್ವಚ್ಛವಾಗಿರಿಸಿಕೊಳ್ಳಿ. ಇದು ಪ್ರಣಯಕ್ಕೂ, ಆರೋಗ್ಯಕ್ಕೂ ಒಳ್ಳೆಯದು.
* ಮಂದ ಬೆಳಕಿನ ದೀಪಗಳನ್ನೇ ಬಳಸಿ. ಫ್ಲಾಶ್ ದೀಪಗಳ ರೀತಿಯ ಎಲೆಕ್ಟ್ರಿಕ್ ಬಲ್ಬ್ ಬೇಡವೇ ಬೇಡ. ಮೈಬಿಸಿಯೊಂದಿಗೆ ರೂಮಿನ ವಾತಾವರಣವೂ ಬಿಸಿಬಿಸಿಯಾಗುತ್ತದೆ. ಸಿಎಫ್ ಎಲ್ ಓಕೆ. ದೀಪ ಆರಿಸುವುದು ಸಾಮಾನ್ಯವಾದರೂ ಮಂದ ಬೆಳಕು ಇರುಬೇಕದ್ದು ಸೂಕ್ತ.
* ರೂಮಿನ ಗಾಳಿ ಶುದ್ಧೀಕರಿಸಲು ಪರ್ಫ್ಯೂಮ್ ಗಳು ಸುಗಂಧ ದ್ರವ್ಯಗಳನ್ನು ಯಥೇಚ್ಛವಾಗಿ ಬಳಸಿದರಾಯ್ತು ಎಂಬ ನಂಬಿಕೆ ಇದೆ,. ಇದು ತಪ್ಪು. ಹಲವರಿಗೆ ಪರ್ಫ್ಯೂಮ್ ಕಂಡರಾಗದು. ಟಿವಿ ಆಡ್ ನಲ್ಲಿ ತೋರಿಸುವ ರೀತಿ ಸೆಂಟ್ ಹಾಕಿಕೊಂಡು ಸೆಳೆಯಲು ಬರುವುದಿಲ್ಲ. ನಿಮ್ಮ ಸೆಂಟ್ ಹಂಡ್ರೆಡ್ ಫರ್ಸೆಂಟ್ ನಿಮ್ಮವರಿಗೆ ಒಗ್ಗುವುದಾದರೆ ಉತ್ಸಾಹ ದಿಂದ ಫೂಸಿಕೊಳ್ಳಿ. ಇಲ್ಲದಿದ್ದರೆ ಆದಷ್ಟು ಬಳಕೆ ಕಮ್ಮಿಮಾಡಿ. ಬೆವರಿನ ವಾಸನೆಯ ಮುಂದೆ ಯಾವ ಸೆಂಟು ಲೆಕ್ಕಕ್ಕಿಲ್ಲ . ಅವರವರ ಅನುಕೂಲ, ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಿ. ಸಾಧಾರಣ ರೂಂ ಫ್ರೆಷನರ್ ಅಥವಾ ಸುಗಂಧಭರಿತ ಮೇಣದ ಬತ್ತಿ ಉರಿಸಬಹುದು.
* ನಿಮ್ಮವರಿಗೆ ರಾತ್ರಿ ವೇಳೆ ಗಜಲ್, ಹಳೆ ಹಿಂದಿ ಹಾಡು ಕೇಳೋದು ಇಷ್ಟ ಏನು ಮಾಡಲಿ ಎಂದು ಕೊರಗಬೇಡಿ. ಸಣ್ಣ ರೇಡಿಯೋ ಬೇಕಾದರೆ ಚಾಲೂ ಮಾಡಿ 'ಸುಖದ ಸ್ವಪ್ನಗಾನ.. ಎದೆಯ ಆಸೆ ತಾಣ .. ' ನೀವು ಬೇಕಾದರೆ ಕೋರಸ್ ಸೇರಿಸಿ. ಆದರೆ, ಇಯರ್ ಫೋನ್ ಹಾಕಿಕೊಂಡು ಹಾಡುಕೇಳುತ್ತಾ ಕೂತರೆ ಸ್ವಲ್ಪ ಹೊತ್ತಲ್ಲಿ ನಿಮ್ಮವರ ಗೊರಕೆ ಶಬ್ದ ಕೇಳುವುದಂತೂ ಗ್ಯಾರಂಟಿ.
* ನಿಮ್ಮ ಪ್ರಿಯಕರನ ಇಷ್ಟಕ್ಕೆ ತಕ್ಕಂತೆ ಹಾಸಿಗೆ , ದಿಂಬು ಹೊದಿಗೆಗಳ ಬಣ್ಣ ಆಯ್ಕೆ ಮಾಡಿ. ಸ್ವಚ್ಛವಾದ ಮೆದುವಾದ ಹಾಸಿಗೆ ಬರೀ ಪ್ರಣಯಕ್ಕೆ ಮೀಸಲಿರಿಸಿ. ದೈನಂದಿನ ಚಟುವಟಿಕೆಗಳನ್ನು ಎಂದಿಗೂ ಮಂಚದ ಹತ್ತಿರಕ್ಕೆ ತರಬೇಡಿ. ಮಲಗುವ ಕೋಣೆಯ ಗೋಡೆ ಬಣ್ಣ ಸಾಮಾನ್ಯವಾಗಿ ತಿಳಿ ಬಣ್ಣದ್ದಾಗಿರಲಿ ನೀಲಿ, ಪಿಂಕ್ ಓಕೆ. ಹಾಸಿಗೆ ಮೇಲಿನ ಹಾಸು ದಿಂಬು ಕವರ್ ಕೂಡಾ ಇದಕ್ಕೆ ಪೂರಕವಾಗಿರಲಿ.
* ಕೊಠಡಿಯ ಬಾಗಿಲು ಚಿಲಕ, ಮಂಚ, ಕಿಟಕಿಗಳು ಸದ್ದು ಮಾಡದ ಹಾಗೆ ಸುಸ್ಥಿತಿಯಲ್ಲಿರಿಸಿ. ಸೀಲಿಂಗ್ ಫ್ಯಾನ್ ಇದ್ದರೆ ಅದರ ಸ್ವ ಚ್ಛತೆಯೂ ಮುಖ್ಯ.
* ವಾಲ್ ಹ್ಯಾಗಿಂಗ್, ಪ್ರಣಯೋತ್ಸಾಹದ ಚಿತ್ರಗಳು(ತೀರಾ ಅಶ್ಲೀಲ ಚಿತ್ರಗಳು ಬೇಡ). ಸರಳವಾದ ಅಲಂಕಾರಿಕ ವಸ್ತುಗಳು ಮಂಚದ ಪಕ್ಕದ ಟೇಬಲ್ ನಲ್ಲಿರಲಿ. ಉತ್ಸಾಹ ಕುಗ್ಗಿಸುವ ಪದಾರ್ಥಗಳನ್ನು ಆದಷ್ಟು ದೂರವಿರಿಸಿ.
ಪ್ರಶಾಂತವಾದ ವಾತಾವರಣ,ಸರಳ ಸುಂದರ ಶಯನ ಗೃಹ, ಪ್ರೇಯಸಿಯ ಸಂಗವಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇಕೆ ತಡ. ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕ್ಕೆ .. ಜೊನ್ನ ಜೇನಿಗೆ ಬಾಯಾರಿದೆ .. ಚಕೋರಿ ಚುಂಬನ ಎಂದು ಕುವೆಂಪು ರಚಿತ ಪ್ರಣಯ ಗೀತೆ ಹಾಡುತ್ತಾ 'ಕಾಂಕ್ಷಿಯಾಗಿದೆ ನಗ್ನಯೋಗ'ಕ್ಕೆ ಎಂದು ಸುಖಾನುಭವ ಪಡೆಯಿರಿ.