•  

ಆಕರ್ಷಕ ಸ್ತನ ಹೊಂದಲು ಒಂದು ಸೀಸೆ ಸಾಕು

Array
Boob Job Now In A Bottle
 
ಸ್ತ್ರೀಯರೇ, ತಲೆಬರಹ ನೋಡಿ ತಲೆ ಕೆಡಿಸಿಕೊಳ್ಳಬೇಡಿ. ಸೀಸೆ ಎಂದರೆ ಯಾವ ಸೀಸೆ ಎಂದು ಪ್ರಶ್ನಿಸಬೇಡಿ. ಪೀಠಿಕೆಯಲ್ಲೇ ಉತ್ತರ ಹೇಳ್ಬಿಡ್ತೀನಿ. ಆಕರ್ಷಕ ಸ್ತನ ಹೊಂದಲು, ಬೇಕಾದ ಶೇಪ್ ಪಡೆಯಲು ಪುಷ್ ಅಪ್ ಹಾಗೂ ಪ್ಯಾಡೆಡ್ ಬ್ರಾಗಳಿಗೆ ಮೊರೆ ಹೋಗುತ್ತಿದ್ದ ಲಲನೆಯರು ಇನ್ಮುಂದೆ ಒಂದು ಬಾಟಲಿ ಕ್ರೀಮ್ ತಮ್ಮ ಬಳಿ ಇಟ್ಟುಕೊಂಡರೆ ಸಾಕಂತೆ.

ದೇಹ ಹಾಗೂ ಚರ್ಮದ ರಕ್ಷಣೆ, ಸೌಂದರ್ಯಕ್ಕಾಗಿ ಅನೇಕಾನೇಕ ಉತ್ಪನ್ನಗಳನ್ನು ಹೊರ ತಂದಿರುವ ಲಂಡನ್ ಮೂಲದ ರೊಡಯಲ್ ಸಂಸ್ಥೆ, ಈ ಹೊಸ ಆವಿಷ್ಕಾರವನ್ನು ಮಾಡಿದೆ. 100 ಎಂಎಲ್ ಟ್ಯೂಬ್ ನ ಕ್ರೀಮ್ ಇದ್ದರೆ ಸಾಕು. ನಿಮ್ಮ ಸ್ತನದ ಗಾತ್ರವನ್ನು ಎರಡು ತಿಂಗಳಿಗೆ ಅರ್ಧ ಕಪ್ ನಂತೆ ಹೆಚ್ಚಿಸುತ್ತಾ ಹೋಗುತ್ತದೆ. ಇದರಿಂದ ಯಾವುದೇ ಸೈಡ್ ಎಫೆಕ್ಟ್ ಭಯಬೇಡ, ದೇಹದಲ್ಲಿ ಸುಕ್ಕು ಕೂಡಾ ಉಂಟಾಗದು ಎಂದು ಸಂಸ್ಥೆ ಹೇಳಿಕೊಂಡಿದೆ.

ಎದೆಯಲ್ಲಿರುವ ಕೊಬ್ಬಿನ ಕೋಶಗಳ ಮೇಲೆ ಈ ಕ್ರೀಮ್ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ, ಸ್ತನಗಳ ಗಾತ್ರವನ್ನು ಹಿಗ್ಗಿಸಿ, ಮೇಲ್ಮುಖಕ್ಕೆ ಒಯ್ಯುತ್ತದೆ. ಸ್ತನಗಳಿಗೆ ಗಟ್ಟಿತನ ನೀಡಿ, ಆಕರ್ಷಕವಾಗಿಸುತ್ತದೆ. ಇದು ಪ್ರಯೋಗಿಕ ಸತ್ಯ. ಬೇಕಾದರೆ ನಿಮ್ಮ ನೆಚ್ಚಿನ ತಾರೆಗಳಾದ ಸ್ಕಾರ್ಲೆಟ್ ಜಾನ್ಸನ್, ವಿಕ್ಟೋರಿಯಾ ಬೆಕಮ್ ಅಥವಾ ಕೆಲ್ಲಿ ಬ್ರೂಕ್ಸ್ ರನ್ನೇ ಕೇಳಿ ಎಂದು ರೊಡಯಲ್ ಸಂಸ್ಥೆ ಸವಾಲು ಹಾಕುತ್ತದೆ.

ಆದರೆ, ರೊಡಯಲ್ ನ ಜಾಹೀರಾತಿಗೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿರುವ ಲಂಡನ್ ಮೂಲದ ಖ್ಯಾತ ಪ್ಲಾಸ್ಟಿಕ್ ಸರ್ಜನ್ ಡಾಲಿಯಾ ನೈಲ್ಡ್,ರೊಡಯಲ್ ಸಂಸ್ಥೆ ಅವರ ಉತ್ಪನ್ನ ಆಕರ್ಷಕವಾಗಿದೆ ನಿಜ. ಆದರೆ, ಕ್ರೀಮ್ ತಯಾರಿಸಲು ಬಳಸಿದ ಸಾಮಾಗ್ರಿಗಳ ಬಗ್ಗೆಯಾಗಲಿ, ಪ್ರಾಡಕ್ಟ್ ಬಳಕೆ ಮಾಡಿದ ನಂತರ ಆಗುವ ಪರಿಣಾಮದ ಬಗ್ಗೆ ಯಾಗಲಿ ಸಂಪೂರ್ಣ ಮಾಹಿತಿ ನೀಡಿಲ್ಲ. ಸ್ತನಗಳ ಗಾತ್ರವನ್ನು ಹೇಗೆ ಹೆಚ್ಚಿಸುತ್ತದೆ ಎಂಬುದಕ್ಕೆ ರೊಡಯಲ್ ಸಂಸ್ಥೆ ಇನ್ನೂ ಉತ್ತರ ನೀಡಿಲ್ಲ ಎಂದಿದ್ದಾರೆ.

ಆದರೆ, ಈ ಬಗ್ಗೆ ತಲೆ ಕೆಡಿಸಿಕೊಳ್ಳದ ರೊಡಯಲ್, ಸಾವಿರಾರು ಮಹಿಳೆಯರ ಜೀವನ ಶೈಲಿ ಬದಲಾಯಿಸಿ, ಕ್ರಾಂತಿಕಾರಿ ಉತ್ಪನ್ನವಾಗಿ ಹೊರ ಹೊಮ್ಮಲಿದೆ ಎಂಬ ವಿಶ್ವಾಸ ಹೊಂದಿದೆ. ಸ್ತನದ ಗಾತ್ರ ಬದಲಾವಣೆಗೆ ಸರ್ಜರಿ ಅಗತ್ಯವಿಲ್ಲ. ನಮ್ಮ 'boob job in a bottle'. ಕ್ರೀಮ್ ಬಳಸಿದರೆ ಸಾಕು ಎಂದು ಸ್ಕಾರ್ಲೆಟ್ ಜಾನ್ಸನ್ ಫೋಟೋ ಸಮೇತ ವೆಬ್ ನಲ್ಲಿ ಜಾಹೀರಾತು ನೀಡಿ ಕಿಚ್ಚು ಹಬ್ಬಿಸಿದೆ.

English summary
Boob job in a bottle', is a cream introduced by Rodial. They claim, the cream can increase breast size by half a cup in two months time.
Story first published: Monday, October 4, 2010, 15:53 [IST]

Get Notifications from Kannada Indiansutras

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Indiansutras sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Indiansutras website. However, you can change your cookie settings at any time. Learn more