•  

ಶೀಘ್ರ ಸ್ಖಲನ ನಿಯಂತ್ರಣಕ್ಕೆ ಸುಲಭೋಪಾಯಗಳು

Array
Control Premature Ejaculation
 
ಎಲ್ಲಾ ವಿಷಯದಲ್ಲೂ ಶಾರ್ಟ್ ಅಂಡ್ ಸ್ವೀಟ್ ಆಗಿರುವುದನ್ನು ಇಷ್ಟಪಡುವ ಗಂಡಸರು, ಸಂಭೋಗದ ವಿಷಯಕ್ಕೆ ಬಂದರೆ ಮಾತ್ರ ಟ್ವೆಂಟಿ 20 ಮ್ಯಾಚ್ ಗಿಂತ ಟೆಸ್ಟ್ ಮ್ಯಾಚ್ ನಂತೆ ಲಭ್ಯವಿರುವ ರಾತ್ರಿಯ ಪೂರ್ಣಾವಧಿ ವಿಜೃಂಭಿಸುವುದು ಎಲ್ಲಾ ಪುರುಷ ಪುಂಗವರ ಗುರಿ, ಬಯಕೆ.

ಆದರೆ, ನೂರಕ್ಕೆ ಶೇ. 25ರಷ್ಟು ಜನಕ್ಕೆ ಇಚ್ಛೆ ಅರಿತ ಪ್ರಿಯೆ ಜೊತೆಗಿದ್ದು, ಸುಖದ ಪಲ್ಲಂಗವಿದ್ದರೂ, ಫಸ್ಟ್ ಓವರ್ ಶುರು ಆಗುವುದರೊಳಗೆ ಲಾಸ್ಟ್ ಓವರ್ ಲಾಸ್ಟ್ ಬಾಲ್ ಸ್ಥಿತಿ ತಲುಪಿ ಬಿಟ್ಟಿರುತ್ತಾರೆ. ಮಧ್ಯೆ ಪವರ್ ಪ್ಲೇ ಎಂಬುದು ನಿರರ್ಥಕವಾಗಿ ಬಿಡುತ್ತದೆ. ಇದನ್ನೇ ಇನ್ನೊಂದು ರೀತಿ ಹೇಳುವುದಾದರೆ, ರಾಸಕ್ರೀಡೆಯ ಫಸ್ಟ್ ಸೀನ್ ಶುರುವಾದ ಮರುಕ್ಷಣವೇ ಕ್ಲೈಮ್ಯಾಕ್ಸ್ ಕಾಣಿಸಿಬಿಟ್ಟು ನಿರಾಶೆ ಮೂಡಿಸಿಬಿಡುತ್ತದೆ. ಪುರುಷರನ್ನು ಕಾಡುವ ಈ ಶೀಘ್ರ ಸ್ಖಲನ, ಕೆಲವೊಮ್ಮೆ ಪುರುಷತ್ವವನ್ನೇ ಪ್ರಶ್ನೆಗೀಡು ಮಾಡಿಬಿಡುತ್ತದೆ.

ಶೀಘ್ರಸ್ಖಲನ ಲೈಂಗಿಕ ತೊಂದರೆಯಾದರೂ, ಪರಿಹರಿಸಬಹುದಾದ ಸಮಸ್ಯೆ. ಮೊದಲಿಗೆ ಬೇಕಾದ್ದು, ಒಂದಿಷ್ಟು ಆತ್ಮವಿಶ್ವಾಸ. ಕೆಲ ನೈಸರ್ಗಿಕ ಉಪಾಯಗಳನ್ನು ಕ್ರಮವಾಗಿ ಅನುಸರಿಸಿದರೆ ನಿಮ್ಮ ಪ್ರೇಯಸಿಯ ಮನ ತಣಿಸುವುದು ಸುಲಭವಾದೀತು. ಅವಿರತವಾಗಿ ಕಾಮಕೇಳಿಯಲ್ಲಿ ತೊಡಗಲು ಈ ಕೆಳಗಿನ ಸಲಹೆಗಳನ್ನು ಪ್ರಯತ್ನಿಸಬಹುದು.

* ಲೈಂಗಿಕ ಕ್ರಿಯೆಯ ಭಂಗಿ: ಶೀಘ್ರ ಸ್ಖಲನವನ್ನು ನಿಯಂತ್ರಿಸಬೇಕೆನ್ನುವವರು ಸಂಭೋಗ ಸಮಯದ ಭಂಗಿಗಳ ಮೇಲೆ ಕೊಂಚ ಗಮನ ಹರಿಸುವುದು ಒಳ್ಳೆಯದು. ನಿಮ್ಮ ದೇಹ ಸಮತೋಲನದಲ್ಲಿರಿಸಬಹುದಾದ ಭಂಗಿಗಳನ್ನು ಮಾತ್ರ ಪ್ರಯತ್ನಿಸಿ. ಅಂಗಾತ ಮಲಗಿಕೊಂಡ ಭಂಗಿ ಅಥವಾ ಪಶುಗಳ ರೀತಿ ಸಂಭೋಗ ಕ್ರಿಯೆ ನಡೆಸುವುದು ಸರಳ ಹಾಗೂ ಸುರಕ್ಷಿತ. ಅಲ್ಲದೆ, ಈ ಭಂಗಿಗಳಲ್ಲಿ ಲೈಂಗಿಕ ಕ್ರಿಯೆ ನಡೆಸುವಾಗ ಶಿಶ್ನ ಹೆಚ್ಚಿನ ಪ್ರಮಾಣದ ರಕ್ತ ಹರಿದು ಬರುತ್ತದೆ. ಹಾಗೂ ಶೀಘ್ರವಾಗಿ ವೀರ್ಯ ಸ್ಖಲನವಾಗುವುದು ನಿಯಂತ್ರಣದಲ್ಲಿರುತ್ತದೆ.

* ಸ್ಪರ್ಶಕ್ಕೆ ಮಹತ್ವ ಕೊಡಿ: ಕಾಂಡೋಮ್ ಬಳಸುವುದರಿಂದ ಕೆಲ ಹಂತದವರೆಗೂ ಶೀಘ್ರ ಸ್ಖಲನವನ್ನು ನಿಯಂತ್ರಿಸಬಹುದು ಎನ್ನುತ್ತಾರಾದರೂ, ಸರಿಯಾದ ಪುರಾವೆಯಿಲ್ಲ. ಹೆಚ್ಚು ಜನ ಪೂರ್ಣ ಸುಖಾನುಭವಕ್ಕೆ ಕಾಂಡೋಮ್ ಅಡ್ಡಿ ಎಂದು ತಿಳಿದಿರುವುದರಿಂದ ಕಾಂಡೋಮ್ ಬಳಕೆಯಿಂದ ಸ್ಖಲನ ನಿಯಂತ್ರಯಿಸಬಹುದು ಎಂಬುದು ತಜ್ಞರ ಅಭಿಪ್ರಾಯವಷ್ಟೇ ಆಗಿದೆ. ಕಾಂಡೋಮ್ ಬಳಸಿ, ಅಥವಾ ಬಳಸದೆ ಇರಿ, ಸಂಭೋಗ ಕ್ರಿಯೆಗೂ ಮುನ್ನ ರಸಿಕ ಚೇಷ್ಟೇಗಳಲ್ಲಿ ತೊಡಗಿಕೊಳ್ಳಿ. ಚುಂಬನ, ಅಪ್ಪುಗೆ, ಸ್ಪರ್ಶ ಕ್ರಿಯೆಯಲ್ಲಿ ಹೆಚ್ಚು ಹೊತ್ತು ಕಾಲ ಕಳೆಯ ಮೂಲಕ ಶೀಘ್ರ ಸ್ಖಲನಕ್ಕೆ ಕೊಂಚ ಬ್ರೇಕ್ ಹಾಕಬಹುದು. ನಿಮ್ಮ ಸಂಗಾತಿಯಲ್ಲಿ ಕಾಮದಲ್ಲಿ ನಿರಾಸಕ್ತಿ ಮೂಡದಂತೆ ನೋಡಿಕೊಳ್ಳಿ, ಹಾರ್ಮೋನ್ ಹೆಚ್ಚು ಕಮ್ಮಿಯಾಗಿ ನಿಮ್ಮ ಆತುರಕ್ಕೆ ಅವರ ನಿರಾಸಕ್ತಿ ಬೆರತು ರಸಕ್ರೀಡೆ ರಸಹೀನವಾದರೆ ಕಷ್ಟ.

* ಅಸಮತೋಲನ ಆಹಾರ: ಶೀಘ್ರ ಸ್ಖಲನಕ್ಕೆ ಸಂಗಾತಿ ಎಂಬಂತೆ ಪುರುಷರಲ್ಲಿ ವಕ್ಕರಿಸುವ ಇನ್ನೊಂದು ಸಮಸ್ಯೆ ಎಂದರೆ ಶಿಶ್ನ ನಿಮಿರದಿರುವುದು. ಶಿಶ್ನ ಉದ್ರೇಕಗೊಳ್ಳಬೇಕಾದರೆ ಮೊದಲಿಗೆ ಸರಿಯಾದ ಆಹಾರ ಸೇವನೆ ಅಗತ್ಯ. ನಿಮ್ಮ ಆಹಾರದಲ್ಲಿ ಪ್ರೋಟಿನ್, ವಿಟಮಿನ್ನು, ಖನಿಜ ಹಾಗೂ ನಾರುಯುಕ್ತ ಪದಾರ್ಥಗಳು ಹೆಚ್ಚಾಗಿರಲಿ. ಕಾರ್ಡೊ ಹೈಡ್ರೈಡ್ ಗಳ ಬಳಕೆ ಅತ್ಯಗತ್ಯ. ಡಾರ್ಕ್ ಚಾಕಲೋಟ್, ಬ್ರೆಡ್, ಗೋಧಿ, ಓಟ್ಸ್, ಅಕ್ಕಿ, ಒಣ ಹಣ್ಣುಗಳು. ..ಇತ್ಯಾದಿ ದಿನ ನಿತ್ಯ ನಿಮ್ಮ ಉದರ ಸೇರಲಿ. ಇದರಿಂದ ನಿಮ್ಮ ಅಂಗಾಂಗಳು ಪುಟಿದೇಳಲು ಸಹಾಯವಾಗುತ್ತದೆ.


* ಮಾದಕ ದ್ರವ್ಯ ಸೇವನೆ: ಧೂಮಪಾನ ಹಾಗೂ ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಇದು ಕೇವಲ ಸರ್ಕಾರಿ ಜಾಹೀರಾತಿನ ಹೇಳಿಕೆ ಎಂದು ತಳ್ಳಿ ಹಾಕಿದರೆ ನಿಮ್ಮಿಷ್ಟ. ಹೆಚ್ಚು ಧೂಮಪಾನ ಮಾಡಿದರೆ, ಉಸಿರಾಟದ ಮೇಲೆ ನಿಯಂತ್ರಣ ತಪ್ಪುತ್ತದೆ, ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಹೊತ್ತು ತೊಡಗಿಕೊಳ್ಳಲು ಅಸಾಧ್ಯವಾಗುತ್ತದೆ. ಮದ್ಯಪಾನ ವೃಷಣದ ಮೇಲೆ ಪರಿಣಾಮ ಬೀರುವುದರಿಂದ ಹಾಗೂ ಮಲ್ಲಿಗೆ ಘಮ ಘ್ರಾಣಿಸುವ ಹೊತ್ತಿನಲ್ಲಿ ಹೆಂಡ ಸಾರಾಯಿ ವಾಸನೆ ಮೂಗಿಗೆ ಬಡಿದರೆ ಸಹಿಸುವುದು ನಿಮ್ಮ ಸಂಗಾತಿಗೆ ಕಷ್ಟವಾದೀತು. ಇನ್ನೂ ಮಾದಕ ದ್ರವ್ಯಗಳು, ಸ್ಟೆರಾಯ್ಡ್ ಗಳು, ನೀಲಿ ಗುಳಿಗೆಗಳನ್ನು ದಯವಿಟ್ಟು ಸೇವಿಸಬೇಡಿ. ಇರುವ ಅಲ್ಪಸ್ವಲ್ಪ ಪವರ್ ಕೂಡಾ ಈ ಮಾತ್ರೆಗಳು ಹೀರಿ ಬಿಡುತ್ತವೆ. ಈ ವಿಷಯದಲ್ಲಿ ವೈದ್ಯರ ಸಲಹೆ ಪಡೆದು ವರ್ತಿಸುವುದು ಉತ್ತಮ.

* ದೈಹಿಕ ಕಸರತ್ತು: ರಸಕ್ರೀಡೆಗೂ ಮುನ್ನ ಮೈ ಕೈ ಗಾಳಿಯಲ್ಲಿ ಬೀಸಿ ತಯಾರಿ ನಡೆಸಿದರೆ ಅಡ್ಡಿಯಿಲ್ಲ. ಆದರೆ ಸಂಭೋಗದ ನಂತರ ದೈಹಿಕ ಕಸರತ್ತು ಮಾಡಬೇಡಿ. ದೈನಂದಿನ ದಿನಚರಿಯಲ್ಲಿ ದೈಹಿಕ ಕಸರತ್ತಿಗೆ ಎಂದು ಕೊಂಚ ಕಾಲ ಮೀಸಲಿಡಿ. ಕಿಬ್ಬೊಟ್ಟೆ ಪ್ರದೇಶಕ್ಕೆ ಅನುಕೂಲವಾದ ಕೆಲ ವ್ಯಾಯಾಮಗಳನ್ನು ನಿರಂತರವಾಗಿ ಮಾಡುತ್ತಾ ಬನ್ನಿ ಇದರಿಂದ ಶೀಘ್ರ ಸ್ಖಲನ ನಿಯಂತ್ರಿಸಬಹುದು. ಡಾ. ಕೆಜೆಲ್ ಕಂಡು ಹಿಡಿದ ಕೆಜೆಲ್ ವ್ಯಾಯಾಮವನ್ನು ಅಭ್ಯಾಸ ಮಾಡುವುದರಿಂದ ಶಿಶ್ನವನ್ನು ಗಡುಸಾಗಿ, ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ಯೋಗಭ್ಯಾಸ ಕೂಡಾ ಉತ್ತಮ ಪರಿಹಾರ. ವೀರ್ಯ ನಿಯಂತ್ರಣದಲ್ಲಿ ಮಹತ್ ಸಾಧನೆ ಮಾಡಿರುವ ಅಘೋರಿಗಳು ಕೂಡಾ, ಸಂಭೋಗ ಕ್ರಿಯೆಯಲ್ಲಿ ತೊಡಗಿದರೂ, ವೀರ್ಯ ಮಾತ್ರ ಅವರ ಇಚ್ಛೆಯಂತೆ ನಿಯಂತ್ರಣಕ್ಕೊಳಪಟ್ಟಿರುತ್ತದೆ. ಇದಕ್ಕೆಲ್ಲಾ ಅವಿರತವಾದ ಪ್ರಯತ್ನ ಹಾಗೂ ಯೋಗ ಸಾಧನೆ ಕಾರಣ.

ಶೀಘ್ರ ಸ್ಖಲನ ಪರಿಹರಿಸಬಹುದಾದ ಸಮಸ್ಯೆ ಎಂಬುದನ್ನು ಅರಿತುಕೊಂಡು, ಜೀವನ ಶೈಲಿಯಲ್ಲಿ ಸುಲಭ ಮಾರ್ಗೋಪಾಯಗಳ ಮೂಲಕ ಬದಲಾವಣೆ ಮಾಡಿಕೊಂಡರೆ, ನಿರಂತರವಾದ ಸುಖ ನಿಮ್ಮ ಸಂಗಾತಿಗೆ ನೀಡಲು ನೀವು ಸಮರ್ಥರಾಗುತ್ತೀರಿ. ಪ್ರಯತ್ನಿಸಿ.

English summary
Fear not Key : Experts believe 8 out of 10 men will suffer from premature ejaculation at some point in their lives. It is a problem that is more common than you think and one that is rarely a long lasting medical problem. For most men FEAR is the problem. Thatskannada tips how to beat the fear and double your enjoyment.
Story first published: Monday, November 22, 2010, 13:08 [IST]

Get Notifications from Kannada Indiansutras