ಪಾಶ್ಚಾತ್ಯ ರಾಷ್ಟ್ರ , ಅದರಲ್ಲೂ ಇಂಗ್ಲೆಂಡಿನಲ್ಲಿ ಕಾಮಸೂತ್ರ ಇಷ್ಟೊಂದು ಬೇಡಿಕೆ ಇದೆ ಎಂದರೆ ಅಲ್ಲಿನವರು ಲೈಂಗಿಕ ವಿಷಯದಲ್ಲಿ ಏನೋ ಗಂಭೀರ ಸಂಶೋಧನೆಗೆ ಮನಸ್ಸು ಮಾಡಿದ್ದಾರೆ ಎಂದನ್ನಿಸುತ್ತಿದೆ. ಸಂಸ್ಕೃತದಲ್ಲಿರುವ ಕಾಮಸೂತ್ರವನ್ನು ಭಾರತೀಯ ಸಾಹಿತಿ ಎಎನ್ ಡಿ ಹಕ್ಸರ್ "Kama Sutra: The Art of Pleasure' ಎಂದು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಪಾಶ್ಚಾತ್ಯರು ಲೈಂಗಿಕಾಸಕ್ತಿ ಬಗ್ಗೆ ಎಷ್ಟೆ ಮುಂದುವರಿದಿದ್ದರೂ, ಅವರಲ್ಲಿ ಕಾಮಸೂತ್ರದಲ್ಲಿ ಉಲ್ಲೇಖಿಸಲಾದ ಒಂದೇ ಒಂದು ಗುಣ ಕಂಡು ಬರುವುದಿಲ್ಲ. ಈ ಪುಸ್ತಕ ಓದಿದರೆ ಕಾಮದ ನಿಜವಾದ ಅರ್ಥ ತಿಳಿದು ಬರುತ್ತದೆ. ಕಾರಣ, ಉದ್ರಿಕ್ತರಾದ ಇಂಗ್ಲಿಷರು ಈ ಪುಸ್ತಕಕ್ಕೆ ಮುಗಿಬಿದ್ದಿದ್ದಾರೆ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
ಕಾಮ ಎಂದರೆ ಕೇವಲ ಭೋಗಿಸುವುದಲ್ಲ, ಅದರಲ್ಲಿ ಜೀವನ ಕಲೆಯೂ ಅಡಗಿದೆ ಎಂಬುದು ಈ ಪುಸ್ತಕ ತಿರುಳಾಗಿದೆ. ಏನೇ ಇದ್ದರೂ ವರ್ಷಗಳ ಬಳಿಕ ನಮ್ಮ ಕಾಮಸೂತ್ರಕ್ಕೆ ವಿದೇಶದಲ್ಲಿ ಮಹತ್ವ ಸಿಕ್ಕಿದೆ ಎಂದರೆ ನಿಜಕ್ಕೂ ಮೆಚ್ಚತಕ್ಕದ್ದು . ಆದರೆ ಈ ಪುಸ್ತಕ ಬ್ರಿಟಿಷರ ಕಾಮ ಹೆಚ್ಚಿಸುತ್ತದೋ ಜ್ಞಾನ ಹೆಚ್ಚಿಸುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.
ಮಾಧ್ಯಮಗಳಲ್ಲಿ ಹಕ್ಸರ್ ಮಿಂಚಿಂಗ್ : ಎಎನ್ ಡಿ ಹಕ್ಸರ್ ಅವರ ಪುಸ್ತಕದ ಬಗ್ಗೆ ಆಂಗ್ಲ ಮಾಧ್ಯಮಗಳು ಏಕಕಾಲಕ್ಕೆ ಹೊಗಳಿಕೆಯ ಸಾಲುಗಳನ್ನು ಸೇರಿಸಿವೆ. ಡೈಲಿ ಮೇಲ್, ದ ಗಾರ್ಡಿಯನ್, ದಿ ಇಂಡಿಪೆಂಡೆಂಟ್ ಮುಂತಾದ ಪ್ರಮುಖ ಪತ್ರಿಕೆಗಳಲ್ಲಿ ಹಕ್ಸರ್ ಅವರದ್ದೇ ಸುದ್ದಿ. ಧರ್ಮ, ಅರ್ಥ ಹಾಗೂ ಕಾಮ ಹೀಗೆ ಪುರುಷಾರ್ಥಗಳ ಒಳ ಅರ್ಥವನ್ನು ತಿಳಿಯಲು ಬ್ರಿಟಿಷರು ಆರಂಭಿಸಿದ್ದಾರೆ.
ವಿವಾಹ ಬಂಧನ, ಲೈಂಗಿಕ ತೃಷೆ, ಸಂಭೋಗ ಭಂಗಿಗಳು, ಕಾಮನೆಗಳ ನಿಗ್ರಹ, ಲೈಂಗಿಕ ಆರೋಗ್ಯಕ್ಕೆ ಸಲಹೆಗಳು ಸೇರಿದಂತೆ ಮಾನವನ ಸಹಜ ಭಾವನೆಗಳ ಬಗ್ಗೆ ಶಾಸ್ತ್ರೋಕ್ತವಾಗಿ ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಭಾರತದ ಪುರಾತನ ಶಿಲ್ಪಕಲೆಯಲ್ಲಿ ಅಡಗವಾಗಿರುವ ಎಷ್ಟೋ ಸಂಗ್ರಹಯೋಗ್ಯ ಮಾಹಿತಿಗಳು ಪುಸ್ತಕ ರೂಪದಲ್ಲಿ ಕಾಣಸಿಗುತ್ತಿದೆ. ಸರ್ ರಿಚರ್ಡ್ ಬರ್ಟನ್ ಅನುವಾದಿತ ಕೃತಿಗಿಂತ ಇದರಲ್ಲಿ ಉತ್ತಮ ಅಂಶಗಳು ಓದುಗರಿಗೆ ಸಿಗುತ್ತದೆ ಎಂದು ಇಂಡಿಪೆಂಡೆಂಟ್ ವರದಿ ಮಾಡಿದೆ.
"Making a Pass", "Why Women Get Turned Off", "Girls to Avoid", "Is he Worthwhile?", "Getting rid of him", "Easy Women", "Moves towards sex", and "Some Dos and Don'ts" ಮುಂತಾದ ಕೃತಿಗಳನ್ನು ರಚಿಸಿರುವ ಸಂಸ್ಕೃತ ಪಂಡಿತ ಹಕ್ಸರ್ ಅವರನ್ನು ಬ್ರಿಟಿಷರು ಆಧುನಿಕ ವಾತ್ಸಾಯನನಂತೆ ಕಾಣುತ್ತಿರುವುದು ಸುಳ್ಳಲ್ಲ.