•  

ಕಾಮಕ್ರೀಡೆ: ಕಾಮಿನಿಯರ ಕಾಮನ್ ಮಿಸ್ಟೇಕ್ಸ್

Array
Lovemaking Mistakes Women
 
ಲೈಂಗಿಕ ಕ್ರಿಯೆಯಲ್ಲಿ ಪುರುಷರಿಗೆ ಆತುರ ಜಾಸ್ತಿ, ಪುರುಷರಿಗೆ ಸದಾ ಅದೇ ಚಿಂತೆ ಹಾಗಾಗಿ ಮಿಸ್ಟೇಕ್ ಬೇಜಾನ್ ಮಾಡ್ತಾರೆ ಎಂಬ ಲೈಂಗಿಕಾಸಕ್ತಿ ನಂಬಿಕೆಗಳ ಬಗ್ಗೆ ಕಳೆದ ಲೇಖನದಲ್ಲಿ ನೋಡಿದ್ದೀರಿ. ಆದರೆ, ಈ ರೀತಿ ನಂಬಿಕೆ, ಮಿಸ್ಟೇಕ್ಸ್ ನಿಂದ ಮಹಿಳೆಯರೇನು ಹೊರತಲ್ಲ. ಮಾನಿನಿಯರು ಕಾಮಿನಿಯರಾಗಿ ಕಾಡುವ ಬಯಕೆಯ ತೀರಿಸಿಕೊಳ್ಳುವ ತವಕವಲ್ಲಿ ಮಾಡುವ ತಪ್ಪುಗಳು ಹಾಗೂ ಕೆಲ ವಿಷಯಗಳಲ್ಲಿ ಮಹಿಳೆಯರಿಗಿರುವ ತಪ್ಪುಗ್ರಹಿಕೆಗಳು ಕೆಲವೊಮ್ಮೆ ಮುಜುಗರ ಉಂಟು ಮಾಡುತ್ತವೆ. ಆದರೆ, ಹೆಣ್ಣು ಜಾಣೆ, ತನ್ನ ತಪ್ಪುಗಳನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಅಮಾಯಕತ್ವದ ಶ್ರೀರಕ್ಷೆಯಲ್ಲಿ ಪುರುಷನನ್ನು ಬಂಧಿಸಿಬಿಡುತ್ತಾಳೆ.

ಆದರೆ, ಮಹಿಳೆಯರ ಕೆಲ ತಪ್ಪು ಗ್ರಹಿಕೆ ಅವರ ಲೈಂಗಿಕ ಜೀವನಕ್ಕೆ ತೊಂದರೆಯಾಗಬಾರದು. ಅದಕ್ಕಾಗಿ ಕೆಲ ಬಿಟ್ಟಿ ಉಪದೇಶಗಳು ಇಲ್ಲಿವೆ. ಕಾಮಕ್ರೀಡೆಯಲ್ಲಿ ಇನ್ನಷ್ಟು ಪಳಗಿ, ಪುರುಷರ ಮನೋಕಾಮನೆ ತೀರಿಸಲು ಇವು ಅನುಕೂಲವಾಗಬಹುದು.

* ಸ್ವಪ್ರತಿಷ್ಠೆ ಬಿಟ್ಟು ಬಿಡಿ. ಇವು ಜಗದೇಕ ಸುಂದರಿ ಇರಬಹುದು. ಆದರೆ, ಲೈಂಗಿಕ ಕ್ರಿಯೆ ವಿಷಯಕ್ಕೆ ಬಂದರೆ ಪರಸ್ಪರ ಕೊಟ್ಟು ತಗೋ ಕ್ರಿಯೆಗೆ ಶರಣಾಗಲೇಬೇಕು. ನಾನೇ ಗ್ರೇಟ್ ಎನ್ನುವಂತೆ ಬೀಗಿದರೆ, ಆತುರುಗಾರ ಪುರುಷನಿಗೆ ಸಹಿಸಲು ಅಸಾಧ್ಯವಾದೀತು. ಇಬ್ಬರು ಸಮಾನರು ಎಂಬ ಅಂಶ ನೆನಪಿಡಿ. ಆಗ ಮಾತ್ರ ಸ್ವರ್ಗ ಸುಖ ಪಡೆಯಲು ಸಾಧ್ಯ.

* ಸಂಭೋಗ ಸುಖ ಅನುಭವಿಸಿದ ತಕ್ಷಣವೆ ನಿದ್ರೆಗೆ ಜಾರುವುದು ಬಹುತೇಕ ಪುರುಷರ ಜಾಯಮಾನ. ಆದರೆ, ಇದನ್ನು ಸಹಿಸದ ಮಹಿಳೆಯರು ಗೊಣಗುಟ್ಟುವುದು, ಸಂಗಾತಿಯ ಸುಖನಿದ್ರೆಯನ್ನು ಹಾಳು ಮಾಡುವುದು ಸಾಮಾನ್ಯವಾಗಿ ಸಮಸ್ಯೆಗೆ ಕಾರಣವಾದೀತು. ಈ ರೀತಿ ಚರ್ಯೆ ಹೆಚ್ಚು ಆಯಾಸಗೊಳ್ಳದ ಮಹಿಳೆಯರಲ್ಲಿ ಕಂಡುಬರುತ್ತದೆ. ಆದರೆ, ಪುರುಷರೇನು ಸೆಕ್ಸ್ ಮೆಷಿನ್ ಗಳಲ್ಲ, ಯಂತ್ರಗಳಂತೆ ಕಾರ್ಯನಿರ್ವಹಿಸುವುದಕ್ಕೆ ಎಂಬುದನ್ನು ನೆನಪಿಡಿ. ಈ ವಿಷಯದಲ್ಲಿ ಮಾತ್ರ ಪುರುಷರನ್ನು ಹಿಂಬಾಳಿಸುವುದನ್ನು ಸ್ವಲ್ಪ ಕಲಿಯಿರಿ.

* ಪ್ರತಿ ಪುರುಷರು ತನ್ನ ಮನದನ್ನೆಯನ್ನು ಶೃಂಗಾರ ಸಮಯದಲ್ಲಿ ಸುಂದರವಾಗಿ ಕಲ್ಪಿಸಿಕೊಳ್ಳುವುದಿದೆ. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಒರಟಾಗಿ ನಡೆದುಕೊಂಡು, ಪುರುಷರ ಮೂಡ್ ಹಾಳು ಮಾಡಿದರೆ ಎಲ್ಲಾ ವೇಸ್ಟ್ ಆಗುತ್ತದೆ. ದೇಹ ಸೌಂದರ್ಯದ ಬಗ್ಗೆ ಮಹಿಳೆಯರು ಕಾಳಜಿ ವಹಿಸುವುದು ಸಾಮಾನ್ಯ. ಆದರೆ, ಸರಿಯಾದ ತಯಾರಿ ಇಲ್ಲದೆ, ದೇಹದ ಅಲಂಕಾರವನ್ನು ಕೊಂಚವು ವೃದ್ಧಿಸಿಕೊಳ್ಳದೆ ಬೇಕಾಬಿಟ್ಟಿಯಲ್ಲಿ ನಿಂತು ಫೋಸ್ ಕೊಟ್ಟರೆ ಕೆಲಸ ಕೆಡುತ್ತದೆ.
ಮಹಿಳೆಯರೆ, ನಿಮ್ಮ ನಾಜೂಕುತನ ಇಷ್ಟಪಡುವ ನಿಮ್ಮ ಸಂಗಾತಿಗೆ ನಿಮ್ಮ ದೇಹದಲ್ಲಿ ಅನಗತ್ಯ ಕೂದಲು ಕಾಣಿಸಿಕೊಂಡರೆ ಅಷ್ಟೇ ಕಥೆ. ಅದರಲ್ಲೂ ದೇಹದ ಖಾಸಗಿ ಸ್ಥಳಗಳನ್ನು ಶುಚಿಗೊಳಿಸುವುದನ್ನು ಮರೆಯಬೇಡಿ.

* ಕಾಮಪ್ರಕ್ರಿಯೆಯಲ್ಲಿ ಪುರುಷರೇ ಆತುರಗಾರರಾದರೂ, ನಿಮ್ಮ ಸಂಗಾತಿಯ ಮನ ಇಂಗಿತವನ್ನು ಅರಿತು, ಸಮಯಕ್ಕೆ ಸರಿಯಾಗಿ ವಿವಸ್ತ್ರಳಾಗುವ ಕಲೆ ಸಿದ್ಧಿಸಿಕೊಳ್ಳಿ. ಲೈಂಗಿಕ ಕ್ರಿಯೆಗೆ ತೊಡಗುವ ಮುನ್ನ ಅತಿ ಹೆಚ್ಚು ನಾಚಿ, ಅತಿ ಬಿಗುಮಾನ, ಅತಿ ಆತ್ಮವಿಶ್ವಾಸ ಎಲ್ಲವೂ ಅನರ್ಥಕ್ಕೆ ಕಾರಣ. ಬೆಡ್ ಶೀಟ್ ಎಳೆದುಕೊಂಡು ಅಥವಾ ಕರ್ಟನ್ ಮರೆಯಲ್ಲಿ ಬಟ್ಟೆ ಕಳಚಿ ಅರಸಿಕತನ ತೋರಬೇಡಿ. ಸರ್ವ ಸಮರ್ಪಣೆಗೆ ಸಿದ್ಧ ಎಂಬ ಭಾವ ನಿಮ್ಮಲ್ಲಿರಲಿ. ಸಂಗಾತಿಯ ಸೆಳೆಯುವ, ಸೆಳೆದು ಕೈವಶ ಮಾಡಿಕೊಳ್ಳುವ ಕಲೆ ಮಾನನಿಗೆ ತಾನಾಗೇ ಇರುತ್ತದೆ ಆದರೆ, ಸೂಕ್ತ ಸಮಯಕ್ಕೆ ಪ್ರಕಟಗೊಳಿಸಬೇಕು ಅಷ್ಟೇ.

* ಸಂಭೋಗಕ್ಕೂ ಸಿಗುವ ಮೊದಲ ಮುತ್ತು, ಮೊದಲ ಸ್ಪರ್ಶದ ಹಿತಾನುಭವವನ್ನು ಪಡೆಯಲು ಹಿಂಜರಿಯಬೇಡಿ. ಪುರುಷರ ಜನನಾಂಗವಲ್ಲದೆ, ಅನೇಕ ಶಕ್ತಿ ಕೇಂದ್ರಗಳು ನಿಮಗಾಗಿ ಇರುವಾಗ ಎಲ್ಲವನ್ನು ಉದ್ದೀಪನಗೊಳಿಸಿ, ದೈಹಿಕ ತೃಪ್ತಿಗಿಂತ ಮಾನಸಿಕವಾಗಿ ಅನುಭವಿಸುವ ತೃಪ್ತಿ ಶಾಶ್ವತ ಎಂಬುದನ್ನು ನೆನಪಿಡಿ, ನಿಮ್ಮ ಮೃದುತ್ವದ ಲಾಭ ಪಡೆದು, ಕಾದ ಕುಲುಮೆಯಂತಿರುವ ಪುರುಷರ ಅಂಗಾಗಗಳನ್ನು ಕರಗಿಸಿಬಿಡಿ.

ಪತಿಯನ್ನು ಮೊದಲ ರಾತ್ರಿ ಗೆಲ್ಲುವ ಕಲೆ ಕರಗತ ಮಾಡಿಕೊಳ್ಳಬೇಕಾದರೆ, ಮೇಲ್ಕಂಡ ಕೆಲ ವಿಷಯಗಳತ್ತ ಗಮನಹರಿಸಬೇಕಾದ್ದು ಅವಶ್ಯ.ಲೈಂಗಿಕ ವಿಷಯದಲ್ಲಿ ತಪ್ಪುಗಳು ಆಗುವುದು ಸಹಜ ಆದರೆ, ಒಪ್ಪಿಕೊಂಡು ತಿದ್ದಿ ನಡೆದರೆ ಲೈಂಗಿಕ ಜೀವನ ನಿತ್ಯ ನೂತನ, ಸ್ವರ್ಗ ಸಮಾನ.

English summary
Unlike men who are more prone to making these mistakes, women never admit. But however these are some of the mistakes women do eventually make at some point in their life which in turn is really embarrassing for them. So use these lovemaking tips
Story first published: Tuesday, April 26, 2011, 13:18 [IST]

Get Notifications from Kannada Indiansutras