ಹೆಣ್ಣು ಮತ್ತು ಲೈಂಗಿಕ ಕ್ರಿಯೆ ಎಂದು ನೀವು ಪರಿಭಾವಿಸಿದ್ದರೆ ಅದು ತಪ್ಪು ತಪ್ಪು ತಪ್ಪು. ಖಾಸಗಿ ಕೆಲಸಗಳೂ ಸರಕಾರಿ ಕೆಲಸದಂತೆ ಇದ್ದ ಕಾಲದಲ್ಲಿ ಹೆಣ್ಣು ಮತ್ತು ಸೆಕ್ಸ್ ಬಗ್ಗೆ ಗಂಡು ನಿಮಿಷಕ್ಕೊಮ್ಮೆ ಚಿಂತಿಸುತ್ತಾನೆ ಎಂದಿದ್ದರೆ ಒಪ್ಪಬಹುದಿತ್ತು. ಆದರೆ, ಕಾಲ ಹಿಂದಿನಂತಿಲ್ಲ. ಸರಕಾರಿ ನೌಕರರು ಕೂಡ ಗೋಡೆ ಮೇಲಿನ ಗಡಿಯಾರ ನೋಡಿಕೊಂಡು ಕೆಲಸ ಮಾಡುವುದಿಲ್ಲ.
ಹಾಗಾದರೆ ಆ ಸಂಗತಿಗಳು ಯಾವುವು? ತಿನಿಸು ಮತ್ತು ನಿದ್ದೆ. ಇದು ಹೆಣ್ಣು ಮತ್ತು ಗಂಡು ಸೇರಿದಂತೆ ಅನೇಕರಿಗೆ ಅಪಥ್ಯವಾಗಿದ್ದರೂ ಕೆಲ ಅಧ್ಯಯನಗಳಿಂದ ಇದೇ ಸತ್ಯವೆಂಬ ಸಂಗತಿ ತಿಳಿದುಬಂದಿದೆ. ಹಸಿವನ್ನು ತಹಬದಿಗೆ ಇಡಿಸುವಂಥ ರುಚಿಕರವಾದ ತಿನಿಸು ಮತ್ತು ದಣಿದ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ನಿದ್ದೆ... ಗಂಡಸರನ್ನು ಪರಿಪರಿಯಾಗಿ ಪೀಡಿಸುತ್ತಿವೆ.
ರವಿ ಮುಳುಗುವುದರೊಳಗಾಗಿ ಪತಿರಾಯ ಬರುತ್ತಾನೆಂದು ಸೀರೆಯುಟ್ಟು, ಮುಖಕ್ಕೆ ಪೌಡರ್ ಬಳಿದು, ಹೂಮುಡಿದು ಆಸೆಯಿಂದ ಕಾಯುವ ಹೆಂಡತಿಗೆ ಗಂಡ ಮನೆಯಲ್ಲಿ ಅಡಿಯಿಡುತ್ತಲೇ ನಿರಾಸೆ ಕಾದಿರುತ್ತದೆ. ಉಸ್ಸಪ್ಪ ಅಂತ ಅಂಗಿ ಕಳಚಿ, ಊಟ ಮುಗಿಸಿ, ಸೀರಿಯಲ್ಲುಗಳು ಮುಗಿಯುವ ಹೊತ್ತಿಗೆ ನೈಟ್ ಡ್ರೆಸ್ ಏರಿಸಿ ನಿದ್ರೆಗೆ ಜಾರಿರುತ್ತಾನೆ. ಹೋಗಲಿ ಸೆರಗಿನಿಂದ ಗಾಳಿ ಬೀಸಿದಾಗಲಾದರೂ ಏಳುತ್ತಾನಾ? ನೋ ಚಾನ್ಸ್!
ಗೊರಕೆ ಹೊಡೆಯುವ ಕಟ್ಟಿಗೆಯ ಬೊಡ್ಡೆಯಂತೆ ಬಿದ್ದುಕೊಂಡಿರುವ, ಹೆಂಡತಿಯ ಸೂಕ್ಷ್ಮ ಮನಸುಗಳಿಗೆ ಸ್ಪಂದಿಸದ ಗಂಡನಲ್ಲಿ ಕಾಮನೆಗಳು ಅರಳುವುದೇ ಇಲ್ಲ. ಸುಖ ಕಾಣದ ಅರ್ಧಾಂಗಿಯ ಕಣ್ಣಂಚಿನಲ್ಲಿ ಜಿನುಗಿದ ನೀರು ಧಾರೆಯಾಗಿ ಮೈಮೇಲೆ ಹರಿದರೂ ಗಂಡನ ನಿದ್ದೆ ಹೊಡೆಯುವ ಮನಸು ನೀರಾಗುವುದಿಲ್ಲ. ಒಂದು ಭರ್ತಿ ನಿದ್ದೆ ಹೊಡೆದು ಬ್ರಾಹ್ಮಿ ಮುಹೂರ್ತದಲ್ಲಿ ಕಣ್ಣುಜ್ಜಿ, ಹಲ್ಲುಜ್ಜುವ ಮುನ್ನ ಕಾಮಕೇಳಿಗೆ ಸಜ್ಜಾಗುವ ಹೊತ್ತಿಗೆ ಹೆಂಡತಿ ಬಾಡಿದ ಮಲ್ಲಿಗೆಯಾಗಿರುತ್ತಾಳೆ.
ಯಾಕೆ ಹೀಗೆ? ಕಾರಣಗಳೂ ಸ್ಪಷ್ಟ. ಮಿಲನ ಮಹೋತ್ಸವದ ಕನಸು ಕಾಣುವ ಮಾತು ಹಾಗಿರಲಿ, ಪ್ರಾಜೆಕ್ಟು, ಟಾರ್ಗೆಟ್ಟು, ಗೋಲು ಎಂದು ಕೆಲಸದಲ್ಲಿ ಮುಳುಗಿರುವ ಪುರುಷನಲ್ಲಿ ಕಾಲಕಾಲಕ್ಕೆ ಸರಿಯಾದ ಸಿಹಿ ತಿನಿಸು ಮತ್ತು ಸಿಹಿ ನಿದ್ದೆ ದಕ್ಕಿರುವುದಿಲ್ಲ. ಇನ್ನು ಬದುಕಿನ ಗೋಲಿನ ಬಗ್ಗೆ ಚಿಂತಿಸುವುದಕ್ಕೆ ಟೈಮಾದರೂ ಎಲ್ಲಿರುತ್ತದೆ? ಇಂದು ಬದುಕಿನ ಶೈಲಿ ಬದಲಾಗಿದೆ. ಸಾಧ್ಯವಾದಷ್ಟು ದುಡ್ಡು ಮಾಡಬೇಕೆಂಬ ಹವಣಿಕೆಯಲ್ಲಿ ವೈಯಕ್ತಿಕ ಬದುಕು ಮೂರಾಬಟ್ಟೆಯಾಗಿರುತ್ತದೆ. ಇದಕ್ಕೆ ಗಂಡ ಮಾತ್ರ ಹೊಣೆಯಲ್ಲ, ಹೆಂಡತಿ ಕೂಡ ಅಷ್ಟೇ ಅಪರಾಧಿ.
ಇದಕ್ಕೆ ದಾರಿಯೊಂದೆ. ಜೀವನಶೈಲಿಯನ್ನೇ ಬದಲಿಸಿಕೊಳ್ಳುವುದು. ಕೆಲಸ ಮುಗಿಸಿ ಮನೆ ತಲುಪುವ ಹೊತ್ತಿಗೆ ಹೆಣ್ಣೊಂದು ನಮಗಾಗಿ ಕಾದಿರುತ್ತದೆ ಎಂಬುದು ಜ್ಞಪ್ತಿಯಲ್ಲಿರಲಿ. ನಿಮಿಷಕ್ಕೊಮ್ಮೆ ಹೆಣ್ಣಿನಲ್ಲಿ ಕೂಡುವ ಬಗ್ಗೆ ಕನಸು ಕಾಣುವುದು ಬೇಡ. ಅಟ್ಲೀಸ್ಟ್, ಶಯನದ ಮೇಲೆ ಉರುಳುವ ಹೊತ್ತಿನಿಂದ ಸೂರ್ಯ ಕಣ್ಣು ಬಿಡುವವರೆಗೆ ಒಂದೆರಡು ಮಿಡ್ ನೈಟ್ ಶೋಗಳಿಗಾದರೂ ಸಮಯ ಮೀಸಲಿಡಲಿ. ಇಲ್ಲದಿದ್ದರೆ ಬೆಳಿಗ್ಗೆ ತಂಗಳನ್ನದ ಚಿತ್ರಾನ್ನ ಸಿಗುವುದಿರಲಿ, ಜೀವನವೇ ಚಿತ್ರಾನ್ನವಾಗಿರುತ್ತದೆ.