ಮಳೆಯಲಿ ಜೊತೆಯಲಿ ದಿನವೀಡಿ ನೆನೆಯಲು ತುಂಬಾ ಕುತೂಹಲ ಎಂದು ಮಳೆ ಹುಡುಗ ಹುಡುಗಿ ನೀವಾಗಿ ಮುಂಗಾರು ಮಳೆಯ ನೆನಪಿನಲ್ಲಿ ಡ್ಯುಯೆಟ್ ಹಾಡಿದರೆ ಅದರ ಸುಖವೇ ಬೇರೆ. ಋತುಗಳಲ್ಲಿ ಮಳೆಗಾಲವನ್ನು ಪ್ರಣಯ ಋತು ಎನ್ನಲಾಗುತ್ತದೆ.
ಬೆಚ್ಚನೆಯ ಮನೆಯೊಳಗೆ ಹಿತವರಿದ ಸತಿ ಜೊತೆ ಸ್ವರ್ಗಕ್ಕೆ ಕಿಚ್ಚು ಹಚ್ಚಲು ಅಡ್ಡಿಯಿಲ್ಲ. ಮಳೆಯಲ್ಲಿ ನೆನೆವುದು ಸೀತ ನೆಗಡಿ ಬಾಧಿಸುವ ಮಹಿಳೆಯರಿಗೂ ಅತಿ ಪ್ರಿಯವಾದ ಚಟ ಎಂಬುದು ತೆರೆದಿಟ್ಟ ಸತ್ಯ. ಮಳೆಯಲ್ಲಿ ಇನಿಹನ ಸನಿಹದಲ್ಲಿ ತನ್ನ ತಾನು ಮೈಮರೆಯುತ್ತಾಳೆ.
ಮಳೆಯಲ್ಲಿ ರೋಮಾನ್ಸ್ ಮಾಡುವ ಕಲೆ ಕರಗತವಾಗಬೇಕೆ ಇಲ್ಲಿದೆ ಕೆಲ ಉಪಾಯ:
ಮಳೆಯನ್ನು ಚುಂಬಿಸಿ: ಮಳೆಯಲ್ಲಿ ನೆನೆಯಲು ನಿಮ್ಮ ಸಂಗಾತಿ ಕೈ ಹಿಡಿದು ನಡೆಯಿರಿ. ಮಳೆಯಲ್ಲಿ ನೆಂದು ನಡುಗುವ ಆಕೆಯನ್ನು ನಿಧಾನವಾಗಿ ಚುಂಬಿಸಿ, ಸಿನಿಮೀಯ ರೀತಿಯಲ್ಲಿ ಮಳೆ ಹಾಡಿನಲ್ಲಿ ಹೀರೋ ಹೀರೋಯಿನ್ ನರ್ತಿಸಿ ನಲಿವಂತೆ ನೀವು ನಲಿಯಿರಿ. ಮಳೆಯಲ್ಲಿ ಚುಂಬನ, ಆಲಿಂಗನ, ಬಿಸಿ ಸ್ಪರ್ಶಕ್ಕಾಗಿ ಆಕೆ ಹಾತೊರೆಯುತ್ತಿರುತ್ತಾಳೆ. ಆಕೆಯ ಇಚ್ಛೆ ಅರಿತು ಮುಂದುವರೆಯಿರಿ.
ನೃತ್ಯ: ನಿಮಗೆ ನರ್ತಿಸಲು ಬರದಿದ್ದರು, ನರ್ತನ ಮಾಡುವ ನಟನೆ ಬಂದರೆ ಸಾಕು. ನಿಮ್ಮ ಹುಚ್ಚಾಪಟ್ಟೆ ಕುಣಿತವೇ ಆಕೆಯನ್ನು ಸಂತಸಗೊಳಿಸಬಹುದು. ಮದವೇರಿದ ಮನ್ಮಥನಂತೆ ರೌದ್ರ ನರ್ತನ ಕೈ ಬಿಟ್ಟು ಹಿತವಾದ ಸ್ಟೆಪ್ಸ್ ಹಾಕಿ. ನಿಮ್ಮ ಇಷ್ಟದ ಹಾಡು ಬೇಕಾದರೆ ಗುಣುಗಿಕೊಳ್ಳಿ.. ಮನಸ್ಸಿಗೆ ಬಂದ ಹಾಗೆ ಹೆಜ್ಜೆ ಹಾಕಿ ಆಕೆಯ ಮೇಲೆ ನಿಮ್ಮ ಹಿಡಿತ ಇಟ್ಟುಕೊಂಡು ಕುಣಿಯಿರಿ.
ಟೆರೆಸ್ ಡಿನ್ನರ್ : ಮನೆಯ ಛಾವಣಿಯಿಂದ ಸೋರುವ ಹನಿಗಳನ್ನು ಎಣಿಸುತ್ತಾ ಮೇಲ್ಮಹಡಿಯಲ್ಲಿ ಕೂತು ಡಿನ್ನರ್ ಮಾಡುವ ದೃಶ್ಯ ಆಹ್ಲಾದಕರವಾಗಿರುತ್ತದೆ. ವಿರಸಗೊಂಡ ಇನಿಯನ ಸೆಳೆಯಲು ಪಾಕ ಪ್ರವೀಣೆ ಸತಿ ಆತನನ್ನು ಈ ರೀತಿಯ ಒಂದು ಸುಂದರ ವಾತಾವರಣಕ್ಕೆ ಕರೆದುಕೊಂಡು ಹೋಗಿ ಆತನನ್ನು ಸೆಳೆಯಬಹುದು. ಹವಾಮಾನದ ಪ್ರೆಮ ರಾಗ ಹಾಡುವಾಗ ನಿಮ್ಮ ಮನದಲ್ಲಿ ಪ್ರೀತಿ ತುಂಬಿಸಿಕೊಂಡು ಋತುವಿನ ಸಂದೇಶ ಹಾಡುವುದು ಸಕತ್ ರೋಮ್ಯಾಂಟಿಕ್ ಆಗಿರುತ್ತದೆ.
ಒಟ್ಟಿಗೆ ಸ್ನಾನ: ಮಳೆಯಲ್ಲಿ ನೆಂದು ಬಸವಳಿದ ದೇಹಗಳಿಗೆ ಹಿತವಾದ ಸ್ನಾನದ ಅಗತ್ಯವಿರುತ್ತದೆ. ಸಂಗಾತಿಯ ಜೊತೆಗುಡಿ ಹಬೆ ಸ್ನಾನ ಮಾಡುವುದು ಪ್ರಣಯಕ್ಕೆ ಹೆಚ್ಚಿನ ಕಿಚ್ಚು ನೀಡುತ್ತದೆ.
ಬಿದ್ದೆ ಬಿದ್ದೆ ಬಾತ್ ರೂಮಲ್ಲಿ ಲವ್ವಲ್ಲಿ ಬಿದ್ದೆ ಎಂದು ಹಾಡು ಗುಣುಗುತ್ತಾ ಮತ್ತು ಹೆಚ್ಚಿಸಿಕೊಳ್ಳಬಹುದು. ನೀರಿನಲ್ಲಿ ಆಟವಾಡುವ ಹುಚ್ಚು ಇದ್ದರೆ ಸಾಕು ಮಳೆಯ ಹಿತಾನುಭವ ಸವಿ ಪಡೆದು ಹೆಚ್ಚಿನ ಪ್ರಣಯಾವಕಾಶವನ್ನು ಪಡೆಯಬಹುದು.