ನಮ್ಮ ದೇಹದ ಕಾಲು, ತೊಡೆ, ತೋಳುಬಂದಿ, ಭುಜ, ಕಿಬ್ಬೊಟ್ಟೆ ಮುಂತಾದ ಅಂಗಾಗಗಳಿಗೆ ಅಗತ್ಯವಾದ ಶಕ್ತಿಯನ್ನು ತುಂಬುತ್ತದೆ. ದೇಹದ ಬೊಜ್ಜು ಕರಗಿಸಿ ನಳನಳಿಸುವಂತೆ ಆಗಲು ಸಂಭೋಗ ಕೂಡಾ ಸಹಕಾರಿ.
ಜಿಮ್, ಜಾಗಿಂಗ್ ಹೋಗಿ ಸ್ಲಿಮ್ ಆಗುವ ಬಯಕೆ ಈಡೇರದಿದ್ದರೆ, ನಿಮ್ಮ ಮನೋಕಾಮನೆಯನ್ನು ಮನೆಯಲ್ಲೇ ನಿಮ್ಮ ಸಂಗಾತಿ ಜೊತೆಯಲ್ಲೇ ಪೂರೈಸಿಕೊಳ್ಳಬಹುದು. ಇಲ್ಲಿ ಹೇಳಿರುವ ಕೆಲ ಭಂಗಿಗಳ ಮೂಲಕ ಕ್ಯಾಲೋರಿ 'ಕಿಲ್' ಮಾಡಿ ತೂಕ ನಿಯಂತ್ರಣ ಮಾಡಬಹುದು.
ಸ್ತ್ರೀ ಮೇಲೆ ಬೋರಲು ಬಿದ್ದ ಪುರುಷ: ಇದು ಸಾಮಾನ್ಯ ಭಂಗಿಯಾಗಿದ್ದು, ಪುರುಷರಿಗೆ ಅತಿ ಹೆಚ್ಚು ಶ್ರಮದಾಯಕ ಹಾಗೂ ಆರೋಗ್ಯಾಕಾರಕ. ಅರ್ಧ ಗಂಟೆ ಈ ಭಂಗಿಯಲ್ಲಿ ಸಂಭೋಗ ನಡೆಸಿದರೆ ಅನಗತ್ಯ ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು. ಮೆಷಿನ್ ಮಾದರಿಯ ಭಂಗಿಯಿಂದ ಭುಜ, ಕಿಬ್ಬೊಟ್ಟೆ, ಕೀಲು, ಪಾದಗಳಿಗೆ ಹೆಚ್ಚಿನ ವ್ಯಾಯಾಮ ಸಿಗುತ್ತದೆ.
ಪುರುಷನ ಮೇಲೆ ಸ್ತ್ರೀ: ಸಂಗಾತಿಗಳು ಪರಸ್ಪರ ಉದ್ರೇಕಗೊಳ್ಳಲು ಈ ಭಂಗಿ ಅತ್ಯಂತ ಸಹಕಾರಿ. ಈ ಭಂಗಿಯಲ್ಲಿ ಮಹಿಳೆಯ ಸಂಪೂರ್ಣ ಹಿಡಿತ ಹೊಂದಿರುತ್ತಾಳೆ. ಸಂಭೋಗದ ವೇಗ, ಆಳಕ್ಕೆ ಇಳಿಯುವುದು ಎಲ್ಲವೂ ಆಕೆಯ ಕಂಟ್ರೋಲ್ ನಲ್ಲಿರುತ್ತದೆ. ಮಹಿಳೆಯು ಈ ಭಂಗಿಯಲ್ಲಿ ಕುಳಿತು ಕೂತು ಕ್ರಿಯೆ(ಕುಕ್ಕುಟಾಸನ, ಪದ್ಮಾಸನ ಮಾದರಿ) ಮುಂದುವರೆಸಬಹುದಾಗಿದೆ.
ಇದರಿಂದ ಮಹಿಳೆಯರ ತೊಡೆ, ಕಿಬ್ಬೊಟ್ಟೆಗೆ ಸಹಕಾರಿಯಾಗಿರುವ ಈ ಭಂಗಿ ಹೆಚ್ಚು ಕಾಲ ಮುಂದುವರೆಯುವುದು ಕಮ್ಮಿ. ಪ್ರಾಯಶಃ ಉದ್ರೇಕಗೊಳ್ಳಲು ಈ ಭಂಗಿ ಅನುಕೂಲಕರವಾಗಿದ್ದು, ನಂತರ ಬೇರೆ ಭಂಗಿಗೆ ಸಂಗಾತಿಗಳು ಶಿಫ್ಟ್ ಆಗುವುದು ಸಹಜ.
ಹೆಚ್ಚು ಕಾಲ ಈ ಭಂಗಿ ಮುಂದುವರೆಯಲು ಸ್ತ್ರೀ ಸೊರಗದಂತೆ ಪುರುಷರು ತಮ್ಮ ತೋಳುಗಳ ಆಸರೆ ನೀಡುತ್ತಾರೆ. ಈ ಮೂಲಕ ತೋಳುಬಂದಿಗೆ ಉತ್ತಮ ವ್ಯಾಯಾಮ ಸಿಗುತ್ತದೆ.
ನಿಂತುಕೊಂಡೇ ಕ್ರಿಯೆ: ಬಲಿಷ್ಠ ಪುರುಷನ ನೆಚ್ಚಿನ ಭಂಗಿ ಇದಾಗಿದೆ. ಸಂಗಾತಿಯನ್ನು ತೋಳು, ತೊಡೆಮೇಲೆ ಆಧಾರವಾಗಿ ಹಿಡಿದಿಟ್ಟುಕೊಳ್ಳಬೇಕಾದ್ದರಿಂದ ಪುರುಷನ ಸಾಮರ್ಥ್ಯಕ್ಕೆ ಸವಾಲಿನ ಭಂಗಿಯಾಗಿದೆ.
ಸೊಂಟ, ತೊಡೆ, ಕಿಬ್ಬೊಟ್ಟೆ, ತೋಳು ಮುಂತಾದ ಮಾಂಸ ಖಂಡಗಳಿಗೆ ಇದರಿಂದ ಒಳ್ಳೆ ವ್ಯಾಯಾಮ ಸಿಗುತ್ತದೆ. ಗೋಡೆ ಅಥವಾ ಬೇರೆ ಯಾವುದೇ ಆಧಾರಕ್ಕೆ ಮಹಿಳೆ ಒರಗಿಕೊಳ್ಳದಿದ್ದರೆ ಪುರುಷನನ್ನು ಬಿಗಿದಪ್ಪುವ ರೀತಿಯಲ್ಲಿ ಜೋತು ಬೀಳಬೇಕಾಗುತ್ತದೆ. ಇದರಿಂದ ಮಹಿಳೆಯ ತೋಳುಭುಜ ಹಾಗೂ ಕಾಲಿನ ಮಾಂಸಖಂಡಗಳಿಗೆ ಸಹಕಾರಿಯಾಗುತ್ತದೆ.
ಇದು ಕೆಲವು ಮೂಲಭೂತ ಭಂಗಿಗಳಾಗಿದ್ದು, ಕಾಮಸೂತ್ರದಲ್ಲಿ ಸ್ತ್ರೀ ಪುರುಷ ಸಂಭೋಗ ಭಂಗಿಗಳ ಬಗ್ಗೆ ಸವಿವರವಾಗಿ ವಿವರಿಸಲಾಗಿದೆ.
ಸೇತುವೆ, ಕತ್ತರಿ, ಶ್ವಾನ ಭಂಗಿ, ಕಮಾನು ಮುಂತಾದ ಭಂಗಿಗಳನ್ನು ಹೆಸರಿಸಬಹುದು. ಈ ಭಂಗಿಗಳನ್ನು ಪ್ರಯತ್ನಿಸುವಾಗ ಮೊದಮೊದಲು ತೊಡೆ ಸಂದಿ, ಕಿಬ್ಬೊಟ್ಟೆ, ಕೈ ಕಾಲು, ಗುಪ್ತಾಂಗಗಳಿಗೆ ನೋವುಂಟಾಗುವ ಸಂಭವಿರುತ್ತದೆ. ಆದರೆ, ಕ್ರಮೇಣ ಮಾಂಸ ಖಂಡಗಳಿಗೆ ತಾಲೀಮು ಸಿಗುತ್ತಿದ್ದಂತೆ ಎಲ್ಲವೂ ಸರಾಗವಾಗುತ್ತದೆ.