•  

ಸೆಕ್ಸ್ ಟಾಯ್ ಬಳಸುವುದರಲ್ಲಿ ಹೊಸಬರೇ? ಈ ಟಿಪ್ಸ್ ಅನುಸರಿಸಿ

Array

ಸೆಕ್ಸ್ ಟಾಯ್ ಬಳಸುವುದರಲ್ಲಿ ಹೊಸಬರೇ? ಈ ವೈಬ್ರೇಟರ್‌ಗಳು ಹೊಸಬರಿಗೆ ಹೇಳಿ ಮಾಡಿಸಿದಂತಹವು ಸೆಕ್ಸ್‌ ಟಾಯ್‍ಗಳ ರೋಚಕ ಪ್ರಪಂಚದ ಕುರಿತು ತಿಳಿದುಕೊಳ್ಳಿ. 2017 ನೇ ವರ್ಷ ಬಂದಾಗಿದೆ. ಆದರೂ ನಾವು ನಮ್ಮ ಲೈಂಗಿಕ ಬಯಕೆಗಳನ್ನು ಸಭ್ಯತೆಯ ಎಲ್ಲೆಗಟ್ಟಿನೊಳಗೆ ತೀರಿಸಿಕೊಳ್ಳಲು ಇನ್ನೂ ತಿಣುಕಾಡುತ್ತಿದ್ದೇವೆ.

ನಮ್ಮಲ್ಲಿ ಬಹುತೇಕ ಜನ ಇನ್ನೂ ಒಂದು ವೈಬ್ರೇಟರ್ ಖರೀದಿಸಲು ಸಂಕೋಚ ವ್ಯಕ್ತಪಡಿಸುತ್ತಿದ್ದಾರೆ. ಬನ್ನಿ ನಿಮ್ಮ ಆಸೆ ಆಕಾಂಕ್ಷೆಗಳನ್ನು ಸಂಕೋಚ ಮತ್ತು ನಾಚಿಕೆಗಳ ಬಲೆಯಲ್ಲಿ ಬಂಧಿಸಬೇಡಿ. ಹೊಸ ಸೆಕ್ಸ್ ಟಾಪ್ ಖರೀದಿಸಲು ನಾವು ನಿಮಗೆ ಕೆಲವೊಂದು ಸಲಹೆಗಳನ್ನು ನೀಡುತ್ತೇವೆ. ಸೆಕ್ಸ್ ಟಾಯ್ ಪ್ರಪಂಚಕ್ಕೆ ಹೊಸಬರಾಗಿರುವ ನಿಮಗೆ ಇವುಗಳಿಂದ ಅನುಕೂಲವಾಗಬಹುದು. 

sex toys
 
 

ನಿಧಾನವೇ ಪ್ರಧಾನ
ನೀವು ಸೆಕ್ಸ್ ಟಾಯ್ ಬಳಸುವವರ ಪೈಕಿ ಹೊಸಬರಾಗಿದ್ದಲ್ಲಿ, ಒಂದೇ ಬಾರಿಗೆ ದುಬಾರಿಯಾದ ಮತ್ತು ದೊಡ್ಡದಾದ ಟಾಯ್ ಖರೀದಿಸಬೇಡಿ. ಸಣ್ಣದನ್ನು ಮತ್ತು ಸರಳವಾಗಿರುವ ಹಾಗು ಕಡಿಮೆ ಬೆಲೆಯ ಗುಣಮಟ್ಟದ ಟಾಯ್ ಅನ್ನು ಖರೀದಿಸಿ. ಇದರ ಜೊತೆಗೆ ಪ್ರಯೋಗ ಮಾಡಿ ಮತ್ತು ನಂತರ ಮುಂದಿನ ಟಾಯ್ ಅನ್ನು ಖರೀದಿಸುವ ಅನುಭವವನ್ನು ಪಡೆಯಿರಿ.

ಆನ್‌ಲೈನ್‌ನಲ್ಲಿ ಹುಡುಕಿ
ನಿಮಗೆ ಎಂತಹ ಟಾಯ್ ಬೇಕು ಎಂದು ತಿಳಿದುಕೊಳ್ಳಲು ಮತ್ತು ಖರೀದಿಸಲು ಆನ್‌ಲೈನ್‌ಗಿಂತ ಉತ್ತಮ ಸ್ಥಳ ಮತ್ತೊಂದಿಲ್ಲ. ಅಂಗಡಿಯಲ್ಲಿ ನೀವು ಈ ಟಾಯ್ ತೆಗೆದುಕೊಂಡಾಗ ಸೇಲ್ಸ್ ಬಾಯ್ ನಿಮ್ಮನ್ನು ಮೇಲಿನಿಂದ ಕೆಳಗೆವರೆಗೆ ನೋಡಬಹುದು. ಆದರೆ ಆನ್‌ಲೈನ್‍ನಲ್ಲಿ ಈ ಮುಜುಗರ ನಿಮಗೆ ಆಗುವುದಿಲ್ಲ. ಬೇಕಾದ್ದನ್ನು ಕೊಳ್ಳಬಹುದು.

ಆನ್‌ಲೈನ್‌ನಲ್ಲಿ ಈ ಟಾಯ್‌ಗಳ ವಿಸ್ತ್ರುತವಾದ ಶ್ರೇಣಿ ಇರುತ್ತದೆ. ನೀವು ಕೊಳ್ಳುವುದನ್ನು ಯಾರೂ ಕದ್ದು ನೋಡುವುದಿಲ್ಲ. ಉತ್ತಮವಾಗಿರುವ ವಸ್ತುವನ್ನು ನೀವು ಕೊಳ್ಳಬಹುದು. ಬೇಬ್‌ಲ್ಯಾಂಡ್, ಗುಡ್ ವೈಬ್ರೇಶನ್ಸ್ ಮತ್ತು ಸಿಂಕ್ಲೇರ್ ಇನ್ಸ್‌ಟ್ಯೂಟ್ ಮುಂತಾದ ವೆಬ್‌ಸೈಟ್‌ಗಳು ನಿಮಗೆ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತವೆ. ಕೆಲವೊಂದು ಸೈಟ್‌ಗಳು ಲೈವ್ ರೆಪ್ರೆಸೆಂಟೆಟಿವ್‌ಗಳನ್ನು ಇರಿಸಿರುತ್ತಾರೆ. ಅವರು ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. 

couples
 
 

ಸೆಕ್ಸ್‌ ಟಾಯ್‌ಗಳನ್ನು ಹೇಗೆ ಬಳಸುವುದು ಎಂಬ ಕುರಿತಾಗಿ ಕೆಲವೊಂದು ಪುಸ್ತಕಗಳು ದೊರೆಯುತ್ತವೆ. ಇವುಗಳನ್ನು ಕೊಂಡುಕೊಳ್ಳಲು ಮುಜುಗರಪಡಬೇಡಿ. ಇವು ಈ ಟಾಯ್‌ಗಳನ್ನು ಸುರಕ್ಷಿತವಾಗಿ ಹೇಗೆ ಬಳಸಬಹುದು ಎಂದು ತಿಳಿಸುತ್ತವೆ ಎಂದು ಆಸ್ಟ್ರೊಗ್ಲೈಡ್‌ಸ್ ಸೆಕ್ಷುವಲ್ ಅಂಡ್ ವೆಲ್‌ನೆಸ್ ರಾಯಭಾರಿ ಮತ್ತು ಲೈಂಗಿಕ ತಜ್ಞರಾದ ಡಾ.ಯ್ವೊನ್ನ್ ಫುಲ್‌ಬ್ರೈಟ್ ಹೇಳುತ್ತಾರೆ.

ಲ್ಯೂಬಿಕ್ರೆಂಟ್ ಅನ್ನು ಮರೆಯಬೇಡಿ
ಸಹಜವಾಗಿರಲಿ ಅಥವಾ ಕೃತಕವಾಗಿರಲಿ ಲ್ಯೂಬ್ರಿಕೆಂಟ್ ಯಾವತ್ತಿಗೂ ಲೈಂಗಿಕ ಕ್ರಿಯೆಯ ಸಂಗಾತಿ. ಸೆಕ್ಸ್ ಟಾಯ್ ಖರೀದಿಸುವಾಗ ಲೂಬ್ರಿಕೆಂಟ್ ಖರೀದಿಸಲು ಮರೆಯಬೇಡಿ. "ಅದೆಂತಹ ಸೆಕ್ಸ್ ಟಾಯ್ ಆದರೂ ಒಂದೆರಡು ತೊಟ್ಟು ಲೂಬ್ರಿಕೆಂಟ್ ಹಾಕಿದರೇ ನಿಮಗೆ ಮತ್ತಷ್ಟು ಆನಂದ ದೊರೆಯುತ್ತದೆ" ಎಂದು ಫುಲ್‌ಬ್ರೈಟ್ ತಿಳಿಸುತ್ತಾರೆ.

English summary
It's 2017, and the sexual revolution is fully underway, yet some of us are still a little shy about making that first big sex toy purchase. It's totally understandable — getting your first vibrator can be intimidating, especially given how many options there are. But most toys are far less complicated than they seem, and once you get one, you'll wonder what you were stressing about. Here are some quick-and-dirty shopping tips to guide beginners.
Story first published: Thursday, April 27, 2017, 23:12 [IST]

Get Notifications from Kannada Indiansutras