•  

ಸಂಭೋಗವಾದ ಮೇಲೆ ಕೇಳ ಬಯಸುವ ಮಾತೇನು?

Array
After Sex
 
ಸುಖ ಸಂಭೋಗದ ನಂತರ ಗಂಡು ಸುಖ ನಿದ್ದೆ ಮಾಡಲು ಯೋಚಿಸಿದರೆ, ಹೆಣ್ಣಿಗೆ ಮಾತನಾಡುವ ಉಮೇದು ಬರುತ್ತದಂತೆ. ಈ ಕಾರಣದಿಂದ ಅನೇಕ ಸಾರಿ ಪುರುಷನನ್ನು ಅರ್ಥ ಮಾಡಿಕೊಳ್ಳಲಾಗದ ನಾರಿ, ಪುರುಷನಿಂದ ವಂಚನೆಗೊಳಗಾದಂತೆ ಭಾವಿಸುವುದೇ ಹೆಚ್ಚು.

ರತಿಕ್ರೀಡೆ ಆಡಿ ಬಳಲಿದಾಗ ಹರಟೆ ಹೊಡೆಯುವ ಮೂಡ್ ಇಲ್ಲದಿದ್ದರೂ ಸಂಗಾತಿಯ ಮಾತು ಕೇಳುತ್ತಾ ನಿದ್ರಿಸಲು ಪುರುಷ ಕೂಡಾ ಕಾತುರನಾಗಿರುತ್ತಾನೆ. ಆದರೆ, ಬಳಲಿಕೆ ಮಾತಿನ ನಡುವೆ ನಿದ್ದೆ ಸುಳಿದು ಆಕೆಗೆ ರಸಭಂಗವಾಗುವ ಸಾಧ್ಯತೆಯೇ ಹೆಚ್ಚು. ಆದರೂ, ಈ ಸಮಯದಲ್ಲಿ ಪುರುಷ ಬಯಸುವ ನಾಲ್ಕಾರು ಮಾತುಗಳು ಯಾವುದು ಇಲ್ಲಿದೆ ನೋಡಿ...

ನನ್ನ ಕೊಂದೇ ಬಿಟ್ಟೆ ! : ಪುರುಷನಿಗೆ ಇದು ಬೈಗುಳವಲ್ಲ. ಈ ಸಮಯದಲ್ಲಿ ಹೊಗಳಿಕೆ. ಪುರುಷ ಸಿಂಹನ ಪೌರುಷ ಪ್ರಕಟಗೊಂಡು ಸುಖವುಂಡ ಸಂಗಾತಿ ಕೊಡುವ ಹುಸಿ ಮುನಿಸಿನ ಸಿಹಿ ಕಾಂಪ್ಲಿಮೇಂಟ್.

ಸಂಭೋಗದಲ್ಲಿ ಹೆಚ್ಚು ಸುಖ ಹೊಂದಬೇಕು ಎಂಬ ಇಚ್ಛೆಯಿಂದ ಅನೇಕ ಪುರುಷರು ಶಿಶ್ನ ಗಾತ್ರವನ್ನು ಹಿಗ್ಗಿಸಿಕೊಳ್ಳುವುದಿದೆ. ಆದರೆ, ಗಾತ್ರಕ್ಕಿಂತ ಪ್ರಿಯತಮೆಗೆ ಆಗುವ ನೋವಿನ ಸುಖದಲ್ಲಿ ಪುರುಷ ತನ್ನ ಸುಖವನ್ನು ಕಾಣುತ್ತಾನೆ. ಅನೇಕ ಪುರುಷರು ಅದರಲ್ಲೂ ಉತ್ತಮ ದೇಹದಾರ್ಢ್ಯವುಳ್ಳವರು You killed me!.. ಕೊಂದೇ ಬಿಟ್ಯಾಲ್ಲೋ ಎಂಬ ಮಾತು ಕೇಳಲು ಕಾತುರರಾಗಿರುತ್ತಾರೆ.

ವಾಹ್ ಚೆನ್ನಾಗಿತ್ತು : ಇದು ಮೇಲಿನ ಡೈಲಾಗ್ ಗೆ ಹೋಲಿಸಿದರೆ, ಇದು ಸಪ್ಪೆ ಎನಿಸಿದರೂ ಸ್ವಲ್ಪ ಗಂಭೀರ ಸ್ವಭಾವದ ಪುರುಷರು ಇಷ್ಟಪಡುವ ಸಾಧಾರಣ ಡೈಲಾಗ್. ರತಿಕ್ರೀಡೆ ಮುಗಿಸಿ ದಣಿದ ಸಂಗಾತಿಯನ್ನು ತಬ್ಬಿಕೊಂಡು 'ಚೆನ್ನಾಗಿತ್ತೋ ನನ್ನ ಗೆಳೆಯ ನೀ ಕೊಟ್ಟ ಸುಖ' ಎಂದರೆ ಅವನು ಹಿರಿ ಹಿರಿ ಹಿಗ್ಗಿವುದಂತೂ ಗ್ಯಾರಂಟಿ.

ಸಕತ್ ಮಜಾ ಇತ್ತು: ಹೌದು ಸೆಕ್ಸ್ ಅನ್ನೋದು ಒಂದು ಅದ್ಭುತ ಆಟ. ಮಜಾ ಇಲ್ಲದ ಯಾವ ಆಟವೂ ಬೋರ್ ಅನ್ನಿಸುತ್ತದೆ. ಒತ್ತಡ ನಿವಾರಣೆಗೆ ಸೆಕ್ಸ್ ಅನುಕೂಲಕರ ಎಂಬುದು ಈಗಾಗಲೇ ಸಾಬೀತಾಗಿದೆ. ರತಿಕ್ರೀಡೆಯಲ್ಲಿ ದಣಿದ ಮೇಲೆ ವಿಶ್ರಾಂತಿ ಪಡೆಯುವಾಗ' ಸಕತ್ ಮಜಾ ಇತ್ತು' ಎಂದು ಹೇಳಿ ಆತನನ್ನು ಇನ್ನಷ್ಟು ಉಲ್ಲಾಸಕ್ಕೆ ದೂಡುವುದು ಸುಖಕರ.

ಇನ್ನೊಂದು ರೌಂಡ್ ಓಕೆನಾ: ಈ ರೀತಿ ಮಹಿಳೆಯರು ಪ್ರಶ್ನೆ ಕೇಳುವುದು ಅಪರೂಪ ಎನಿಸಿದರೂ, ದಣಿಯದ, ಮಣಿಯದ ಕಾಮ ಕ್ರೀಡಾಪಟುವಿಗೆ ಈ ರೀತಿ ಪ್ರಶ್ನೆ ಹೆಚ್ಚು ಇಷ್ಟವಾಗುತ್ತದೆ. ಮತ್ತೆ ರತಿ ಕ್ರೀಡೆಗೆ ಇಳಿಯುವಷ್ಟು ಚೈತನ್ಯ ಇಲ್ಲದಿದ್ದರೂ ಈ ರೀತಿ ಪ್ರಶ್ನೆ ಪುರುಷರಿಗೆ ಹೆಚ್ಚು ಆಪ್ತ ಎನಿಸುತ್ತದೆ. ತಕ್ಷಣಕ್ಕೆ ಅಲ್ಲದಿದ್ದರೂ ಮತ್ತೆ ಸಂಭೋಗಕ್ಕಿಳಿಯುವ ಉತ್ಸಾಹವುಳ್ಳ ಪುರುಷನಿಗೆ ಈ ಮಾತು ಆಹ್ಲಾದಕರವಾಗಿರುತ್ತದೆ.

ಎಂದೂ ಕಾಣದ ಸುಖವ ಕಂಡೆ: ಈ ರೀತಿ ಕಾವ್ಯಮಯವಾಗಿ ರಾಗವಾಗಿ ಆತನ ಸರಸ ಸುಖದ ಬಗ್ಗೆ ಹಾಡಿ ಹೊಗಳಿದರೆ ಸಾಕು ನಿಮಗೆ ಶರಣಾಗಿ ಬಿಡುತ್ತಾನೆ. ಸಾಮಾನ್ಯವಾಗಿ ಹೊಗಳಿಕೆ ಇಷ್ಟಪಡುವ ಮಹಿಳೆಯರು ಒಮ್ಮೆ ಅದೇ ಅಸ್ತ್ರವನ್ನು ಪುರುಷರ ಮೇಲೆ ಪ್ರಯೋಗಿಸಿ ಫಲ ಕಾಣಬಹುದು.

ಇವೇ ಮುಂತಾದ ಕೆಲ ಮಾತುಗಳನ್ನು ನಿಮ್ಮ ಸಂಗಾತಿಯ ಮುಂದೆ ಹೇಳುವ ಮೂಲಕ ನಿಮ್ಮ ಸರಸ ಜೀವನವನ್ನು ಇನ್ನಷ್ಟು ವೃದ್ಧಿಸಿಕೊಳ್ಳಬಹುದು..

English summary
After having sex, men want to sleep whereas women want to talk. This is one of the main reasons why women misunderstand men. For this reason, few women feel that they are being used by their men. Did you know men also want to hear few things after having sex? But what do they like to hear in the tired state?
Story first published: Monday, March 19, 2012, 17:45 [IST]

Get Notifications from Kannada Indiansutras