ಆದರೆ, ಪ್ರಣಯದ ಉತ್ಕಟ ಅನುಭವದ ಉನ್ಮೇಷಕಾಂಕ್ಷಿಗಳಿಗೆ ಯಾವ ಸ್ಥಳವಾದರೂ ಓಕೆ! ಹಲವರು ತುಂಬಾ ಕಂಫರ್ಟ್ ಆದ ಮೆತ್ತನೆಯ ಹಾಸಿಗೆಯಲ್ಲೇ ಸುಖ ಅನುಭವಿಸಲು ಹವಣಿಸುತ್ತಾರೆ. ಮತ್ತೆ ಕೆಲವರು ಸೆಕ್ಸ್ ಗೆ ಇಳಿಯುವ ಸಮಯ ಸ್ಥಳ ಸಕತ್ ಕ್ರೇಜಿಯಾಗಿರುತ್ತದೆ.
ಈ ರೀತಿ ಒಂದಾರು ಕ್ರೇಜಿ ಸ್ಥಳಗಳನ್ನು ಇಲ್ಲಿ ಕಾಣಿರಿ...
ಲೈಬ್ರರಿ: ಹೌದು! ಅನಾದಿ ಕಾಲದಿಂದಲೂ ಸುಖ ನಿದ್ದೆಗೆ, ಕಣ್ಣೋಟದಲ್ಲೇ ಕಾಮನೆಗಳನ್ನು ಪಾಸ್ ಮಾಡುವುದಕ್ಕೆ ಲೈಬ್ರರಿ ಅದ್ಭುತ ತಾಣವಾಗಿ ಬೆಳೆದು ಬಂದಿದೆ. ಕಾಲೇಜು ಬಂಕ್ ಮಾಡಿದವರು, ಓದಲು ಬರುವವರು ಎಗ್ಗಿಲ್ಲದೆ ಲೈಬ್ರರಿಯ ಸಂದಿಗೊಂದಿಯಲ್ಲಿ ದೇಹದ ಉಬ್ಬುತಗ್ಗುಗಳನ್ನು ತಡುಕುವುದು ಕಾಮನ್ ಆದ ವಿಚಾರ.
ಹೆಚ್ಚಿನ ಗ್ರಂಥಾಲಯಗಳಲ್ಲಿ ಕ್ಯಾಮೆರಾ ಅಳವಡಿಸಿರುವುದಿಲ್ಲವಾದ್ದರಿಂದ ಹುಡುಗ ಹುಡುಗಿಯರ ಕಾಮದಾಟಕ್ಕೆ ಯಾವುದೇ ಕಸಿವಿಸಿ ಇರುವುದಿಲ್ಲ. ಕ್ಯಾಮೆರಾ ಇದ್ದರೂ ಲೆಕ್ಕಿಸದೆ ಕೆಲ್ಸಕ್ಕೆ ಇಳಿಯುತ್ತಾರೆ ಎಂಬುದು ಹಲವಾರು ಫಾರ್ವೆಡೆಡ್ ಎಟಿಎಂ ರೂಂ ಸೆಕ್ಸ್ ಎಂಎಂಎಸ್ ನಿಂದ ನಮ್ಮ ಬಾತ್ಮಿದಾರರಿಗೆ ತಿಳಿದು ಬಂದಿರುವ ವಿಷಯ.
ಸ್ವಿಮ್ಮಿಂಗ್ ಪೂಲ್: ನೀರಿಗೆ ಅದೇನೋ ಮಾದಕ ಶಕ್ತಿಯಿದೆ. ಮಳೆಯಲ್ಲಿ ನೆನೆದು ಕುಣಿದಾಡುತ್ತಾ ಪ್ರಣಯಕ್ಕಿಳಿಯುವುದರ ಬಗ್ಗೆ ಈ ಮುಂಚೆ ಲೇಖನ ಬರೆಯಲಾಗಿತ್ತು. ಈಗ ಸಿಮ್ಮಿಂಗ್ ಪೂಲ್ ನಲ್ಲೂ ಪ್ರಣಯಕ್ಕೆ ಇಳಿಯುವುದು ಹೆಚ್ಚಾಗುತ್ತಿದೆ. ನಮ್ಮಲ್ಲಿ ಹೆಚ್ಚು ಬಾತ್ ರೂಮ್ ನಲ್ಲಿ ಈ ಸೀನ್ ಕನಬಹುದು. ಸಾಮಾನ್ಯವಾಗಿ ಹಾಲಿವುಡ್ ಮೂವಿಗಳಲ್ಲಿ ಕಾಣುತ್ತಿದ್ದ ದೃಶ್ಯ. ಇತ್ತೀಚೆಗೆ ನಮ್ಮಲ್ಲೂ ಬೆಳೆಯುತ್ತಿದೆ.
ನೀರಲ್ಲಿ ಕಾಮಕ್ರೀಡೆ ಖುಷಿ ಕೊಟ್ಟರೂ ಪುರುಷರು ಸ್ವಲ್ಪ ಹೆಚ್ಚು ಬಲಯುತರಾಗಿದ್ದಾರೆ ಮಾತ್ರ ಕಾಮದಾಟಕ್ಕೆ ಸೂಕ್ತ.
ಥೇಟರ್ : ಹದಿಹರೆಯದ ಜೋಡಿಗಳು ಒಟ್ಟಿಗೆ ಥೇಟರ್ ಗೆ ಹೋಗಿ ಬಂದರೆ ಸಾಕು. ಆಪ್ತ ಸಖ ಸಖಿಯರು ಕೇಳುವ ಮೊದಲ ಪ್ರಶ್ನೆ 'ಹೇಗಿತ್ತು ಎಕ್ಸ್ ಪಿರಿಯನ್ಸ್?'. ಥೇಟರ್ ನ ಯಾವುದೋ ಮೂಲೆ ಸೀಟು ಹಿಡಿದು ಗುಸು ಗುಸು ಪಿಸು ಪಿಸು ಮಾತಾಡುತ್ತಾ.. ಕತ್ತಲಲ್ಲಿ ಕಾಮ ಸ್ವರ್ಗ ಕಾಣುವುದರಲ್ಲಿ ಪ್ರಣಯ ಜೋಡಿಗಳಿಗೆ ಏನೋ ಆನಂದ..
ಸೋಫಾ, ಕೌಂಚ್ ನಲ್ಲೇ : ಹೆಚ್ಚು ಬಲ ಪ್ರಯೋಗವಿಲ್ಲದೆ. ಸುಖಾಸೀನದಲ್ಲಿರುವ ಸಂಗಾತಿಯನ್ನು ಸಂಭೋಗಕ್ಕೆ ಎಳೆಯುವುದು ಕಾಮನ್ ವಿಷಯ. ಸೋಫಾದ ಮೆತ್ತನೆಯ ಹಾಸು ಪ್ರಣಯ ಸುಖದ ಓಲಾಟ, ತೇಲಾಟಕ್ಕೆ ಸೂಕ್ತ ವೇದಿಕೆಯಾಗಿ ಉಳಿದು ಕೊಂಡಿದೆ.
ಮೆಟ್ಟಿಲು: ಸ್ಟೇರ್ ಕೇಸ್ ನಲ್ಲಿ ಕದ್ದು ಮುಚ್ಚಿ ಕಿಸ್ ಹೊಡೆಯುವುದು, ಮೈಕೆ ಉಜ್ಜುವುದು ಮಾಮೂಲಿ. ಇಬ್ಬರಿಗೂ ಕಂಫರ್ಟ್ ಅಲ್ಲದ ಈ ಸ್ಥಳಗಳಲ್ಲಿ ಫಾರಿನರ್ಸ್ ರೀತಿ ಸಂಭೋಗಕ್ಕೆ ಇಳಿದರೆ ಅಪಾಯ ಖಂಡಿತ. ಆದಷ್ಟು ಮೆಟ್ಟಿಲ ಬಳಿ ಪ್ರೇಮ ತಪ್ಪಿಸುವುದು ಸೂಕ್ತ.
ಅಡುಗೆ ಮನೆ ಕಟ್ಟೆ: ಇದು ಅಕಸ್ಮಾತ್ ಉಂಟಾಗುವ ಆಕರ್ಷಣೆ, ಘರ್ಷಣೆಗೆ ಉದಾಹರಣೆ. ಅಡುಗೆ ಮಾಡುವಾಗ ಸಹಾಯ ಮಾಡುವ ನೆಪದಲ್ಲಿ ಕಳ್ಳಬೆಕ್ಕಿನಂತೆ ಬಳಿ ಬರುವ ಇನಿಯನನ್ನು ಪ್ರೇಯಸಿಯನ್ನು ಸ್ಲ್ಯಾಬ್ ಮೇಲೆ ಮಲಗಿಸಿಯೋ, ಕೂರಿಸಿಯೋ ತನ್ನ ಆಟ ಆರಂಭಿಸಬಹುದು. ಇದು ಆರೋಗ್ಯಕರವಲ್ಲ ಹಾಗೂ ಸೂಕ್ತವೂ ಅಲ್ಲ.
ಹಾಗೆ ನೋಡಿದರೆ ಮೇಲ್ಕಂಡ ವಿಧಾನಗಳು, ಸ್ಥಳಗಳಲ್ಲಿ ನಡೆಯುವ ಪ್ರಕ್ರಿಯೆ ಸಾಮಾನ್ಯವಾಗಿ ಆ ಕ್ಷಣಕ್ಕೆ ಉಂಟಾದ ತುರ್ತು ಅಗತ್ಯ ಪೂರೈಸುವ ಕ್ರಿಯೆಯಂತೆ ನಡೆದು ಬಿಡುತ್ತದೆ. ಆರೋಗ್ಯಕರ, ಸುರಕ್ಷಿತ ಹಾಗೂ ಸಾಮಾಜಿಕವಾಗಿ ಕೊಂಚ ಭಯ ಇರುವವರು ಕಾಮಾತುರಾಣಂ ನಾ ಭಯಂ ನಾ ಲಜ್ಜಾ ಎಂಬ ಮಾತನ್ನು ಮರೆಯುವುದೇ ಲೇಸು.