ತಲೆನೋವು, ಮಾನಸಿಕ ಒತ್ತಡ ನಿವಾರಣೆ ನಂತರ ಇನ್ನೂ ಕೆಲವು ಉಪಯೋಗಗಳು ಈ ರೀತಿ ಇದೆ....
* ಸಂಭೋಗ ಸಮಯದಲ್ಲಿ ಹೆಚ್ಚು ಬೆವರು ಹರಿಯುವುದರಿಂದ ತ್ವಚೆಯ ಸೌಂದರ್ಯಕ್ಕೂ ಪೂರಕವಾಗಲಿದೆ. dermatitis ಮಂತಾದ ಚರ್ಮ ರೋಗ ಕಾಣಿಸಿಕೊಳ್ಳುವ ಲಕ್ಷಣಗಳು ಕಡಿಮೆಯಾಗಲಿದೆ.
* ಸೆಕ್ಸ್ ನಿಂದ ನಿಮ್ಮ ಸೆನ್ಸ್ ಹೆಚ್ಚುತ್ತದೆ. prolactin ಹಾರ್ಮೋನ್ ಮೂಲಕ ಮೆದುಳಿನ ಸ್ಟೆಮ್ ಸೆಲ್ ಗಳಲ್ಲಿ ಉಂಟಾಗುವ ಕ್ರಿಯೆಯೂ ನಿಮ್ಮನ್ನು ಹೆಚ್ಚ ಸೃಜನಶೀಲ, ಕ್ರಿಯಾತ್ಮಕಗೊಳಿಸುತ್ತದೆ. ವಿರುದ್ಧ ಲಿಂಗದೆಡೆಗೆ ಆಕರ್ಷಣೆ ಹೆಚ್ಚಿಸುವ pheromones ಉತ್ಪಾದನೆ ಹೆಚ್ಚುವದರ ಜೊತೆಗೆ ತನ್ನ ಸಂಗಾತಿಯ ಜೊತೆಗೆ ಅವಿನಾಭವ ಸಂಬಂಧ, ಕಾಳಜಿ ಹೆಚ್ಚಿಸುತ್ತದೆ.
* ಡೆಂಟಿಸ್ಟ್ ರನ್ನು ದೂರವಿರಿಸಲು ಕಿಸ್ಸಿಂಗ್ ಸಹಕಾರಿ. ಮುತ್ತಿಡುವುದರಿಂದ ಜಿಹ್ವಾಗ್ರಂಥಿಗಳು ಪ್ರಚೋದನೆಗೊಂಡು ಹೆಚ್ಚೆಚ್ಚು ಜಿಹ್ವಾರಸವನ್ನು ಹೊರಹಾಕುತ್ತದೆ, ಇದರಿಂದ ಬಾಯಿಯ ಸ್ವಚ್ಛತೆಗೆ ಸಹಕಾರಿಯಾಗುತ್ತದೆ. ಹಲ್ಲುಗಳ ನಡುವಿನ ಆಮ್ಲಗಳನ್ನು ಕಡಿಮೆಗೊಳಿಸುತ್ತದೆ. ಹಲ್ಲು ಕೊಳೆಯುವುದನ್ನು ತಡೆಯುತ್ತದೆ.
* ನಿಯಮಿತವಾದ ಸೆಕ್ಸ್ ನಿಂದಾಗಿ ಕೊಲೆಸ್ಟ್ರಾಲ್ ಪ್ರಮಾಣದ ಏರುಪೇರಾಗುವುದ್ನ್ನು ತಡೆಗಟ್ಟಬಹುದು.
* ಒಳ್ಳೆ ಸಂಭೋಗ ಸುಖ ಅನುಭವಿಸಿದರೆ ನಾಸಿಕದ ತೊಂದರೆಗಳೂ ದೂರಾಗುತ್ತದೆ. ಆಸ್ತಮಾ, ಅತಿ ವಿಷಮ ಜ್ವರಕ್ಕೂ ಸೆಕ್ಸ್ ಮದ್ದಾಗಿದೆ.
* ಸೆಕ್ಸ್ ಅನುಭವಿಸುವುದರಿಂದ ಉತ್ಪನ್ನವಾಗುವ ಹಾರ್ಮೋನ್ ಗಳು ಹೆಣ್ಣು, ಗಂಡು ಇಬ್ಬರಿಗೂ ಅನುಕೂಲಕರ. estrogen ಮಹಿಳೆಯರ ಹೃದಯವನ್ನು ದೀರ್ಘಕಾಲ ಸುಸ್ಥಿತಿಯಲ್ಲಿಡುತ್ತದೆ. ಅಲ್ ಜೈಮರ್ ಮುಂತಾದ ರೋಗಕ್ಕೂ ಮದ್ದಾಗಬಲ್ಲದು.
* ಹೃದ್ರೋಗಕ್ಕೆ ಮಾತ್ರ ಸೆಕ್ಸ್ ಸಹಕಾರಿಯಾಗಿರದೆ ರಕ್ತ ಸಂಚಲನಕ್ಕೂ ಉಪಯುಕ್ತವಾಗಿದೆ. ವಿಶೇಷವಾಗಿ ಮೆದುಳಿನ ರಕ್ತ ಪರಿಚಲನೆಗೆ ನಾಂದಿ ಹಾಡುತ್ತೆ. ಸಂಭೋಗ ಸಮಯದಲ್ಲಿ ದೀರ್ಘ ಉಸಿರಾಟ, ಎದೆ ಬಡಿತದ ಏರಿಳಿತದಿಂದ ರಕ್ತ ಸಂಚಾರಕ್ಕೆ ಉಪಯೋಗಕಾರಿಯಾಗಿದೆ.
* ಸೆಕ್ಸ್ ಕ್ರಿಯೆಯಿಂದ ಶೀತ ನೆಗಡಿ ಕಮ್ಮಿಯಾಗುತ್ತದೆ ಜೊತೆಗೆ ಕಾಮಜ್ವರದ ಮುಂದೆ ಸಾಮಾನ್ಯವಾಗಿ ಕಾಡುವ ಜ್ವರ ಕೂಡಾ ಮಾಯವಾಗುತ್ತದೆ. ವಾರದಲ್ಲಿ 2-3 ಬಾರಿ ಸಂಭೋಗಕ್ಕಿಳಿದರೂ ಸಾಕು ಶೇ 30 ರಷ್ಟು ರೋಗ ನಿರೋಧಕ ಶಕ್ತಿ ಹೆಚ್ಚಿ ಸಾಮಾನ್ಯ ಕಾಯಿಲೆಗಳಿಂದ ಮುಕ್ತಿ ನೀಡುತ್ತದೆ.
* ಪೆಲ್ವಿಸ್ ಮಾಂಸಖಂಡಗಳನ್ನು ಶಕ್ತಿಗೊಳಿಸುತ್ತದೆ. ಜೊತೆಗೆ ಮೂತ್ರ ವಿಸರ್ಜನೆ ಸರಾಗವಾಗಿ ಆಗುವಂತೆ ಮಾಡುತ್ತದೆ.
* ಸುಖ ಸಂಭೋಗದ ನಂತರ ಸುಖ ನಿದ್ರೆ ಬರುವುದಂತೂ ನಿಜ. ನಿದ್ರೆಯ ಗುಣಮಟ್ಟ ಹೆಚ್ಚಾಗುತ್ತದೆ. ದೇಹ ಆಹ್ಲಾದದಾಯಕವಾದ ಕಾರಣ ಹೆಣ್ಣು, ಗಂಡುಗಳಿಗೆ ಉತ್ತಮ ನಿದ್ರೆಯನ್ನು ಸೆಕ್ಸ್ ತಂದು ಕೊಡುತ್ತದೆ.
* ಕ್ಯಾನ್ಸರ್ ವಿರುದ್ಧ ಕೂಡಾ ಸೆಕ್ಸ್ ಹೋರಾಟಬಲ್ಲುದು. ಸಂಶೋಧನೆಯ ಪ್ರಕಾರ ಹೆಚ್ಚು ಸ್ಖಲನ ಪ್ರಮಾನ, ಸೆಕ್ಸ್ ಕ್ರಿಯೆಯಿಂದ prostate ಕ್ಯಾನ್ಸರ್ ಬರುವ ರಿಸ್ಕ್ ಶೇ 14 ರಷ್ಟು ಕಡಿಮೆ ಮಾಡುತ್ತದೆ.
ಹೆಚ್ಚೆಚ್ಚು ವೀರ್ಯ ವಿಸರ್ಜನೆಯಿಂದ ಶೇ 33 ರಷ್ಟು ಕ್ಯಾನ್ಸರ್ ಭೀತಿಯನ್ನು ದೂರಾಗಿಸಬಹುದು ಎಂದು ಸಂಶೋಧಕರ ಅಭಿಪ್ರಾಯ.