•  

ಪೋರ್ನ್ ತುಂಬಾ ನೋಡ್ಬೇಡಿ ಕಣ್ಣು ಹೋಯ್ತದೆ

Array
Sunny Leone
 
ಈಗಷ್ಟೇ ಗಾಂಧಿನಗರದ ಗಲ್ಲಿಗೆ ಇಳಿಯುತ್ತಿರುವ ನಾಚಿಕೆ ಮಲ್ಲಿಗೆ ಸನ್ನಿ ಲಿಯೋನ್ ಇರಲಿ, ಕುಂಭಸ್ತನೆ ನಮಿತಾ ಆಗಲಿ, ಆಗಾಗ ಬೆತ್ತಲಾಗುವ ಬೆದರಿಕೆ ಒಡ್ಡುವ ಪೂನಂಪಾಂಡೆ ಇಂದಾಗಲಿ ನಿಮ್ಮ ಕಣ್ಣುಗಳು ನಾಶವಾದರೆ ನಾವು ಜವಾಬ್ದಾರರಲ್ಲ.

ಪೋರ್ನ್ ಸ್ಟಾರ್, ಮಾದಕ ನಟಿಯರಿಗೂ ಕಣ್ಣಿಗೂ ಏನು ಸಂಬಂಧ ಎಂಬ ಪ್ರಶ್ನೆಗೆ ದೂರದ ನೆದರ್ಲೆಂಡ್ ನ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ. ಹಾರ್ಡ್ ಕೋರ್ ಸೆಕ್ಸ್ ಫಿಲಂಗಳನ್ನು ನೋಡಿದರೆ ಕಣ್ಣಿನ ರಕ್ತ ಸಂಚಲನೆ ಕುಗ್ಗುತ್ತದಂತೆ. ಇದರಿಂದ ಕಣ್ಣು ಮಂಜಾಗುತ್ತಾ ಕೊನೆಗೆ ಅಂಧತ್ವ ಬಂದರೂ ಅಚ್ಚರಿ ಏನಿಲ್ಲ ಎನ್ನುತ್ತದೆ ಸಂಶೋಧನೆ.

ಅದು ಹೇಗೆ ಸಾಧ್ಯ? ಪೋರ್ನ್ ಮೇಲೆ ಯಾಕಿಷ್ಟು ಕೋಪ? ಯಾವುದೇ ಚಿತ್ರವನ್ನು ಕಣ್ಣು ಮಿಟುಕಿಸಿದಂತೆ ನೋಡುತ್ತಾ ಕೂತರೆ ಕಣ್ಣೂ ಹಾಳಾಗುವುದು ಎಲ್ಲರಿಗೂ ಗೊತ್ತಿರುವ ವಿಷಯವಲ್ಲವೇ ಎಂದು ಮೂಗು ಮುರಿಯುವಂತಿಲ್ಲ.

ವಿಶೇಷವಾಗಿ ಮಹಿಳೆಯರ ಕಣ್ಣಲ್ಲಿ ಉದ್ವಿಗ್ನತೆಗಿಂತ ಕಾಮೋದ್ರೇಕತೆ ಬಹುಬೇಗ ಆವರಿಸಿಬಿಡುತ್ತದೆ. ಅದರಲ್ಲೂ ಆ ರೀತಿ ದೃಶ್ಯ ಅಥವಾ ಚಿತ್ರಗಳನ್ನು ನೋಡುವಾಗ ಕಣ್ಣಲ್ಲಿ ಕರೆಂಟ್ ಪಾಸ್ ಆಗುತ್ತೆ ಎಂದು ಡಾ.ಗೆರ್ಟ್ ಹೊಲ್ಸ್ ಸ್ಟೇರ್ ಕಂಡು ಹಿಡಿದಿದ್ದಾರೆ.

ಹಲವಾರು ಜನರಿಗೆ ಕೆರಿಬಿಯನ್ ಸಾಫ್ಟ್ ಪೋರ್ನ್ ಚಿತ್ರಗಳನ್ನು ಹಾಗೂ ಹಾರ್ಡ್ ಕೋರ್ ಅಶ್ಲೀಲ ಚಿತ್ರಗಳನ್ನು ತೋರಿಸಿ ಪ್ರಯೋಗ ನಡೆಸಲಾಗಿದೆ. Positron Emission Tomography ಮೂಲಕ ಮಹಿಳೆಯ ಮೆದುಳಿನಲ್ಲಿ ನಡೆದ ಕ್ರಿಯೆ, ಕಣ್ಣಿಗೆ ಸರಬರಾಜಾದ ರಕ್ತದ ಪ್ರಮಾಣದ ಲೆಕ್ಕಾಚಾರ ಹಾಕಲಾಗಿದೆ. ಇದರಿಂದ ತಿಳಿದು ಬಂದ ವಿಷಯ ಎಂದರೆ, ಹಾರ್ಡ್ ಕೋರ್ ಸೆಕ್ಸ್ ದೃಶ್ಯಗಳನ್ನು ನೋಡಿದರೆ ಅಪಾಯ ಕಟ್ಟಿಟ್ಟಬುತ್ತಿ.

ಪಾಪ ಪರಿಸ್ಥಿತಿ ಹೀಗೆ ಮುಂದುವರೆದರೆ, ಸನ್ನಿ ಲಿಯೋನ್ ಅವರ ಜನಪ್ರಿಯತೆ ಹಿಗ್ಗುತ್ತಿದ್ದು, ಬಿಗ್ ಬಾಸ್, ಬಾಲಿವುಡ್ ನಂತರ ಸ್ಯಾಂಡಲ್ ವುಡ್ ಸ್ಮೆಲ್ ತೆಗೆದುಕೊಳ್ಳಲು ಬರುತ್ತಿರುವ ಪೋರ್ನ್ ಪೋರಿಯ ಅಭಿಮಾನಿಗಳಿಗೆ ಇದು ಎಚ್ಚರಿಕೆಯ ಗಂಟೆಯಾಗಿದೆ. ಮುಂದಿನ ಸಾರಿ ಎವೆಯಿಕ್ಕದೆ ಪೋರ್ನ್ ನೋಡುವ ಮುನ್ನ ಇಲ್ಲಿರುವ ಮಾಹಿತಿಯನ್ನು ಒಮ್ಮೆ ಓದಿ ಬಿಡಿ.

English summary
All Sunny Leone fans better watch out! A new sex study explains that watching hard-core erotic films can reduce blood flow to the visual cortex of healthy heterosexual women resulting in blurring their eyesight. So, does that mean watching porn can make you go blind?
Story first published: Tuesday, May 22, 2012, 12:43 [IST]

Get Notifications from Kannada Indiansutras

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Indiansutras sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Indiansutras website. However, you can change your cookie settings at any time. Learn more