ಪುರುಷರ ಮನದಲ್ಲಿ ಸದಾ ಕಾಲ ಸೆಕ್ಸ್ ಬಗ್ಗೆ ಆಲೋಚನೆಗಳು ಏಳುತ್ತಿರುತ್ತದೆ ಎಂಬುದು ಈಗಾಗಲೇ ಸಾಬೀತಾಗಿರುವ ಅಂಶ. ಪ್ರತಿ 30 ನಿಮಿಷಗಳಿಗೊಮ್ಮೆ testoste ಈ ರಹಸ್ಯವನ್ನು ಹೊರಗೆಡವಿ ಬಿಡುತ್ತೆ.
ಆದರೆ, ಮಹಿಳೆಯ ಕತೆ ಏನು? ಎಂದು ತನ್ನ ಮನದ ಗುಟ್ಟು ಬಿಟ್ಟು ಕೊಡದ ಮಾನಿನಿಯರು ಸೆಕ್ಸ್ ಬಗ್ಗೆ ಏನು ಹೇಳುತ್ತಾರೆ. ಅವರ ಮನದಲ್ಲಿ ಸೆಕ್ಸ್ ಎಂದಾಕ್ಷಣ ಉಂಟಾಗುವ ಬದಲಾವಣೆಗಳು ಏನು? ಸಂಭೋಗಕ್ಕೆ ಸ್ತ್ರೀ ಹಾತೊರೆಯುವುದು ಏಕೆ? ಕಾರಣ ಇಲ್ಲಿದೆ ನೋಡಿ...
ಸುಖ, ಸುಖ, ಸುಖ: ಸ್ಪರ್ಶ ಸುಖಕ್ಕೆ ಮನಸೋಲುವ ಮಾನಿನಿಯರು, ಸಂಭೋಗದ ಸುಖದೊಡನೆ ಹೆಚ್ಚು ನೋವು ಅನುಭವಿಸುವುದಂತೂ ನಿಜ. ದೈಹಿಕವಾಗಿ ಸಂಗಾತಿಯೊಡನೆ ಅಪ್ತತೆ ಹೆಚ್ಚಿಸಿಕೊಳ್ಳಲು ಸಂಭೋಗ ಸಹಕಾರಿ.
ನೋವಿನಲ್ಲೂ ನಲಿವು, ದಣಿವಲ್ಲೂ ಆಹ್ಲಾದ ಇದೇ ಎಂದರೆ ಅದು ಸೆಕ್ಸ್ ನಲ್ಲಿ ಮಾತ್ರ ಎಂದು ಕೆಲ ಹೆಂಗೆಳೆಯರು ಬಲವಾಗಿ ನಂಬಿದ್ದಾರೆ ಹಾಗೂ ಆಚರಿಸಿಕೊಂಡು ಬಂದಿದ್ದಾರೆ ಕೂಡಾ. ಹಲವು ಬಾರಿ ಅತಿಯಾದ ಕಾಮವಾಂಛೆಯುಳ್ಳ ಸಂಗಾತಿಯ ಮೇಲೆ ಅನುಮಾನ ಹುಟ್ಟುವುದು ಸಹಜ ಆದರೆ, ಇದು ನೈಸರ್ಗಿಕವಾಗಿ ಬರುವ ಪ್ರತಿಕ್ರಿಯೆ ಎಂಬುದನ್ನು ಮರೆಯಬಾರದು.
ಒತ್ತಡ ನಿವಾರಣೆ: ಸೆಕ್ಸ್ ನಿಂದ ಮಾನಸಿಕ, ದೈಹಿಕ ಒತ್ತಡ ನಿವಾರಣೆಯಾಗುತ್ತದೆ ಎಂಬುದು ಕೂಡಾ ಸಾಬೀತಾಗಿದೆ. ಬಿಡುವಿರದ ದೈನಂದಿನ ಕೆಲಸ ಕಾರ್ಯಗಳ ನಡುವೆ ಮನಸ್ಸಿಗೆ ಆಹ್ಲಾದ ನೀಡುವ ವಿಷಯ ಎಂದರೆ ಸೆಕ್ಸ್.
ಉತ್ತಮವಾದ ನಿದ್ರೆಗೆ, ಮೈ ಜಡತ್ವ ನಿವಾರಣೆಗೆ ಸೆಕ್ಸ್ ಸಹಕಾರಿ. ಸಂಭೋಗದ ನಂತರ ಸುಸ್ತಾದರೂ ಆ ಸುಸ್ತಿನಿಂದ ಸಕತ್ ಸಿಹಿ ನಿದ್ದೆ ಬರುತ್ತದೆ. ಸಂಭೋಗದ ಸಮಯದಲ್ಲಿ ಬೇರೆ ಯಾವುದೇ ಯೋಚನೆ ಇರುವುದಿಲ್ಲ. ಮನಸ್ಸು ಖಾಲಿಯಾಗಿರುತ್ತದೆ. ದೇಹ ಸುಖ ಪಡೆಯುತ್ತಿರುತ್ತದೆ.
ದೇಹ ತೂಕ ಇಳಿಕೆ: ಸಂಭೋಗ- ಮನಸಿಗೆ ಹೇಗೆ ಆಹ್ಲಾದ ನೀಡುತ್ತದೋ ಹಾಗೆ ದೇಹಕ್ಕೂ ಉತ್ತಮ ವ್ಯಾಯಾಮ ನೀಡುತ್ತದೆ. ಸಕಲ ಅಂಗಾಂಗಗಳಿಗೆ ಕಸರತ್ತು ಸಿಗುವುದರಿಂದ ಸಹಜವಾಗಿ ದೇಹದ ಕೊಬ್ಬಿನ ಅಂಶ ಕರಗುತ್ತದೆ. ಕ್ಯಾಲೋರಿ ಕಮ್ಮಿ ಮಾಡಲು ಸೆಕ್ಸ್ ಸಹಕಾರಿಯಾಗುತ್ತದೆ.
ಬೋರ್ ಆಗಿದ್ಯಾ ಸೆಕ್ಸ್ ಮಾಡಿ: ಇದು ನಮ್ಮಲ್ಲಿ ಹೆಚ್ಚಾಗಿ ಕಂಡು ಬರುವುದಿಲ್ಲವಾದರೂ, ಪಾಶ್ಚಾತ್ಯ ದೇಶಗಳಲ್ಲಿ ಕಾಮನ್ ಆದ ಕ್ರಿಯೆ. ಬೋರ್ ಹೊಡೆದರೆ ಹೊಸ ವಿಷಯಗಳತ್ತ ಗಮನ ಹರಿಸುವ ಮುನ್ನ ತ್ವರಿತವಾಗಿ ಸೆಕ್ಸ್ ಗೆ ಮುಳುಗುವ ಅಭ್ಯಾಸ ಕೆಲವರಲ್ಲಿರುತ್ತದೆ. ಕೆಲ ನಿಮಿಷಗಳ ಕಾಲ ನಡೆಯುವ ಈ ರೀತಿ ಛೋಟಾ ಸೆಕ್ಸ್ ಪರಿಣಾಮಕಾರಿ ಕೂಡಾ ಆಗಿದೆ.
ಪ್ರಣಯ ಜೀವನವನ್ನು ಉದ್ದೀಪನಗೊಳಿಸುವುದು, ಆರೋಗ್ಯಯುತ ದೇಹ ಹೊಂದುವುದು, ಸದಾ ಮನಸ್ಸನ್ನು ಹಗುರಾಗಿಸಿಕೊಳ್ಳುವುದು, ಸಂಗಾತಿಯ ಮನವೊಲಿಸುವುದು ಇದೇ ಮುಂತಾದ ಕಾರಣಕ್ಕೆ ಮಾನಿನಿಯರು ಕಾಮಕ್ಕೆ ಹಾತೊರೆಯುತ್ತಾರೆ. ನಿಮ್ಮ ಸಂಗಾತಿ ಸಡನ್ ಆಗಿ ನಿಮ್ಮನ್ನು ಬೆಡ್ ಎಳೆದೊಯ್ದರೆ ಬೆಚ್ಚಬೇಡಿ ಸಹಕರಿಸಿ, ಸಂತಸ ಹಂಚಿಕೊಳ್ಳಿ