ಸಂಪ್ರದಾಯಬದ್ಧ ಕುಟುಂಬಗಳಲ್ಲಿ ಮಾತ್ರ ಈಗಲೂ ಹಗಲು, ಮಧ್ಯಾಹ್ನದ ಹೊತ್ತಿನಲ್ಲಿ ಸಂಭೋಗಕ್ಕೆ ನಿರ್ಬಂಧವಿದೆ. ಶುಭ ಮುಹೂರ್ತದಲ್ಲೇ ಸರಸಕ್ಕೆ ತೊಡಗಬೇಕು ಎಂಬ ನಿಯಮವಿದೆ. ವೈಜ್ಞಾನಿಕವಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ, ಕೆಲ ಸಮಯಗಳನ್ನು ಗುರುತಿಸಿ ನಿಮ್ಮ ಮುಂದಿಡಲಾಗಿದೆ. ಇದು ನಿಮಗೂ ನಿಮ್ಮ ಸಂಗಾತಿಗೂ ಸುಖಕರ ಸರಸಮಯವಾಗಬಲ್ಲುದು.ಈ ಸಮಯ ಆನಂದಮಯ.. ಈ ಸಮಯ ಶೃಂಗಾರಮಯ ಎಂದು ಹಾಡಲು ಇದುವೇ ಉತ್ತಮ ಕಾಲ..
* ಮಾರ್ನಿಂಗ್ ಶೋ: ಇದು ಸಾಮಾನ್ಯವಾಗಿ ಪುರುಷರ ಮೊದಲ ಆಯ್ಕೆ.. ಮುಂಜಾನೆಯ ಸಕ್ಕರೆ ನಿದ್ರೆಯ ನಡುವೆ ಸಂಗಾತಿಯನ್ನು ಮುದ್ದಿಸುವುದು ಪುರುಷರಿಗೆ ಇಷ್ಟವಾದ ಕ್ರಿಯೆ. ಅದರಲ್ಲೂ ಗಂಡಸರ ನಿಮಿರುವಿಕೆ ಸಹಜವಾಗಿ ಮುಂಜಾನೆ ಹೊತ್ತು ಹೆಚ್ಚಾಗಿರುತ್ತದೆ, ಹೀಗಾಗಿ ಹೆಂಗಳೆಯರನ್ನು ಬರಸೆಳೆದು ಸಂಭೋಗದಲ್ಲಿ ತೊಡಗುವುದು ನೈಸರ್ಗಿಕವಾಗಿ ನಡೆದು ಬಂದಿದೆ.
ನಿದ್ರೆಯ ಮಂಪರು ಇನ್ನೂ ಆರುವ ಮುನ್ನವೇ ಸಂಭೋಗಕ್ಕೆ ಇಳಿಯುವುದು ಪುರುಷರ ನಡವಳಿಕೆ ಆದರೆ, ಮುಂಜಾನೆ ಬೇಗ ಏಳುವ ಅಭ್ಯಾಸ ಇರುವ ಹೆಂಗಸರು ಕೆಲವೊಮ್ಮೆ ಇಷ್ಟವಿದ್ದರೂ ಮುಂಜಾನೆ ಹೊತ್ತಿನ ಸಂಭೋಗಕ್ಕೆ ನಿರಾಕರಿಸುವುದಿದೆ. ಯಾವುದಕ್ಕೂ ನಿಮ್ಮ ಸಂಗಾತಿಯ ಇಂಗಿತವನ್ನು ಅರಿತು ಮುಂದುವರೆಯಿರಿ.
* ನಿದ್ರೆ ನಂತರ ಸುಖದ ಚಿಂತೆ: ಒಂದು ಒಳ್ಳೆ ನಿದ್ರೆ ಮಾಡಿದರೆ ಸಾಕು ಮೈ ಕೈ ಹಗುರಾಗಿ ಬಿಡುತ್ತದೆ ಎಂಬ ನಿದ್ರಾಪ್ರಿಯರು ಮೊದಲಿಗೆ ಸುಖ ನಿದ್ದೆ ಮುಗಿಸಿ ನಂತರ ಸಂಗಾತಿಯನ್ನು ಬರಸೆಳೆಯಲು ಹಾತೊರೆಯುತ್ತಾರೆ. ನಿದ್ರೆ ನಂತರ ಹುರುಪು ಮೈಗೂಡಿಸಿಕೊಳ್ಳುವ ಪುರುಷರಿಗೆ ಸಮಯದ ಪರಿಧಿ ಇರುವುದಿಲ್ಲ. ಮಧ್ಯಾಹ್ನದ ನಿದ್ರೆ ನಂತರವಾಗಲಿ, ಮುಂಜಾನೆ ನಿದ್ರೆ ನಂತರವಾಗಲಿ ಒಳ್ಳೆ ನಿದ್ದೆ ನಂತರ ಒಳ್ಳೆ ಸುಖ ಅನುಭವಿಸಲು ಹಾತೊರೆಯುತ್ತಾರೆ.
* ಸಂಭೋಗಕ್ಕೂ ಶುದ್ಧೀಕರಣ: ಹಲವರಿಗೆ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಸಂಭೋಗಕ್ಕೆ ತೊಡಗಲು ಖಂಡಿತ ಇಷ್ಟವಿರುವುದಿಲ್ಲ, ಅದರಲ್ಲೂ ಹೆಂಗಳೆಯರು ಶುಚಿಭೂರ್ತರಾಗಿ ರೂಮಿಗೆ ಕಾಲಿಡುವುದಿದೆ. ಇದು ಪುರುಷ ಸಿಂಹಗಳಿಗೂ ಅನ್ವಯಿಸುತ್ತದೆ. ಸಂಭೋಗಕ್ಕೂ ಮುನ್ನ 'ಕೋಲ್ಡ್ ' ಶವರ್ ಸಂಭೋಗದ ನಂತರ 'ಹಾಟ್' ಶವರ್ ಬಯಸುವವರಿಗೇನೂ ಕಮ್ಮಿಯಿಲ್ಲ.
ಸಾಮಾನ್ಯವಾಗಿ ಈ ರೀತಿಯ ಸ್ನಾನ ನಂತರ ಸಂಭೋಗ ಬಿಡುವಿಲ್ಲದ ಕಾಯಕದಲ್ಲಿ ತೊಡಗಿರುವ ಸಂಗಾತಿಗಳಿಗೆ ಸೂಕ್ತವಾಗಿದೆ. ಕೆಲಸದಿಂದ ದಣಿದು ಬಂದ ಮೇಲೆ ಲೈಟ್ ಆಗಿ ಸ್ನಾನ ಮಾಡಿ ನಂತ ಕ್ರಿಯೆಯಲ್ಲಿ ತೊಡಗಬಹುದು. ಸ್ನಾನ ಒಬ್ಬರೆ ಮಾಡಬೇಕೆಂದೇನೂ ಇಲ್ಲ ಇಬ್ಬರೂ ಅಲ್ಲೇ ಶುರು ಹಚ್ಚಿಕೊಂಡರೂ ತಪ್ಪೇನಿಲ್ಲ. ಸ್ನಾನದಿಂದ ಆತ್ಮೀಯತೆ ಹೆಚ್ಚುವುದಂತೂ ಸತ್ಯ.
* ಆಕೆಗೆ ರಜೆ ದಿನಗಳು ನಡೆಯುತ್ತಿದೆಯೆ? : ಸದಾ ಸೆಕ್ಸ್ ಬಯಸುವ ದಂಪತಿಗಳು ಮಹಿಳೆಯರ ಋತುಸ್ರಾವ ಕಾಲದಲ್ಲೂ ಕಾಮ ಬಯಸುವುದುಂಟು. ಆದರೆ, ಇದು ಅಷ್ಟು ಸೂಕ್ತ ಕಾಲವಲ್ಲ. ಮಹಿಳೆಯ ಋತು ಚಕ್ರದ 10 ನೇ ದಿನದಿಂದ 18ನೇ ದಿನಗಳಲ್ಲಿ ಸಂಭೋಗ ನಿಷಿದ್ಧ.
ಆ ಸಮಯದ ನಂತರ ಮಹಿಳೆಯರು ಗರ್ಭ ಧರಿಸುವ ಸಾಧ್ಯತೆಗಳು ತುಂಬಾ ಹೆಚ್ಚಾಗಿರುತ್ತದೆ. ಆದರೆ, ಸಂಭೋಗದ ಪರಾಕಾಷ್ಠೆ ತಲುಪಲು ಸೂಕ್ತ ಕಾಲ ಎನ್ನಬಹುದು. ಆದರೆ, ಆಯ್ಕೆ ನಿಮಗೆ ಬಿಟ್ಟಿದ್ದು, ಮುಖ್ಯವಾಗಿ ನಿಮ್ಮ ಸಂಗಾತಿಯ ಒಪ್ಪಿಗೆ ಮೇಲೆ ಮುಂದುವರೆಯುವುದು ಒಳ್ಳೆಯದು.
* ಇಬ್ಬರಿಗೂ ಮೂಡ್ ಬಂದಿದ್ಯಾ: ಸಂಭೋಗಕ್ಕೂ ತೊಡಗುವ ಮುನ್ನ ಬಹು ಮುಖ್ಯವಾದ ಅಂಶವೆಂದರೆ, ಇಬ್ಬರಿಗೂ ಕಾಮಕೇಳಿಗೆ ತೊಡಗಲು ಮನಸ್ಸಾಗಿದೆ ಎಂಬುದು. ಇಬ್ಬರಲ್ಲಿ ಒಬ್ಬರಿಗೆ ಮೂಡ್ ಸರಿಯಿಲ್ಲ ಎಂದರೆ, ಸಂಭೋಗ ಬರೀ ಯಾಂತ್ರಿಕ ಕ್ರಿಯೆ ಎನಿಸುತ್ತದೆ. ಕೆಲವೊಮ್ಮೆ ಸರಸ ಹೋಗಿ ವಿರಸ ಹುಟ್ಟುತ್ತದೆ. ಹೀಗಾಗಿ ಪರಸ್ಪರ ಒಪ್ಪಿಗೆ, ಮೂಡ್ ಇಲ್ಲದಿದ್ದರೆ ಸಂಭೋಗಕ್ಕೆ ಮುಂದಾಗುವುದು ಬೇಡ.
ಪರಸ್ಪರ ಕೊಟ್ಟು ತೊಗೋ ಆಟದಲ್ಲಿ ಇಬ್ಬರ ಒಪ್ಪಿಗೆ ಬಹುಮುಖ್ಯ ಆಗ ಮಾತ್ರ ಈ ಸಮಯ ಆನಂದಮಯ.. ಈ ಸಮಯ ಶೃಂಗಾರಮಯ ಎಂದು ಹಾಡಲು ಸಾಧ್ಯ.