•  

ಮಹಿಳೆಯರ ಲೈಂಗಿಕ ಭಾವನೆಗಳಿಗೆ ಎಷ್ಟು ಬಣ್ಣಗಳು?

Array
366 shades of women sexuality
 
ನೇಸರ ಮೈಮುರಿದು ತನ್ನ ಕಿರಣಗಳಿಂದ ಭೂರಮೆಯ ಮೈಯನ್ನು ಚುಂಬಿಸುವ ಹೊತ್ತಿನಲ್ಲಿ ಅಂಗಳದಲ್ಲಿ ಮನೆಯ ಸೊಸೆ ಥಳಿ ಹೊಡೆದು ರಂಗೋಲಿ ಹಾಕಿರುತ್ತಾಳೆ. ಕೊಟ್ಟಿಗೆಯಲ್ಲಿರುವ ಕರು ಅಂಬಾ ಅಂತ ಅಮ್ಮನಿಗಾಗಿ ಕೂಗಿರುತ್ತದೆ. ಮಾವನವರು ಕೊಟ್ಟಿಗೆ ಸ್ವಚ್ಛ ಮಾಡಿ ದನಕರುಗಳಿಗೆ ಮೇವು ಉಣಿಸಿ ಹಾಲು ಕರಿದಿರುತ್ತಾರೆ. ಅತ್ತೆಮ್ಮ ಅಡುಗೆಮನೆಯಲ್ಲಿ ರೊಟ್ಟಿ ತಟ್ಟಲು ಸಿದ್ಧತೆ ಮಾಡಿಕೊಳ್ಳುತ್ತಿರುತ್ತಾಳೆ.ಅಷ್ಟರಲ್ಲಿ ಇತ್ತೀಚೆಗೆ ತಾನೆ ಮದುವೆಯಾಗಿ ಗಂಡನ ಮನೆ ಸೇರಿರುವ ಸೊಸೆ, "ಅತ್ತೆ, ಪಕ್ಕದ ಮನೆಗಳಿಗೆಲ್ಲ ಹಾಲು ಕೊಟ್ಟು ಬರಲಾ" ಎಂದು ಕೂಗಿರುತ್ತಾಳೆ. ಅದಕ್ಕೆ ಅತ್ತೆಮ್ಮ "ಸರಿ ಕಣೆ, ಗೊತ್ತಿದೆಯಲ್ಲ ಎಲ್ಲೆಲ್ಲಿ ಕೊಡಬೇಕೆಂದು" ಎಂದು ಅಲ್ಲಿಂದಲೇ ಕೂಗಿರುತ್ತಾಳೆ. ಅತ್ತೆ ತನ್ನ ಅಡುಗೆಯ ಕೆಲಸದಲ್ಲಿ ಮುಳುಗಿರುತ್ತಾಳೆ, ಹಾಲು ಕೊಡುತ್ತೇನೆಂದು ಹೇಳಿದ ಸೊಸೆ ಮೆತ್ತಗೆ ಗಂಡನ ತೆಕ್ಕೆಯಲ್ಲಿ ಜಾರಿರುತ್ತಾಳೆ!ಇದು ಒಂದು ಉದಾರಹಣೆಯಷ್ಟೆ. ಲೈಂಗಿಕತೆಯ ಬಗ್ಗೆ ಜ್ಞಾನವಿರುವ ಪ್ರತಿಯೊಬ್ಬ ಮಹಿಳೆಯಲ್ಲೂ ಒಂದೊಂದು ಕಲ್ಪನೆಗಳಿರುತ್ತವೆ, ಅವರಲ್ಲಿಯೂ ಅದಮ್ಯ ಆಸೆಗಳಿರುತ್ತವೆ, ಕಾಮನೆಯ ಬಗ್ಗೆ ಕನಸು ಕನವರಿಕೆಗಳಿರುತ್ತವೆ, ಮಳೆಹನಿಯಿಲ್ಲದಿದ್ದರೂ ಕಾಮನಬಿಲ್ಲು ಕಮಾನುಕಟ್ಟಿರುತ್ತದೆ. ಆದರೆ ಮನದಲ್ಲಿಯೇ ಮಡುಗಟ್ಟಿರುವ ಭಾವನೆಗಳನ್ನು ಅಭಿವ್ಯಕ್ತಿಸುವ ಭಾಷ್ಯ ಅನೇಕರಲ್ಲಿ ಸಿದ್ಧಿಸಿರುವುದಿಲ್ಲ. ಅಭಿವ್ಯಕ್ತಿಸಲು ಬರದಿದ್ದರೇನಂತೆ ಭಾವನೆಗಳಿಗೇನು ಬರವಿರುವುದಿಲ್ಲ. ಮಹಿಳೆಯರಲ್ಲಿ ಲೈಂಗಿಕತೆ ಕುರಿತಂತೆ ಪ್ರತಿದಿನವೂ ಹೊಸ ಭಾವನೆಗಳು ಸ್ಫುರಿಸುತ್ತಿರುತ್ತವೆ. ನೇರವಾಗಿ ಹೇಳಲಾಗದ್ದನ್ನು ಸಂಜ್ಞೆಗಳ ಮುಖಾಂತರ ಹೇಳಿರುತ್ತಾರೆ.ವರ್ಷದ 365 ದಿನಗಳಲ್ಲ, ಅಧಿಕ ವರ್ಷದ 366ನೇ ದಿನವೂ ಒಂದು ಹೊಸ ತುಮುಲ ಚಿಗುರಿರುತ್ತದೆ. ಅವರ ಭಾವನೆಗಳಿಗೆ 366 ಬಣ್ಣಗಳಿರುತ್ತವೆ. ಆದರೇನು ಮಾಡುವುದು, ಲೈಂಗಿಕ ಭಾವನೆಗಳನ್ನು ಅವರಿವರೊಡನೆ ಹೋಗಲಿ ಗಂಡನೊಡನೆ ಹಂಚಿಕೊಳ್ಳಲು ಕೂಡ ಇಂದಿನ ನಾರಿಯರು ಹಿಂದುಮುಂದು ನೋಡುತ್ತಾರೆ. ಗಂಡಸರು ಗುಂಪು ಸೇರಿದಾಗ ರಾತ್ರಿಯ ಸುಮಧುರ ಅನುಭವಗಳನ್ನು ಹಂಚಿಕೊಳ್ಳಲು ಹಿಂಜರಿಯುವುದಿಲ್ಲ, ಆದರೆ ಮಹಿಳೆಯರ ಪಾಲಿಗೆ, ಅಟ್ಲೀಸ್ಟ್ ಹಳ್ಳಿಗಳಲ್ಲಿ ಮುಕ್ತವಾದ ಮಧುರ ಸಂಭಾಷಣೆ ನಿಷಿದ್ಧ. ಹೀಗೆಂದು ಹೇಳುತ್ತಾರೆ 'Fifty Shades of Grey' ಕಾದಂಬರಿ ಬರೆದಿರುವ ಖ್ಯಾತ ಲೇಖಕಿ ಇಎಲ್ ಜೇಮ್ಸ್.ಇಂದಿನ ಯುಗದಲ್ಲಿ, ಕನಿಷ್ಠ ನಗರಗಳಲ್ಲಿ ಮಹಿಳೆಯರು ಪಾರ್ಕುಗಳಲ್ಲಿ ಸೇರಿಕೊಂಡು ಹರಟೆ ಹೊಡೆಯುತ್ತಾರೆ, ಕಿಟ್ಟಿ ಪಾರ್ಟಿ ಮಾಡಿ ಗಂಡಸರನ್ನು ದೂರವಿಟ್ಟು ತಮಗೆ ಬೇಕಾದ ವಿಷಯಗಳ ಬಗ್ಗೆ ಚರ್ಚಿಸುತ್ತಾರೆ. ಸೆಕ್ಸ್ ಎನ್ನುವುದು ಮಡಿವಂತಿಕೆಯ ವಸ್ತುವಾಗಿ ಉಳಿದಿಲ್ಲ. ನನ್ನ ಗಂಡ ಹಾಗೆ, ನಿನ್ನ ಗಂಡ ಹ್ಯಾಗೆ? ಎಂದು ಕೇಳಿ ತಿಳಿದುಕೊಳ್ಳುವ ಮಟ್ಟಕ್ಕೆ ಚರ್ಚೆಯ ಹರವು ಹರಡಿಕೊಂಡಿರುತ್ತದೆ. ಪೋಲಿ ಪೋಲಿ ಮಾತುಗಳು, ಸೆರಗಿನ ಹಿಂದಿನ ಜೋಕ್ಸುಗಳು ಕೂಡ ಹರಿದಾಡಿರುತ್ತವೆ.ಮಹಿಳೆಯರಾದರೇನು ಅವರೂ ಮನುಷ್ಯರಲ್ಲವೆ? ಎಲ್ಲ ಹಂತಗಳಲ್ಲಿಯೂ ಸಮಾನ ಅವಕಾಶ ಬಾಚಿಕೊಳ್ಳುತ್ತಿರುವ ಮಹಿಳಾಮಣಿಗಳಿಗೆ ಲೈಂಗಿಕತೆ ವಿಷಯದಲ್ಲಿಯೂ ಮುಕ್ತವಾಗಿ ತಮ್ಮ ಭಾವನೆ ಹಂಚಿಕೊಳ್ಳಲು ಸಮಾನ ಅವಕಾಶ ನೀಡಬೇಕಲ್ಲವೆ? ಸೆಕ್ಸ್ ಕುರಿತಂತೆ ಅವರ ಬಯಕೆಗಳೇನು, ಇಷ್ಟಕಷ್ಟಗಳೇನು ಎಂಬುದನ್ನು ತಿಳಿಯುವ, ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುವ ಮನಸ್ಸನ್ನು ಗಂಡಸು ಮಾಡಬೇಕು. ಸಾರ್ವಜನಿಕ ವೇದಿಕೆಯಲ್ಲಿ ಲೈಂಗಿಕತೆಯ ಬಗ್ಗೆ ಮಾತನಾಡಲು ಹಿಂಜರಿಯುವ ಹೆಂಗಳೆಯರಿಗೆ ಕನಿಷ್ಠ ಹಾಸಿಗೆಯಲ್ಲಾದರೂ ಮುಕ್ತವಾಗಿ ಮಾತನಾಡುವ ಅವಕಾಶ ಒದಗಿಬರಬೇಕು.
English summary
Women now-a-days do not hesitate to discuss or exchange their feeling about sexual desire, their likes or dislikes. English author E.L. James says women have 366 shades of sexuality and not just 50 shades.

Get Notifications from Kannada Indiansutras

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Indiansutras sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Indiansutras website. However, you can change your cookie settings at any time. Learn more