ಒಂದು ಅಧ್ಯಯನದ ಪ್ರಕಾರ, ಪ್ರಪಂಚದಾದ್ಯಂತ ಶೇ.9ರಿಂದ 26ರಷ್ಟು ಮಹಿಳೆಯರು, ಅವರವರ ವಯೋಮಾನದ ಆಧಾರದ ಮೇಲೆ ಲೈಂಗಿಕ ಆಸಕ್ತಿಯ ಕೊರತೆ ಅನುಭವಿಸುತ್ತಿದ್ದಾರೆ. ಈ ಹೊಸದಾಗಿ ಕಂಡುಹಿಡಿಯಲಾಗಿರುವ ಫಿಮೇಲ್ ವಯಾಗ್ರ ಈ ತೊಂದರೆಗೆ ಕಾಮಬಾಣವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಆದರೆ, ಈ ವಯಾಗ್ರ ಸಾಕಷ್ಟು ವಿವಾದದ ಅಲೆಗಳನ್ನು ಕೂಡ ಎಬ್ಬಿಸಿದೆ. ತಮ್ಮ ಉತ್ಪನ್ನವನ್ನು ಹೆಚ್ಚಿಗೆ ಮಾರಾಟ ಮಾಡಬೇಕೆಂಬ ಉದ್ದೇಶದಿಂದ ಲೈಂಗಿಕ ಆಸಕ್ತಿ ಕಳೆದುಕೊಂಡವರ ಮತ್ತು ಈ ವಯಾಗ್ರ ತೆಗೆದುಕೊಂಡು ಅತ್ಯಧಿಕ ಲೈಂಗಿಕಾನುಭವ ಪಡೆದ ಮಹಿಳೆಯ ಸಂಖ್ಯೆಯನ್ನು ಉಬ್ಬಿಸಿ ಹೇಳುತ್ತಿದೆ ಎಂದು ಹಲವರು ಕ್ಯಾತೆ ತೆಗೆದಿದ್ದಾರೆ. ವಿವಾದವೇನೇ ಇರಲಿ, ಈ ವಯಾಗ್ರವನ್ನು ಮಾರಾಟ ಮಾಡಿದವರಿಗೆ ಭರ್ಜರಿ ವ್ಯಾಪಾರವಾಗಿದ್ದಂತೂ ಸತ್ಯ.
ಪ್ರಪಂಚದಾದ್ಯಂತ 18 ವರ್ಷ ಮೇಲ್ಪಟ್ಟ ಎರಡು ಸಾವಿರಕ್ಕೂ ಹೆಚ್ಚು ಯುವತಿಯನ್ನು ಮತ್ತು ಮಹಿಳೆಯರನ್ನು ಈ ವಯಾಗ್ರ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪ್ರತಿದಿನ 100 ಗ್ರಾಂ ವಯಾಗ್ರ ಮಾತ್ರೆ ಸೇವಿಸಿದವರಲ್ಲಿ ಕ್ರಮೇಣ ಕಾಮೋತ್ಕಟತೆ ಹೆಚ್ಚಾಗುತ್ತ ಸಾಗಿದ್ದು ಸಾಬೀತಾಗಿದೆ. ಈ ಮಾತ್ರೆ ತೆಗೆದುಕೊಳ್ಳಲು ಪ್ರಾರಂಭಿಸಿದ ಮೇಲೆ ಮಹಿಳೆಯರಲ್ಲಿ ಪ್ರತಿತಿಂಗಳು ಶೇ.3.7ರಷ್ಟು ಹೆಚ್ಚು ಕಾಮನೆ ಕೆರಳಲು ಪ್ರಾರಂಭಿಸಿತು. ಆಶ್ಚರ್ಯಕರ ಸಂಗತಿಯೆಂದರೆ, ಈ ಮಾತ್ರೆಗಳನ್ನು ತೆಗೆದುಕೊಂಡ ಯಾವ ಮಹಿಳೆಗೂ ಫ್ಲಿಬನ್‌ಸೆರಿನ್ ವಯಾಗ್ರ ಮಾತ್ರೆ ತೆಗೆದುಕೊಳ್ಳುತ್ತಿದುದು ತಿಳಿದಿರಲಿಲ್ಲ.
ಈ ಮಾತ್ರೆಯನ್ನು ಖಿನ್ನತೆ ನಿವಾರಿಸುವ ಉದ್ದೇಶದಿಂದ ಕಂಡುಹಿಡಿಯಲಾಗಿತ್ತು. ಆದರೆ, ಇದರಲ್ಲಿ ಕಾಮನೆ ಕೆರಳಿಸುವ ಅಂಶವೂ ಕಂಡುಬಂದ ನಂತರ ಲೈಂಗಿಕ ಚೈತನ್ಯ ಉಕ್ಕಿಸುವ ಔಷಧಿಯನ್ನಾಗಿ ಇದನ್ನು ಬಳಸಲು ಪ್ರಾರಂಭಿಸಲಾಯಿತು. ಇದನ್ನು ಬಳಸಿದವರು ಪ್ರತಿದಿನ ಹೊಸ ಉತ್ಸಾಹದಿಂದ ಕಾಮಕೇಳಿಯಲ್ಲಿ ಭಾಗವಹಿಸಿದ್ದಾಗಿ ಹೇಳಿದ್ದಾರೆ. ಆದರೆ, ಕೆಲ ವಿವಾದಗಳು ಕಂಡುಬಂದ ಕಾರಣ ಅಮೆರಿಕಾದ ಆಹಾರ ಮತ್ತು ಔಷಧಿ ವಿತರಣಾ ಸಂಸ್ಥೆ ಈ ಮಾತ್ರೆಯ ಬಳಕೆ ಮತ್ತು ಉತ್ಪಾದನೆಗೆ ಇನ್ನೂ ಅನುಮತಿ ನೀಡಿಲ್ಲ. ಆದ್ದರಿಂದ ಈ ಮಾಂತ್ರಿಕ ಮಾತ್ರೆಯನ್ನು ಮಹಿಳೆಯರು ಬಳಸಲು ಇನ್ನೂ ಕಾಯಬೇಕಾಗಿದೆ.