ನೋವಿನಲ್ಲೂ ನಲಿವು, ದಣಿವಲ್ಲೂ ಆಹ್ಲಾದ ಇದೇ ಎಂದರೆ ಅದು ಸೆಕ್ಸ್ ನಲ್ಲಿ ಮಾತ್ರ ಎಂದು ಕೆಲ ಹೆಂಗೆಳೆಯರು ಬಲವಾಗಿ ನಂಬಿದ್ದಾರೆ ಹಾಗೂ ಆಚರಿಸಿಕೊಂಡು ಬಂದಿದ್ದಾರೆ ಕೂಡಾ. ಹಲವು ಬಾರಿ ಅತಿಯಾದ ಕಾಮವಾಂಛೆಯುಳ್ಳ ಸಂಗಾತಿಯ ಮೇಲೆ ಅನುಮಾನ ಹುಟ್ಟುವುದು ಸಹಜ ಆದರೆ, ಇದು ನೈಸರ್ಗಿಕವಾಗಿ ಬರುವ ಪ್ರತಿಕ್ರಿಯೆ ಎಂಬುದನ್ನು ಮರೆಯಬಾರದು.
ಮುಚ್ಚಿಟ್ಟಷ್ಟು ಕುತೂಹಲ ಜಾಸ್ತಿ ತೆರೆದಷ್ಟು ನಿರ್ಲಕ್ಷ ಜಾಸ್ತಿ ಎಂಬ ದೊಡ್ಡವರ ಹೇಳಿಕೆ ಪುರುಷರ ಪಾಲಿಗಂತೂ ಸತ್ಯ. ಮಹಿಳೆ ತನ್ನ ಸ್ತನ, ನಿತಂಬಗಳನ್ನು ಆಕರ್ಷಕವಾಗಿ ತೋರಿಸುವ ಪರಿಗೆ ಪುರುಷ ಸೋತು ಹೋಗಿರುತ್ತಾನೆ. ಸ್ಟ್ರಿಪ್ ಮಾಡುವ ಕಲೆ ವಿದೇಶದಲ್ಲಿ ಹೆಚ್ಚಾದರೂ, ನಮ್ಮಲ್ಲಿ ಕೂಡಾ ಕಾಮಕೇಳಿಗೂ ಮುನ್ನ ಬಟ್ಟೆ ಕಳಚುವ ಕ್ರಿಯೆ ಆಕರ್ಷಕವೂ ಹಾಗೂ ಉತ್ತೇಜನಕಾರಿಯಾಗಿಯೂ ಬೆಳೆಯುತ್ತಿದೆ.
ಪುರುಷರ ಅತಿ ಕಲ್ಪನೆಯಲ್ಲಿ ಮಹಿಳೆಯರು ವಸ್ತ್ರ ಕಳಚುವ ಕ್ರಿಯೆ ಪ್ರಧಾನ ಕನಸಾಗಿರುತ್ತದೆ. ಒಂದೊಂದೆ ಬಟ್ಟೆ ಕಳಚಿದಂತೆ ಪುರುಷನ ಕಾಮನೆ ಹೆಚ್ಚಾಗುತ್ತದೆ. ಅದರಲ್ಲೂ ಪ್ರಚೋದನಕಾರಿಯಾಗಿ ಒಳ ಉಡುಪು ಧರಿಸುವ ಮಹಿಳೆಯರ ಮೇಲೆ ಪುರುಷರ ಆಕರ್ಷಣೆ, ಕಲ್ಪನೆ ಹೆಚ್ಚು.
ಕೀಳರಿಮೆ ಬೇಡ: ಪ್ರತಿ ಪುರುಷರು ತನ್ನ ಮನದನ್ನೆಯನ್ನು ಶೃಂಗಾರ ಸಮಯದಲ್ಲಿ ಸುಂದರವಾಗಿ ಕಲ್ಪಿಸಿಕೊಳ್ಳುವುದಿದೆ. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಒರಟಾಗಿ ನಡೆದುಕೊಂಡು, ಪುರುಷರ ಮೂಡ್ ಹಾಳು ಮಾಡಿದರೆ ಎಲ್ಲಾ ವೇಸ್ಟ್ ಆಗುತ್ತದೆ. ದೇಹ ಸೌಂದರ್ಯದ ಬಗ್ಗೆ ಮಹಿಳೆಯರು ಕಾಳಜಿ ವಹಿಸುವುದು ಸಾಮಾನ್ಯ.
ಆದರೆ, ಸರಿಯಾದ ತಯಾರಿ ಇಲ್ಲದೆ, ದೇಹದ ಅಲಂಕಾರವನ್ನು ಕೊಂಚವು ವೃದ್ಧಿಸಿಕೊಳ್ಳದೆ ಬೇಕಾಬಿಟ್ಟಿಯಲ್ಲಿ ನಿಂತು ಫೋಸ್ ಕೊಟ್ಟರೆ ಕೆಲಸ ಕೆಡುತ್ತದೆ. ನಿಮಗಿರುವಷ್ಟೇ ಅರಿವು ನಿಮ್ಮ ಸಂಗಾತಿಗೂ ಇರುತ್ತದೆ ಎಂಬುದನ್ನು ಮರೆಯಬೇಡಿ.
ದೇಹದ ಖಾಸಗಿ ಸ್ಥಳಗಳನ್ನು ಶುಚಿಗೊಳಿಸುವುದನ್ನು ಮರೆಯಬೇಡಿ. ಮೊದಲ ಸುಖಕ್ಕೂ ಮೊದಲು ಶುಚಿತ್ವ ಕೂಡಾ ಮಹತ್ವದ ಪಾತ್ರವಹಿಸುತ್ತದೆ. ಈ ಬಗ್ಗೆ ಪುರುಷನಿಗಿಂತ ಮಹಿಳೆಯೇ ಹೆಚ್ಚು ಮುತುವರ್ಜಿ ವಹಿಸುವುದು ಒಳ್ಳೆಯದು.
ಅತಿಯಾದ ಗೌಪ್ಯತೆ ಬೇಡ: ಕಾಮಪ್ರಕ್ರಿಯೆಯಲ್ಲಿ ಪುರುಷರೇ ಆತುರಗಾರರಾದರೂ, ನಿಮ್ಮ ಸಂಗಾತಿಯ ಮನ ಇಂಗಿತವನ್ನು ಅರಿತು, ಸಮಯಕ್ಕೆ ತಕ್ಕಂತೆ ಸ್ಪಂದಿಸುವಂತೆ ಮಾಡಿ. ವಿವಸ್ತ್ರಳಾಗುವ ಕಲೆ ಸಿದ್ಧಿಸಿಕೊಳ್ಳಿ. ಲೈಂಗಿಕ ಕ್ರಿಯೆಗೆ ತೊಡಗುವ ಮುನ್ನ ಅತಿ ಹೆಚ್ಚು ನಾಚಿ, ಅತಿ ಬಿಗುಮಾನ, ಅತಿ ಆತ್ಮವಿಶ್ವಾಸ ಎಲ್ಲವೂ ಅನರ್ಥಕ್ಕೆ ಕಾರಣ.
ಬೆಡ್ ಶೀಟ್ ಎಳೆದುಕೊಂಡು ಅಥವಾ ಕರ್ಟನ್ ಮರೆಯಲ್ಲಿ ಬಟ್ಟೆ ಕಳಚಿ ಅರಸಿಕತನ ತೋರಬೇಡಿ. ಸರ್ವ ಸಮರ್ಪಣೆಗೆ ಸಿದ್ಧ ಎಂಬ ಭಾವ ನಿಮ್ಮಲ್ಲಿರಲಿ. ಸಂಗಾತಿಯ ಸೆಳೆಯುವ, ಸೆಳೆದು ಕೈವಶ ಮಾಡಿಕೊಳ್ಳುವ ಕಲೆ ಮಾನನಿಗೆ ತಾನಾಗೇ ಇರುತ್ತದೆ ಆದರೆ, ಸೂಕ್ತ ಸಮಯಕ್ಕೆ ಪ್ರಕಟಗೊಳಿಸಬೇಕು ಅಷ್ಟೇ.
ಯಾವ ರೀತಿ ಸೆಕ್ಸ್ ಒಳ್ಳೆಯದು: ಮೊದಲ ಬಾರಿಗೆ ಓರಲ್ ಸೆಕ್ಸ್ ಹಾಗೂ ವಿವಿಧ ಭಂಗಿಗಳ ಸಂಭೋಗ ಕ್ರಿಯೆಗೆ ಅನೇಕ ಸಂಗಾತಿಗಳು ಒಗ್ಗಿಕೊಂಡಿರುವುದಿಲ್ಲ. ಮಹಿಳೆಯರಿಗೆ ಅಷ್ಟು ಇಷ್ಟವೂ ಆಗುವುದಿಲ್ಲ. ಆದರೆ, ಮಹಿಳೆಯರು ಯಾವುದನ್ನು ಬೇಡ ಎನ್ನುತ್ತಾರೋ ಅದನ್ನೇ ಮಾಡುವಂತೆ ಬಲವಂತ ಮಾಡಿ ಸುಖಿಸುವುದು ಕೆಲ ಗಂಡಸರ ನಂಬಿಕೆ ಬೆಳೆದಿರುತ್ತದೆ.
ಕಾಮ ಪ್ರತಿಷ್ಠೆಯ ವಿಶೇಷವಾದ ಮೇಲೆ ತನ್ನ ಪ್ರಭುತ್ವ ಬೀರಲು ಪುರುಷ ಸದಾ ಹಾತೊರೆಯುತ್ತಿರುತ್ತಾನೆ. ನೋ ಎಂದ ಮಹಿಳೆಗೆ ಬೇಡದ ಸುಖ ಕಟ್ಟಿಟ್ಟ ಬುತ್ತಿ. ಪುರುಷನ ಅರಿವಿನ ಮಟ್ಟ ನೋಡಿಕೊಂಡು ನೀವು ಮುಂದುವರೆಯಿರಿ.
ಸ್ಪರ್ಶ ಸುಖದ ಮಹತ್ವ: ಪುರುಷ ಕಾಮಕ್ರೀಡೆಗೂ ಮುನ್ನ ಹಾತೊರೆಯುವುದು ಸುಖವಾದ ಸ್ಪರ್ಶಕ್ಕೆ ಮಾತ್ರ. ಮುತ್ತಿನ ಮತ್ತು ಏರುವ ಮೊದಲು ಹಿತವಾದ ಸ್ಪರ್ಶ ಸಿಕ್ಕರೆ ಅಲ್ಲಿಗೆ ಪುರುಷ ಸಜ್ಜಾದಂತೆ.
ಎಲ್ಲಾ ಪುರುಷರಿಗೂ ತನ್ನ ಪ್ರೇಯಸಿಯನ್ನು ಹಿಸುಕಿ ಹಿಪ್ಪೆಕಾಯಿ ಮಾಡಿಬಿಡಬೇಕು ಎಂಬ ಬಲವಾದ ಆಕಾಂಕ್ಷೆ ಇರುತ್ತದೆ. ಮೊದಲ ಯತ್ನದಲ್ಲೆ ಹೆಚ್ಚು ಪ್ರಭಾವಕಾರಿಯಾಗಿಯಾಗಿ ಒತ್ತಡ ಹೇರಿ ಆಕೆಯನ್ನು ಮಣಿಸಬೇಕು. ಆಕೆಯ ನರಳಾಟದಲ್ಲೇ ನಮ್ಮ ಸುಖವಿದೆ ಎಂಬ ಕಲ್ಪನೆ ಇರುವುದು ಸಹಜ.
ಆದರೂ, ಕೆಲವರು ಮಹಿಳೆಯರು ಪ್ರಾಬಲ್ಯ ಮೆರೆದು ತಮ್ಮ ಕೈ ಕಾಲು ಕಟ್ಟಿ ಕ್ರಿಯೆಗೆ ತೊಡಗಿದರೆ ಸುಖ ಸಿಗುತ್ತದೆ ಎಂಬ ಕಲ್ಪನೆ ಕೂಡಾ ಇರುತ್ತದೆ. ಒಟ್ಟಿನಲ್ಲಿ ಪುರುಷರು ಮಹಿಳೆಯರಿಗಿಂತ ಹೆಚ್ಚು ಸಮರ್ಥವಾಗಿ ಸೆಕ್ಸ್ ಸುಖ ಪಡೆಯುವ ಹುಮ್ಮಸ್ಸಿನಲ್ಲಿ ಕಲರ್ ಫುಲ್ ಕಲ್ಪನೆ ಹಾಗೂ ಕನಸು ಕಾಣುವುದಂತೂ ಸತ್ಯ. ಆದರೆ, ಅನುಭವ ಪಡೆಯುವ ಮುನ್ನ ಈ ರೀತಿ ವಿಪರೀತ ಆಚರಣೆ ಕಷ್ಟಕ್ಕೆ ನಾಂದಿ ಹಾಡಬಹುದು. ಸ್ಪರ್ಶ ಸುಖದ ಮಹತ್ವ ಅನುಭವಿಸುವುದನ್ನು ಮೊದಲು ರೂಢಿಸಿಕೊಳ್ಳುವುದು ಒಳಿತು.
ಹೀಗೆ ಮೊದಲ ಬಾರಿಗೆ ಪುರುಷನಿಗೆ ಎಷ್ಟು ಕಾತುರ, ಆತುರ, ಅಜ್ಞಾನವಿರುತ್ತದೆಯೋ ಅದರ ದುಪ್ಪಟ್ಟು ಅಪನಂಬಿಕೆಗಳು ಮಹಿಳೆಯರನ್ನು ಕಾಡುತ್ತಿರುತ್ತದೆ. ಇಂಟರ್ನೆಟ್ ಯುಗದಲ್ಲಿ ಎಲ್ಲವನ್ನೂ ವಿಡಿಯೋ ಮೂಲಕ ಅಭ್ಯಸಿಸಿ ಮುಜಗರವಿಲ್ಲದೆ, ಅಪನಂಬಿಕೆಯಿಲ್ಲದೆ ಆರೋಗ್ಯಕರ ಸಂಭೋಗಕ್ಕೆ ಸಿದ್ಧರಾಗುವುದು ಒಳಿತು.